Asianet Suvarna News Asianet Suvarna News

ಹಬ್ಬದ ವೇಳೆ ಬೇಕಾಬಿಟ್ಟಿ ಪ್ರಯಾಣ ದರ ಹೆಚ್ಚಳ: ಖಾಸಗಿ ಬಸ್‌ ಪರ್ಮಿಟ್ ರದ್ದು..!

ಹಬ್ಬದ ಹಬ್ಬದ ಹಿನ್ನೆಲೆಯಲ್ಲಿ ದುಬಾರಿ ಪ್ರಯಾಣ ದರ ವಸೂಲಿ ಮಾಡುವ ಖಾಸಗಿ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ 10 ತಂಡಗಳನ್ನು ರಚಿಸಿ ವಿವಿಧ ಕಡೆಗಳಲ್ಲಿ ತಪಾಸಣಾ ಕಾರ್ಯ ನಡೆಸಲಾಗಿದ್ದು, ದುಬಾರಿ ಪ್ರಯಾಣ ದರ ಪಡೆದ ಬಸ್ ಗಳಿಗೆ ದಂಡ ವಿಧಿಸಿ, ಪರ್ಮಿಟ್ ರದ್ದು ಮಾಡಲಾಗುತ್ತಿದೆ: ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಶೋಭಾ
 

private bus permit Cancellation for Fare increase during festival in Bengaluru grg
Author
First Published Sep 5, 2024, 9:05 AM IST | Last Updated Sep 5, 2024, 9:05 AM IST

ಬೆಂಗಳೂರು(ಸೆ.05):  ಗೌರಿ-ಗಣೇಶ ಹಬ್ಬ ಹಿನ್ನೆಲೆಯಲ್ಲಿ ಬೇಕಾಬಿಟ್ಟಿಯಾಗಿ ಪ್ರಯಾಣ ದರ ಹೆಚ್ಚಳ ಮಾಡಿರುವ ಖಾಸಗಿ ಬಸ್‌ಗಳ ವಿರುದ್ಧ ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಸಾರಿಗೆ ಇಲಾಖೆ 20ಕ್ಕೂ ಹೆಚ್ಚಿನ ಬಸ್‌ಗಳಿಗೆ ದಂಡ ವಿಧಿಸಿದೆ. 

ನಗರದ ಕೇಂದ್ರ ಭಾಗ ಹಾಗೂ ಹೊರವಲಯಗಳಲ್ಲಿ ಬುಧವಾರ ಖಾಸಗಿ ಬಸ್‌ಗಳ ತಪಾಸಣೆ ನಡೆಸಿದ್ದು, ಬೇಕಾಬಿಟ್ಟಿಯಾಗಿ ದರ ಹೆಚ್ಚಳ ಮಾಡಿರುವ ಖಾಸಗಿ ಬಸ್‌ಗಳಿಗೆ ದುಬಾರಿ ದಂಡ ವಿಧಿಸಿದ್ದು, ಪರ್ಮಿಟ್ ರದ್ದುಗೊಳಿಸಲು ನಿರ್ಧರಿಸಲಾಗಿದೆ. 

ದಕ್ಷಿಣ ಭಾರತದ ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡಲು ಬಂದ ಜರ್ಮನಿಯ ಫ್ಲಿಕ್ಸ್ ಬಸ್!

10 ತಂಡಗಳಿಂದ ಕಾರ್ಯಾಚರಣೆ: 

ದುಬಾರಿ ಪ್ರಯಾಣ ದರ ವಸೂಲಿ ಮಾಡಿದ ಖಾಸಗಿ ಬಸ್‌ಗಳ ಪತ್ತೆಗಾಗಿ ಸಾರಿಗೆ ಇಲಾಖೆ ಬುಧವಾರ 10 ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದೆ.ಆನಂದರಾವ್ ವೃತ್ತ, ಮೆಜಿಸ್ಟಿಕ್, ಹೆಬ್ಬಾಳ, ಗೊರಗುಂಟೆಪಾಳ್ಯ, ಕಲಾಸಿಪಾಳ್ಯ, ಹೊಸಕೋಟೆ ಟೋಲ್‌ ಬಳಿ, ಮೈಸೂರು ರಸ್ತೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಪರಿಶೀಲನಾ ತಂಡವು ಬಸ್‌ಗಳಲ್ಲಿ ಪರಿಶೀಲನೆ ನಡೆಸಿವೆ. ಈ ವೇಳೆ ಪ್ರಯಾಣಿಕರಿಂದ ಪ್ರಯಾಣ ದರದ ಮಾಹಿತಿ ಪಡೆದುಕೊಂಡಿದ್ದು, ಮಾಮೂಲಿಗಿಂತ ಎರಡೂರು ಪಟ್ಟು ಹೆಚ್ಚಿನ ಪ್ರಯಾಣ ದರ ಪಡೆದ ಬಸ್‌ಗಳ ವಿರುದ್ಧ ಕ್ರಮ ಕೈಗೊಂಡು, 20ಕ್ಕೂ ಹೆಚ್ಚಿನ ಬಸ್‌ಗಳಿಗೆ ದಂಡ ವಿಧಿಸಿವೆ. 

ಕೇರಳ ಬಸ್ ಕಂಡಕ್ಟರ್ ಕ್ವಿಕ್ ರಿಯಾಕ್ಷನ್‌: ಬದುಕುಳಿದ ಪ್ರಯಾಣಿಕ: ವೀಡಿಯೋ ಸಖತ್‌ ವೈರಲ್

ಇನ್ನೂ ಎರಡು ದಿನ ಕಾರ್ಯಾಚರಣೆ: 

ಖಾಸಗಿ ಬಸ್ ಗಳ ವಿರುದ್ಧ ಕಾರ್ಯಾಚರಣೆಯನ್ನು ಮಂಗಳವಾರ ರಾತ್ರಿಯಿಂದಲೇ ಆರಂಭಿಸಲಾಗಿದ್ದು, ಬುಧವಾರವೂ ಇದನ್ನು ಮುಂದುವರಿಸಲಾಗಿತ್ತು. ಗುರುವಾರ ಮತ್ತು ಶುಕ್ರವಾರ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಿರಲಿದ್ದು, ಖಾಸಗಿ ಬಸ್‌ಗಳ ಸಂಖ್ಯೆಯಲ್ಲೂ ಏರಿಕೆಯಾಗಲಿದೆ. ಈ ಎರಡು ದಿನಗಳು ಬಸ್‌ಗಳ ಪರಿಶೀಲನಾ ಕಾರ್ಯವನ್ನು ಮತ್ತಷ್ಟು ಹೆಚ್ಚಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ಹಬ್ಬದ ಹಬ್ಬದ ಹಿನ್ನೆಲೆಯಲ್ಲಿ ದುಬಾರಿ ಪ್ರಯಾಣ ದರ ವಸೂಲಿ ಮಾಡುವ ಖಾಸಗಿ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ 10 ತಂಡಗಳನ್ನು ರಚಿಸಿ ವಿವಿಧ ಕಡೆಗಳಲ್ಲಿ ತಪಾಸಣಾ ಕಾರ್ಯ ನಡೆಸಲಾಗಿದ್ದು, ದುಬಾರಿ ಪ್ರಯಾಣ ದರ ಪಡೆದ ಬಸ್ ಗಳಿಗೆ ದಂಡ ವಿಧಿಸಿ, ಪರ್ಮಿಟ್ ರದ್ದು ಮಾಡಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಶೋಭಾ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios