ರಾಜ್ಯೋತ್ಸವ ವೇಳೆ ಪುಂಡಾಟ; 18 ಎಂಇಎಸ್ ಕಾರ್ಯಕರ್ತರ ಮೇಲೆ ಬಿತ್ತು ಕೇಸ್!

ಕನ್ನಡ ರಾಜ್ಯೋತ್ಸವ ಅಂದ್ರೆ ಅದು ಕನ್ನಡಿಗರ ಹಬ್ಬ. ರಾಜ್ಯಾದ್ಯಂತ ಕನ್ನಡಿಗರ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದರೆ, ಇತ್ತ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ದಿನವೇ ನಾಡದ್ರೋಹಿ ಎಂಇಎಸ್ ಪುಂಡರು ನಿಷೇಧದ ಮಧ್ಯೆಯೂ ಪುಂಡಾಟ ಮೆರೆದಿದ್ದಾರೆ. 

Black Day celebration in Belgaum FIR against 18 MES activists rav

ಬೆಳಗಾವಿ (ನ.3): ಕನ್ನಡ ರಾಜ್ಯೋತ್ಸವ ಅಂದ್ರೆ ಅದು ಕನ್ನಡಿಗರ ಹಬ್ಬ. ರಾಜ್ಯಾದ್ಯಂತ ಕನ್ನಡಿಗರ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದರೆ, ಇತ್ತ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ದಿನವೇ ನಾಡದ್ರೋಹಿ ಎಂಇಎಸ್ ಪುಂಡರು ನಿಷೇಧದ ಮಧ್ಯೆಯೂ ಪುಂಡಾಟ ಮೆರೆದಿದ್ದಾರೆ. 

ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಣೆಗೆ ಬೆಳಗಾವಿ ಜಿಲ್ಲಾಡಳಿತ ನಿಷೇಧ ಹೇರಿತ್ತು. ಹೀಗಿದ್ರೂ ಕರಾಳ ದಿನ ಆಚರಿಸಿ ನಾಡದ್ರೋಹಿತನ ಮೆರೆದಿದ್ದ  ಬರೊಬ್ಬರಿ 18 ಪುಂಡರ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿದ್ದಾರೆ.

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ‌ಆಗಿ ಈ ವರ್ಷ 50 ವಸಂತಗಳೇ ಕಳೆದಿವೆ. ಈ ಕಾರಣಕ್ಕೆ ಇಡೀ ರಾಜ್ಯವೇ ಸುವರ್ಣ ಸಂಭ್ರಮದಲ್ಲಿದೆ. ಇನ್ನು ಪ್ರತಿವರ್ಷ ಗಡಿನಾಡು ಬೆಳಗಾವಿಯಲ್ಲಿ ರಾಜ್ಯೋತ್ಸವ ಅದ್ಧೂರಿಯಾಗಿಯೇ ಆಚರಿಸಲಾಗುತ್ತದೆ. ಈ ಸಲ ಸುವರ್ಣ ಸಂಭ್ರಮ ಎನ್ನುವ ಕಾರಣಕ್ಕೆ ಈ ಸಲ ಅದ್ಧೂರಿತನ ಜಾಸ್ತಿಯೇ ಆಗಿತ್ತು. ಹೀಗೆ ಎರಡು ದಿನಗಳ ಹಿಂದೆ ಬೆಳಗಾವಿಯ ಕನ್ನಡಿಗರು ರಾಜ್ಯೋತ್ಸವಕ್ಕೆ ಅಣಿಯಾಗಿದ್ದರು. ಲಕ್ಷಾಂತರ ಕನ್ನಡಿಗರು ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ ಬಂದು ನಾಡ  ಹಬ್ಬವನ್ನು  ಅದ್ದೂರಿಯಿಂದ ಆಚರಿಸಲು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದರು. ಆದರೆ ನಾಯಿ ಬಾಲ ಡೊಂಕೆ ಎಂಬಂತೆ ಇತ್ತ ನಾಡದ್ರೋಹಿ ಎಂಇಎಸ್ ಪುಂಡರು ಕರಾಳ ದಿನಾಚರಣೆಗೆ ಮಾಡಿದರು. ಜಿಲ್ಲಾಡಳಿತದ ನಿಷೇಧದ ಮಧ್ಯೆಯೂ ಸಹ ಬೆಳಗಾವಿಯ ಮಾಧವ ನಗರದಿಂದ ಮರಾಠ ಮಂದಿರದವರೆಗೆ ಮೆರವಣಿಗೆ ಮಾಡಿದ್ದ ಎಂಇಎಸ್‌ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪುಂಡಾಟ ಮರೆದಿದ್ದರು. ಸದ್ಯ ಕರಾಳ ದಿನಾಚರಣೆ ಮಾಡಿದ 18 ಜನ ಎಂಇಎಸ್ ಪುಂಡರ ಮೇಲೆ ಮಾರ್ಕೆಟ್ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಅದ್ಧೂರಿ ರಾಜ್ಯೋತ್ಸವಕ್ಕೆ ಸಿದ್ಧತೆ ; 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ: ಡಿಸಿ ನಿತೇಶ್ ಪಾಟೀಲ

ಪ್ರತಿ ವರ್ಷ ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಿಸುವ ಎಂಇಎಸ್ ಮುಖಂಡರು ಚಳಿಗಾಳದ ಅಧಿವೇಶನ ಸಂದರ್ಭದಲ್ಲಿ ಮಹಾರಾಷ್ಟ್ರದ ಸಚಿವರು ಮತ್ತು ಸಂಸದರನ್ನು ಕರೆಸಿ ಮಹಾಮೇಳಾವ್ ಸಹ ಆಚರಣೆ ಮಾಡುತ್ತಲೇ ಬಂದಿದ್ದಾರೆ. ಸರ್ಕಾರದ ಆದೇಶಕ್ಕೂ ಸಹ ಕಿಮ್ಮತ್ತು ಕೊಡದೆ ಕರಾಳ ದಿನಾಚಣೆಯಲ್ಲಿ ಪಾಲ್ಗೊಂಡು ಬೀದರ್, ಬಾಲ್ಕಿ, ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿ ಪುಂಡಾಟಿಕೆ ಮರೆದಿದ್ದರು. ಮಾಲೋಜಿರಾವ್ ಅಷ್ಟೇಕರ್, ಮನೋಹರ್ ಕಿಣೇಕರ್, ರಂಜಿತ್ ಚವ್ಹಾನ್, ಸರಿತಾ ಪಾಟೀಲ್, ಸಾರಿಕಾ ಪಾಟೀಲ್, ಅಂಕುಷ್ ಕೇಸರಕರ್ ಸೇರಿದಂತೆ 18 ಜನರ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಬೆಳಗಾವಿ ಗಡಿ ಪ್ರವೇಶಿಸದಂತೆ 3 ಮಹಾ ಸಚಿವರು, ಒಬ್ಬ ಸಂಸದರಿಗೆ ನಿರ್ಬಂಧ

ಕ್ಯಾಮರಾಮ್ಯಾನ್ ಅಡಿವೇಶ ಪಾಟೀಲ ಜೊತೆಗೆ ಅನಿಲ್ ಕಾಜಗಾರ ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಳಗಾವಿ

Latest Videos
Follow Us:
Download App:
  • android
  • ios