Bengaluru ಬಿಬಿಎಂಪಿಯಲ್ಲಿ 225 ವಾರ್ಡ್‌ ರಚಿಸಿದ ಸರ್ಕಾರ: ನಿಮ್ಮ ವಾರ್ಡ್‌ ಯಾವುದು?

ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 225 ವಾರ್ಡ್‌ಗಳನ್ನು ಮರುವಿಂಗಡಿಸಿ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ.

Karnataka Congress Government created 225 wards in Bengaluru BBMP new wards list here sat

ಬೆಂಗಳೂರು (ಸೆ.25): ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿ ಚುನಾವಣೆಯನ್ನು ನಡೆಸದೇ ನಿರ್ಲಕ್ಷ್ಯ ತೋರಿರುವ ರಾಜ್ಯ ಸರ್ಕಾರಗಳು ಒಂದು ಬಿಬಿಎಂಪಿ ಅವಧಿ ಪೂರ್ಣಗೊಳ್ಳುತ್ತಿದೆ. ಈಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ನೇರವಾಗಿ ಚುನಾವಣೆಗೆ ಹೋಗದೇ ಮತ್ತೊಮ್ಮೆ ವಾರ್ಡ್‌ ಮರುವಿಂಗಡಣೆ ಮಾಡಿದೆ. ಬಿಜೆಪಿ ಸರ್ಕಾರ ರಚಿಸಿದ್ದ 243  ಬಿಬಿಎಂಪಿ ವಾರ್ಡ್‌ಗಳನ್ನು 225 ವಾರ್ಡ್‌ಗಳಿಗೆ ಇಳಿಕೆ ಮಾಡಿ ವಾರ್ಡ್‌ ಪುನರ್ ವಿಂಗಡಣೆಯ ಅಂತಿಮ ಅಧಿಸೂಚನೆ ಪ್ರಕಟ ಮಾಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಅಂತಿಮಗಿಳಿಸಿ  ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ. ಮುಂದುವರಿದು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಪರಿಶೀಲನಾ ಸಮಿತಿಯು ಮಾಡಿರುವ ಶಿಫಾರಸ್ಸುಗಳನ್ನು ಸರ್ಕಾರವು ಒಪ್ಪಿರುತ್ತದೆ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಅಧಿನಿಯಮ, 2020ರ ಕಲಂ 7ರಲ್ಲಿ ಪುದತ್ತವಾದ ಅಧಿಕಾರವನ್ನು ಚಲಾಯಿಸಿ, 2011ರ ಜನಗಣತಿಯ ಆಧಾರದ ಮೇರೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಈ ಕೆಳಕಂಡಂತೆ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದೆ.

ಕೋಲಾರ ಜನತಾದರ್ಶನದಲ್ಲಿ ಗೂಂಡಾವತಾರ ಪ್ರದರ್ಶಿಸಿದ ಜನಪ್ರತಿನಿಧಿಗಳು: ವೇದಿಕೆಯಲ್ಲಿ ಬೋ... ಮಗನೆ ಎಂದು ಬೈಯೋದಾ!

ಕಳೆದ ಎರಡು ತಿಂಗಳ ಹಿಂದೆ ಕರಡು ಪ್ರಕಟಿಸಿ, ಆಕ್ಷೇಪಣೆ ಆಹ್ವಾನಿಸಲಾಗಿತ್ತು. ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಅಂತಿಮ ಅಧಿಸೂಚನೆ ಪ್ರಕಟ ಮಾಡಲಾಗಿದೆ. ಬಿಬಿಎಂಪಿ ಚುನಾವಣೆಗೆ ಒಂದು ಹೆಜ್ಜೆ ಮುಂದೆ ಇಟ್ಟ ಸರ್ಕಾರ, ಇನ್ನೇನಿದ್ದರೂ ಮೀಸಲಾತಿ ನಿಗದಿ ಜವಾಬ್ದಾರಿ ಸರ್ಕಾರ ಮಾಡಬೇಕಿದೆ. ಇನ್ನು ವಾರ್ಡ್‌ವಾರು ಎರಡು ತಿಂಗಳಲ್ಲಿ ಮೀಸಲಾತಿ ರಚನೆ ಮಾಡಿದಲ್ಲಿ ಚುನಾವಣೆಗೆ ಸಿದ್ಧತೆ ಅಂತಿಮಗೊಂಡಂತೆ ಆಗಲಿದೆ. ಆದರೆ, ಬಿಬಿಎಂಪಿ ಚುನಾವಣೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುವ ವೇಳೆಗೆ ಲೋಸಕಭಾ ಚುನಾವಣೆ 2024 ಬರಲಿದ್ದು, ಬಿಬಿಎಂಪಿ ವಾರ್ಡ್‌ ಮೀಸಲಾತಿ ಜಾರಿಗೆ ಮತ್ತೊಂದು ತಕರಾರು ತಂದು ಮುಂದೂಡಿಕೆ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

  • ವಾರ್ಡ್‌ಗಳ ವಿವರ ಈ ಕೆಳಗಿನಂತಿದೆ: 
  • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡುಗಳ ಸಂಖ್ಯೆ: 225 (ಎರಡು ನೂರ ಇಪ್ಪತ್ತೈದು)
  • ಪ್ರತಿ ವಾರ್ಡಿನ ಸಂಖ್ಯೆ ಮತ್ತು ವಾರ್ಡುಗಳ ಹೆಸರುಗಳನ್ನು ಅನುಬಂಧ-1 (ಕನ್ನಡ ಭಾಷೆಯಲ್ಲಿ) ಕಾಲಂ-2ರಲ್ಲಿ ಹಾಗೂ ಅನುಬಂಧ-2 (ಆಂಗ್ಲ ಭಾಷೆಯಲ್ಲಿ) ಕಾಲಂ-2 ರಲ್ಲಿ ಒದಗಿಸಲಾಗಿದೆ.
  • ಪ್ರತಿ ವಾರ್ಡುಗಳ ವ್ಯಾಪ್ತಿಯ ಗಡಿಗಳ ಚೆಕ್ಕುಬಂದಿಯ ವಿವರಗಳನ್ನು ಅನುಬಂಧ-1 ಮತ್ತು ಅನುಬಂಧ-2 ರ ಕಾಲಂ-4ರಲ್ಲಿ ನಿಗಧಿಪಡಿಸಲಾಗಿದೆ.

ವಿಧಾನಸಭಾ ಕ್ಷೇತ್ರವಾರು ರಚಿಸಲಾದ ಬಿಬಿಎಂಪಿ ವಾರ್ಡ್‌ಗಳ ಪಟ್ಟಿ ಇಲ್ಲಿದೆ: 

Latest Videos
Follow Us:
Download App:
  • android
  • ios