Asianet Suvarna News Asianet Suvarna News

ತಾಲಿಬಾನಿಗಳು ಬಿಜೆಪಿ ಸೇರಿ ಎಲ್ಲಾ ಪಕ್ಷದಲ್ಲೂ ಇದ್ದಾರೆ : ಎಚ್ .ವಿಶ್ವನಾಥ್

  •  2015 ರಲ್ಲಿ ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್  ಸ್ಥಾಪನೆ
  • ಮುಂದಿನ ಆಕ್ಟೋಬರ್ 2 ರಂದು ಗುಜರಾತಿನಲ್ಲಿ  ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್  ವಾರ್ಷಿಕೋತ್ಸವದ ಸಮಾವೇಶ 
  •  ವಾರ್ಷಿಕೋತ್ಸವದ ಸಮಾವೇಶ ಬಗ್ಗೆ ಮಾಜಿ ಸಚಿವ ಎಚ್ ವಿಶ್ವನಾಥ್‌ ಮಾಹಿತಿ
Shepherds India international Programs will be held on October 2 in Gujarat snr
Author
Bengaluru, First Published Sep 29, 2021, 1:17 PM IST
  • Facebook
  • Twitter
  • Whatsapp

ಬೆಂಗಳೂರು (ಸೆ.29):  RSS ತಾಲಿಬಾನ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ನನ್ನ ವಿರೋಧ ಇದೆ. RSS ಬಹಳ ವರ್ಷಗಳಿಂದ ದೇಶದಲ್ಲಿ, ರಾಜ್ಯದಲ್ಲಿ ಇದೆ. ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಹೇಳಿದರು..

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಎಚ್ ವಿಶ್ವನಾಥ್  ಒಂದು ಸಂಘಟನೆ ಬಗ್ಗೆ ಮಾತನಾಡಬಾರದು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು. ಏನದು ಕೋಮು ಭಾವನೆ ಎಂದು ಪ್ರಶ್ನೆ ಮಾಡಿದರು. 

ನಿಮ್ಮನ್ನ ದಮ್ಮಯ್ಯ ಅಂತೀನಿ, ಲಜ್ಜೆಗೆಟ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗಿರಪ್ಪ: ಸಿದ್ದರಾಮಯ್ಯ

ತಾಲಿಬಾನ್ ಗಳು ಯಾವ ಪಾರ್ಟಿಯಲ್ಲಿ ಇಲ್ಲ ಹೇಳಿ. ಎಲ್ಲಾ ಪಾರ್ಟಿಗಳಲ್ಲೂ ತಾಲಿಬಾನ್ ಗಳು ಇದ್ದಾರೆ. ಬಿಜೆಪಿ(BJP) ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಸಿದ್ದರಾಮಯ್ಯ ಹೇಳಿಕೆಗೆ ನನ್ನ ವಿರೋಧವಿದೆ ಎಂದು ಈ ವೇಳೆ ವಿಶ್ವನಾಥ್ ಹೇಳಿದರು.

2015 ರಲ್ಲಿ ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ಸಮಾವೇಶ : 

2015 ರಲ್ಲಿ ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್ (Shepherd India International) ಸ್ಥಾಪಿಸಲಾಯಿತು. ಭಾರತದ ಬೇರೆ ಬೇರೆ ಕಡೆ ಇರುವ ಕುರುಬ ಸಮುದಾಯವನ್ನು ಒಂದುಗೂಡಿಸಲು ಇದರ ಸ್ಥಾಪನೆಯಾಯಿತು ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ (H vishwanath) ಹೇಳಿದರು. 

ಅಳಿಯನಿಗೆ ಆಯಕಟ್ಟಿನ ಹುದ್ದೆ ಕೊಡಿಸುವಲ್ಲಿ ವಿಶ್ವನಾಥ್ ಯಶಸ್ವಿ

2015 ರಲ್ಲಿ ಸ್ಥಾಪನೆಯಾದ ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ಕುರುಬ (Kuruba) ಸಮುದಾಯ ಒಂದುಗೂಡಿಸಲು ಶ್ರಮಿಸುತ್ತಿದೆ. ಭಾರತದ ಇತರೆ ಭಾಗಗಳಲ್ಲಿ 12 ಕೋಟಿ ಕುರುಬರು ಇದ್ದಾರೆ.  ಅವರೆಲ್ಲರೂ ವಿವಿಧ ಹೆಸರಿನಲ್ಲಿ ಗುರುತಿಸಿಕೊಂಡಡಿದ್ದಾರೆ. ಆ ಎಲ್ಲರನ್ನೂ ಒಂದೇ ವೇದಿಕೆಗೆ ಕರೆತರಲು ಪ್ರಯತ್ನ ಮಾಡಲಾಗುತ್ತಿದೆ ಎಂದರು. 

ಮುಂದಿನ ಆಕ್ಟೋಬರ್ 2 ರಂದು ಗುಜರಾತಿನಲ್ಲಿ (Gujarath) ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್  ವಾರ್ಷಿಕೋತ್ಸವದ ಸಮಾವೇಶ ನಡಿಯುತ್ತಿದೆ. ಅಕ್ಟೋಬರ್ 2 ರಂದು ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಗಗನ್ ಸಿಂಗ್ ಕುಲಸ್ತೆ, ಎಸ್ ಪಿ ಸಿಂಗ್ ಬಘೇರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸುತ್ತಿದ್ದಾರೆ. ಬೇರೆ ರಾಜ್ಯಗಳ , ರಾಜಕೀಯ ಸಮಾಜದ ಮುಖಂಡರು ಭಾಗವಹಿಸಿಲಿದ್ದಾರೆ. ರಾಜ್ಯದಿಂದ ನಾನು , ಬಂಡಪ್ಪ ಕಾಶೆಂಪುರ್, ರೇವಣ್ಣ , ಮಲ್ಕಾಪುರೆ  ಸೇರಿದಂತೆ ಹಲವರು ಭಾಗವಹಿಸಲಿದ್ದೇವೆ ಎಂದರು. 
 
ಇದು ಯಾವುದೇ ರಾಜಕೀಯ ಪಕ್ಷಕ್ಕೆ (Political Parties) ಸೇರಿದ ಕಾರ್ಯಕ್ರಮವಲ್ಲ. ಎಲ್ಲಾ ಪಕ್ಷದ ಮುಂಖಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್  ರಾಜ್ಯಾಧ್ಯಕ್ಷ  ನಾಗರಾಜ್  ಸೇರಿದಂತೆ  ಹಲವು ಮುಖಂಡರು ಭಾಗಿಯಾಗಿದ್ದರು.

Follow Us:
Download App:
  • android
  • ios