ಕಾವೇರಿ ಹೋರಾಟಕ್ಕೆ ಬಾರದ ನಟ-ನಟಿಯರ ಚಿತ್ರಗಳನ್ನು ಬಹಿಷ್ಕರಿಸಿ: ಶಾಸಕ ಯತ್ನಾಳ್‌ ಒತ್ತಾಯ

ಕಾವೇರಿ ಹೋರಾಟದಲ್ಲಿ ಭಾಗವಹಿಸದ ನಟ- ನಟಿಯರ ಕನ್ನಡ ಸಿನಿಮಾಗಳನ್ನು ಬಹಿಷ್ಕಾರ ಮಾಡಬೇಕು ಎಂದು ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ ಕರೆ ಕೊಟ್ಟಿದ್ದಾರೆ.

Sandalwood actors films Boycott who do not participate in Cauvery struggle MLA Yatnal urges sat

ವಿಜಯಪುರ (ಸೆ.25): ನಮ್ಮ ರಾಜ್ಯದಲ್ಲಿ ಕನ್ನಡ ಚಿತ್ರರಂಗದ ಚಿತ್ರರಂಗದ ಮೂಲಕ ಹಣ ಮಾಡಿಕೊಂಡಿರುವ ನಟ-ನಟಿಯರು ಕಾವೇರಿ ಹೋರಾಟದಲ್ಲಾದರೂ ಹೊರಬರಲಿ. ಯಾರು ಹೋರಾಟದಲ್ಲಿ ಭಾಗಿಯಾಗಲ್ಲವೋ ಅವರ ಚಿತ್ರಗಳನ್ನು ಜನರು ಬಹಿಷ್ಕರಿಸಬೇಕು ಎಂದು ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಸ್ಯಾಂಡಲ್‌ವುಡ್ ನಟ ನಟಿಯರು ಹೋರಾಟದಲ್ಲಿ ಭಾಗಿಯಾಗುತ್ತಿಲ್ಲ. ನಟ ಪ್ರಕಾಶ್ ರಾಜ್ ಬಗ್ಗೆ ಈಗಾಗಲೇ ಹೇಳಿದ್ದೇನೆ ಅವನೊಬ್ಬ ಹಂದಿ ಇದ್ದ ಹಾಗೆ. ಇನ್ನು ಕನ್ನಡ ಚಿತ್ರರಂಗದ ನಟನಟಿಯರು ಈಗಲಾದರೂ ಹೊರಬರಲಿ. ರಾಜ್ಯದ ಜನರು ಕಾವೇರಿ ಹೋರಾಟದಲ್ಲಿ ಭಾಗಿಯಾಗಬೇಕೆಂದು ಚಿತ್ರ ನಟ ನಟಿಯರ ಮನೆಗೆ ಹೋಗಿ ಆರತಿ ತಟ್ಟೆ ಎತ್ತಿ ‌ಕರೆಯೋಕಾಗಲ್ಲ. ಕಾವೇರಿ ನದಿ ನೀರಿನ  ವಿಚಾರದಲ್ಲಿ ನಟನಟಿಯರು ಸ್ವಯಂ ಪ್ರೇರಿತವಾಗಿ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.

Bengaluru ಬಿಬಿಎಂಪಿಯಲ್ಲಿ 225 ವಾರ್ಡ್‌ ರಚಿಸಿದ ಸರ್ಕಾರ: ನಿಮ್ಮ ವಾರ್ಡ್‌ ಯಾವುದು?

ಕಾವೇರಿ ತೀರದ ನಟರು ಎಲ್ಲಿದ್ದಾರೆ? ಕಾವೇರಿ ಹೋರಾಟದಲ್ಲಿ ಯಾರು ಭಾಗಿಯಾಗುವುದಿಲ್ಲವೋ ಅವರ ಚಿತ್ರಗಳನ್ನು ಜನರು ಬಹಿಷ್ಕರಿಸಬೇಕು. ಇಲ್ಲಿಯ ನಟ ನಟಿಯರ ಚಿತ್ರಗಳನ್ನು ಕನ್ನಡದವರೇ ವೀಕ್ಷಣೆ ಮಾಡುವುದು. ಕಾವೇರಿ ತೀರದ ಭಾಗದವರೇ ಹೆಚ್ಚಿನವರು ಚಿತ್ರರಂಗದಲ್ಲಿದ್ದಾರೆ. ದರ್ಶನ್, ಯಶ್ ಹಾಗೂ ಇತರರು ಆ ಭಾಗದವರೇ ಆಗಿದ್ದಾರೆ. ಉತ್ತರ ಕರ್ನಾಟಕ ಭಾಗದವರು ಯಾರು ಹೀರೋಗಳಿಲ್ಲ. ಉತ್ತರ ಕರ್ನಾಟಕ ಭಾಗದವರಿಗೆ ಕೇವಲ ಹಾಸ್ಯ ಪಾತ್ರಗಳನ್ನು ಮಾತ್ರ ಕೊಡುತ್ತಾರೆ. ಈಗಲಾದರೂ ಚಿತ್ರನಟ- ನಟಿಯರು ಹೋರಾಟಕ್ಕಿಳಿಯಬೇಕು ಎಂದು ಆಗ್ರಹಿಸಿದರು.

ತಮಿಳುನಾಡು ಸಿಎಂ ಖುಷಿಪಡಿಸಲು ರಾತ್ರೋ ರಾತ್ರಿ ನೀರು ಬಿಟ್ಟರು: ಕಾವೇರಿ ನದಿ ನೀರು  ವ್ಯಾಜ್ಯದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸಬೇಕು ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಆದರೆ, ಅವರು ಕೇಂದ್ರಕ್ಕೆ ಕೇಳಿ ತಮಿಳುನಾಡಿಗೆ ನೀರು ಬಿಟ್ಟಾರಾ? ತಮಿಳುನಾಡಿನ‌ ಮುಖ್ಯಮಂತ್ರಿ ಸ್ಟಾಲಿನ್‌ ಖುಷಿಪಡಿಸಲು ರಾತ್ರೋರಾತ್ರಿ ನೀರು ಬಿಟ್ಟಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಈಗ ಯಾಕೆ ಹಸ್ತಕ್ಷೇಪ ಮಾಡಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಮೇಲೆ ಸಂಸದರ ಸಭೆ ಮಾಡಿಲ್ಲ. ಕಾವೇರಿ‌ ನದಿ ನೀರಿನ ವಿಚಾರ ಉಲ್ಬಣಗೊಂಡ ಬಳಿಕ‌ ಕಾಟಾಚಾರಕ್ಕೆ ಸಭೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕೋಲಾರದಲ್ಲಿ ಗೂಂಡಾ ವರ್ತನೆ ಪ್ರದರ್ಶಿಸಿದ ಜನಪ್ರತಿನಿಧಿಗಳು: ವೇದಿಕೆಯಲ್ಲಿ ಬೋ... ಮಗನೆ ಎಂದು ಬೈಯೋದಾ!

ತಮಿಳುನಾಡಿಗೆ ನೀರು ಬಿಟ್ಟ ಮೇಲೆ ಕಾಟಾಚಾರಕ್ಕೆ ಸಂಸದರ ಸಭೆ: ಹೊಸ ಸರ್ಕಾರ ಬಂದ ಮೇಲೆ ಸಂಪ್ರದಾಯದಂತೆ ದೆಹಲಿಗೆ ತೆರಳಿ ಪ್ರಧಾನಮಂತ್ರಿ ಹಾಗೂ ಇತರೆ ಕೇಂದ್ರ ಸಚಿವರ ಭೇಟಿಯಾಗುತ್ತಾರೆ. ರಾಜ್ಯದ ಸಂಸದರ ಸಭೆ ಮಾಡುತ್ತಾರೆ. ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳ ಸ್ಥಿತಿಗತಿ ಬಗ್ಗೆ ಮಾತನಾಡುತ್ತಾರೆ. ರಾಜ್ಯಕ್ಕೆ ಪೂರಕವಾದ ಸಹಾಯ ಮಾಡುವಂತೆ ಮನವಿ ಮಾಡುತ್ತಾರೆ. ಆದರೆ ಕಾಂಗ್ರೆಸ್‌ನವರು‌ ಕಾಟಾಚಾರಕ್ಕೆ ಸಭೆ ಮಾಡಿದರು. ಕಾವೇರಿ‌ ಜಲ‌ ವಿವಾದದ‌‌ ಕುರಿತು ‌ಸರ್ಕಾರ ನ್ಯಾಯಾಧೀಕರಣದ ಮುಂದೆ ಸರಿಯಾದ ವಾದ ಮಾಡಲಿಲ್ಲ. ಹೀಗಾಗಿ ಕರ್ನಾಟಕದ ವಿರುದ್ದ ತೀರ್ಪು ಬಂದಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios