Asianet Suvarna News Asianet Suvarna News

ಕರುನಾಡಿನ ಬಗ್ಗೆ ವ್ಯಾಮೋಹ: ಪರಭಾಷಿಕರ ಕನ್ನಡ ಕಲಿಕೆ ಕೇಂದ್ರಗಳ ಬಗ್ಗೆ ನಟಿ ಪೂಜಾ ಗಾಂಧಿ ಮನದಾಳದ ಮಾತು

ಕನ್ನಡಿಗರಿಗೆ ಅನನ್ಯ ಗುರುತಿನ ಸಂಖ್ಯೆ ಮತ್ತು ಪರಭಾಷಿಕರ ಕನ್ನಡ ಕಲಿಕೆ ಕೇಂದ್ರಗಳ ಬಗ್ಗೆ ಕೆಲವು ಮಾರ್ಗೋಪಾಯಗಳನ್ನ ನೀಡಿದ ಸ್ಯಾಂಡಲ್‌ವುಡ್‌ ನಟಿ ಪೂಜಾ ಗಾಂಧಿ 

Sandalwood Actress Pooja Gandhi Talks Over Unique ID Number for Kannadigas grg
Author
First Published Sep 21, 2023, 11:01 PM IST

ಬೆಂಗಳೂರು(ಸೆ.21): ಕನ್ನಡಿಗರಿಗೆ ಅನನ್ಯ ಗುರುತಿನ ಸಂಖ್ಯೆ ಮತ್ತು ಪರಭಾಷಿಕರ ಕನ್ನಡ ಕಲಿಕೆ ಕೇಂದ್ರಗಳ ಬಗ್ಗೆ ಸ್ಯಾಂಡಲ್‌ವುಡ್‌ ನಟಿ ಪೂಜಾ ಗಾಂಧಿ ಅವರು ಕೆಲವು ಮಾರ್ಗೋಪಾಯಗಳನ್ನ ನೀಡಿದ್ದಾರೆ. ಪೂಜಾ ಗಾಂಧಿ ಮೂಲತಃ ಉತ್ತರ ಭಾರತದವರಾದರೂ ಕೂಡ ಕನ್ನಡ ಭಾಷೆಯ ಮೇಲೆ ಅತೀವ ಪ್ರೀತಿಯನ್ನ ಹೊಂದಿದ್ದಾರೆ. ಪೂಜಾ ಗಾಂಧಿ ಇದೀಗ ಕನ್ನಡ ಓದಲು ಬರೆಯಲೂ ಕೂಡ ಕಲಿತಿದ್ದಾರೆ. ಇದೀಗ ಕನ್ನಡಿಗರಿಗೆ ಅನನ್ಯ ಗುರುತಿನ ಸಂಖ್ಯೆ ಮತ್ತು ಪರಭಾಷಿಕರ ಕನ್ನಡ ಕಲಿಕೆ ಕೇಂದ್ರಗಳ ಬಗ್ಗೆ ವಿವರವಾಗಿ ಹೇಳಿದ್ದಾರೆ. 

ಮಾರ್ಗೋಪಾಯಗಳು 

೧. ಕನ್ನಡ್ ಮಾಲುಮ್‌ನಹಿ
೨. ಕನ್ನಡಿಗರಿಗೆ ಮತ್ತು ಕನ್ನಡ ಕಲಿತವರಿಗೆ ಕನ್ನಡ ಕಾರ್ಡ್
೩. ಪರಭಾಷಿಕರ ಕನ್ನಡ ಕಲಿಕೆಗೆ ಪಠ್ಯಕ್ರಮ
೪. ಅಪಾರ್ಟ್ ಮೆಂಟ್ ಗಳಲ್ಲಿ ಕನ್ನಡ ಕಲಿಕೆ
೫. ಐಟಿ ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡ ಕಲಿಕೆ
೬. ಆಂಗ್ಲ ಮತ್ತು ಅಂತರರಾಷ್ಟ್ರೀಯ ಶಾಲೆಗಳಲ್ಲಿ ಕನ್ನಡ ಕಲಿಕೆ
೭. ಸರ್ಕಾರಿ ಮತ್ತು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಉನ್ನತೀಕರಣ
೮. ಮನದ ಮಾತು
೯. ಕೊನೆಯ ಮಾತು
೧೦. ಕೃತಜ್ಞತೆಗಳ

Pooja Gandhi: ಕನ್ನಡ ಕಲಿತು ಜೇನಿನ ಹೊಳೆಯೋ ಹಾಡು ಹೇಳಿದ ಮಳೆ ಹುಡುಗಿಗೆ ಫ್ಯಾನ್ಸ್​ ಫಿದಾ!

೧. ಕನ್ನಡ್ ಮಾಲುಮ್‌ನಹಿ

ಜೂನ್ ೨೦೨೩ ರಲ್ಲಿ ನಡೆದ "ಚಾವುಂಡರಾಯ ದತ್ತಿ" ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಗೌರವಾನ್ವಿತ ಗೃಹ ಸಚಿವರಾದ ಡಾ ಜಿ. ಪರಮೇಶ್ವರರವರು ಮಾತನಾಡುತ್ತಾ, ಬೆಂಗಳೂರಿನಲ್ಲಿ ಶೇಕಡಾ ೬೦ ರಷ್ಟು ಜನರಿಗೆ ಕನ್ನಡ ಬರದಿರುವ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದರು. ಯಾವುದೇ ನಗರ ಮಹಾನಗರವಾಗಿ ಪರಿವರ್ತನೆಯಾಗಬೇಕಾ ದರೆ, ಎಂಟು ದಿಕ್ಕುಗಳಿಂದ ತನ್ನೆಡೆಗೆ ಬರುವ ವೈವಿಧ್ಯಪೂರ್ಣ ಜನರನ್ನು, ಚಿಂತನೆಗಳನ್ನು, ವಿಜ್ಞಾನ-ತಂತ್ರಜ್ಞಾನವನ್ನು, ಕಲೆ-ಸಾಹಿತ್ಯವನ್ನು, ಆಕರ್ಷಿಸುತ್ತಾ, ಅರಗಿಸಿಕೊಳ್ಳುತ್ತಾ, ತನ್ನತನವನ್ನೂ ಉಳಿಸಿಕೊಳ್ಳುತ್ತಾ ಬೆಳೆಯಬೇಕು.

ವಿಶ್ವದಲ್ಲೇ ಅತ್ಯಂತ ಪ್ರಮುಖ ನಗರಗಳಲ್ಲೊಂದಾಗಿ ಗುರುತಿಸಿಕೊಳ್ಳುವಲ್ಲಿ ಬೆಂಗಳೂರು ಯಶಸ್ವಿಯಾಗಿದೆ. ಆದರೆ ನಮ್ಮತನವನ್ನು ಉಳಿಸಿಕೊಳ್ಳಬೇಕಾ ದರೆ ನಮ್ಮ ನಾಡು-ನುಡಿ,ಆಚಾರ-ವಿಚಾರ, ಸಾಹಿತ್ಯ-ಸಂಗೀತ-ಸಂಸ್ಕೃ ತಿಗಳನ್ನು, ಅನ್ಯ ಭಾಷಿಕರಿಗೆ ಹಂಚುತ್ತಾ, ಪ್ರೀತಿಯಿಂದ ಉಣಿಸುತ್ತಾ, ಅವರನ್ನು ನಮ್ಮವರಾಗಿಸಿಕೊಳ್ಳುತ್ತಾ ಶ್ರೀ ಮಂತವಾಗಬೇಕಾಗುತ್ತದೆ.

ನಾನು ಅನ್ಯಭಾಷಿಕಳಾಗಿ, ಅನ್ಯರಾಜ್ಯದವಳಾಗಿ ಕನ್ನಡವನ್ನು ಮಾತನಾಡಲು, ಬರೆಯಲು, ಓದುವುದನ್ನು ಹಂತ ಹಂತವಾಗಿ ಕಲಿತ ಅನುಭವದ ಆಧಾರದ ಮೇಲೆ ಕರ್ನಾಟಕ ಸರ್ಕಾರ, ಕನ್ನಡ ಸಂಘಗಳು ಮತ್ತು ಕನ್ನಡ ಪ್ರೇಮಿಗಳ ಜೊತೆ ಕೆಲವು ಆಲೋಚನೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

೨. ಕನ್ನಡಿಗರಿಗೆ ಮತ್ತು ಕನ್ನಡ ಕಲಿತವರಿಗೆ ಕನ್ನಡ ಕಾರ್ಡ್‌

೨೦೧೧ರ ಜನಗಣತಿಯ ಆಧಾ ರದ ಮೇಲೆ ಕೆಲವು ಅಂದಾಜುಗಳ ಪ್ರಕಾರ, ೨೦೨೩ರಲ್ಲಿ ಕರ್ನಾಟಕ ಏಳು ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಅದರಲ್ಲಿ ಶೇಕಡಾ ೬೬ ರಷ್ಟು ಕನ್ನಡಿಗರಿದ್ದು, ಶೇಕಡಾ ೩೪ ರಷ್ಟು ಅನ್ಯಭಾಷಿಕರಿದ್ದಾರೆಂದು ಅಂದಾಜಿಸಲಾಗಿದೆ. ಬೆಂಗಳೂರಿನ ಜನಸಂಖ್ಯೆ ೧.೧ ಕೋಟಿ ಇದ್ದು, ಶೇಕಡಾ ೬೦ ರಷ್ಟು ಅನ್ಯಭಾಷಿಕರಿದ್ದಾರೆಂಬ ಅನುಮಾನಗಳಿವೆ. ಹೊರ ರಾಜ್ಯಗಳಲ್ಲಿ ಮತ್ತು ಹೊರದೇಶಗಳಲ್ಲಿರುವ ಕನ್ನಡಿಗರ ಗಣತಿಯಾಗಲಿ, ಅಂಕಿ ಅಂಶಗಳಾಗಲಿ ಲಭ್ಯವಿಲ್ಲ. ಮೇಲಿನ ಅಂಕಿ ಅಂಶಗಳು ಅಂದಾಜುಗಳಾ ಗಿರುವುದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಥಮ ಆದ್ಯತೆಯಲ್ಲಿ ಕನ್ನಡಿಗರ, ಪರಭಾಷಿಕರಿದ್ದು ಕನ್ನಡದ ಮಾತು-ಓದು- ಬರಹ ಬಲ್ಲವರ ನಿಖರ ಗಣತಿಯನ್ನು ಮಾಡಬೇಕಾಗಿದೆ. 

ರೂಪ - ರೇಷೆ 

೧. ಹಳದಿ-ಮಿಶ್ರಿತ-ಕೆಂಪು-ಕಾರ್ಡ್, ಹಳದಿ ಕಾರ್ಡ್ ಮತ್ತು ಕೆಂಪು ಕಾರ್ಡ್ ವಿತರಣೆಯ ರೂಪ-ರೇಷೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸುವುದು.
೨. ಕನ್ನಡಿಗರ ಮತ್ತು ಕನ್ನಡ ಬಲ್ಲವರ ಗಣತಿಗಾಗಿ, ಪೋರ್ಟಲ್ ಸ್ಥಾಪಿಸುವುದು.
೩. ಕಾರ್ಡಗಳನ್ನು ಮತ್ತು ಅನನ್ಯ ಸಂಖ್ಯೆಗಳನ್ನು ಮೂರು ಪಂಗಡಗಳಾಗಿ ವಿಭಾಗಿಸುವುದು.
೪. “ಕನ್ನಡಿಗ”ರೆಲ್ಲರಿಗೂ ಕೆಂಪು-ಹಳದಿ ಮಿಶ್ರಿತ ವಿಭಿನ್ನ ಸಂಖ್ಯೆಗಳ ಸರಣಿಯಿರುವ ಕಾರ್ಡ್ ವಿತರಿಸುವುದು.
೫. ಕನ್ನಡಿಗರಲ್ಲದಿದ್ದರೂ, ಕನ್ನಡವನ್ನು ಮಾತನಾಡಲು ಕಲಿತಿದ್ದರೆ, ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಅಂತಹವರಿಗೆ ಕೆಂಪು ಕಾರ್ಡ್ ಮತ್ತು ವಿಭಿನ್ನ ಸರಣಿಯ ಅನನ್ಯಸಂಖ್ಯೆಯನ್ನು ವಿತರಿಸುವುದು.
೬. ಕನ್ನಡಿಗರಲ್ಲದಿದ್ದರೂ, ಕನ್ನಡವನ್ನು ಓದಲು-ಬರೆಯಲು ಕಲಿತಿದ್ದರೆ, ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಅಂತಹವರಿಗೆ ಹಳದಿ ಕಾರ್ಡ್ ಮತ್ತು ವಿಭಿನ್ನ ಸರಣಿಯ ಅನನ್ಯಸಂಖ್ಯೆಯನ್ನು ವಿತರಿಸುವುದು.
೭. ಮೇಲಿನ ಮೂರು ರೀತಿಯ ಕಾರ್ಡುಗಳನ್ನು ಆನ್ ಲೈನ್ ಮತ್ತು ಆಫ್ಲೈ ನ್ ಮುಖಾಂತರ ಪಡೆದುಕೊಳ್ಳಲು ವ್ಯವಸ್ಥೆ ಕಲ್ಪಿಸುವುದು.
೮. ಕನ್ನಡಿಗರೆಲ್ಲರಿಗೂ ಸೇವಾ ಸಿಂಧು ಅಥವಾ ಅಂತಹದೇ ಕನ್ನಡ ಪೋರ್ಟಲ್ ಮೂಲಕ ತಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿ ಹಳದಿ-ಮಿಶ್ರಿತ-ಕೆಂಪು-ಕಾರ್ಡ್ ಮತ್ತು ಅನನ್ಯಸಂಖ್ಯೆ ಪಡೆಯಲು ಅನುವು ಮಾಡಿಕೊಡುವುದು.
೯. ಪರಭಾಷಿಕರು, ಪರರಾಜ್ಯ ದವರು ಮತ್ತು ಪರರಾಷ್ಟ್ರಗಳ ಪ್ರಜೆಗಳು ಆನ್ ಲೈನ್ ಮುಖಾಂತರ ಅಥವಾ ಸರ್ಕಾರಿ ಶಾಲೆಯ ಆವರಣಗಳಲ್ಲಿ ಕಾಲಕಾಲಕ್ಕೆ ನಡೆಯುವ ಕನ್ನಡ ಪರೀಕ್ಷೆಗಳಲ್ಲಿ ಭಾ ಗವಹಿಸಿ, ತೇ ರ್ಗಡೆಯಾಗುವುದರ ಮೂಲಕ ಕೆಂಪು ಅಥವಾ ಹಳದಿ ಕಾರ್ಡ್ ಗಳನ್ನು ಪಡೆಯಲು ಅನುವು ಮಾಡಿಕೊಡುವುದು. ಆನ್ ಲೈನ್ ಪರೀಕ್ಷೆಗಳು ನಿಯಮಿತವಾಗಿ ನಡೆಯುತ್ತಿರುವಂತೆ ನೋಡಿಕೊಳ್ಳುವುದು.
೧೦. ಕೊಡವ ಮತ್ತು ತುಳು ಈ ನಾಡಿನ ಭಾಷೆಗಳಾ ಗಿದ್ದು, ಅದನ್ನು ಮಾತನಾಡಲು ಮತ್ತು ಓದು- ಬರಹ ಬಲ್ಲವರು ಕೂಡ ಕೆಂಪು- ಹಳದಿ ಕಾರ್ಡ್ ಗೆ ಅರ್ಹರಾಗುವಂತೆ ಜಾಗ್ರತೆ ವಹಿಸುವುದು.

ಪ್ರಯೋಜನಗಳು 

ಇಷ್ಟು ಅಗಾಧ ಪ್ರಮಾಣದ ದತ್ತಾಂಶದ ಅತಿ ಮುಖ್ಯ ಪ್ರಯೋಜನಗಳೆಂದರೆ :
೧. ವಿವಿಧ ರೂಪ ಮತ್ತು ಪ್ರಕಾರವಾಗಿ ದತ್ತಾಂಶದ ಸಂಸ್ಕರಣೆ, ಒಳನೋಟ ಮತ್ತು ವಿಶ್ಲೇಷಣೆ.

೨. ಮಾದರಿಗಳು, ಪ್ರವೃತ್ತಿಗಳು ಮತ್ತು ಪರಸ್ಪರ ಸಂಬಂಧಗಳನ್ನು ಗುರುತಿಸಲು ಮತ್ತು ವೈಜ್ಞಾನಿಕವಾಗಿ ವ್ಯಾಖ್ಯಾನಿಸಲು ಸಹಕಾರಿ.
೩. ಕನ್ನಡಿಗರ ಮತ್ತು ಕನ್ನಡ ಬಲ್ಲವರ ನಿಖರ ಮತ್ತು ನಿರಂತರ ಗಣತಿ.
೪. ಕನ್ನಡಿಗನೆಂಬ ಅಥವಾ ಕನ್ನಡ ಕಲಿತವನೆಂಬ ಪ್ರಮಾಣ ಪತ್ರ ಹೊಂದಿದ ಹಿರಿಮೆ ಮತ್ತು ಗರಿಮೆ.
೫. ಪ್ರತೀ ತಾಲೂಕು, ಜಿಲ್ಲೆ, ಹೊರ ರಾಜ್ಯ, ಹೊರದೇಶಗಳಲ್ಲಿ ಕನ್ನಡದ ಇಂದಿನ ಸ್ಥಿತಿಯ ನಿಜ ದರ್ಶನ ಮತ್ತು ಕನ್ನಡವನ್ನು ಬೆಳೆಸಲು ಬೇಕಾದ ನಿಶ್ಚಿತ-ಉದ್ದೇಶ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಹಕಾರಿ.
೬. ವರ್ಷಾನು ವರ್ಷ ಕನ್ನಡಿಗರು ಮತ್ತು ಕನ್ನಡ ಕಲಿತವರ ಸಂಖ್ಯೆಯಲ್ಲಾಗಿರುವ ಶೇಕಡಾವಾರು ಏರಿಕೆಯ ನಿಖರ ಮಾಹಿತಿ ಮತ್ತು ತುಲನೆ.
೭. ಕರ್ನಾಟಕ ಸರ್ಕಾರದ ಫಲಾನುಭವಿ ಅಥವಾ ಗ್ಯಾರಂಟಿ ಯೋಜನೆಗಳಲ್ಲಿ, ಕೆಲವೊಂದು ಯೋ ಜನೆಗಳು ಸ್ಥಳೀಯ ಕನ್ನಡಿಗರಿಗೆ ಮಾತ್ರ ಮೀ ಸಲಿರಿಸುವುದಕ್ಕೆ ಅನನ್ಯಸಂಖ್ಯೆಗಳ ಕಾರ್ಡ್ ನ ಉಪಯುಕ್ತತೆ.
೮. ಕರ್ನಾಟಕ ಸರ್ಕಾರ ಮತ್ತು ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಮೀಸಲಾತಿ ಜಾರಿ ಮಾಡಲು ಅನನ್ಯ ಸಂಖ್ಯೆಗಳ ಕಾರ್ಡುಗಳ ಉಪಯುಕ್ತತೆ.
೯. ಪ್ರತಿ ಖಾಸಗಿ ಕಂಪನಿಯ ಹೊರಗಡೆ ಒಟ್ಟು ನೌಕರರ ಸಂಖ್ಯೆ ಮತ್ತು ಹಳದಿ-ಮಿಶ್ರಿತ- ಕೆಂಪು, ಹಳದಿ ಮತ್ತು ಕೆಂಪು ಕಾರ್ಡ್ ಹೊಂದಿದವರ ಅನುಪಾತವನ್ನು ಪ್ರಕಟಿಸುವಂತೆ ಸೂಚಿಸುವುದು. ಇದರಿಂದ ಮೀಸಲಾತಿಯ ಮೊದಲ ಹೆಜ್ಜೆಯಾಗಿ ಕನ್ನಡಿಗರು, ಕನ್ನಡ ಓದಲು ಬರೆಯಲು ಕಲಿತವರು ಮತ್ತು ಕನ್ನಡ ಮಾತನಾಡಲು ಕಲಿತವರು ಯಾವ ಅನುಪಾತದಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಸಿಗುತ್ತದೆ.
೧೦. ಕನ್ನಡ ಕಾರ್ಡ್ ಗಳನ್ನು ಹೊಂದಿದವರಿಗೆ ವ್ಯಾಪಾರ-ವಹಿವಾಟಿನಲ್ಲಿ ಸಹಕಾರಿಯೆಂಬ ನಿರೀಕ್ಷೆಯನ್ನು ಹುಟ್ಟು ಹಾಕುವುದಕ್ಕೆ ಬೇಕಾದಯೋಜನೆಗಳನ್ನು ರೂಪಿಸುವುದು.
೧೧. ಹೊರರಾಜ್ಯ-ರಾಷ್ಟ್ರಗಳಲ್ಲಿ ಬೇರೂರಿರುವ ಕನ್ನಡಿಗರಿಗೆ, ಕನ್ನಡ ಮತ್ತು ಕರ್ನಾಟಕದ ಜೊತೆಗಿನ ಸಂಬಂಧದ ಕೊಂಡಿ ಕೆಂಪು-ಹಳದಿ ಕಾರ್ಡ್ ನಿಂದಾ ಗಿ ಭದ್ರವಾಗುವ ತೃಪ್ತಿಯ ಬಗ್ಗೆ ಅರಿವು ಮೂಡಿಸುವುದು.
೧೨. ಪರಭಾಷಿಕ ಮತ್ತು ಪರರಾಷ್ಟ್ರದವರಿಗೆ ಏಷ್ಯಾದ ಸಿಲಿಕಾನ್ ವ್ಯಾಲಿ ಬೆಂಗಳೂರು ಮತ್ತು ಕರ್ನಾಟಕದ ಜೊತೆ ಎಂದೂ ಕಳಚದ ಸಂಬಂಧವನ್ನ ಹಳದಿ-ಕೆಂಪು ಕಾರ್ಡ್ ಗಳಿಸಿಕೊಟ್ಟ ಆನಂದವನ್ನು ವ್ಯಾಪಕವಾಗಿ ಪ್ರಚಾರ ಮಾಡುವುದು.
೧೩. ಕೆಂಪು ಮತ್ತು ಹಳದಿ ಕಾರ್ಡುಗಳನ್ನು ಹೊಂದಲು ಅಭಿಮಾನ ಬರುವಂತೆ ಕುತೂಹಲಕಾರಿ, ಮನಮೋಹಕ ಮತ್ತು ಹೆಮ್ಮೆಯ ಜಾಹೀರಾತುಗಳ ಪ್ರಚಾರ ಕಾರ್ಯಕ್ರಮಗಳನ್ನು ಸಂಘಟಿಸುವುದು.
೧೪. ಅಮೆರಿಕಾದ ಹಸಿರು ಕಾರ್ಡಿಗೆ ಸರಿಸಮಾನವಾದ ಹೆಮ್ಮೆ, ಘನತೆ ಮತ್ತು ಮಾನ್ಯತೆ ಕೆಂಪು-ಹಳದಿ ಕಾರ್ಡ್ ಹೊಂದಿದವರಿಗೆ ಇದೆ ಎಂಬ ಕಂಪನ ಸೃಷ್ಟಿಸುವುದು.

೩. ಪರಭಾಷಿಕರ ಕನ್ನಡ ಕಲಿಕೆಗೆ ಪಠ್ಯಕ್ರಮ

೧. ಕನ್ನಡ ಮತ್ತು ಸಂಸ್ಕೃ ತಿ ಇಲಾಖೆ ವತಿಯಿಂದ ಕನ್ನಡ ಮಾ ತನಾಡಲು, ಓದಲು ಮತ್ತು ಬರೆಯಲು ಮೂರು ಹಂತಗಳ ಪಠ್ಯಕ್ರಮವನ್ನು ಸಿದ್ದಗೊಳಿಸುವುದು.
೨. ಪಠ್ಯಕ್ರಮವನ್ನು ಆಡಿಯೋ-ವಿಡಿಯೋ ಮತ್ತು ಪುಸ್ತಕ ರೂಪಗಳಲ್ಲಿ ಸಿದ್ದಗೊಳಿಸುವುದು.
೩. ಮೂರೂ ಹಂತದ ಪಠ್ಯಕ್ರಮಗಳನ್ನು ಗೃಹಣಿಯರಿಗೆ, ವಿದ್ಯಾರ್ಥಿಗಳಿಗೆ, ಐಟಿ ಉದ್ಯೋಗಿಗಳಿಗೆ, ಡಾಕ್ಟರ್ ಗಳಿಗೆ, ಸೇಲ್ಸ್ ಮೆನ್ ಗಳಿಗೆ, ಇತ್ಯಾದಿ ಹಲವಾರು ವಿಭಾಗಗಳಾ ಗಿ ವಿಂಗಡಿಸಿ, ಅವರ ಅಗತ್ಯಗಳಿಗೆ ತಕ್ಕಂ ತೆ ಸರಳವಾಗಿ ಮಾತನಾಡಲು ಮೊದಲ ಆದ್ಯ ತೆಯಾಗಿ ಮತ್ತು ಓದಲು-ಬರೆಯಲು ನಂತರದ ಆದ್ಯತೆಯಾಗಿ ಕಲಿಯುವಂತೆ ಸಿದ್ಧಪಡಿಸುವುದು.
೪. ಪಠ್ಯಕ್ರಮಗಳು ವಿಡಿಯೋ ಮುಖಾಂತರ ನೋಡಲು ಮತ್ತು ಪುಸ್ತಕಗಳ ಮೂಲಕ ಕಲಿಯಲು ಸರಳವೂ, ಸರಾಗವೂ ಮತ್ತು ಅತಿ ಮುಖ್ಯವಾಗಿ ಅಂದಿನಿಂದಲೇ ಬಳಸಲು ಸೂಕ್ತವಾದಂತಹ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುವುದು.
೫. ಕಲಿಕೆಯು ತಕ್ಷಣಕ್ಕೆ ಉಪಯೋಗಿಸಬಲ್ಲ ರೀತಿಯಲ್ಲಿದ್ದರೆ, ಅದು ಹೆಚ್ಚಿನ ವೇಗದಲ್ಲಿ ಪರಭಾಷಿಕರನ್ನು ಕನ್ನಡದೆಡೆಗೆ ಸೆಳೆದು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ ಎಂಬ ವಾಸ್ತವತೆಯ ಮೇಲೆ ಸಮಾಜದ ಪ್ರತಿ ಹಂತದ ಮತ್ತು ಪ್ರತಿ ಅಗತ್ಯಗಳಿಗೆ ತಕ್ಕಂತಹ ಪಠ್ಯಕ್ರಮವನ್ನು ರೂಪಿಸುವುದು.
೬. ಕನ್ನಡದಲ್ಲಿ ಎಂ.ಎ ಅಥವಾ ಬಿ.ಎಡ್ ಮಾಡಿರುವ ನಿರುದ್ಯೋ ಗಿ ಯುವಕರು ಪೋರ್ಟಲ್ ನಲ್ಲಿ ನೊಂದಾಯಿಸಿಕೊಳ್ಳಲು ಅವಕಾಶ ನೀಡುವುದು. ಮೇಲ್ಕಂ ಡ ಯುವಕಯುವತಿಯರಿಗೆ ಸರ್ಕಾರ ಪಠ್ಯಕ್ರಮದ ಬಗ್ಗೆ ಏಳು ದಿನಗಳ ಸರ್ಟಿಫಿಕೇಷನ್ ಕೋರ್ಸ್ ಗಳನ್ನು ಪೂರ್ಣಗೊಳಿಸುವುದು.

೪. ಅಪಾರ್ಟ್ ಮೆಂಟ್‌ಗಳಲ್ಲಿ ಕನ್ನಡ ಕಲಿಕೆ

೧. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪಟ್ಟಣಗಳ ಅಪಾರ್ಟ್ ಮೆಂಟ್ ಗಳ ಪಟ್ಟಿಯನ್ನು ಸಿದ್ದಪಡಿಸುವುದು.
೨. ಅಪಾರ್ಟ್ ಮೆಂಟ್ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪಟ್ಟಿಯನ್ನು ಸಿದ್ದಪಡಿಸುವುದು.
೩. ಬೆಂಗಳೂರು ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ, ಕನ್ನಡ ಸಂಸ್ಕೃತಿ ಮತ್ತು ಶಿಕ್ಷಣ ಸಚಿವರ ಸಹಯೋಗದಲ್ಲಿ, ಅಪಾರ್ಟ್ ಮೆಂಟ್ ಸಂಘಗಳ ಪದಾಧಿಕಾರಿಗಳ ಸಮ್ಮೇಳನವನ್ನು ಆಯೋಜಿಸುವುದು.
೪. ಪ್ರತಿ ಅಪಾರ್ಟ್ ಮೆಂಟ್ ನಲ್ಲಿ ಕನ್ನಡ ಮಾತನಾಡಲು ಗೊತ್ತಿಲ್ಲದ ಮತ್ತು ಓದಲು, ಬರೆಯಲು ಬರದವರ ಪಟ್ಟಿಯನ್ನು ಕಾಲಮಿತಿಯಲ್ಲಿ ಸಿದ್ದಪಡಿಸುವಂತೆ ಕೋರಿಕೊಳ್ಳುವುದು.
೫. ಕನ್ನಡ ಕಲಿಯಲು ತಮ್ಮ ಸದಸ್ಯರುಗಳಿಗೆ ಪ್ರೇ ರೇಪಿಸುವಂತಹ ಗೋಷ್ಠಿಗಳನ್ನು ಮತ್ತು ಸಭೆಗಳನ್ನು ನಡೆಸಲು ಅಪಾರ್ಟ್ ಮೆಂಟ್ ಸಂಘಗಳಿಗೆ ಆದೇಶಿಸುವುದು.
೬. ಪ್ರತಿ ಅಪಾರ್ಟ್ ಮೆಂಟ್ ನಲ್ಲಿ ೫ ಕಿಂತ ಹೆಚ್ಚು ಪರಭಾ ಷಿಕರು ಕನ್ನಡ ಕಲಿಯಲು ಉತ್ಸುಕರಾಗಿದ್ದರೆ, ಭಾನುವಾರಗಳಂದು ಮಧ್ಯಾಹ್ನ ಅಥವಾ ವಾರದ ದಿವಸಗಳಂದು ಸಂಜೆಯ ವೇಳೆ ಎರಡು ಘಂಟೆಗಳ ಕಾಲ ನೊಂದಾಯಿತ ಕನ್ನಡ ಶಿಕ್ಷಕರಿಂದ ಭೋದನೆ ಮಾಡಲು ಆಯೋಜಿಸುವುದು.
೭. ಪ್ರತಿ ಅಪಾರ್ಟ್ ಮೆಂಟ್ ನ ಹೊರಗೆ ಕನ್ನಡ ಮತ್ತು ಆಂಗ್ಲ ಭಾಷೆಯ ಬ್ಯಾನರ್ಗಳ ಮೂಲಕ ತರಗತಿ ನಡೆಯುವ ವಾರಗಳ ಬಗ್ಗೆ ಪ್ರಚಾರ ನಡೆಸುವುದು.
೮. ಅಕ್ಕ ಪಕ್ಕದ ರಸ್ತೆಗಳಲ್ಲಿರು ವ ನಾಗರೀಕರು ತರಗತಿಗಳಿಗೆ ಬರಲಿಚ್ಚಿಸಿದರೆ, ಆ ಅವಧಿಗಳಲ್ಲಿ, ತರಗತಿ ನಡೆಯು ವ ಸ್ಥಳಕ್ಕೆ ಹಾಜರಾಗಲು ಅನು ಮತಿ ನೀಡುವುದು .
೯. ಅಪಾರ್ಟ್ ಮೆಂಟುಗಳಿರದ ಅಥವಾ ಕಮ್ಮಿ ಇರುವ ಪ್ರದೇ ಶಗಳಲ್ಲಿ ಸರ್ಕಾರಿ ಶಾಲೆಗಳ ಆವರಣಗಳಲ್ಲಿ ಭಾ ನು ವಾರಗಳಂದು ಎರಡರಿಂದ ಮೂರು ಗಂಟೆಗಳ ಕಾಲ ಕನ್ನಡ ಕಲಿಕೆ ತರಗತಿಗಳನ್ನು ನಡೆಸುವುದು.
೧೦. ನೊಂದಾಯಿತ ಕನ್ನಡ ಶಿಕ್ಷಕರ ಖರ್ಚು ಮತ್ತು ಭತ್ಯೆಗಳನ್ನು ಸರ್ಕಾರದಿಂದ ಪಾವತಿಯಾಗುವಂತೆ ನೋಡಿಕೊ ಳ್ಳವುದು .
೧೧. ಕಲಿಕೆಯನ್ನು ಮಾತು ಮತ್ತು ಓದು -ಬರಹ ಎಂಬ ಎರಡು ಹಂತಗಳನ್ನಾ ಗಿ ವಿಂಗಡಿಸುವುದು .
೧೨. ಪ್ರತಿ ಮೂರು ತಿಂಗಳಿಗೊಮ್ಮೆ, ಭಾನುವಾರಗಳಂದು ನಿಗದಿತ ಸರ್ಕಾರಿ ಶಾಲೆಗಳ ಆವರಣದಲ್ಲಿ ಪರೀಕ್ಷೆಗಳನ್ನು ಆಯೋಜಿಸುವುದು. ಆನ್ ಲೈನ್ ಮುಖಾಂತರ ಪ್ರತಿ ತಿಂಗಳು ನಿಗದಿತ ಅವಧಿಗಳಲ್ಲಿ ಪರೀ ಕ್ಷೆಗಳಲ್ಲಿ ಭಾಗವಹಿಸಿ ಕೆಂಪು ಅಥವಾ ಹಳದಿ ಕಾರ್ಡ್ ಪಡೆಯಲು ವ್ಯವಸ್ಥೆಕಲ್ಪಿಸುವುದು.

೫. ಐಟಿ ಮತ್ತು ಬಹು ರಾಷ್ಟ್ರೀಯ ಕಂಪನಿಗಳ ಅಧ್ಯಯನ ಮತ್ತು ಕಲಿಕೆ ಕೇಂದ್ರ

ಐಟಿ ಮತ್ತು ಬಹುರಾಷ್ಟ್ರೀ ಯ ಕಂಪನಿಗಳು ಕರ್ನಾಟಕ, ಅದರಲ್ಲೂ ಮುಖ್ಯವಾಗಿ ಬೆಂಗಳೂರು ನಗರದ, ಕನ್ನಡಿಗರ ಕೌಶಲ್ಯಕ್ಕೆ, ಆತಿಥ್ಯಕ್ಕೆ ಮತ್ತು ಹವಾಮಾನಕ್ಕೆ ಮನಸೋತು ತಮ್ಮ ಶಾಖೆಗಳನ್ನು ತೆರೆಯುತ್ತಿರುವುದನ್ನು ತಡೆಗಟ್ಟಲು ಸಾಧ್ಯವೂ ಇಲ್ಲ ಮತ್ತು ಸಾಧುವು ಅಲ್ಲ. ಆದ್ದರಿಂದ ಅಂತಹ ಕಂಪನಿಗಳು ತಮ್ಮ ಸಂಸ್ಥೆಯ ಒಂದು ಕೋಣೆಯನ್ನು ಕನ್ನಡ ಅಧ್ಯಯನ ಮತ್ತು ಕಲಿಕಾ ಕೇಂದ್ರವನ್ನಾಗಿ ಗುರುತಿಸಬೇಕು . ಅಲ್ಲಿ ಪೋರ್ಟಲ್ ನಲ್ಲಿ ನೊಂದಣಿ ಯಾಗಿರುವ ಕನ್ನಡ ಎಂ.ಎ ಅಥವಾ ಡಾಕ್ಟರೇಟ್ ಸಂಶೋಧನಾನಿರತ ನಿರುದ್ಯೋ ಗಿ ಪದವೀಧರರನ್ನು, ಸರ್ಕಾರದ ಪೋರ್ಟಲ್ ಮೂಲಕ ನೇಮಿಸಿಕೊಳ್ಳಬಹುದು.

ಆಕೆ ಅಥವಾ ಆತ ದಿನದ ೮ ಗಂಟೆಗಳ ಕಾಲ ಆ ವಿಭಾಗದಲ್ಲಿ ಹಾಜರಿದ್ದು, ಬ್ರೇಕ್ ನ ಸಮಯ ಅಥವಾ ಕಂಪನಿ ಅನುವುಮಾಡಿಕೊಟ್ಟ ಸಮಯದಲ್ಲಿ ಪರಭಾಷಿಕರು ಕನ್ನಡವನ್ನು ತಮ್ಮ ದೈನಂದಿನ ಅಗತ್ಯಕ್ಕೆ ತಕ್ಕಷ್ಟು ಮಾತನಾಡಲು ನಂತರ ಓದು-ಬರಹ ಕಲಿಯಲು ವಿಡಿಯೋ, ಆಡಿಯೋ ಮತ್ತು ಪುಸ್ತಕ ರೂಪ ಪಠ್ಯಕ್ರಮದಿಂದ ಸುಲಭವಾಗಿ ಕಲಿಯಲು ಸಹಕರಿಸುವುದು. ಇದರಿಂದ ದಿನದ ಯಾವುದೇ ಸಮಯದಲ್ಲಿ ಪರಭಾಷಿಕರಿಗೆ ತಮ್ಮ ಕೆಲಸದ ಸ್ಥಳದಲ್ಲೇ , ಕೆಲಸದ ಸಮಯದಲ್ಲೇ ಬಿಡುವಿನ ಗಂಟೆಗಳಲ್ಲಿ ಕನ್ನಡ ಕಲಿಯಲು ಸಾಧ್ಯವಾಗುತ್ತದೆ.

ಅರೆಕಾಲಿಕ ಕನ್ನಡ ಶಿಕ್ಷಕರಿಗೆ ಅಥವಾ ಶಿಕ್ಷಕಿಯರಿಗೆ ೧೫,೦೦೦ ಸಾವಿರಕ್ಕೆ ಕಮ್ಮಿಯಿಲ್ಲದಂತೆ ಭತ್ಯೆ ನೀಡುವಂತೆ ಮನವಿ ಮಾಡುವುದು. ಇದರಿಂದ ಪರಭಾಷಿಕ ಉದ್ಯೋ ಗಿಗಳಿಗೆ ಕನ್ನಡ ಕಲಿಯಲು ಸುಲಭವಾಗುವುದಲ್ಲದೆ, ಅರೆಕಾಲಿಕ ಶಿಕ್ಷಕರಿಗೆ ವಿದ್ಯಾರ್ಥಿ ಗಳಿಲ್ಲದ ಉಳಿದ ಸಮಯದಲ್ಲಿ ಕನ್ನಡ ಸಂಶೋಧನೆ ಮತ್ತು ಉನ್ನತ ವ್ಯಾಸಂಗ ಮಾಡಲು ಸಮಯ, ಸ್ಥಳ ಮತ್ತು ನಿರುದ್ಯೋಗ ಭತ್ಯೆಯೂ ಸಿಕ್ಕಂತಾಗುತ್ತದೆ.

೬. ಆಂಗ್ಲ ಮತ್ತು ಅಂತರರಾಷ್ಟ್ರೀಯ ಶಾಲೆಗಳಲ್ಲಿ ಕನ್ನಡ ಕಲಿಕೆ

೧. ಶಿಕ್ಷಣ ಇಲಾಖೆ ವತಿಯಿಂದ ಆಂಗ್ಲ ಮಾಧ್ಯಮ ಮತ್ತು ಅಂತರಾಷ್ಟ್ರೀಯ ಶಾಲೆಗಳ ಪಟ್ಟಿ ಸಿದ್ದಪಡಿಸುವುದು.
೨. ಶಾಲೆಗಳಿಗೆ ಭೇಟಿ ನೀಡಿ ಮಾದರಿ ಪರೀಕ್ಷೆಗಳನ್ನು ನಡೆಸಲು ಮೇಲ್ವಿಚಾರಣೆ ಸಮಿತಿಯನ್ನು ಪ್ರಾಥಮಿಕ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ರಚಿಸುವುದು.
೩. ಪ್ರತಿ ಆಂಗ್ಲ ಮತ್ತು ಅಂತರಾಷ್ಟ್ರೀ ಯ ಶಾಲೆಯೂ, ಅಗತ್ಯವಿರುವಷ್ಟು ಸಂಖ್ಯೆಯ ಮತ್ತು ಅಗತ್ಯ ಗುಣಮಟ್ಟದ ಕನ್ನಡ ಶಿಕ್ಷಕರನ್ನು ನೇಮಿಸಿದ್ದಾರೆಯೇ ಎಂದು ಪರಿಶೀಲಿಸುವುದು.
೪. ಈ ಶಾಲೆಗಳಲ್ಲಿ ಮಕ್ಕಳು ಕನ್ನಡವನ್ನು ಒಂದು ಭಾಷೆಯನ್ನಾಗಿ ಉತ್ತಮ ರೀತಿಯಲ್ಲಿ ಕಲಿಯುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಮೈಲಿಗಲ್ಲು ಮತ್ತು ಮಾಪನಗಳನ್ನು ಪೂರ್ವನಿರ್ಧರಿಸುವುದು.
೫. ಪ್ರತಿ ಆರು ತಿಂಗಳಿಗೊಮ್ಮೆ, ಈ ಶಾಲೆಗಳಲ್ಲಿನ ಕನ್ನಡ ಕಲಿಕೆಗೆ ಬೇಕಾಗುವ ಪೂರಕ ವ್ಯವಸ್ಥೆಗಳಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ದಾಖಲಿಸುವುದು ಮತ್ತು ಸಾರ್ವಜನಿಕರಿಗೆ ಲಭ್ಯಗೊಳಿಸುವುದು.

೭. ಸರ್ಕಾರಿ ಮತ್ತು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಉನ್ನತೀಕರಣ

೧. ಕರ್ನಾಟಕದಲ್ಲಿ ಸರ್ಕಾರ ಮತ್ತು ಖಾಸಗಿಯಲ್ಲಿ ಒಟ್ಟು ೬೨,೨೨೯ ಪ್ರಾರ್ಥಮಿಕ ಮತ್ತು ಪ್ರೌಢಶಾಲೆಗಳಿವೆ.
೨. ಈ ಮೇಲಿನ ಶಾಲೆಗಳನ್ನು ಕನ್ನಡ ಮಾಧ್ಯಮ, ಇಂಗ್ಲೀ ಷ್ ಮಾಧ್ಯಮ ಹಾಗೂ ಕನ್ನಡಇಂಗ್ಲೀ ಷ್ ಮಾಧ್ಯಮ ಶಾಲೆಗಳೆಂದು ವಿಂಗಡಿಸುವುದು.
೩. ಪ್ರತಿ ಜಿಲ್ಲೆ, ತಾಲೋಕು ಮತ್ತು ಪಂಚಾಯ್ತಿಯ ಮಟ್ಟದಲ್ಲಿ ಕನ್ನಡ ಮಾಧ್ಯಮಕ್ಕೆ ಮಾತ್ರ ಮೀಸಲಿರುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಪಟ್ಟಿ ಸಿದ್ದಪಡಿಸುವುದು.
೪. ಶಿಕ್ಷಕರ ನೇಮಕಾತಿಯಲ್ಲಿ, ಶಿಕ್ಷಕರ ತರಬೇತಿಯಲ್ಲಿ, ಗ್ರಂ ಥಾಲಯ, ಕಟ್ಟಡ, ಕಂಪ್ಯೂಟರ್, ಪ್ರಯೋಗಾಲಯ, ಕ್ರೀ ಡಾ ಸಲಕರಣೆ, ಪುಸ್ತಕ, ಶಾಲಾ ಸಮವಸ್ತ್ರಗಳ ವಿತರಣೆಯಲ್ಲಿ ಪ್ರಥಮ ಆದ್ಯತೆಯನ್ನು ಸರ್ಕಾರಿ ಅಥವಾ ಖಾಸಗಿಯೆನ್ನುವ ಭೇದವಿಲ್ಲದೆ, ಕನ್ನಡ ಮಾಧ್ಯಮ ಶಾಲೆಗಳಿಗೆ ನೀಡುವುದು
೫. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಈ ರಾಜ್ಯದ, ಈ ಭಾಷೆಯ ಆಸ್ತಿಯೆಂದು ಪರಿಗಣಿಸಿ, ಅವರ ಕಲಿಕೆಗೆ ಅಂತರರಾಷ್ಟ್ರೀ ಯ ಗುಣಮಟ್ಟದ ಕೌಶಲ್ಯಭರಿತ ಶಿಕ್ಷಕರು ಮತ್ತು ಮೂಲಸೌಕರ್ಯದ ಅಭಿವೃದ್ದಿ, ನಾಡಿನ ಮತ್ತು ಸರ್ಕಾರದ ಕರ್ತವ್ಯವೆಂದು ಪರಿಗಣಿಸುವುದು.
೬. ಕನ್ನಡ ಮಾ ಧ್ಯಮ ಶಾಲೆಗಳಲ್ಲಿ ಆಂಗ್ಲ ಭಾಷೆಯನ್ನು ಮಾತು-ಓದು-ಬರಹ ಎಂಬ ಮೂರು ಹಂತಗಳಲ್ಲಿ ವಿಂಗಡಿಸಿ ಅತ್ಯುನ್ನತ ಗುಣಮಟ್ಟದ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸುವುದು. ಮಕ್ಕಳು ಒಂದು ಭಾಷೆಯಾಗಿ ಇಂಗ್ಲೀ ಷನ್ನು ಮಾತನಾಡಲು- ಓದಲು- ಬರೆಯಲು ಕಲಿತರೆ, ಪೋಷಕರು ಮತ್ತು ಮಕ್ಕಳು ಕನ್ನಡ ಮಾಧ್ಯಮ ಶಾಲೆಗಳಿಂದ ದೂರವಾಗುವುದನ್ನು ತಪ್ಪಿಸಬಹುದು. ಮುಂದಿನ ಐದು ವರ್ಷಗಳ ಎಲ್ಲಾ ರೀತಿಯ ಪ್ರಾಥಮಿಕ ಶಿಕ್ಷಣ ಸಚಿವಾಲಯದ ಬಂಡವಾಳ ವೆಚ್ಚವನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಮಾತ್ರ ಮೀಸಲಿಡುವ ಧೃಡಸಂಕಲ್ಪ ಮಾಡುವುದು.

೮. ಮನದ ಮಾತು

ಭಾಷೆಯ ವಿಷಯದಲ್ಲಿ ನನ್ನದೇ ಆದ ಕೆಲವು ಸ್ವಂತ ಅಭಿಪ್ರಾಯಗಳಿವೆ. ತಾಯಿ ಭಾಷೆ ಹಡೆದ ತಾಯಿ ತನ್ನ ಮಡಿಲಲ್ಲಿ ಕಲಿಸುವ ಭಾಷೆ. ಮನೆಯ ಭಾಷೆ ತಂದೆ ಮತ್ತು ತಾಯಿ ಮನೆಯಲ್ಲಿ ಮಾತನಾಡುವ ಮತ್ತು ಕಲಿಸುವ ಭಾಷೆ ಅಥವಾ ಭಾಷೆಗಳು.ಭೂತಾಯಿ ಭಾಷೆ ತಾಯಿಯ ಮಡಿಲಿಂದ ಇಳಿದು, ಮನೆಯ ಹೊಸ್ತಿಲು ದಾಟಿದ ನಂತರ ಸಿಗುವ ಮನೆಯಾಚೆಯ ಅಂಗಳದ, ನೆರೆ ಹೊರೆಯ ಮತ್ತು ಆ ಮಣ್ಣಿನ ನೆಲದ ಭಾಷೆ. ಮಾತೃಭಾಷೆ: ಮಾತೃಭಾಷೆ ಅಂದರೆ ಈ ನೆಲದ ಭಾಷೆಯೇ ಭೂತಾಯಿ ಭಾಷೆ ಮಾತೃಭಾಷೆ ಆಗಿರುತ್ತದೆ. ರಾಜ್ಯ ಭಾಷೆ: ರಾಜ್ಯ ಸಂವಿಧಾನಾತ್ಮಕವಾಗಿ ಅಳವಡಿಸಿಕೊಂಡ ಅಧಿಕೃತ ಭಾಷೆ.

ಕನ್ನಡ ಬರಿಯಲು ಕಲಿತಿದ್ದಾರೆ ಪೂಜಾ ಗಾಂಧಿ ಅಮ್ಮ: ನಟಿಯ ಪೋಸ್ಟ್​ಗೆ ಭೇಷ್​ ಭೇಷ್​ ಅಂತಿರೋ ಕನ್ನಡಿಗರು

೯. ಕೊನೆಯ ಮಾತು

ಕನ್ನಡವನ್ನು ವಿಶ್ವದೆಲ್ಲೆಡೆ ಪರಭಾಷಿಕರು ಪ್ರೀತಿಯಿಂದ ಕಲಿಯುವಂತೆ ಮಾಡುವುದು ನಮ್ಮ ಗುರಿಯಾಗಿರುವುದರಿಂದ, ನಾವೆಂದೂ ಬೇರೆ ಯಾವ ಭಾಷೆಯನ್ನು ದ್ವ ಷಿಸುವುದಿಲ್ಲವೆಂದು ಪಣ ತೊಡಬೇಕು. ಆಂಗ್ಲ ಭಾಷೆ ವ್ಯಾವಹಾರಿಕವಾಗಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅಗತ್ಯವಿದ್ದು, ಸಂಸ್ಕೃತ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಕೊಂಕಣಿ, ಮರಾಠಿ ಇತ್ಯಾದಿ, ನಮ್ಮ ರಾಷ್ಟ್ರದ ಎಲ್ಲಾ ಭಾಷೆಗಳಿಗೆ ಸಮಾನ ಗೌರವ ನೀಡುವಂಥವರಾಗಬೇಕು.
ಭಾಷೆ, ನೆಲ, ಜಲದ ವಿಷಯಗಳು ಹೆಮ್ಮೆ, ಅಭಿಮಾನದ ಹಂತವನ್ನು ದಾಟಿ ಅತಿರೇಕ, ಹಿಂಸೆ, ಪ್ರಚೋದನೆಗಳಿಗೆ ವಾಲುವ ಸಾಧ್ಯತೆಗಳು ಅತ್ಯಂತ ಸರಳವಾಗಿರುತ್ತವೆ. ಯಾವುದೇ ಕಾರಣಕ್ಕೂ ನಮ್ಮ ಕನ್ನಡಯಜ್ಞ ಅಂತಹ ಅತಿರೇಕದ ಗಡಿಗಳನ್ನು ದಾಟದಂತೆ ಸದಾ ಎಚ್ಚರ ವಹಿಸುವುದು ಕೂಡ, ಮುಖ್ಯವಾಗುತ್ತದೆ. ಕರ್ನಾಟಕದ ಬೇರು ಗುಣಗಳಾದ  ಶಾಂತಿಪ್ರಿಯತೆ, ಪ್ರೀತಿ ವಾತ್ಸಲ್ಯ ಮತ್ತು ಅತಿಥಿ ಸತ್ಕಾರಗಳಂತಹ ಸಂಸ್ಕಾರಗಳನ್ನು ಗಟ್ಟಿಗೊಳ್ಳಿಸುತ್ತಾ, ವಿಶ್ವದೆಲ್ಲಡೆಯಿಂದ ನಮ್ಮಲ್ಲಿಗೆ ಬರುವವರ ಮನದಲ್ಲಿ ಕನ್ನಡದ ಕಂಪನ್ನು ಅರಳಿಸುವ ಕೆಲಸವನ್ನು ನಿರಂತರವಾಗಿ ಮಾಡಬೇಕಿದೆ.

೧೦. ಕೃತಜ್ಞತೆಗಳು 

ದಿನಪತ್ರಿಕೆಯೊಂದಕ್ಕೆ ಬರೆದ ಅಂಕಣಕ್ಕೆ, ರಾಜ್ಯದೆಲ್ಲಡೆಯಿಂದ ನಿರೀಕ್ಷೆಗೂ ಮೀರಿ ಅಭಿನಂದನೆ ಮತ್ತು ಅಭಿಪ್ರಾಯಗಳನ್ನು ಕನ್ನಡಿಗರು ಜಾಲತಾಣಗಳ ಮೂಲಕ ಮತ್ತು ಖುದ್ದು ಕರೆ ಮಾಡಿ ನೀಡಿದರು. ಇದರಿಂದ ಸ್ಪೂರ್ತಿ ಹೊಂದಿ ಅಂಕಣವನ್ನೇ ಕಿರುವರದಿಯನ್ನಾಗಿ ಪರಿವರ್ತಿಸಲು ಸಹಕಾರ ಮತ್ತು ಸಲಹೆ ನೀಡಿ, ಶ್ರಮವಹಿಸಿದ ಕಿರಣ್ ಘೋರ್ಪಡೆ, ರುದ್ರೇ ಶ್.ಬಿ, ವಿಜಯ್ನಾಗರಾಜ್, ಲೋಕಪ್ರಶಾಂತ್, ಚೇತನ್ ಕಟವಾಕರ್, ಲೋಹಿತ್ ಕುಮಾರ್, ಚಂದ್ರಶೇಖರ್ ಪವಾರ್ ಮತ್ತು ಹೆಚ್.ಎಂ.ರಜತ್ ರವರಿಗೆ ನನ್ನ ಕೃತಜ್ಞತೆಗಳು ಅಂತ ಬರೆದಿದ್ದಾರೆ. 

Follow Us:
Download App:
  • android
  • ios