Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯಗೆ ಶುರುವಾಯ್ತು ಮಹಿಳೆಯರಿಂದ ಮತ್ತೊಂದು ತಲೆನೋವು!

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ಅವರು ನೀಡಿದ್ದ ಐದು ಗ್ಯಾರಂಟಿ ಭರವಸೆಗಳ ಜೊತೆಗೆ ಮಹಿಳೆಯರಿಗೆ ನೀಡಿದ್ದ ಮತ್ತೊಂದು ಭರವಸೆ ಈಗ ಸಖತ್​ ಸದ್ದು ಮಾಡುತ್ತಿದೆ, ಡಿಸಿಸಿ ಬ್ಯಾಂಕ್​ ನಿಂದ ಕೊಟ್ಟಿರುವ ಸಾಲ ಕೇಳಲು ಹೋದ ಅಧಿಕಾರಿಗಳಿಗೆ ಮಹಿಳೆಯರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.ಈ ವಿಚಾರ ಸಿಎಂ ಸಿದ್ದರಾಮಯ್ಯನವರಿಗೆ ತಲೆನೋವು ತಂದಿದೆ.ಅದ್ಯಾಕೆ ಅನ್ನೋದನ್ನು ತೋರಿಸ್ತೀವಿ ನೋಡಿ. 

Siddaramaiah guarantee statement issue women demand DCC Bank loan waiver in kolar district rav
Author
First Published Jun 9, 2023, 12:13 PM IST

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ (ಜೂ.9) : ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ಅವರು ನೀಡಿದ್ದ ಐದು ಗ್ಯಾರಂಟಿ ಭರವಸೆಗಳ ಜೊತೆಗೆ ಮಹಿಳೆಯರಿಗೆ ನೀಡಿದ್ದ ಮತ್ತೊಂದು ಭರವಸೆ ಈಗ ಸಖತ್​ ಸದ್ದು ಮಾಡುತ್ತಿದೆ, ಡಿಸಿಸಿ ಬ್ಯಾಂಕ್​ ನಿಂದ ಕೊಟ್ಟಿರುವ ಸಾಲ ಕೇಳಲು ಹೋದ ಅಧಿಕಾರಿಗಳಿಗೆ ಮಹಿಳೆಯರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.ಈ ವಿಚಾರ ಸಿಎಂ ಸಿದ್ದರಾಮಯ್ಯನವರಿಗೆ ತಲೆನೋವು ತಂದಿದೆ.ಅದ್ಯಾಕೆ ಅನ್ನೋದನ್ನು ತೋರಿಸ್ತೀವಿ ನೋಡಿ. 

ಒಂದೆಡೆ ಬ್ಯಾಂಕ್(DCC bank)​ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡು ಸಾಲ ಕಟ್ಟೋದಿಲ್ಲ ಎಂದು ಖಡಕ್ಕಾಗಿ ಹೇಳುತ್ತಿರುವ ಮಹಿಳೆಯರು, ಇನ್ನೊಂದೆಡೆ ನಮ್ಮ ಸರ್ಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡೋದಾಗಿ ಆಶ್ವಾಸನೆ ನೀಡುತ್ತಿರುವ ಸಿದ್ದರಾಮಯ್ಯ(Siddaramaiah),

Congress guarantee: ಷರತ್ತುಗಳಿಲ್ಲದೆ ಐದೂ ಯೋಜನೆ ಜಾರಿಗೆ ಬರಲಿ: ಸಿ.ಸಿ. ಪಾಟೀಲ ಆಗ್ರಹ

ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ(Kolar)ದಲ್ಲಿ.ಇತ್ತೀಚೆಗೆ ಅದರಲ್ಲೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ(Congress government) ಅಧಿಕಾರಕ್ಕೆ ಬಂದ ಮೇಲೆ ಕೋಲಾರ ಡಿಸಿಸಿ ಬ್ಯಾಂಕ್​ ಸಿಬ್ಬಂದಿಗೆ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಂದ ಸಾಲ ವಸೂಲಿ ಮಾಡೋದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಸಾಲ ಕೇಳಲು ಹೋಗುವ ಬ್ಯಾಂಕ್​ ಸಿಬ್ಬಂದಿ ಮೇಲೆ ಮಹಿಳೆಯರು ಹರಿಯಾಯ್ದು ಬೀಳುತ್ತಿದ್ದಾರೆ ಅಷ್ಟೇ ಅಲ್ಲ ನಾವು ಯಾವುದೇ ಕಾರಣಕ್ಕೂ ಸಾಲ ಕಟ್ಟೋದಿಲ್ಲ ಎಂದು ಖಡಕ್ಕಾಗಿ ಹೇಳಿ ವಾಪಸ್​ ಕಳಿಸುತ್ತಿದ್ದಾರೆ,

ಒಂದು ವೇಳೆ ಬಲವಂತ ಮಾಡಿದ್ರೆ ತಕ್ಕ ಶಾಸ್ತಿ ಮಾಡ್ತೀವಿ ಅನ್ನೋ ಮಾತುಗಳನ್ನಾಡುತ್ತಿದ್ದಾರೆ, ಸದ್ಯ ಇದು ಸಾಲ ಕೊಟ್ಟಿರುವ ಡಿಸಿಸಿ ಬ್ಯಾಂಕ್​ ನವರಿಗೆ ಹಾಗೂ ಹೋಬಳಿ ಮಟ್ಟದ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಾಲ ಕೊಟ್ಟಿರುವ ಸೊಸೈಟಿಗಳಿಗೆ ಸಾಲ ವಸೂಲಿ ಮಾಡೋದೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದ್ದು ಸಾಲ ವಸೂಲಿಯಾಗದೆ ಬ್ಯಾಂಕ್​ನ್ನು ಹೇಗಪ್ಪಾ ಮುನ್ನಡೆಸೋದು ಅನ್ನೋ ಆತಂಕ ಶುರುವಾಗಿದೆ.

ಹೌದು ಕೋಲಾರ ತಾಲೂಕಿನ ಕ್ಯಾಲನೂರು ಗ್ರಾಮದಲ್ಲಿ ಮಹಿಳೆಯರ ಸಾಲ ಪಾವತಿ ಬಗ್ಗೆ ಕೇಳಲು ಹೋದ ಅಧಿಕಾರಿಕೆ ಮಹಿಳೆಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಪರಿ ಇದು. ಇನ್ನು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಮಹಿಳೆಯರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್​ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಲ ಕಟ್ಟೋದಿಲ್ಲ ಎಂದು ಪಟ್ಟು ಹಿಡಿದಿರುವುದಕ್ಕೆ ಕಾರಣವಾದ್ರು ಏನು ಅಂತ ನೋಡೋದಾದ್ರೆ ಸಿದ್ದರಾಮಯ್ಯ ಅವರು ಚುನಾವಣೆಗೂ ಮೊದಲು ತಮ್ಮ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳ ಜೊತೆಗೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ಸಾಲ ಮರುಪಾವತಿಯ ಕಂತುಗಳನ್ನು ಸರಿಯಾಗಿ ಕಟ್ಟಿಕೊಂಡು ಬರುತ್ತಾರೋ ಅವರ ಸಾಲವನ್ನು ನಾವು ಅಧಿಕಾರಕ್ಕೆ ಬಂದ ಕೂಡಲೇ ಮನ್ನಾ ಮಾಡುತ್ತೇವೆ ಅಲ್ಲಿವರೆಗೂ ನೀವು ಕಂತುಗಳನ್ನು ಕಟ್ಟಿಕೊಂಡು ಹೋಗಿ ಎಂದು ನಾವು ಬಂದ ಕೂಡಲೇ ಮನ್ನಾ ಮಾಡ್ತೇವೆ ಅಂತ ಕೋಲಾರದಲ್ಲಿ ಮೊದಲು ಘೋಷಣೆ ಮಾಡಿದ್ರು. 

ಫೆಬ್ರವರಿ.13 ರಂದು ಕೋಲಾರ ತಾಲ್ಲೂಕು ವೇಮಗಲ್​ ನಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಸಾಲ ಮನ್ನಾ ಮಾಡೋದಾಗಿ ಘೋಷಣೆ ಮಾಡಿದ್ದ ಸಿದ್ದರಾಮಯ್ಯ ಸಾಲ ಮನ್ನಾ ಮಾಡುವುದರ ಜೊತೆಗೆ ಈಗಿರುವ ಸಾಲದ ಮೊತ್ತವನ್ನು ಮಹಿಳಾ ಸ್ವಸಹಾಯ ಗುಂಪುಗಳಿಗೆ ಒಂದು ಲಕ್ಷದಷ್ಟು ಹೆಚ್ಚಿಗೆ ಮಾಡೋದಾಗಿ ಭರವಸೆ ನೀಡಿದ್ದರು ಅದರಂತೆ ಸದ್ಯ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್​ ಸರ್ಕಾರ ಅಧಿಕಾರಕ್ಕೆ ಬಂದಿದೆ ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾರೆ ಹಾಗಾಗಿ ಸಿದ್ದರಾಮಯ್ಯ ಹೇಳಿದ್ದಾರೆ.  ನಮ್ಮ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಮಾತ್ರ ಸಾಲ ಪಾವತಿ ಮಾಡಿ ಆ ನಂತರ ಬಾಕಿ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತದೆ ಎಂದು ಹಾಗಾಗಿ ನಾವು ಸಾಲ ಕಟ್ಟೋದಿಲ್ಲ,ನಾವು ಈ ಉದ್ದೇಶದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ವೋಟು ಹಾಕಿದ್ದೇವೆ ಅಂತ ಸಾಲ ಕೇಳಲು ಬರುವ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಆ.1ರಿಂದ ಗೃಹಜ್ಯೋತಿ ಯೋಜನೆ ಆರಂಭಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ಒಟ್ಟಾರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ದಾವಂತದಲ್ಲಿ ಜನರಿಗೆ ನೀಡಿರುವ ಹಲವು ಆಶ್ವಾಸನೆಗಳು ಈಡೇರಿಸಲೇ ಬೇಕಾದ ಅನಿವಾರ್ಯತೆ ಸಿದ್ದರಾಮಯ್ಯನವರ ಮುಂದಿದೆ,ಸದ್ಯ ಐದು ಗ್ಯಾರಂಟಿಗಳನ್ನೇ ಜಾರಿಗೆ ತರಲು ಸರ್ಕಸ್​ ಮಾಡುತ್ತಿರುವ ಸರ್ಕಾರ ಈ ಸ್ತ್ರೀ ಶಕ್ತಿ ಸಾಲ ಮನ್ನಾ ವಿಚಾರ ಏನು ಮಾಡುತ್ತೆ ಮಹಿಳೆಯರನ್ನು ಹೇಗೆ ಸಮಾಧಾನ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Follow Us:
Download App:
  • android
  • ios