Asianet Suvarna News Asianet Suvarna News

ಸಿಎಂ, ಡಿಸಿಎಂ ಹಿಂಬಾಲಕ ಅನ್ನೋ ಕಾರಣಕ್ಕೆ ರೌಡಿ‌ ಶೀಟರ್‌ಗೂ ಸಿಕ್ಕಿತಾ ರಾಜ್ಯೋತ್ಸವ ಪ್ರಶಸ್ತಿ!

ಕ್ರಿಮಿನಲ್ ಹಿನ್ನೆಲೆ ಕಾರಣಕ್ಕೆ ಹಲವರನ್ನು ಪ್ರಶಸ್ತಿಗೆ ಪರಿಗಣಿಸದ ಸರ್ಕಾರ. ಆದರೆ ಸಿಎಂ ಡಿಸಿಎಂ ಹಿಂಬಾಲಕ ಎಂಬ ಕಾರಣಕ್ಕೆ ರೌಡಿಶೀಟರ್‌ಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿತಾ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. 

Rowdyism by Congress leader in Mysore Rajyotsava award for rowdy sheeter too rav
Author
First Published Nov 20, 2023, 10:57 AM IST

ಮೈಸೂರು (ನ.20): ಅಪ್ಪ ನೋಡಿದ್ರೆ ಸಿಎಂ- ಡಿಸಿಎಂ ಹಿಂದೆ ಓಡಾಡ್ತಾರೆ. ಇತ್ತ ಮಗ ಊರಲೆಲ್ಲ ಪುಂಡಾಟ ಮಾಡ್ತಾರೆ. ಮೈಸೂರಿನ ಮೊಬೈಲ್ ಅಂಗಡಿಯೊಂದಕ್ಕೆ ನುಗ್ಗಿ ಪುಂಡಾಟ ನಡೆಸಿರುವ ನೆವೆಲ್ ಅಶೋಕ್. ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ನೆವಲ್ ಅಶೋಕ್. ಮೈಸೂರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿರುವ ತಂದೆ ಅಶೋಕ್. ಅಪ್ಪ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಡಿಸಿಎಂ ಜೊತೆ ಓಡ್ತಿದ್ದಾರೆ. ನಿನ್ನೆ ಸಿಎಂ ಮೈಸೂರಿಗೆ ಬಂದಾಗ ಪಕ್ಕದದಲ್ಲೇ ಇದ್ದ ನೆವೆಲ್ ತಂದೆ. ಸಿಎಂ ಜೊತೆಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ತಂದೆ. ಇತ್ತ ಪುಂಡ ಮಗ  ಅಂಗಡಿಗೆ ನುಗ್ಗಿ ಯುವಕನ ಮೇಲೆ ಹಲ್ಲೆ ನಡೆಸಿದ್ದಾನೆ. ರಾಜಕೀಯ ಹಿನ್ನೆಲೆ ಇರುವ ನೇವಲ್ ಈ ಹಿಂದೆ ಕೂಡ ಇಂತಹದೇ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಇದೀಗ ಹಲ್ಲೆ ಪ್ರಕರಣದ ಬಳಿಕ ಒಂದೊಂದೇ ಪ್ರಕರಣಗಳು ಹೊರಬರುತ್ತಿವೆ.

ರಾಜ್ಯೋತ್ಸವ ವೇಳೆ ಪುಂಡಾಟ; 18 ಎಂಇಎಸ್ ಕಾರ್ಯಕರ್ತರ ಮೇಲೆ ಬಿತ್ತು ಕೇಸ್!

ರೌಡಿ‌ ಶೀಟರ್ ಆಗಿದ್ರು ಸಿಕ್ತು ರಾಜ್ಯೋತ್ಸವ ಪ್ರಶಸ್ತಿ!

ಕಲೆ, ಸಾಹಿತ್ಯ, ರಂಗಭೂಮಿ, ಸಮಾಜಸೇವೆ.. ಅತ್ಯುನ್ನತ ಸಾಧನೆ ಮಾಡಿದ ನಿಷ್ಕಳಂಕ ವ್ಯಕ್ತಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸುವುದು ನೋಡಿದ್ದೀರಿ. ಆದರೆ ರೌಡಿ ಶೀಟರ್ ಆಗಿದ್ದರೂ ಪುಂಡ ನೆವೆಲ್ ಅಶೋಕ್ ಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ ಎಂದರೆ ಅಚ್ಚರಿ ಮತ್ತು ಬೇಸರ ಒಟ್ಟೊಟ್ಟಿಗೆ ಆಗುತ್ತದೆ.

ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ರೌಡಿ‌ ಶೀಟರ್‌ ಗೆ ರಾಜ್ಯೋತ್ಸವ ಪ್ರಶಸ್ತಿ. ಮಗನ ಪುಂಡಾಟದಿಂದ ಒಂದೊಂದಾಗಿ ಹೊರ ಬರುತ್ತಿವೆ‌ ಪ್ರಕರಣಗಳು. ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟ ಮೈಸೂರು ಜಿಲ್ಲಾ‌ ಕನ್ನಡ ರಾಜ್ಯೋತ್ಸವ ಪ್ರಶಸ್ತಿ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲಾಗುತ್ತದೆ ಎಂದು ಆರೋಪ ಕೇಳಿಬಂದಿತ್ತು. ಇದೀಗ ರೌಡಿಶೀಟರ್ ಒಬ್ಬನಿಗೆ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದಾನೆಂಬ ಕಾರಣಕ್ಕೆ ನೀಡಿರುವುದು ಅನುಮಾನಗಳಿಗೆ ಇಂಬು ಕೊಟ್ಟಂತಾಗಿದೆ. ಕಾಂಗ್ರೆಸ್ ಮುಖಂಡನಾಗಿರುವ ಅಶೋಕ್‌ ಅಲಿಯಾಸ್ ಕುಳ್ಳ‌ ಅಶೋಕ್. ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ರೌಡಿ‌ ಶೀಟರ್ ಆಗಿರುವ ಅಶೋಕ್. ಮೊನ್ನೆ ಮೊನ್ನೆಯಷ್ಟೆ ಅಶೋಕ್ ಪುತ್ರ ನೇವಲ್ ಅಶೋಕ್ ನಿಂದ ಪುಂಡಾಟ ಪ್ರಕರಣ ಬೆಳಕಿಗೆ ಬಂದಿತ್ತು. ತಂದೆಯಾಗಿರುವ ಕಾಂಗ್ರೆಸ್ ಮುಖಂಡನಾಗಿರುವ ಅಶೋಕ್ ಹೆಸರಿನಲ್ಲೂ ಇದೆ ರೌಡಿ ಶೀಟರ್.

ಕಂಠಪೂರ್ತಿ ಕುಡಿದು ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರನ ರಂಪಾಟ

ಕ್ರಿಮಿನಲ್ ಹಿನ್ನೆಲೆ ಕಾರಣಕ್ಕೆ ಹಲವರನ್ನು ಪ್ರಶಸ್ತಿಗೆ ಪರಿಗಣಿಸದ ಸರ್ಕಾರ. ಆದರೆ ಸಿಎಂ ಡಿಸಿಎಂ ಹಿಂಬಾಲಕ ಎಂಬ ಕಾರಣಕ್ಕೆ ರೌಡಿಶೀಟರ್‌ಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿತಾ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. 

Follow Us:
Download App:
  • android
  • ios