ರಾಹುಲ್ ಗಾಂಧಿ ಭೇಟಿ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಹೋದರ ಡಿ.ಕೆ. ಸುರೇಶ್ ಅವರ ನಿಗೂಢ ಪೋಸ್ಟ್‌ಗಳು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿವೆ. ಸಂಕ್ರಾಂತಿ ನಂತರ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆಯಾಗಲಿದೆಯೇ ಎಂಬ ಚರ್ಚೆಗಳು ಶುರುವಾಗಿದೆ.

ಸಂಕ್ರಾಂತಿ ಬಳಿಕ ನಡೆಯುತ್ತಾ ಸಿಂಹಾಸನ ಕ್ರಾಂತಿ? ಕನಕಪುರದ ಅಪೂರ್ವ ಸಹೋದರರ ಮರ್ಮ ಸಂದೇಶ! ಪ್ರಾರ್ಥನೆಯ ಬಲ. ಪ್ರಯತ್ನದ ಪವರ್​. ಸಿಂಹಾಸನಕ್ಕೆ ರಹದಾರಿ. ಪಟ್ಟ ಪ್ರಾಪ್ತಿಗೆ ಬಂಡೆ ಬ್ರದರ್ಸ್​ ಡಬಲ್ ಬ್ಯಾರೆಲ್​.ಅರಸೊತ್ತಿಗೆ ಅಖಾಡ. ವಿಮಾನ ನಿಲ್ದಾಣದಲ್ಲಾಯ್ತಾ ಮಹಾ ನಿರ್ಧಾರ? ವರುಣವೀರ. ಕನಕಾಧಿಪತಿ. ಯಾರಿಗೆ ಅಧಿನಾಯನಕನ ಅಭಯ? ವರ್ಷದ ಮೊದಲ ಹಬ್ಬದ ಬಳಿಕ ಸಿದ್ದು-ಡಿಕೆ ಭವಿಷ್ಯದಲ್ಲಾಗೋ ಬದಲಾವಣೆ ಏನು? ಯಾರ ಜೊತೆಗಿದೆ ಗ್ರಹಬಲದ ಶಕ್ತಿ.?

ಸಿದ್ದರಾಮಯ್ಯ ಹಾಗೂ ಡಿಕೆ ಜತೆ ರಾಹುಲ್ ಗಾಂಧಿ ಪ್ರತ್ಯೇಕ ಭೇಟಿ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಮಂಗಳವಾರ ಭೇಟಿಯಾಗಿ ಪ್ರತ್ಯೇಕ ಮಾತುಕತೆ ನಡೆಸಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಅವರ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್‌ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಕುತೂಹಲ ಮೂಡಿಸುವ ಪೋಸ್ಟರ್‌ ಹಾಕಿದ್ದಾರೆ. ಡಿ.ಕೆ.ಶಿವಕುಮಾರ್‌ ತಮ್ಮ ಎಕ್ಸ್ ಖಾತೆಯಲ್ಲಿ, ‘ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ’ ಎಂಬ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಅವರಂತೆಯೇ ಸಹೋದರ ಡಿ.ಕೆ.ಸುರೇಶ್‌ ಅವರು, ‘ಯಶಸ್ಸಿನ ಮೊದಲ ಹೆಜ್ಜೆಯೇ ಪ್ರಯತ್ನ. ಸತತ ಪ್ರಯತ್ನದ ಫಲವೇ ಯಶಸ್ಸು’ ಎಂಬ ಪೋಸ್ಟರ್‌ ಹಾಕಿದ್ದಾರೆ.

ಕಾಂಗ್ರೆಸ್ ಪಕ್ಷ ದೇವಸ್ಥಾನ ಇದ್ದ ಹಾಗೆ. ಕಾಂಗ್ರೆಸ್ ಪಕ್ಷದ ಕಚೇರಿಗೆ ಹೋದಾಗ ಕೈ ಮುಗಿದು ಬರ್ತಾ ಇರ್ತೇವೆ. ಮುಖ್ಯಮಂತ್ರಿ ಸಿಂಹಾಸನವನ್ನು ತಮ್ಮದಾಗಿಸಿಕೊಳ್ಳೋಕೆ ಡಿಕೆಶಿ ಎಲ್ಲಿ ಯಾರ ಬಳಿ ಪ್ರಾರ್ಥನೆ ಮಾಡಿಕೊಳ್ತಾ ಇದ್ದಾರೆ ಅನ್ನೋದಕ್ಕೆ ಇಷ್ಟು ಸಾಕು. ಒಂದು ಕಡೆ ಅಣ್ಣ ಪ್ರಾರ್ಥನೆಯ ದಾಳ ಉರುಳಿಸಿದ್ರೆ ತಮ್ಮ ಡಿಕೆ ಸುರೇಶ್ ಪ್ರಯತ್ನದ ದಾಳ ಉರುಳಿಸಿದ್ದಾರೆ.

ಹಾಗಿದ್ರೆ ಕರುನಾಡಿನ ಸಿಂಹಾಸನ ಸಮರದ ಮುಂದಿನ ಭವಿಷ್ಯವೇನು? ಇನ್ನೆಷ್ಟು ತಿಂಗಳು ಈ ಜಿದ್ದಾಜಿದ್ದಿ ಹೀಗೆ ಇರುತ್ತೆ? ಈ ಬಗ್ಗೆ ಜೋತಿಷ್ಯ ಹೇಳ್ತಾ ಇರೋದೇನು?

ವರುಣವೀರ ಸಿದ್ದರಾಮಯ್ಯ. ಕನಕಾಧಿಪತಿ ಡಿ.ಕೆ.ಶಿವಕುಮಾರ್. ಜಿದ್ದಿಗೆ ಬಿದ್ದವರಲ್ಲಿ ಯಾರ ಜೊತೆಗಿದೆ ಗ್ರಹಬಲದ ಶಕ್ತಿ? ಸಿಂಹಾಸನ ಸಂಘರ್ಷ ಕಾರ್ಮೋಡವು ತಿಳಿಯಾಗೋದು ಯಾವಾಗ? ಅದನ್ನ ತಿಳಿಯಾಗಿಸೋಕೆ ಇರೋ ಮಾರ್ಗ ಯಾವುದು? ಸಂಕ್ರಾಂತಿ ನಂತ್ರ ಹೇಗಿದೆ ಸಿಎಂ, ಡಿಸಿಎಂ ಭವಿಷ್ಯ.?

ಹಾಗಿದ್ರೆ, ಏರ್​ಪೋರ್ಟ್‌ನಲ್ಲಿ ಸಿದ್ದು-ಡಿಕೆ ಇಬ್ಬರಿಗೂ ರಾಗಾ ಕೊಟ್ಟ ಸಂದೇಶವೇನು? ಮೈಸೂರು ಏರ್​ಪೋರ್ಟ್​ನಲ್ಲಿ ರಾಹುಲ್ ಗಾಂಧಿಯೆದುರು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಹಾಕಿರೋ ಪಟ್ಟುಗಳೇನು? ಕೆಲವೇ ಕೆಲವು ನಿಮಿಷಗಳಲ್ಲಿ ನಡೆದ ಮಾತುಕತೆಯಾದ್ರೂ ಏನು.? ಇಲ್ಲಿದೆ ನೋಡಿ ಕಂಪ್ಲೀಟ್‌ ಡೀಟೈಲ್ಸ್.