ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಭಕ್ತರು ನದಿಗಳಲ್ಲಿ ಪುಣ್ಯಸ್ನಾನ ಮಾಡಿ, ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರೆ, ರೈತರು ರಾಸುಗಳಿಗೆ ಕಿಚ್ಚು ಹಾಯಿಸಿ ಸಂಭ್ರಮಿಸಿದರು. 

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೊಸ ವರ್ಷದ ಮೊದಲ ಮತ್ತು ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ಬೆಂಗಳೂರು ನಗರ ಸೇರಿದಂತೆ ನಾಡಿನಾದ್ಯಂತ ಜನರು ಗುರುವಾರ ಸಂಭ್ರಮದಿಂದ ಆಚರಿಸಿದರು. ಹಲವರು ನದಿಗಳಲ್ಲಿ ಪುಣ್ಯಸ್ನಾನ ಮಾಡಿದರೆ, ಕೆಲವರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ್ದಾರೆ. ರೈತರು ರಾಸುಗಳಿಗೆ ಅಲಂಕಾರ ಮಾಡಿ ಕಿಚ್ಚಹಾಯಿಸಿ ಸಂಭ್ರಮಿಸಿದ್ದಾರೆ. ಸೂರ್ಯನ ರಶ್ಮಿಗಳು ದೇವರ ಮೇಲೆ ಬೀಳುವ ದೃಶ್ಯ ಕಣ್ಣುಂಬಿಕೊಂಡಿದ್ದಾರೆ. ಬೆಂಗಳೂರಿನ ದೇಗುಲಗಳಲ್ಲಿ ಭಕ್ತರು ಹೆಚ್ಚಾಗಿದ್ದರು. ಗವಿಗಂಗಾಧರೇಶ್ವರದಲ್ಲಿ ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶವನ್ನು ಕಣ್ಣುಂಬಿಕೊಂಡರು.

ತುಂಗಭದ್ರಾ ನದಿಯಲ್ಲಿ ಸಾವಿರಾರು ಜನರು ಪುಣ್ಯ ಸ್ನಾನ ನಡೆಸಿದ್ದಾರೆ. ಹುಲಗಿಯ ಹುಲಿಗೆಮ್ಮ ದೇವಾಲಯ, ಹಂಪಿ ವಿರೂಪಾಕ್ಷೇಶ್ವರ ದೇಗುಲ,ಅಂಜನಾದ್ರಿ ಆಂಜನೇಯ ಸ್ವಾಮಿ ಕೊಪ್ಪಳದ ಗವಿಮಠ ಜಾತ್ರೆಗೂ ಅಪಾರ ಭಕ್ತರು ಆಗಮಿಸಿದ್ದರು. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ,ತುಮಕೂರು, ಕೋಲಾರ ಸೇರಿ ಹಲ ಆಚರಿಸ ಲಾಯಿತು. ಮಂಡ್ಯದ ಶೆಟ್ಟಹಳ್ಳಿ ಹೋಬಳಿ ರಾಂಪುರ ಗ್ರಾಮದ ರೈತ ರಾಸುಗಳ ಕೊಂಬಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಭಾವಚಿತ್ರ ಕಟ್ಟಿ ರಾಸುಗಳನ್ನು ಕಿಚ್ಚು ಹಾಯಿಸಿದ ದೃಶ್ಯಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಶ್ರೀರಂಗಪಟ್ಟಣ ಕಾಶಿ ಚಂದ್ರಮೌಳೇಶ್ವರ ದೇವಾಲಯದಲ್ಲಿ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಭಕ್ತರು ನೋಡಿ ಪೂಜೆ ಸಲ್ಲಿಸಿದರು.

ಯಾದಗಿರಿ ಜಿಲ್ಲೆ ಅಬ್ಬೆತುಮಕೂರಿನ ಅನುಗ್ರಹ ಕ್ಷೇತ್ರದ ವತಿಯಿಂದ ಹೊಳಿ ಜಾತ್ರೆ ಸಡಗರದಿಂದ ಜರುಗಿತು. ರಾಯಚೂರು, ಬೀದರ್, ಕಲಬರಗಿ ಯಲ್ಲೂ ಹಬ್ಬ ಆಚರಿಸಿದರು.ಬಾಗಲಕೋಟೆ ಜಿಲ್ಲೆ ಕೂಡಲ ಸಂಗಮ, ಬೆಳಗಾವಿ ಜಿಲ್ಲೆ ಮಲಪ್ರಭಾ, ಕೃಷ್ಣಾ, ಘಟಪ್ರಭಾ ನದಿ ತೀರ ಪ್ರದೇಶ ಜನರು ಭೇಟಿ ನೀಡಿ ಪುಣ್ಯಸ್ನಾನ ದರ್ಶನ ಪಡೆದರು.

ಬೇಲೂರು ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಪೌರಾಣಿಕ ವಾಡಿಕೆಯಂತೆ ಕಂದು ಬಣ್ಣದ ಕಾಡು ಮೊಲಕ್ಕೆ ಚಿನ್ನದ ಓಲೆ ಹಾಕಿ ಕಾಡಿಗೆ ಬಿಡುವ ಮೂಲಕ ಆಚರಿಸಲಾಯಿತು. ಉಡುಪಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ दृ ಮಠದ ರಥಬೀದಿಯಲಿಹಗಲು ರಥೋತ್ಸವ ನಡೆಯಿತು.