* ಎಚ್.ವಿಶ್ವನಾಥ್ ಅಳಿಯನಿಗೆ ವರ್ಗಾವಣೆ ಬಂಪರ್.* ಆರೋಗ್ಯ ಇಲಾಖೆ ಮುಖ್ಯ ಇಂಜಿನಿಯರ್ ಆಗಿ ವರ್ಗಾವಣೆ.* ಹೆಚ್.ಸಿ‌ ರಮೇಂದ್ರ, ನೂತನ ಮುಖ್ಯ ಇಂಜಿನಿಯರ್ ಆಗಿ ವರ್ಗಾವಣೆ.* ವರ್ಗಾವಣೆ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದ ಹಳ್ಳಿಹಕ್ಕಿ.

ಬೆಂಗಳೂರು, (ಆ.23): ಇಂಜಿನಿಯರ್ ಆಗಿರುವ ಅಳಿಯನಿಗೆ ಆಯಕಟ್ಟಿನ ಹುದ್ದೆ ಕೊಡಿಸುವುದರಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್‌ ವಿಶ್ವನಾಥ್ ಕೊನೆಗೂ ಯಶಸ್ವಿಯಾಗಿದ್ದಾರೆ.

ಹೌದು.... ವಿಶ್ವನಾಥ್ ಅಳಿಯ ಹೆಚ್.ಸಿ‌ ರಮೇಂದ್ರ ಅವರನ್ನ ಆರೋಗ್ಯ ಇಲಾಖೆ ಮುಖ್ಯ ಇಂಜಿನಿಯರ್ ಆಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು (ಆ.24) ಆದೇಶ ಹೊರಡಿಸಿದೆ. ಈ ಮೂಲಕ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ವಿಶ್ವನಾಥ್ ಅವರ ಬೇಡಿಕೆಯನ್ನು ಈಡೇರಿಸಿದ್ದಾರೆ.

ಬೆಂಗಳೂರು–ಮೈಸೂರು ದಶಪಥ ರಸ್ತೆ ಕ್ರೆಡಿಟ್: ಬಿಜೆಪಿ ನಾಯಕರಲ್ಲೇ ಕುಸ್ತಿ

ಈ ಹಿಂದೆ ಗೃಹ ಸಚಿವರಾಗಿದ್ದಾಗ ಬಸವರಾಜ್ ಬೊಮ್ಮಾಯಿ ಅವರೇ ಶಿಫಾರಸ್ಸು ಮಾಡಿದ್ದರು. ಇದೀಗ ಮುಖ್ಯಮಂತ್ರಿ ಆದ ಬಳಿಕ ಬೊಮ್ಮಾಯಿ ಅವರೇ ವರ್ಗಾವಣೆ ಮಾಡಿಸಿ ಕೊಟ್ಟಿದ್ದಾರೆ.

ನಿನ್ನೆ (ಆ.23) ಅಷ್ಟೆ ವರ್ಗಾವಣೆ ಮಾಡಿಕೊಡುವಂತೆ ವಿಶ್ವನಾಥ್ ಅವರು ಬೆಂಗಳೂರಿನ ಕೆ.ಕೆ ಗೆಸ್ಟ್ ಹೌಸ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದರು.