ರಾಸಾಯನಿಕ ಮುಕ್ತ ಆಹಾರ ಬೆಳೆಯೋಣ: ಶ್ರೀಶ್ರೀ ರವಿಶಂಕರ ಗುರೂಜಿ

ಇಡೀ ಪ್ರಪಂಚದ ಆರೋಗ್ಯಕ್ಕಾಗಿ ರಾಸಾಯನಿಕ ಮುಕ್ತ ಅಹಾರ ಬೆಳೆಯುವ ಸಂಕಲ್ಪ ರೈತರು ಮಾಡಬೇಕು.‌ ಸಾವಯವ ಕೃಷಿಯತ್ತ ಚಿತ್ತ ಹರಿಸಬೇಕು. ಮಾರ್ಕೆಟ್ ಸಮಸ್ಯೆಯನ್ನು ನಾವು ಪರಿಹರಿಸುತ್ತೇವೆ. ರೈತರ ಬೆನ್ನುಲುವಾಗಿ ನಾವು ಕೆಲಸ ಮಾಡುತ್ತೇವೆ ಎಂದು ಆರ್ಟ್ ಆಫ್ ಲಿವೀಂಗ್ ನ ಶ್ರೀ ಶ್ರೀ ರವುಶಂಕರ ಗುರೂಜಿ(Ravishankar Guruji) ನುಡಿದರು.

we lets grow chemical free food says shri shri ravishankar guruji at hospet rav

ಹೊಸಪೇಟೆ (ಫೆ.14): ಇಡೀ ಪ್ರಪಂಚದ ಆರೋಗ್ಯಕ್ಕಾಗಿ ರಾಸಾಯನಿಕ ಮುಕ್ತ ಅಹಾರ ಬೆಳೆಯುವ ಸಂಕಲ್ಪ ರೈತರು ಮಾಡಬೇಕು.‌ ಸಾವಯವ ಕೃಷಿಯತ್ತ ಚಿತ್ತ ಹರಿಸಬೇಕು. ಮಾರ್ಕೆಟ್ ಸಮಸ್ಯೆಯನ್ನು ನಾವು ಪರಿಹರಿಸುತ್ತೇವೆ. ರೈತರ ಬೆನ್ನುಲುವಾಗಿ ನಾವು ಕೆಲಸ ಮಾಡುತ್ತೇವೆ ಎಂದು ಆರ್ಟ್ ಆಫ್ ಲಿವೀಂಗ್ ನ ಶ್ರೀ ಶ್ರೀ ರವುಶಂಕರ ಗುರೂಜಿ(Ravishankar Guruji) ನುಡಿದರು.

ನಗರದಲ್ಲಿ ಮಂಗಳವಾರ ನಡೆದ ಆನಂದ ವಿಜಯೋತ್ಸವದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಾವಯವ ಕೃಷಿ(Organic farming)ಯಿಂದ ಬೆಳೆದ ಭತ್ತದಿಂದ ಮಧುಮೇಹ(diabetes) ಕೂಡ ಬರುವುದಿಲ್ಲ. ನಮ್ಮ ಮುಂದಿನ ಪೀಳಿಗೆಗೆ ನಾವು ಉತ್ತಮ ಆರೋಗ್ಯ(Good health) ಕೋಡೋಣ. ಇದಕ್ಕಾಗಿ ದೇಸಿ ತಳಿಯ ವಿವಿಧ ಬಗೆಯ ೧೭೦ ತಳಿಯ ಬಿತ್ತನೆ ಬೀಜ ಸಂಗ್ರಹಿಸಲಾಗಿದ್ದು, ಬೆಂಗಳೂರಿನಲ್ಲಿ ಬಿತ್ತನೆ ಬೀಜ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತಿದೆ ಎಂದರು.

ತಲೆ ಓಡಿಸಿದ್ರೆ ಹೀಗೂ ಹಣ ಗಳಿಸಬಹುದು, ಏನೇನೋ ಚಿಂತಿಸುವ ಅಗತ್ಯವಿಲ್ಲ

ರೈತರು(Farmerrs) ಸಾವಯವ ಕೃಷಿಯಿಂದ ಜನರ ಅರೋಗ್ಯ ಸಂರಕ್ಷಣೆ ಮಾಡಬಹುದು. ರೈತರು ಉದಾಸೀನ ಹೊಂದಬಾರದು. ಬದಲಾವಣೆಯತ್ತ ಹೊರಳಬೇಕು. ತುಂಗಭದ್ರಾ ಜಲಾಶಯದ ಪ್ರದೇಶದಲ್ಲಿ ಸುಮಾರು ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಭತ್ತ ಬೆಳೆಯುವ ಸಂಕಲ್ಪತೊಡಬೇಕು ಎಂದರು.

ರೈತರು ಕಣ್ಣೀರು ಹಾಕಬಾರದು:

ದೇಶ ಆರ್ಥಿಕ ಸದೃಢತೆ ಸಾಧಿಸಲು ರೈತರು ಸದೃಢರಾಗಬೇಕು.‌ಎಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ರೈತರು ಕಣ್ಣೀರು ಹಾಕಬಾರದು. ಹಾಗಾಗಿ ರೈತರಲ್ಲಿ ಅತ್ಮಸ್ಥೈರ್ಯ ತುಂಬಲು ಆರ್ಟ್ ಆಫ್ ಲಿವೀಂಗ್ ಆಶ್ರಮ ರೈತರ ಪರ ನಿಂತಿದೆ. ಕರ್ನಾಟಕದ ರೈತರು ಸ್ವಾವಲಂಬಿ ಜೀವನ‌ ನಡೆಸಬೇಕು. ಉತ್ತರ ಭಾರತ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೂ ನಾವು ಸಾವಯವ ಆಹಾರ ಕಳುಹಿಸಬೇಕು. ನಮ್ಮ ಭೂಮಿಯಲ್ಲಿ ಸಾವಯವ ಬೆಳೆ ಬೆಳೆಯೋಣ. ಮಹಾರಾಷ್ಟ್ರದ ವಿದರ್ಭದಲ್ಲಿ ಜಲತಾರಾ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಅಲ್ಲಿನ ರೈತರು ಖುಷಿಯಾಗಿದ್ದಾರೆ. ರೈತರ ತಲಾ ಆದಾಯವೂ ಹೆಚ್ಚಿದೆ ಎಂದರು.

ಮೂರು ಅಂತಸ್ತಿನ ಮನೆಯಲ್ಲಿ ಸಾವಯವ ಕೃಷಿ, ವರ್ಷಕ್ಕೆ ಭರ್ತಿ 70 ಲಕ್ಷ ಆದಾಯ

ಆರ್ಟ್ ಆಫ್ ಲಿವೀಂಗ್(Art of Living) ನ ಶೇಷಗಿರಿ ಗುಬ್ಬಿ, ವಕೀಲೆ ಹೇಮಾದ್ರಿಬಾಯಿ ಸೇರಿದಂತೆ ಕೃಷಿಪಂಡಿತರು, ರೈತರು ಇದ್ದರು. ರೈತರು ಆರೋಗ್ಯಕರ ಭತ್ತ ಬೆಳೆಯಬೇಕು ಎಂದು ಕೃಷಿಕರಿಗೆ  ಗುರೂಜಿ ಸಂಕಲ್ಪ ಮಾಡಿಸಿದರು.

Latest Videos
Follow Us:
Download App:
  • android
  • ios