IAF Chopper Crash: ವದಂತಿಗಳನ್ನು ನಂಬಬೇಡಿ, ಶೀಘ್ರ ತನಿಖೆ ವರದಿ: ವಾಯು ಸೇನೆ

*ಜ| ರಾವತ್‌ ಅಪಘಾತ ಕುರಿತು ವಾಯುಪಡೆ ಸ್ಪಷ್ಟನೆ
*ವದಂತಿಗಳನ್ನು ನಂಬದಂತೆ ಟ್ವೀಟ್‌ ಮೂಲಕ ಮನವಿ
*ಪೆನ್‌ಡ್ರೈವ್‌ ದತ್ತಾಂಶ ಸಿಗದಿದ್ದರೆ ರಷ್ಯಾಕ್ಕೆ ಮೊರೆ

IAF Chopper Crash avoiding uninformed speculation on helicopter crash said IAF mnj

ನವದೆಹಲಿ (ಡಿ. 11): ಸಶಸ್ತ್ರ ಪಡೆಗಳ ಮುಖ್ಯಸ್ಥ ಜ.ಬಿಪಿನ್‌ ರಾವತ್‌ (Cds General Bipin Rawat) ಸೇರಿದಂತೆ 13 ಜನರನ್ನು ಬಲಿ ಪಡೆದ ನಿಗೂಢ ಹೆಲಿಕಾಪ್ಟರ್‌ ಅಪಘಾತ ಕುರಿತು (IAF Chopper Crash) ನಾನಾ ವದಂತಿಗಳು ಹಬ್ಬಿರುವ ಬೆನ್ನಲ್ಲೇ, ಇಂಥ ವದಂತಿಗಳಿಗೆ ಕಿವಿಗೊಡದಂತೆ ಭಾರತೀಯ ವಾಯುಪಡೆ ಮನವಿ ಮಾಡಿದೆ. ಅಲ್ಲದೆ, ಈ ಕುರಿತು ಶೀಘ್ರ ತನಿಖಾ ವರದಿ ಕೈಸೇರಲಿದೆ ಎಂದಿದೆ. ಕಾಪ್ಟರ್‌ ಅಪಘಾತದ ತನಿಖೆಗಾಗಿ ಸೇನೆಯಿಂದ ನೇಮಕಗೊಂಡಿರುವ ಏರ್‌ ಮಾರ್ಷಲ್‌ ಮಾನವೇಂದ್ರ ಸಿಂಗ್‌ ನೇತೃತ್ವದ ತಂಡ ತಮಿಳುನಾಡಿನ ಕೂನೂರು ಸಮೀಪ ತನ್ನ ತನಿಖೆ ಆರಂಭಿಸಿದೆ. ಅಪಘಾತ ನಡೆದ ಸ್ಥಳವಾದ ಕಟ್ಟಾರಿ ಪಾರ್ಕ್ (Kattery park) ಸುತ್ತಮುತ್ತಲ ಪ್ರದೇಶಗಳಲ್ಲಿ ಡ್ರೋನ್‌ ಮೂಲಕ ಸಮೀಕ್ಷೆ ನಡೆಸಿ, ಹವಾಮಾನ ಪರಿಸ್ಥಿತಿಯನ್ನು ಅಧ್ಯಯನ ನಡೆಸಿದೆ.

ಈ ಕುರಿತು ಶುಕ್ರವಾರ ಟ್ವೀಟ್‌ ಮಾಡಿರುವ ಭಾರತೀಯ ವಾಯುಪಡೆ, 2021ರ ಡಿ.8ರಂದು ನಡೆದ ಹೆಲಿಕಾಪ್ಟರ್‌ ದುರಂತದ ಕುರಿತು ತನಿಖೆ ನಡೆಸಲು ಭಾರತೀಯ ವಾಯುಪಡೆ ಈಗಾಗಲೇ ಟ್ರೈಸವೀರ್ರ್ಸ್ ಕೋರ್ಟ್‌ ಆಫ್‌ ಎನ್‌ಕ್ವೈರಿಗೆ‌ (Court of Enquiry) ಆದೇಶಿಸಿದೆ. ಈ ತನಿಖೆ ಆದಷ್ಟು ಶೀಘ್ರವಾಗಿ ಮುಗಿದು, ಸತ್ಯಾಂಶವನ್ನು ಹೊರಗೆಡವಲಿದೆ. ಅಲ್ಲಿಯವರೆಗೂ ಘಟನೆಯಲ್ಲಿ ಮಡಿದವರ ಘನತೆ ಕಾಪಾಡುವ ನಿಟ್ಟಿನಲ್ಲಿ ನಾನಾ ವದಂತಿಗಳಿಗೆ ಕಿವಿಗೊಡುವುದರಿಂದ ದೂರ ಉಳಿಯುವುದು ಒಳಿತು ಎಂದು ಮನವಿ ಮಾಡಿದೆ.

 

 

"08 ಡಿಸೆಂಬರ್ 21 ರಂದು ಸಂಭವಿಸಿದ ದುರಂತ ಹೆಲಿಕಾಪ್ಟರ್ ಅಪಘಾತದ ಕಾರಣವನ್ನು ತನಿಖೆ ಮಾಡಲು IAF ತ್ರಿಟ್ರೈಸವೀರ್ರ್ಸ್ ಕೋರ್ಟ್‌ ಆಫ್‌ ಎನ್‌ಕ್ವೈರಿ ಸ್ಥಾಪಿಸಿದೆ. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಮತ್ತು ಸತ್ಯಗಳನ್ನು ಹೊರತರಲಾಗುವುದು. ಅಲ್ಲಿಯವರೆಗೆ ಹುತಾತ್ಮರಾದವರ ಘನತೆಯನ್ನು ಗೌರವಿಸಲು, ಮಾಹಿತಿಯಿಲ್ಲದ ಊಹಾಪೋಹಗಳನ್ನು ನಂಬಬೇಡಿ" ಎಂದು ವಾಯುಸೇನೆ ಅಧಿಕೃತ ಖಾತೆಯಿಂದ ಟ್ವೀಟ್‌ ಮಾಡಿದೆ.

ಪೆನ್‌ಡ್ರೈವ್‌ ದತ್ತಾಂಶ ಸಿಗದಿದ್ದರೆ ರಷ್ಯಾಕ್ಕೆ ಮೊರೆ!

ಸೂಳೂರಿನಲ್ಲಿ ಈಗಾಗಲೇ ಪತ್ತೆಹಚ್ಚಲಾಗಿರುವ ನತದೃಷ್ಟ‘ಎಂಐ-17ವಿ-5’ ಹೆಲಿಕಾಪ್ಟರ್‌ನ ಬ್ಲಾಕ್‌ ಬಾಕ್ಸ್‌ನಲ್ಲಿರುವ (Black Box) ಪೆನ್‌ಡ್ರೈವ್‌ನ ದತ್ತಾಂಶಗಳನ್ನು ಹೊರತೆಗೆಯಲು ವಾಯುಪಡೆಯ ತಂತ್ರಜ್ಞರು ಯತ್ನ ನಡೆಸಿದ್ದಾರೆ. ಒಂದು ವೇಳೆ ಪ್ರಯತ್ನ ಫಲಕೊಡದಿದ್ದರೆ ರಷ್ಯಾ ಮೂಲದ ಕಾಪ್ಟರ್‌ ನಿರ್ಮಾಣ ಸಂಸ್ಥೆಯ ತಂತ್ರಜ್ಞರ ನೆರವು ಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಹೆಲಿಕಾಪ್ಟರನ್ನು ರಷ್ಯಾದಿಂದ ಖರೀದಿಸಲಾಗಿತ್ತು.

ಪಂಚಭೂತಗಳಲ್ಲಿ ರಾವತ್ ಲೀನ, ಮಿಲಿಟರಿ ಗೌರವದೊಂದಿಗೆ ಅಂತ್ಯಕ್ರಿಯೆ!

ಭಾರತದ ಮಿಲಿಟರಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ, ಶತ್ರು ರಾಷ್ಟ್ರಗಳು, ಭಯೋತ್ಪಾದಕರಿಗೆ ದುಸ್ವಪ್ನವಾಗಿದ್ದ ಭಾರತದ ಹೆಮ್ಮೆಯ ವೀರ ಸಿಡಿಎಸ್ ಜನರಲ್ ಬಿಪಿನ್ ರಾವತ್‌ಗೆ(CDS Gen Bipin Rawat) ದೇಶ ಅಂತಿಮ ನಮನ ಸಲ್ಲಿಸಿದೆ. ದೆಹಲಿಯ ಬ್ರಾರ್ ಸ್ಕ್ವೇರ್ ರುದ್ರಭೂಮಿಯಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕ(Madhulika Rawat) ಅಂತ್ಯಕ್ರಿಯೆ ನಡೆದಿದೆ. ಸಕಲ ಮಿಲಿಟರಿ ಗೌರವದೊಂದಿಗೆ(ull Military Honor) ರಾವತ್ ಅಂತ್ಯಕ್ರಿಯೆ ಮಾಡಲಾಗಿದೆ. ಅಂತ್ಯಕ್ರಿಯೆಲ್ಲಿ ರಾವತ್ ಪುತ್ರಿಯರಾದ ಕೃತಿಕಾ ರಾವತ್ ಹಾಗೂ ತಾರಿಣಿ ರಾವತ್ ಅಂತಿಮ ವಿಧಿವಿಧಾನಗಳನ್ನು ನೇರವೇರಿಸಿ, ಚಿತಿಗೆ ಅಗ್ನಿಸ್ಪರ್ಶ ಮಾಡಿದರು.

Bipin Rawat Cremation ಪಂಚಭೂತಗಳಲ್ಲಿ ರಾವತ್ ಲೀನ, ಮಿಲಿಟರಿ ಗೌರವದೊಂದಿಗೆ ಅಂತ್ಯಕ್ರಿಯೆ!

17 ಸುತ್ತು ಕುಶಾಲತೋಪು ಸಿಡಿಸಿ ರಾವತ್‌ಗೆ ಗೌರವ ನೀಡಲಾಯಿತು. ಇನ್ನು 6 ಲೆಫ್ಟಿನೆಂಟ್ ಜನರಲ್‌ಗಳಿಂದ ಸೇನಾ ಗೌರವ ಅರ್ಪಿಸಲಾಗಿದೆ. 3 ಸೇನೆಯ 900 ಸೇನಾಧಿಕಾರಿಗಳು ರಾವತ್ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡು ಸೇನಾ ಗೌರವ ಸಲ್ಲಿಸಿದ್ದಾರೆ. 3 ಸೇನೆಯ 33 ಸಿಬ್ಬಂದಿಗಳಿಂದ ವಾದ್ಯ ಸಂಗೀತದ ಮೂಲಕ ಗೌರವ ನಮನ ಸಲ್ಲಿಸಲಾಗಿದೆ. 

Latest Videos
Follow Us:
Download App:
  • android
  • ios