ರಾಜ್ಯದಲ್ಲಿ ಕಾಮಗಾರಿಗಳ ಬಿಲ್ ಬಾಕಿಯಿಂದ ಕಂಗಾಲಾಗಿರುವ ಗುತ್ತಿಗೆದಾರರೊಬ್ಬರು ಪ್ರಯಾಗರಾಜನ ಕುಂಭ ಮೇಳದಲ್ಲಿ ಬಿಲ್ ಪಾವತಿಗಾಗಿ ಪ್ರಾರ್ಥಿಸಿ ಪುಣ್ಯ ಸ್ನಾನ ಮಾಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ನಿಂತು ಕರ್ನಾಟಕದ ಎಲ್ಲ ಗುತ್ತಿಗೆದಾರರಿಗೆ ಬಿಲ್ ಆಗಲಿ, ಹೊಸ ಕಾಮಗಾರಿ ಆರಂಭವಾಗಲಿ ಎಂದು ಬೇಡಿಕೊಂಡಿದ್ದಾರೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬೆಂಗಳೂರು (ಫೆ.6): ರಾಜ್ಯದಲ್ಲಿ ಕಾಮಗಾರಿಗಳ ಬಿಲ್ ಬಾಕಿಯಿಂದ ಗುತ್ತಿಗೆದಾರರು ಕಂಗಾಲಾಗಿದ್ದು,ಪ್ರಯಾಗರಾಜನ ಕುಂಭ ಮೇಳದಲ್ಲಿ ಬಾಗಲಕೋಟೆ ಮೂಲದ ಗುತ್ತಿಗೆದಾರರೊಬ್ಬರು ಬಿಲ್ ಪಾವತಿಗಾಗಿ ಪ್ರಾರ್ಥಿಸಿ ಪುಣ್ಯ ಸ್ನಾನ ಮಾಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ನಿಂತು ತಮ್ಮ ಅಳಲು ತೋಡಿಕೊಂಡಿದ್ದು, ಕರ್ನಾಟಕದ ಎಲ್ಲ ಗುತ್ತಿಗೆದಾರರಿಗೆ ಬಿಲ್ ಆಗಲಿ,ಹೊಸ ಹೊಸ ಕಾಮಗಾರಿ ಆರಂಭವಾಗಲಿ,ಕಾಂಟ್ರ್ಯಾಕ್ಟರ್ ಗಳ ಬಾಳು ಸಮೃದ್ಧವಾಗಲಿ,ಹರ ಹರ ಮಹಾದೇವ ಎಂದು ಬೇಡಿಕೊಂಡು ಪುಣ್ಯ ಸ್ನಾನ ಮಾಡಿದ್ದಾರೆ.ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
'ನಾವಿಂದು ಪ್ರಯಾಗ್‌ರಾಜ್‌ಗೆ ಬಂದಿದ್ದೇವೆ. ಪ್ರಯಾಗ್‌ರಾಜ್‌ನ ಗಂಗಾ, ಯಮುನಾ, ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡುತ್ತಿದ್ದೇವೆ. ಪವಿತ್ರ ಸ್ನಾನವನ್ನು ಮಾಡಿದ್ದೇವೆ. ಇಂದಿನ ದಿನ ನಾವು ಕರ್ನಾಟಕದ ಎಲ್ಲಾ ಗುತ್ತಿಗೆದಾರರಿಗೆ ಅವರ ಬಿಲ್ ಆಗಲಿ, ಪೇಮೆಂಟ್ ಕ್ಲೀಯರ್ ಆಗಲಿ. ಹೊಸ ಹೊಸ ಕೆಲಸಗಳು ಸಿಗುವಂತಾಗಲಿ. ಎಲ್ಲರೂ ಸಮೃದ್ಧಿಯಿಂದ ಬಾಳಲಿ, ಗಂಗಾ-ಯಮುನಾ-ಸರಸ್ವತಿ ಕೀ.. ಹರ ಹರ ಮಹಾದೇವ್' ಎಂದು ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದಿದ್ದಾರೆ.
ಸಿದ್ದು ಸರ್ಕಾರಕ್ಕೆ 5,219 ಕೋಟಿ ಹರಿಹಾರದ ತೂಗುಕತ್ತಿ, ಅರೆಸ್ಟ್ ಆಗ್ತಾರಾ ಮುಖ್ಯ ಕಾರ್ಯದರ್ಶಿ?
ಒಂದು ಅಂದಾಜಿನ ಪ್ರಕಾರ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ 35,500 ಕೋಟಿ ರೂಪಾಯಿಗೂ ಹೆಚ್ಚಿನ ಬಿಲ್ ಪಾವತಿ ಬಾಕಿ ಉಳಿದುಕೊಂಡಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿರ್ವಹಿಸುತ್ತಿರುವ ಜಲಸಂಪನ್ಮೂಲ ಇಲಾಖೆ ಅತಿಹೆಚ್ಚು ಬಾಕಿ ಹಣ ಉಳಿಸಿಕೊಂಡಿದೆ.
ಕಿಯೋನಿಕ್ಸ್‌ಗೆ ಸರ್ಕಾರದಿಂದ ಬಾಕಿ 350 ಕೋಟಿ ರೂ.: ವೆಂಡರ್ಸ್‌ಗಳಿಂದ ದಯಾಮರಣಕ್ಕೆ ಮನವಿ
ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ನಿರ್ವಹಿಸುತ್ತಿರುವ ಡಿಕೆಶಿ ಅವರ ಇಲಾಖೆ 17 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದರೆ, ಲೋಕೋಪಯೋಗಿ ಇಲಾಖೆ 9 ಸಾವಿರ ಕೋಟಿ ರೂಪಾಯಿ ಬಾಕಿ ಇರಿಸಿಕೊಂಡಿದೆ.
