ರಾಯಚೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಯುವತಿಯನ್ನು ಚುಡಾಯಿಸಿದ ಆರೋಪದ ಮೇಲೆ ಮೆಹಬೂಬ್ ಎಂಬ ಯುವಕನನ್ನು ಯುವತಿಯ ಕಡೆಯವರು ಮನೆಗೆ ಕರೆದೊಯ್ದು ಕೋಣೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯ ವೀಡಿಯೋ ವೈರಲ್ ಆಗಿದ್ದು, ಸದರ್‌ ಬಜಾರ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಸ್ಪತ್ರೆಗೆ ಬಂದ ಯುವತಿಗೆ ಚುಡಾಯಿಸಿದ ಮೆಹಾಬೂಬ್

ರಾಯಚೂರು: ಹುಡುಗಿಯನ್ನು ಚುಡಾಯಿಸಿದ್ದಕ್ಕೆ ಯುವಕನನ್ನು ಕೂಡಿ ಹಾಕಿ ಹಲ್ಲೆ ಮಾಡಿದಂತಹ ಘಟನೆ ರಾಯಚೂರು ನಗರದ ಐಡಿಎಂಸಿ ಲೇಔಟ್‌ನಲ್ಲಿ ನಡೆದಿದೆ. ಯುವಕನನ್ನು ಕೋಣೆಯಲ್ಲಿ ಕೂಡಿ ಹಾಕಿ ರೂಮ್‌ನ ಡೋರ್ ಲಾಕ್ ಮಾಡಿದ ಯುವತಿ ಬಳಿಕ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಮೆಹಬೂಬ್ ಯುವತಿಯಿಂದ ಹಲ್ಲೆಗೊಳಗಾದ ಯುವಕ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೆಹಬೂಬ್ ಕೆಲಸ ಮಾಡುತ್ತಿದ್ದ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಗಿದ್ದೇನು?

ಮೆಹಬೂಬ್ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಯುವತಿಯೊಬ್ಬಳು ಚಿಕಿತ್ಸೆಗಾಗಿ ಬಂದಿದ್ದಳು. ಈ ವೇಳೆ ಮೆಹಬೂಬ್ ಆಕೆಗೆ ಚುಡಾಯಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ರಾಯಚೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಹೊರರೋಗಿಗಳ ವಿಭಾಗದಲ್ಲಿ ಕುಳಿತಿದ್ದ ಯುವತಿಗೆ ಯುವಕ ಮೆಹಬೂಬ್ ಕಿಚಾಯಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಯುವತಿ ಕಡೆಯವರು ಮೆಹಬೂಬ್‌ನನ್ನು ಮನೆಗೆ ಎತ್ತು ಹಾಕಿಕೊಂಡು ಹೋಗಿ ಮನೆಯ ಕೋಣೆಯಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಿನ್ನ ಅಕ್ಕನೂ ಇಲ್ಲಿಗೆ ಬಂದಿದ್ದಳು ಆಕೆಯೂ ಚೆನ್ನಾಗಿದ್ದಳು ಎಂದು ಆರೋಪಿ ಹೇಳಿದ್ದಾನೆ ಎಂದು ಯುವತಿಯ ಸೋದರಿ ಹೇಳುತ್ತಿರುವುದು ವೀಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: ಜರ್ಮನಿಯ ಗುರುದ್ವಾರದಲ್ಲಿ ಘರ್ಷಣೆ: ರಕ್ಷಿಸಲು ಬಳಸುವ ಕಿರ್ಪಾನ್ ಆಯುಧದಿಂದಲೇ ರಕ್ತ ಹರಿಸಿದರು: 11 ಜನರಿಗೆ ಗಾಯ

ಇದರಿಂದ ಸಿಟ್ಟಾದ ಯುವತಿ ಕಡೆಯವರು ಮೆಹಬೂಬ್‌ನನ್ನು ಎತ್ತಾಕಿಕೊಂಡು ಹೋಗಿ ಮನೆಯ ಕೋಣೆಯಲ್ಲಿ ಮೊಣಕಾಲಿನಲ್ಲಿ ಕೂರಿಸಿ ಸರಿಯಾಗಿ ಕೆನ್ನೆಗೆ ಬಾರಿಸಿದ್ದಾರೆ. ಹಲ್ಲೆಯ ವೀಡಿಯೋ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಇಲ್ಲ. ಈಗ ಸದರ್‌ ಬಜಾರ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಇದನ್ನೂ ಓದಿ: ಬಳ್ಳಾರಿ: ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಉರುಳಿದ ಕಾರು