ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಮತ್ತು ವಿನಯ್, ಕಾಟೇರ ಸಿನಿಮಾದ ರೀತಿಯಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ನಂತರ, ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳದಲ್ಲಿಯೇ ಆ ಮಚ್ಚನ್ನು ಬಿಸಾಡಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಿ ಇಬ್ಬರನ್ನೂ ಬಂಧಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಮಚ್ಚು ಸಿಗದ ಕಾರಣ ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಸಾಕ್ಷ್ಯ ನಾಶದ ಕೇಸ್ ದಾಖಲಾಗುವ ಸಾಧ್ಯತೆ ಇದೆ.

ಬೆಂಗಳೂರು (ಏ.07): ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಇಬ್ಬರೂ ಕಾಟೇರ ಸಿನಿಮಾದಲ್ಲಿ ನಟ ದರ್ಶನ್ ಮಚ್ಚು ಹಿಡಿದ ರೀತಿಯಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಈ ರೀಲ್ಸ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸುತ್ತಿದ್ದಂತೆ ಅದನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿ, ಮೃತದೇಹ ಬೀಸಾಡಿದ್ದ ಜಾಗದಲ್ಲಿ ಬೀಸಾಡಿ ಬಂದಿದ್ದಾರೆ. ಇದಾದ ನಂತರ ಇಬ್ಬರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದೀಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.

ಚಿತ್ರದುರ್ಗ ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಮೃತದೇಹವನ್ನು ಸುಮನಹಳ್ಳಿ ಮೇಲ್ಸೇತುವೆ ಬಳಿ ಹಾದು ಹೋಗಿರುವ ರಾಜಕಾಲುವೆ ಪಕ್ಕದಲ್ಲಿ ಅನಾಥ ಶವದಂತೆ ಬೀಸಾಡಲಾಗಿತ್ತು. ಈ ಆರೋಪದಲ್ಲಿ ನಟ ದರ್ಶನ್ ತೂಗುದೀಪ ಸೇರಿ ಸುಮಾರು 14 ಜನರು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗಿದ್ದಾರೆ. ಇತ್ತೀಚೆಗೆ ದರ್ಶನ್ ಅವರ ಅದ್ಧೂರಿ ಯಶಸ್ಸು ಕಂಡ ಸಿನಿಮಾ ಕಾಟೇರ ಸಿನಿಮಾದಲ್ಲಿ ಮಚ್ಚು ಹಿಡಿದು ನಟಿಸಿದ್ದರು. ಈ ದೃಶ್ಯವನ್ನು ರಿಯಾಲಿಟಿ ಶೋ ಒಂದರಲ್ಲಿ ರಿಕ್ರಿಯೇಟ್ ಮಾಡುವುದಕ್ಕೆ ರಜತ್ ಕಿಶನ್ ದರ್ಶನ್ ಸ್ಟೈಲ್‌ನಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಈ ವಿಡಿಯೋದಲ್ಲಿ ಪುಷ್ಪ ಸಿನಿಮಾದಂತೆ ಅಲ್ಲು ಅರ್ಜುನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ವಿನಯ್ ಗೌಡ ಕೂಡ ಭಾಗಿಯಾಗಿದ್ದಾರೆ.

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮುಕ್ತಾಯದ ನಂತರ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಡ ಅವರು ಗರ್ಲ್ಸ್ ವರ್ಸಸ್ ಬಾಯ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದು, ವಿಡಿಯೋ ಶೂಟಿಂಗ್ ಸೆಟ್‌ನ ಹೊರಗೆ ಬಂದು ಸಾರ್ವಜನಿಕ ಸ್ಥಳದಲ್ಲಿ ಮಚ್ಚು ಹಿಡಿದು ಖಾಸಗಿಯಾಗಿ ರೀಲ್ಸ್ ಮಾಡಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಸಾರ್ವಜನಿಕರ ವಿರೋಧ ವ್ಯಕ್ತವಾಗಿದ್ದು, ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ನೊಟೀಸ್ ನೀಡಿ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಪೊಲೀಸ್ ಕೇಸಿಗೆ ಹೆದರಿದ ಆರೋಪಿಗಳು ತಾವಯ ರೀಲ್ಸ್ ಮಾಡಿದ್ದ ಮಚ್ಚನ್ನು ಈ ಹಿಂದೆ ನಟ ದರ್ಶನ್ ಅಂಡ್‌ ಗ್ಯಾಂಗ್‌ನಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿ ಮೃತದೇಹ ಬೀಸಾಡಿದ್ದ ಸುಮನಹಳ್ಳಿ ಫ್ಲೈಓವರ್ ಬಳಿ ಇರುವ ರಾಜಕಾಲುವೆ ಜಾಗದಲ್ಲಿಯೇ ಬೀಸಾಡಿ ಬಂದಿದ್ದಾರೆ.

ಇದನ್ನೂ ಓದಿ: ನಟನಾಗುವ ಮೊದಲೇ ಜೈಲೂಟ ಮಾಡಿಬಂದ ದರ್ಶನ್ ಅಭಿಮಾನಿ ರಜತ್ ಕಿಶನ್! ರೌಡಿಶೀಟರ್ ತೆರೆಯಲು ಪೊಲೀಸರ ಚಿಂತನೆ!

ಮಚ್ಚು ಹಿರಿದು ರೀಲ್ಸ್ ಮಾಡಿದ್ದ ಕೇಸಿನಲ್ಲಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದ ವೇಳೆ, ಪೊಲೀಸರು ಮಚ್ಚು ಒಪ್ಪಿಸುವಂತೆ ಕೇಳಿದಾದ ಅದು ಫೈಬರ್‌ನಿಂದ ಮಾಡಿದ್ದು ಎಂದು ಹೇಳಿದ್ದಾರೆ. ಆಗ ಇಬ್ಬರನ್ನೂ ಮಾ.25ರಂದು ಬಂಧಿಸಿದ ಪೊಲೀಸರು ಆಯುಧವನ್ನು ತಂದುಕೊಡುವಂತೆ ಕೇಳಿದಾಗ ರಜತ್ ಅವರ ಹೆಂಡತಿ ಅಕ್ಷಿತಾ ಅವರು ಅದೇ ತರಹದಲ್ಲಿ ಮಾಡಿಸಿದ ಒಂದು ಫೈಬರ್ ಮಚ್ಚನ್ನು ರಾತ್ರಿ ಪೊಲೀಸರಿಗೆ ಒಪ್ಪಿಸಿದ್ದರು. ಆಗ ಪೊಲೀಸರು ಇಬ್ಬರನ್ನೂ ಬಿಟ್ಟು ಕಳುಹಿಸಿದ್ದರು. ಆದರೆ, ಬೆಳಗ್ಗೆ ರೀಲ್ಸ್‌ನಲ್ಲಿದ್ದ ಮಚ್ಚು ಹಾಗೂ ಪೊಲೀಸರಿಗೆ ಒಪ್ಪಿಸಿದ ಮಚ್ಚನ್ನು ತಾಳೆ ಮಾಡಿದಾಗ ಹೋಲಿಕೆ ಆಗಿಲ್ಲ. ಪುನಃ ಇಬ್ಬರನ್ನೂ ವಶಕ್ಕೆ ಪಡೆದು ಬಂಧನ ಮಾಡಲಾಗಿತ್ತು. ನಂತರ, ಮಚ್ಚನನ್ನು ವಶಕ್ಕೆ ಪಡೆಯಲು ಶೂಟಿಂಗ್ ಸೆಟ್‌ಗೆ ಹೋದರೆ ಅಲ್ಲಿಯೂ ಮಚ್ಚು ಇರಲಿಲ್ಲ. ನಂತರ, ಇಬ್ಬರನ್ನೂ ಜೈಲಿಗೆ ಕಳುಹಿಸಲಾಗಿತ್ತು. ಆದರೆ, ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದಾರೆ.

ಇದೀಗ ರೀಲ್ಸ್ ಮಾಡುವುದಕ್ಕೆ ಬಳಸಿದ್ದ ಮಚ್ಚನ್ನು ರಾಜಕಾಲುವೆಗೆ ಬೀಸಾಡಿದ್ದಾಗಿ ಬಾಯಿ ಬಿಟ್ಟಿದ್ದಾರೆ. ಅಲ್ಲಿಗೂ ಇಬ್ಬರು ಆರೋಪಿಗಳನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರ್ ಮಾಡಿ ಶೋಧಿಸಿದರೂ ಅಲ್ಲಿ ಮಚ್ಚು ಪತ್ತೆಯಾಗಿಲ್ಲ. ಇದೀಗ ಆರೋಪಿಗಳು ಪೊಲೀಸರಿಗೆ ಒಪ್ಪಿಸಿದ ಮಚ್ಚನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಆಗಲೂ ಈ ಮಚ್ಚು ತಾಳೆ ಆಗದೇ ಹೋದಲ್ಲಿ ಅಕ್ರಮವಾಗಿ ಶಸ್ತ್ರಾಸ್ತ ಸಂಗ್ರಹ ಮತ್ತು ಬಳಕೆ ಕಾಯ್ದೆಯ ಉಲ್ಲಂಘನೆ ಜೊತೆಗೆ ಸಾಕ್ಷ್ಯ ನಾಶ ಕೇಸ್ ಕೂಡ ಹಾಕಿ ಚಾರ್ಜ್‌ ಶೀಟ್ ಸಲ್ಲಿಕೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಎಲ್ರೋ ಆ ಮಚ್ಚು..? ರಜತ್​-ವಿನಯ್​ಗೆ ಖಾಕಿ ಡ್ರಿಲ್! ಮಚ್ಚೇಶ್ವರ ಏನಾದ..? ಪ್ರಶ್ನೆಗೆ ಬ್ಯಾಡ್​ ಬಾಯ್ಸ್ ತಬ್ಬಿಬ್ಬು!