ಮೋದಿ 10 ಲಕ್ಷ ರೂ ಕೋಟ್ ಹಾಕ್ತಾರೆ, ಕಾಂಗ್ರೆಸಿಗರ ಕೈ ಬದಲು, ಬಿಜೆಪಿಗರ ನೋಡಿ ಎಂದ ಸಂತೋಷ್ ಲಾಡ್, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ದುಬಾರಿ ವಾಚ್ ಕಟ್ಟಿರುವ ಕುರಿತು ರಾಜ್ಯದಲ್ಲಿ ಭಾರಿ ಚರ್ಚೆಯಾಗಿದೆ. ಇದರ ಬೆನ್ನಲ್ಲೇ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು (ಡಿ.04) ಕರ್ನಾಟಕದಲ್ಲಿ ಅಧಿಕಾರ ಬದಲಾವಣೆ ಭಾರಿ ಕೋಲಾಹಲ ಸೃಷ್ಟಿಸಿದೆ. ಇದರ ನಡುವೆ ಹೈಕಮಾಂಡ್ ಸೂಚನೆಯಂತೆ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಚರ್ಚೆಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಆದರೆ ಡಿಕೆ ಶಿವಕುಮಾರ್ ಮನೆಯಲ್ಲಿ ಆಯೋಜಿಸಿದ ಬ್ರೇಕ್ ಫಾಸ್ಟ್ ಮೀಟಿಂಗ್ ವೇಳೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಂದೇ ರೀತಿಯ ವಾಚ್ ಕಟ್ಟಿ ಗಮನಸೆಳೆದಿದ್ದರು. ಇದು ಕಾರ್ಟಿಯರ್ ಬ್ರ್ಯಾಂಡ್ ವಾಚ್, ಇದರ ಬೆಲೆ 43 ಲಕ್ಷ ರೂಪಾಯಿ ಎಂದು ವಿವಾದ ಶುರುವಾಗಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಡಿಕೆ ಶಿವಕುಮಾರ್ ಇದು 23 ಲಕ್ಷ ರೂಪಾಯಿ ವಾಚ್ ಎಂದಿದ್ದರು. ಆದರೂ ವಿವಾದ ಹೆಚ್ಚಾಗಿತ್ತು. ಇದೀಗ ದುಬಾರಿ ವಾಚ್ ಕುರಿತು ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ.

ಮೋದಿ 10 ಲಕ್ಷ ರೂ ಕೋಟ್ ಹಾಕ್ತಾರೆ

ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ದುಬಾರಿ ವಾಚ್ ಕಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಸಂತೋಷ್ ಲಾಡ್, ಪ್ರಧಾನಿ ಮೋದಿ 10 ಲಕ್ಷ ರೂಪಾಯಿ ಕೋಟ್ ಹಾಕುತ್ತಾರೆ. ದುಬಾರಿ ಗ್ಲಾಸ್ ಹಾಕುತ್ತಾರೆ. 9ಸಾವಿರ ಕೋಟಿ ರೂಪಾಯಿ ವಿಮಾನದಲ್ಲಿ ಓಡಾಡುತ್ತಾರೆ. ಇದನ್ನು ಯಾರೂ ನೋಡಿಲ್ಲವೆ ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ. ವಾಚಿನ ದರವನ್ನು ನೀವು ಹೇಗೆ ನಿರ್ಧರಿಸುತ್ತಿರಿ. ಯಾಕೆಂದರೆ ಪೇಕ್ ವಾಚ್ ಸಾಕಷ್ಟಿದೆ. ರೋನಾಲ್ಡೋ ಕೂಡ ಪೇಕ್ ವಾಚ್ ಹಾಕುತ್ತಿದ್ದ. ಯಾರು ಏನು ಧರಿಸಿದ್ದಾರೋ ಗೊತ್ತಿಲ್ಲ. ಬರಿ ಕಾಂಗ್ರೆಸ್ ನವರದ್ದೇ ನೋಡಬೇಡಿ. ಬಿಜೆಪಿ ನಾಯಕರ ಕೈಯನ್ನು ನೋಡಿ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಪ್ರಧಾನಿ ಮೋದಿ ದಿನಕ್ಕ ಮೂರು ಬಾರಿ ಡ್ರೆಸ್ ಚೇಂಜ್

ಪ್ರಧಾನಿ ಮೋದಿ ದುಬಾರಿ ಬೆಲೆಯ ಕೋಟ್ ಹಾಕುತ್ತಾರೆ. ಮೋದಿ ದಿನಕ್ಕೆ ಮೂರು ಬಾರಿ ಡ್ರೆಸ್ ಚೇಂಜ್ ಮಾಡುತ್ತಾರೆ. ಮೋದಿಯ ಡ್ರೆಸ್ ಹಾಗೂ ಅವರ ಜೀವನ ನೋಡಿಲ್ಲವೇ ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ. ಚರ್ಚೆ ಮಾಡುವಾಗ ಪ್ರಧಾನಿ ಮೋದಿ ದಿನಕ್ಕೆ ಮೂರು ಬಾರಿ ಡ್ರೆಸ್ ಚೇಂಜ್ ಮಾಡುವ ಬಗ್ಗೆಯೂ ಚರ್ಚೆಯಾಗಲಿ ಎಂದಿದ್ದಾರೆ.

ಯಾವ ಪ್ರಧಾನಮಂತ್ರಿ ಸ್ವಂತಕ್ಕೆ ಟ್ರಸ್ಟ್ ಮಾಡಿದ್ದು ನೋಡಿದ್ದಿರಾ?, ಪಿಎಂ ರಿಲೀಪ್ ಪಂಡ್ ಮೊದಲಿಂದಲೂ ಇತ್ತು. ಆದರೆ ಪಿಎಂ ರಿಲೀಫ್ ಫಂಡನ್ನು ಟ್ರಸ್ಟ್ ಮಾಡುವ ಅವಕಶ್ಯಕತೆ ಇತ್ತಾ ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ. ಪಿಎಂ ರಿಲೀಫ್ ಫಂಡ್ ಟ್ರಸ್ಟ್ ಮಾಡಿ ಈಗ ಅದು ಸಿಎಜಿ ಅಡಿಯಲ್ಲಿ ಬರವುದಿಲ್ಲ ಎನ್ನುತ್ತಿದ್ದಾರೆ. ಇದರ ಬಗ್ಗೆ ಬಿಜೆಪಿಗರು ಮಾತಾನಾಡುತ್ತಾರಾ ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಸಂತೋಷ್ ಲಾಡ್, ಕಾಂಗ್ರೆಸ್‌ನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಪ್ರತಿ ಸಾವಾಲನ್ನು ಎಲ್ಲರೂ ಒಗ್ಗಾಟ್ಟಾಗಿ ಎದುರಿಸುತ್ತೆವೆ. ಅದಕ್ಕೆ ತಂತ್ರಗಾರಿಕೆ ಮಾಡುತ್ತೇವೆ. ಕಬ್ಬಿನ ಬೆಲೆ ನಿಗದಿ ಮಾಡೋದು, ಮೆಕ್ಕೆಜೋಳ ಮಾಡೋದು ಅವರೇ, ಇದರ ಬಗ್ಗೆನೂ ಮಾತಾಡಬೇಕು ಅಲ್ವಾ? ಸರ್ಕಾರದ ಬಗ್ಗೆ ಬಂದಾಗ ನಾವು ಬೆಂಬಲಿಸಿ ಮಾತಾಡುತ್ತೆವೆ ಎಂದಿದ್ದಾರೆ. ನಾವು ಹೆಚ್ಚು ಸಮಯ ಸದನ ನಡೆಸಿದ್ದೆವೆ. ಕಡತವನ್ನು ತೆಗೆದು ನೋಡಲಿ. ಪಾರ್ಲಿಮೆಂಟ್‌ನಲ್ಲಿ ಮಾತಾಡಲು ಹೋದರೇ ಅವರೇ ವಿಪಕ್ಷದಂತೆ ವರ್ತಿಸುತ್ತಾರೆ ಎಂದಿದ್ದಾರೆ.