IAF Chopper Crash: ಸಾವು ಸಂಭ್ರಮಿಸಿ ಬೇಕಾಬಿಟ್ಟಿ ಪೋಸ್ಟ್ ಹಾಕಿದವರಿಗೆ ಸಿಎಂ ಖಡಕ್ ಎಚ್ಚರಿಕೆ
*ಬೇಜವಾಬ್ದಾರಿಯಿಂದ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್
*ಬೇಕಾಬಿಟ್ಟಿಪೋಸ್ಟ್ ಹಾಕಿದವರಿಗೆ ಖಡಕ್ ಎಚ್ಚರಿಕೆ
*ಸಾವು ಸಂಭ್ರಮಿಸಿದವರ ಮೇಲೆ ಕಠಿಣ ಕ್ರಮ: ಸಿಎಂ
ಹಾವೇರಿ(ಡಿ. 11): ಹೆಲಿಕಾಪ್ಟರ್ ದುರಂತದಲ್ಲಿ (IAF Chopper Crash) ಮೃತಪಟ್ಟಸೇನಾಪಡೆಗಳ ಮುಖ್ಯಸ್ಥ ಜ. ಬಿಪಿನ್ ರಾವತ್ (General Bipin Rawat) ಅವರ ದುರ್ಮರಣವನ್ನು ಸಂಭ್ರಮಿಸುವವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾವತ್ ಅವರ ಸಾವನ್ನು ಸಂಭ್ರಮಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಬಿಟ್ಟಿಟ್ವೀಟ್, ಪೋಸ್ಟ್ ಹಾಕಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟಇಲಾಖೆಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಸೇನಾಧಿಕಾರಿಗಳ ಸಾವನ್ನು ಸಂಭ್ರಮಿಸುವ ಮನಸ್ಥಿತಿಯನ್ನು ಪ್ರತಿ ಭಾರತೀಯನೂ ಅತ್ಯಂತ ಕಠಿಣ ಶಬ್ದಗಳಲ್ಲಿ ಖಂಡಿಸಬೇಕು. ದೇಶಕ್ಕಾಗಿ ಸೇನೆಯನ್ನು ಮುನ್ನಡೆಸಿ ರಕ್ಷಣೆ ಮಾಡುತ್ತಿದ್ದವರರ ಬಗ್ಗೆ, ಅವರು ನಿಭಾಯಿಸುತ್ತಿದ್ದ ಹುದ್ದೆಯ ಘನತೆ ಕುರಿತು ಸಣ್ಣ ಪರಿಕಲ್ಪನೆಯೂ ಇಲ್ಲದೆ ಅತ್ಯಂತ ಬೇಜವಾಬ್ದಾರಿಯಿಂದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್, ಪೋಸ್ಟ್ (Tweets) ಮಾಡಿದ್ದಾರೆ. ಅಂಥವರ ವಿಳಾಸವನ್ನು ಪತ್ತೆ ಮಾಡಿ ಕೂಡಲೇ ಪ್ರಕರಣ ದಾಖಲಿಸಲಾಗುವುದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಜತೆಗೆ, ಈ ಸಂಬಂಧ ಪೊಲೀಸ್ ಇಲಾಖೆ ಮುಖ್ಯಸ್ಥರಿಗೆ ಸೂಚನೆಯನ್ನೂ ನೀಡಲಾಗಿದೆ ಎಂದರು.
Bipin Rawat Cremation ಪಂಚಭೂತಗಳಲ್ಲಿ ರಾವತ್ ಲೀನ, ಮಿಲಿಟರಿ ಗೌರವದೊಂದಿಗೆ ಅಂತ್ಯಕ್ರಿಯೆ!
ಬೇರೆ ರಾಜ್ಯಗಳಲ್ಲೂ ಈ ರೀತಿ ವಿಕೃತಿ ಮೆರೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದ್ದು, ಕರ್ನಾಟಕದಲ್ಲೂ ಅದೇ ರೀತಿಯ ಕ್ರಮ ಕೈಗೊಳ್ಳಲಾಗುವುದು. ಈ ವಿಕೃತಿಯನ್ನು ಕ್ಷಮಿಸುವ ಮಾತೇ ಇಲ್ಲ. ಅವರಿಗೆ ಶಿಕ್ಷೆ ಆಗಲೇಬೇಕು ಎಂದು ತಿಳಿಸಿದರು.
ಆಕ್ಷೇಪಾರ್ಹ ಪೋಸ್ಟ್ ಹಾಕಿದ 3 ಮಂದಿ ಸೆರೆ
ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಸಶಸ್ತ್ರ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮೂವರನ್ನು ಬಂಧಿಸಲಾಗಿದೆ. ರಾಜಸ್ಥಾನ, ಗುಜರಾತ್ ಹಾಗೂ ಜಮ್ಮು-ಕಾಶ್ಮೀರದಲ್ಲಿ ತಲಾ ಒಬ್ಬರನ್ನು ಬಂಧಿಸಲಾಗಿದೆ.
ವರುಣ್ ಸಿಂಗ್ ಚೇತರಿಕೆಗೆ ಪ್ರಾರ್ಥನೆ
ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿಬದುಕುಳಿದಿರುವ ಕ್ಯಾಪ್ಟನ್ ವರುಣ್‌ಸಿಂಗ್ (Captain Varun Singh) ಅವರನ್ನು ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದು, ಅವರಿಗೆ ಪರಿಣತ ವೈದ್ಯರ ತಂಡ ಅತ್ಯುತ್ತಮ ಚಿಕಿತ್ಸೆ ನೀಡುತ್ತಿದೆ. ಅವರು ಶೀಘ್ರ ಗುಣಮುಖರಾಗುವಂತೆ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ವದಂತಿಗಳನ್ನು ನಂಬಬೇಡಿ, ಶೀಘ್ರ ತನಿಖೆ ವರದಿ: ವಾಯು ಸೇನೆ
ಶಸ್ತ್ರ ಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್ (Cds General Bipin Rawat) ಸೇರಿದಂತೆ 13 ಜನರನ್ನು ಬಲಿ ಪಡೆದ ನಿಗೂಢ ಹೆಲಿಕಾಪ್ಟರ್ ಅಪಘಾತ ಕುರಿತು (IAF Chopper Crash) ನಾನಾ ವದಂತಿಗಳು ಹಬ್ಬಿರುವ ಬೆನ್ನಲ್ಲೇ, ಇಂಥ ವದಂತಿಗಳಿಗೆ ಕಿವಿಗೊಡದಂತೆ ಭಾರತೀಯ ವಾಯುಪಡೆ ಮನವಿ ಮಾಡಿದೆ. ಅಲ್ಲದೆ, ಈ ಕುರಿತು ಶೀಘ್ರ ತನಿಖಾ ವರದಿ ಕೈಸೇರಲಿದೆ ಎಂದಿದೆ. ಕಾಪ್ಟರ್ ಅಪಘಾತದ ತನಿಖೆಗಾಗಿ ಸೇನೆಯಿಂದ ನೇಮಕಗೊಂಡಿರುವ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದ ತಂಡ ತಮಿಳುನಾಡಿನ ಕೂನೂರು ಸಮೀಪ ತನ್ನ ತನಿಖೆ ಆರಂಭಿಸಿದೆ. ಅಪಘಾತ ನಡೆದ ಸ್ಥಳವಾದ ಕಟ್ಟಾರಿ ಪಾರ್ಕ್ (Kattery park) ಸುತ್ತಮುತ್ತಲ ಪ್ರದೇಶಗಳಲ್ಲಿ ಡ್ರೋನ್ ಮೂಲಕ ಸಮೀಕ್ಷೆ ನಡೆಸಿ, ಹವಾಮಾನ ಪರಿಸ್ಥಿತಿಯನ್ನು ಅಧ್ಯಯನ ನಡೆಸಿದೆ.
ಸೇನಾ ಮುಖ್ಯಸ್ಥನ ಸಾವು ಸಂಭ್ರಮಿಸಿದ ಕೇರಳ ಸರ್ಕಾರ ವಕೀಲೆ, ನಿವೃತ್ತ ಸೇನಾನಿಗಳ ಪ್ರತಿಭಟನೆ!
ಈ ಕುರಿತು ಶುಕ್ರವಾರ ಟ್ವೀಟ್ ಮಾಡಿರುವ ಭಾರತೀಯ ವಾಯುಪಡೆ, 2021ರ ಡಿ.8ರಂದು ನಡೆದ ಹೆಲಿಕಾಪ್ಟರ್ ದುರಂತದ ಕುರಿತು ತನಿಖೆ ನಡೆಸಲು ಭಾರತೀಯ ವಾಯುಪಡೆ ಈಗಾಗಲೇ ಟ್ರೈಸವೀರ್ರ್ಸ್ ಕೋರ್ಟ್ ಆಫ್ ಎನ್‌ಕ್ವೈರಿಗೆ (Court of Enquiry) ಆದೇಶಿಸಿದೆ. ಈ ತನಿಖೆ ಆದಷ್ಟು ಶೀಘ್ರವಾಗಿ ಮುಗಿದು, ಸತ್ಯಾಂಶವನ್ನು ಹೊರಗೆಡವಲಿದೆ. ಅಲ್ಲಿಯವರೆಗೂ ಘಟನೆಯಲ್ಲಿ ಮಡಿದವರ ಘನತೆ ಕಾಪಾಡುವ ನಿಟ್ಟಿನಲ್ಲಿ ನಾನಾ ವದಂತಿಗಳಿಗೆ ಕಿವಿಗೊಡುವುದರಿಂದ ದೂರ ಉಳಿಯುವುದು ಒಳಿತು ಎಂದು ಮನವಿ ಮಾಡಿದೆ.