ಕಣ್ಣು ಹೊಡೆದು ಚುಡಾಯಿಸಿದ ಕುಡುಕ; ರೊಚ್ಚಿಗೆದ್ದ ಮಹಿಳೆಯಿಂದ ಚಪ್ಪಲಿ ಏಟು!
ಕಣ್ಣು ಹೊಡೆದು ಚುಡಾಯಿಸಿದ ಯುವಕನಿಗೆ ಮಹಿಳೆಯೋರ್ವಳು ನಡುರಸ್ತೆಯಲ್ಲೇ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ವಿಜಯಪುರ ಜಿಲ್ಲೆಯ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
![A woman beats a young drunkard who harassed her in vijayapur bus staion rav A woman beats a young drunkard who harassed her in vijayapur bus staion rav](https://static-gi.asianetnews.com/images/01j4gc2khe6zq3wg8y4t71d92g/1_363x203xt.jpg)
ವಿಜಯಪುರ (ಆ.5): ಕಣ್ಣು ಹೊಡೆದು ಚುಡಾಯಿಸಿದ ಯುವಕನಿಗೆ ಮಹಿಳೆಯೋರ್ವಳು ನಡುರಸ್ತೆಯಲ್ಲೇ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ವಿಜಯಪುರ ಜಿಲ್ಲೆಯ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಸ್ ನಿಲ್ದಾಣದ ಎದುರು ನಿಂತು ಬಸ್‌ನಲ್ಲಿ ಹೋಗುವ ಬರುವ ಮಹಿಳಾ ಪ್ರಯಾಣಿಕರಿಗೆ ಕಣ್ಣು ಹೊಡೆದು ಚುಡಾಯಿಸುತ್ತಿದ್ದ ಕುಡಕ. ಅದೇ ರೀತಿ ಮಹಿಳೆಗೆ ಕಣ್ಣು ಹೊಡೆದು ಕರೆದಿದ್ದಾನೆ. ರೊಚ್ಚಿಗೆದ್ದ ಮಹಿಳೆ ದಬಾಯಿಸಿದ್ದಾಳೆ. ಮಹಿಳೆ ಕೋಪ ಕಂಡು ಓಡಿಹೋಗುತ್ತಿದ್ದ ಕುಡುಕ. ಈ ವೇಳೆ ಕುಡುಕನನ್ನ ಹಿಡಿದು ಮಹಿಳೆಗೆ ಒಪ್ಪಿಸಿದ ಸಾರ್ವಜನಿಕರು. ಚಪ್ಪಲಿಯಿಂದ ಹಿಗ್ಗಾಮುಗ್ಗಾ ಬಾರಿಸಿದ ಮಹಿಳೆ.
ಕುಂದಾಪುರ: ಪತ್ನಿಯ ಕುತ್ತಿಗೆಗೆ ಇರಿದು ಕತ್ತಿ ಹಿಡಿದು ಕುಣಿದಾಡಿದ ಪತಿ!
ಕಣ್ಣು ಹೊಡೆದ ಕುಡುಕ ಯುವಕನಿಗೆ ಚಪ್ಪಲಿಯಿಂದ ಹೊಡೆಯುತ್ತಿರುವ ಮಹಿಳೆ ದೃಶ್ಯ ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆಯಾಗಿದ್ದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೂ ನಾಲ್ಕೇಟು ಬಿಗಿಬೇಕಿತ್ತು ಎಂದಿರೋ ನೆಟ್ಟಿಗರು.
ನಗರ ಬಸ್ ನಿಲ್ದಾಣದಲ್ಲಿ ಪುಂಡುಪೋಕರಿಗಗಳು ಕಂಠಪೂರ್ತಿ ಕುಡಿದು ಬಂದು ಮಹಿಳೆಯರಿಗೆ ಶಾಲಾ ವಿದ್ಯಾರ್ಥಿಗಳಿಗೆ ದಿನನಿತ್ಯ ಕಿರುಕುಳ ನೀಡುತ್ತಿರುವ ದೂರುಗಳು ಕೇಳಿಬಂದಿವೆ. ಕೇಂದ್ರ ಬಸ್ ನಿಲ್ದಾಣದಲ್ಲಿ ಅಗತ್ಯ ಭದ್ರತೆ ಒದಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.