Asianet Suvarna News Asianet Suvarna News

Pooja Gandhi: ಕನ್ನಡ ಕಲಿತು ಜೇನಿನ ಹೊಳೆಯೋ ಹಾಡು ಹೇಳಿದ ಮಳೆ ಹುಡುಗಿಗೆ ಫ್ಯಾನ್ಸ್​ ಫಿದಾ!

ನಟಿ ಪೂಜಾ ಗಾಂಧಿ ಮತ್ತೊಮ್ಮೆ ಕನ್ನಡದ ಮೇಲಿನ ಪ್ರೀತಿಯನ್ನು ತೋರಿದ್ದಾರೆ. ಜೇನಿನ ಹೊಳೆ ಹಾಡನ್ನು ಕನ್ನಡದಲ್ಲಿ ಕಲಿತು ಸುಶ್ರಾವ್ಯವಾಗಿ ಹಾಡಿದ್ದು ಫ್ಯಾನ್ಸ್​ ಫಿದಾ ಆಗಿದ್ದಾರೆ. 
 

Actress Pooja Gandhi has once again shown her love for Kannada suc
Author
First Published Aug 26, 2023, 6:43 AM IST

ಸ್ಯಾಂಡಲ್‌ವುಡ್‌ ಮಳೆ ಹುಡುಗಿ ಎಂದೇ ಖ್ಯಾತಿ ಪಡೆದ ನಟಿ ಪೂಜಾ ಗಾಂಧಿ (Pooja Gandhi). ಮುಂಗಾರು ಮಳೆಯ ಬಳಿಕ ಮಿಂಚಿದ್ದ ಪೂಜಾ ಗಾಂಧಿ  ಕನ್ನಡ ಮಾತ್ರವಲ್ಲದೇ ತಮಿಳು, ಹಿಂದಿ, ಮಲಯಾಳಂ, ಹಾಗೂ ಬೆಂಗಾಲಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸಂಜನಾ ಗಾಂಧಿ ಎಂಬ ಹೆಸರಿನಲ್ಲಿ ಜನಿಸಿದ ಈ ನಟಿ ಮುಂಗಾರು ಮಳೆ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ, ಮಳೆ ಹುಡುಗಿ ಎಂದು, ದಕ್ಷಿಣ ಚಿತ್ರರಂಗದ ಖ್ಯಾತ ನಟಿಯಾಗಿ ಹೊರಹೊಮ್ಮಿರು. ಮುಂಗಾರು ಮಳೆಯ ಯಶಸ್ಸಿನ ಬಳಿಕ  ಕನ್ನಡದ ಟಾಪ್​ ನಟಿ (Kannada Top Actress) ಎಂದೇ ಖ್ಯಾತಿ ಪಡೆದ ಪೂಜಾ,  ಇದ್ದಕ್ಕಿದ್ದಂತೆಯೇ ಬಣ್ಣದ ಲೋಕದಿಂದ  ಕಣ್ಮರೆಯಾಗಿದ್ದಾರೆ.   ಪೀಕ್​ನಲ್ಲಿದ್ದಾಗಲೇ ಪೂಜಾ ಚಿತ್ರರಂಗದಿಂದ ಹಿಂದೆ ಸರಿದಿದ್ದಾರೆ. ನಟಿ ನೋಡೋಕೆ ಚೆನ್ನಾಗಿಲ್ಲ. ಕುಳ್ಳಕ್ಕೆ ಇದ್ದಾರೆ. ಗಂಡಸರ ಹಾಗೇ ಕಾಣಿಸುತ್ತಾರೆ ಎಂದೆಲ್ಲಾ ಟೀಕೆಗಳನ್ನು ಎದುರಿಸುತ್ತಲೇ ಹಲವು ಭಾಷೆಗಳಲ್ಲಿ ನಟಿಸಿದ್ದ ನಟಿ ಎಲ್ಲರಿಗೂ ಹೆಚ್ಚು ಆಪ್ತವಾದದ್ದು ಅವರು ಕನ್ನಡ ಕಲಿತದ್ದರಿಂದ. 

2001ರಲ್ಲಿ ಖತ್ರೋನ್ ಕೆ ಖಿಲಾಡಿ ಸಿನಿಮಾದ ಮೂಲಕ ಬಿ-ಟೌನ್ ಬಣ್ಣದ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ಪೂಜಾ ಗಾಂಧಿ 2006ರಲ್ಲಿ ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇದಾದ ಮೇಲೆ ಮಿಲನಾ, ಕೃಷ್ಣ, ಮನ್ಮತಾ,ಗೆಳೆಯ, ಹನಿ ಹನಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆಮೇಲೆ ಕಣ್ಮರೆಯಾಗಿ ಕಾಣಿಸಿಕೊಂಡಾಗ ಅಭಿಮಾನಿಗಳಿಂದ ಒಂದೇ ಸಮನೆ ಪ್ರಶ್ನೆ ಎದುರಾಗಿತ್ತು.  ಆಗ ಪೂಜಾ ಗಾಂಧಿ 'ನಾನು ಎಲ್ಲಿಯು ಹೋಗಿಲ್ಲ, ಇಲ್ಲಿಯೇ ಇದ್ದೇನೆ. ಮುಂಗಾರು ಮಳೆ ಸಿನಿಮಾದಿಂದ ನಾನು ನೋಡಲು ಹಾಗೆ ಇರುವೆ ಎಂದು ಅನೇಕು ಹೇಳುತ್ತಿರುವುದಕ್ಕೆ ಖುಷಿಯಾಗಿದೆ. ಆದರೆ ನನ್ನ ಭಾಷೆ ಬದಲಾಗಿದೆ, ಆಗ ತಪ್ಪು ಸರಿ ಯೋಚನೆ ಮಾಡದೆ ಕನ್ನಡ ಹೇಗೆ ಬರುತ್ತಿತ್ತು ಹಾಗೆ ಬರೆದುಕೊಂಡೆ, ಈಗ ಮಾತನಾಡುವುದು ಓದುವುದನ್ನು ಕಲಿತಿರುವೆ. ಯಾಕೆ ಕಲಿಯುತ್ತಿರುವುದು ಎಂದು ಅನೇಕರು ಪ್ರಶ್ನೆ ಮಾಡಿದ್ರು. ಅದಕ್ಕೆ ಉತ್ತರ, ಭಾಷೆ ಮೇಲಿರುವ ನನ್ನ ಪ್ರೀತಿ ಮತ್ತು ಕರ್ನಾಟಕದ ಮೇಲಿರುವ ನನ್ನ ಪ್ರೀತಿ ಅಂತ ಹೇಳುವುದಕ್ಕೆ ಇಷ್ಟ ಪಡುವೆ. ಒಂದು ಶಬ್ದದಲ್ಲಿ ಹಂಚಿಕೊಳ್ಳಲು ಆಗಲ್ಲ. ಏಕೆಂದರೆ ಅಷ್ಟು ಇಷ್ಟ ಪಡುತ್ತಿರುವೆ. ತುಂಬಾ ತುಂಬಾ ಖುಷಿಯಾಗುತ್ತಿದೆ. ಜನರು ಅಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ ಮುಂಚೆ ಮಾತನಾಡುತ್ತಿದ್ದೆ ಈಗ ಬರೆಯುತ್ತಿರುವೆ ಓದುತ್ತಿರುವೆ' ಎಂದು  ಯುಟ್ಯೂಬ್ ಸಂದರ್ಶನದಲ್ಲಿ ಪೂಜಾ ಗಾಂಧಿ ಮಾತನಾಡಿದ್ದರು. 

ಕನ್ನಡ ಬರಿಯಲು ಕಲಿತಿದ್ದಾರೆ ಪೂಜಾ ಗಾಂಧಿ ಅಮ್ಮ: ನಟಿಯ ಪೋಸ್ಟ್​ಗೆ ಭೇಷ್​ ಭೇಷ್​ ಅಂತಿರೋ ಕನ್ನಡಿಗರು

ಕೆಲ ದಿನಗಳ ಹಿಂದೆ ಪೂಜಾ ಮತ್ತೆ ಸುದ್ದಿ ಮಾಡಿದ್ದರು.  ಇದಕ್ಕೆ ಕಾರಣ, ಇವರಿಗೆ ಕನ್ನಡ ಮೇಲಿರುವ ಪ್ರೀತಿ ಮತ್ತೊಮ್ಮೆ ಸಾಬೀತಾಗಿತ್ತು. ಕನ್ನಡಿಗರು ಕೂಡ ಕನ್ನಡ ಮಾತನಾಡಲು ಹಿಂದೇಟು ಹಾಕುತ್ತಲೇ ಇಂಗ್ಲಿಷ್‌ ವ್ಯಾಮೋಹಕ್ಕೆ ಒಳಗಾಗಿರುವ ಈ ಹೊತ್ತಿನಲ್ಲಿ ಪೂಜಾ ಮಾತ್ರವಲ್ಲದೇ ಇದೀಗ ಅವರ ತಾಯಿ ಕೂಡ ಕನ್ನಡ ಕಲಿಯಲು ಶುರು ಮಾಡಿರುವುದು ಕನ್ನಡಿಗರಿಗೆ ತುಂಬಾ ಖುಷಿ ಕೊಡುತ್ತಿದೆ. ಪೂಜಾ ಅವರ ತಾಯಿ ಜ್ಯೋತಿ ಗಾಂಧಿ ಅವರು ಕನ್ನಡದಲ್ಲಿ ಬರೆದ ಒಂದು ಪುಟವನ್ನು ಶೇರ್ ಮಾಡಿಕೊಂಡಿರುವ ಪೂಜಾ ಗಾಂಧಿ, 'ಕನ್ನಡದ ಅಕ್ಷರಾಭ್ಯಾಸವಿಲ್ಲದಿದ್ದರೂ, ನನ್ನ ಕನ್ನಡ ಕಲಿಕೆಯಿಂದ ಪ್ರೇರೇಪಿತರಾಗಿ ನನ್ನ ತಾಯಿ ಜ್ಯೋತಿ ಗಾಂಧಿ ಬರೆದಿರುವ ಚಂದದ ಕನ್ನಡ ಅಕ್ಷರಗಳು... ಅಮ್ಮ ಹಾಟ್ಸ್ ಆಫ್..' ಎಂದು ಫೇಸ್‌ಬುಕ್‌ನಲ್ಲಿ (Facebook) ಬರೆದುಕೊಂಡಿದ್ದರು.

ಇದೀಗ ಪೂಜಾ ಗಾಂಧಿ ಕನ್ನಡದ ಮೇಲಿನ ಅಭಿಮಾನವನ್ನು ಮಗದೊಮ್ಮೆ ಸಾಬೀತು ಮಾಡಿದ್ದಾರೆ. ಜೇನಿನ ಹೊಳೆಯೋ, ಹಾಲಿನ ಮಳೆಯೋ ಹಾಡನ್ನು ಸುಶ್ರಾವ್ಯವಾಗಿ ಹಾಡಿದ್ದು, ಅಚ್ಚ ಕನ್ನಡದ ಮಾತು ಕೇಳಿ ಕನ್ನಡಾಭಿಮಾನಿಗಳು ಖುಷಿಯಿಂದ ತೇಲಾಡುತ್ತಿದ್ದಾರೆ. ಕನ್ನಡದ ಮೇಲೆ ಎಷ್ಟೋ ಮಂದಿಗೆ ಪ್ರೀತಿಯೇ ಹೊರಟು ಹೋಗುತ್ತಿರುವ ಈ ದಿನಗಳಲ್ಲಿ ಕನ್ನಡದ ಮೇಲೆ ಇಷ್ಟೊಂದು ಅಭಿಮಾನ ಮೆರೆದು ಡಾ.ರಾಜ್​ಕುಮಾರ್​ ಅವರ ಜೇನಿನ ಹೊಳೆಯೋ ಹಾಡನ್ನು ಇಷ್ಟು ಸೊಗಸಾಗಿ ಹೇಳಿದ್ದೀರಾ ಎಂದು ಸಹಸ್ರಾರು ಮಂದಿ ಕಮೆಂಟ್​ ಮಾಡುತ್ತಿದ್ದಾರೆ. 

ನಾನು ಎಲ್ಲೂ ಹೋಗಿಲ್ಲ; ಇಷ್ಟು ವರ್ಷ ಕಾಣಿಸದೇ ಇದ್ದಿದ್ದಕ್ಕೆ ಉತ್ತರ ಕೊಟ್ಟ ಪೂಜಾ ಗಾಂಧಿ!

 
 
 
 
 
 
 
 
 
 
 
 
 
 
 

A post shared by Nama.Tuluver (@nama.tuluver)

Follow Us:
Download App:
  • android
  • ios