ಸಮಾಜದ ನೈಜ ಪರಿವರ್ತನೆಗೆ ನಾಂದಿ ಹಾಡುತ್ತಿರುವ ಶಿಕ್ಷಕರಿಗೆ ಎಜುಕೇಶನ್ ಅವಾರ್ಡ್!
ಪಠ್ಯದ ಜೊತೆಗೆ ಜೀವನ ಮೌಲ್ಯಗಳನ್ನು ಕಲಿಸುವ ಶಿಕ್ಷಕರು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಹೀಗೆ ದೇಶಾದ್ಯಂತ ಪಠ್ಯಪುಸ್ತಕದ ಹೊರತಾಗಿಯೂ ನೈಜ ಶಿಕ್ಷಣ ನೀಡುವ ಮೂಲಕ ಸಮಾಜವದಲ್ಲಿ ಪರಿವರ್ತನೆಯ ಅಧ್ಯಾಯ ಬರೆಯುತ್ತಿರುವ ಶಿಕ್ಷಕರನ್ನು ಶ್ರೀ ಶ್ರೀ ರವಿಶಂಕರ್ ವಿದ್ಯಮಂದಿರ ಟ್ರಸ್ಟ್ ಗೌರವಿಸಿದೆ.
ತುಮಕೂರು (ಜ.27): ಪಠ್ಯದ ಜೊತೆಗೆ ಜೀವನ ಮೌಲ್ಯಗಳನ್ನು ಕಲಿಸುವ ಶಿಕ್ಷಕರು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಹೀಗೆ ದೇಶಾದ್ಯಂತ ಪಠ್ಯಪುಸ್ತಕದ ಹೊರತಾಗಿಯೂ ನೈಜ ಶಿಕ್ಷಣ ನೀಡುವ ಮೂಲಕ ಸಮಾಜವದಲ್ಲಿ ಪರಿವರ್ತನೆಯ ಅಧ್ಯಾಯ ಬರೆಯುತ್ತಿರುವ ಶಿಕ್ಷಕರನ್ನು ಶ್ರೀ ಶ್ರೀ ರವಿಶಂಕರ್ ವಿದ್ಯಮಂದಿರ ಟ್ರಸ್ಟ್ ಗೌರವಿಸಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಶ್ರೀ ರವಿಶಂಕರ ಗುರೂಜಿ, ಸಮಾಜದ ನೈಜ ಪರಿವರ್ತನೆಯೇ ತಮ್ಮ ಧ್ಯೇಯ ಎಂಬ ನಂಬಿಕೆಯಿಂದ ನಮ್ಮ ಟ್ರಸ್ಟಿಗಳು ಕೆಲಸ ಮಾಡುತ್ತಾರೆ. ಕೇವಲ ಇದು ಮಾತ್ರ ಆಗಿರದೆ, ಪ್ರತಿಯೊಂದು ಶಾಲೆಯೂ ನಮ್ಮದೇ. ಅವುಗಳೆಲ್ಲದರ ಅಭಿವೃದ್ಧಿ ಮತ್ತು ಉತ್ಕೃಷ್ಟತೆಗಾಗಿ ನಾವು ಶ್ರಮಿಸುತ್ತೇವೆ" ಎಂದರು.
ಶ್ರೀ ಸುಭಾಷ್ ಸರ್ಕಾರ್ ರವರು ಮಾತನಾಡಿ, ನಮ್ಮ ನಾಗರಿಕತೆಯು ನೀಡಿರುವ ಎಲ್ಲದರ ಜೊತೆಗೂ ಪ್ರಾಚೀನ ವಿಜ್ಞಾನವಾದ ಯೋಗವನ್ನೂ ಸಹ ಹೆಮ್ಮೆಯ ಭಾವದಿಂದ ನೋಡಬೇಕು. 2020 ರ ಹೊಸ ಶಿಕ್ಷಣ ನೀತಿಯು ತಂತ್ರಜ್ಞಾನದ ಮೂಲಕ ಹೊಸ ಕಲಿಕೆಯನ್ನು ನೀಡಲಿದೆ ಎಂದರು.
ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿದ ಜೀವನ ಪಾಠಗಳು
ಡಾ.ಎಸ್‌ಕೃಷ್ಣಪ್ಪ ಉತ್ತಮ ಶಿಕ್ಷಕ ಪ್ರಶಸ್ತಿ:
ತುಮಕೂರಿನ ಸರ್ಕಾರಿ ಸಂಯೋಜಿತ ಪ್ರೌಢಶಾಲೆ ಪ್ರಾಂಶುಪಾಲರಾದ, ಲೇಖಕ ಡಾ.ಎಸ್ ಕೃಷ್ಣಪ್ಪ ದಕ್ಷಿಣ ವಲಯದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಸ್ ಕೃಷ್ಣಪ್ಪ ಬಾಲ್ಯವಿವಾಹ, ಬಾಲಕಾರ್ಮಿಕರ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಪಿಡುಗಗಳನ್ನು ತೊಲಗಿಸಲು ಅವರತ ಶ್ರಮಪಟ್ಟಿದ್ದಾರೆ. ಗ್ರಾಮೀಣ ಶಿಕ್ಷಣ ಕ್ಷೇತ್ರದಲ್ಲಿರುವ ಸಂಪನ್ಮೂಲ ಕೊರತೆಯನ್ನು ಗ್ರಾಮೀಣ ಯುವಕರ ಮೂಲಕ ಸಮರ್ಥವಾಗಿ ನೀಗಿಸಿ ಸರ್ವರಿಗೂ ಶಿಕ್ಷಣ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀ ದತ್ತಾತ್ರೇಯ ವಾರೆಯವರು ಭಾರತದ ಪ್ರಥಮ ಐಎಸ್ಒ ಪ್ರಮಾಣಿತ ಸರ್ಕಾರಿ ಶಾಲೆಯನ್ನು ನೀಡಿದರು. ಮಹಾರಾಷ್ಟ್ರ ಸರ್ಕಾರವು ಅದನ್ನು ಅಂತಾರಾಷ್ಟ್ರೀಯ ಶಾಲೆಯಾಗಿಯೂ ಗುರುತಿಸಿದೆ ಮತ್ತು ಇವರ ಶಾಲೆಯ ಪ್ರತಿಯೊಂದು ಮಗುವೂ ಕೋಡಿಂಗ್ ಕಲಿತಿದೆ. ಆರು ಲಕ್ಷ ಶಿಕ್ಷಕರಿಗೆ ಸಮಗ್ರವಾಗಿ ಪಠ್ಯಕ್ರಮದಲ್ಲಿ ತರಬೇತಿ ನೀಡಿದ್ದಾರೆ. ಕೆಐಐಟಿ ವರ್ಲ್ಡ್ , ಗುರುಗಾಂವ್ ಮುಖ್ಯಶಿಕ್ಷಕಿ ಶ್ರೀಮತಿ ರಶ್ಮಿ ಶ್ರೀವಾಸ್ತವ್ ಅವರೂ ಪ್ರಶಸ್ತಿ ವಿಜೇತರಾಗಿದ್ದಾರೆ. ಇವರು ಸಾಮಾಜಿಕ, ಭಾವನಾತ್ಮಕ ಹಾಗೂ ವರ್ತನೆಗಳಲ್ಲಿ ವಿಡಿಯೋಗಳ ಮೂಲಕ ಬದಲಾವಣೆಯನ್ನು ತಂದಿದ್ದಾರೆ.
ಇದರ ಜೊತೆಗೆ ನೋಯ್ಡಾದ ಆರ್ಮಿ ಪಬ್ಲಿಕ್ ಶಾಲೆ ಅತ್ಯುತ್ತಮ ಶಾಲೆ ಪ್ರಶಸ್ತಿಯನ್ನು ಪಡೆದುಕೊಂಡಿತು. ಡಿಎವಿ ಪಬ್ಲಿಕ್ ಶಾಲೆ, ಸಾಧು ವಾಸ್ವಾನಿ ಅಂತಾರಾಷ್ಟ್ರೀಯ ಶಾಲೆ, ಹೈದರಾಬಾದ್, ಬ್ಲೂಮಿಂಗ್ಡೇಲ್ ಅಂತಾರಾಷ್ಟ್ರೀಯ ಶಾಲೆ, ರಾಜಸ್ತಾನ, ಪ್ರಶಸ್ತಿಯನ್ನು ಪಡೆದ ಇತರ ಶಾಲೆಗಳು.
ರಾಸಾಯನಿಕ ಮುಕ್ತ ಆಹಾರ ಬೆಳೆಯೋಣ: ಶ್ರೀಶ್ರೀ ರವಿಶಂಕರ ಗುರೂಜಿ
ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪೂರ್ಣ ವಲಯದ, ಬಿಹಾರಿನ ಕೌಶಲ್ ಕಿಶೋರಿ ಪಡೆದರು. ಉತ್ತಮ ನರ್ಸಿಂಗ್ ಶಿಕ್ಷಕರ ಪ್ರಶಸ್ತಿಯನ್ನು ಡಾ. ಸಂಜಯ್ ಎ. ಪೀರಾಪುರ್, ಉತ್ತಮ ವೈದ್ಯ ಶಿಕ್ಷಕ ಪ್ರಶಸ್ತಿಯನ್ನು ಚೆನ್ನೈನ ಸಂಜೀವನಿ ಆಯುರ್ವೇದ ಕೇಂದ್ರದ ಡಾ. ಪಿ. ಎಲ್. ಟಿ. ಗಿರಿಜ ಅವರಿಗೆ ನೀಡಲಾಯಿತು.