ಕೇರಳ ಬಸ್ ಕಂಡಕ್ಟರ್ ಕ್ವಿಕ್ ರಿಯಾಕ್ಷನ್‌: ಬದುಕುಳಿದ ಪ್ರಯಾಣಿಕ: ವೀಡಿಯೋ ಸಖತ್‌ ವೈರಲ್

ಕೇರಳ ಬಸ್ ಕಂಡಕ್ಟರ್‌ನೋರ್ವ ಸಮಯ ಪ್ರಜ್ಞೆ ಮೆರೆದು ಪ್ರಯಾಣಿಕನೋರ್ವನ ಜೀವ ಉಳಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕಂಡಕ್ಟರ್‌ನ ಸಮಯ ಪ್ರಜ್ಞೆಗೆ ಈಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 

Kerala Bus Conductor Quick action Passenger Survived Video Goes Viral akb

ತಿರುವನಂತಪುರಂ: ಕೇರಳ ಹಾಗೂ ನಮ್ಮ ದಕ್ಷಿಣ ಕನ್ನಡ ಮಂಗಳೂರು, ಉಡುಪಿ ರಸ್ತೆಯಲ್ಲಿ ಸಾಗುವ ಖಾಸಗಿ ಬಸ್‌ಗಳು ಅಲ್ಲಿನ ಜೀವನಾಡಿ ಜೊತೆಗೆ ಅತೀಯಾದ ವೇಗಕ್ಕೆ ಸಡನ್‌ ಆಗಿ ಬೀಳುವ ಬ್ರೇಕ್‌ಗೆ ಸಖತ್ ಫೇಮಸ್, ಅಪರೂಪಕ್ಕೆ ಒಮ್ಮೆ ಈ ಬಸ್‌ನಲ್ಲಿ ಹೋದವರು ಮುಗ್ಗರಿಸುದಂತೂ ಪಕ್ಕ. ಆದರೆ ಈ ಬಸ್‌ನ ಚಾಲಕರು ಹಾಗೂ ಕಂಡಕ್ಟರ್‌ಗಳು ಬಹಳ ನಿಪುಣರು. ಎಷ್ಟೇ ವೇಗವಾಗಿ ಸಾಗಿದರು ಅವರು ಬ್ಯಾಲೆನ್ಸ್ ತಪ್ಪೋದಿಲ್ಲ, ಜೊತೆಗೆ ಸಮಯಪ್ರಜ್ಞೆ ಮೆರೆಯುವುದರದಲ್ಲು ಎತ್ತಿದ ಕೈ. ಅದೇ ರೀತಿ ಈಗ ಕೇರಳ ಬಸ್ ಕಂಡಕ್ಟರ್‌ನೋರ್ವ ಸಮಯ ಪ್ರಜ್ಞೆ ಮೆರೆದು ಪ್ರಯಾಣಿಕನೋರ್ವನ ಜೀವ ಉಳಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕಂಡಕ್ಟರ್‌ನ ಸಮಯ ಪ್ರಜ್ಞೆಗೆ ಈಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 

ವೀಡಿಯೋದಲ್ಲಿ ಕಾಣಿಸುವಂತೆ ಬಸ್‌ ಹಿಂಭಾಗಿನ ಸಮೀಪದ ಸೀಟಿಗೆ ಒತ್ತಿ ನಿಂತುಕೊಂಡು ಬಸ್ ಕಂಡಕ್ಟರ್ ಟಿಕೆಟ್ ನೀಡುತ್ತಿರುವ ವೇಳೆ ಬಸ್‌ ಸಡನ್ ಬ್ರೇಕ್ ಹಾಕಿದೆ. ಈ ವೇಳೆ ಬಾಗಿಲ ಬಳಿ ನಿಂತಿದ್ದ ಯುವಕನೋರ್ವ ಮುಗ್ಗರಿಸಿ ಇನ್ನೇನು ತೆರೆದಿದ್ದ ಬಾಗಿಲಿನಲ್ಲಿ ಕೆಳಗೆ ಬೀಳಬೇಕು ಅನ್ನುವಷ್ಟರಲ್ಲಿ ಕಂಡಕ್ಟರ್ ತನ್ನ ಒಂದೇ ಕೈನಿಂದ ಆತನನ್ನು ತಾನು ನಿಂತಲಿಂದ ಒಂದು ಚೂರು ಅತ್ತಿತ್ತ ಅಲುಗದಂತೆ ಹಿಡಿದು ಆತನ ಪ್ರಾಣ ಕಾಪಾಡಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಒಂದು ವೇಳೆ ಕಂಡಕ್ಟರ್ ಆತನ ಕೈ ಹಿಡಿಯದೇ ಹೋದರೆ ಆತ ತೆರೆದ ಬಾಗಿಲಿನ ಮೂಲಕ ಬಸ್ಸಿನಿಂದ ಕೆಳಗೆ ಬಿದ್ದು ಅವಾಂತರ ಸೃಷ್ಟಿಯಾಗುತ್ತಿದ್ದುದ್ದಂತು ಪಕ್ಕ. ಆದರೆ ಇಲ್ಲಿ ಕಂಡಕ್ಟರ್‌ನ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತವಾಗದಂತೆ ಆತ ಪಾರಾಗಿದ್ದಾನೆ. 

ಸಿಗ್ನಲ್ ಹಾರಲು ಹೋಗಿ ಅವಾಂತರ: ಕಾರಿಗೆ ಡಿಕ್ಕಿ ಹೊಡೆದ 4 ಪಲ್ಟಿ ಹೊಡೆದ ಕಾರು: ಸಿಸಿಟಿವಿ ದೃಶ್ಯ ವೈರಲ್‌

ಕೂಡಲೇ ಬಸ್ ನಿಂತಿದ್ದು,  ಬಳಿಕ ಬಸ್ ಪ್ರಯಾಣಿಕ ಖಾಲಿ ಇದ್ದ ಒಂದು ಸೀಟ್‌ನಲ್ಲಿ ಕುಳಿತಿದ್ದಾನೆ. ಬಳಿಕ ಬಸ್ ಮತ್ತೆ ಹೊರಟಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕಂಡಕ್ಟರ್‌ನ ಸಮಯಪ್ರಜ್ಞೆಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.  ಈ ಪ್ರಯಾಣಿಕನನ್ನು ಕಂಡಕ್ಟರ್‌ ರೂಪದಲ್ಲಿದ್ದ ದೇವರು ರಕ್ಷಣೆ ಮಾಡಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂತರ ಸೈಡರ್ ಮ್ಯಾನ್ ರಕ್ಷಿಸಿದಂತೆ ಕಂಡಕ್ಟರ್‌ ಪ್ರಯಾಣಿಕನನ್ನು ರಕ್ಷಿಸಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಇದರ ಜೊತೆಗೆ ಬಸ್‌ನ ಕಳಪೆ ಗುಣಮಟ್ಟದ ಬಗ್ಗೆಯೂ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಸಡನ್‌ ಆಗಿ ತೆರೆದುಕೊಂಡ ಬಸ್ ಬಾಗಿಲಿನ ಬಗ್ಗೆಯೂ ಜನ ಕಾಮೆಂಟ್ ಮಾಡಿದ್ದು, ಯಾಕೆ ಈಬಸ್ ಡೋರ್‌ ಅನ್ನು ಕೂಡಲೇ ಸರಿ ಮಾಡಬಾರದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಬಹುತೇಕರು ಕಂಡಕ್ಟರ್‌ನ ಕಾರ್ಯಕ್ಷಮತೆಯನ್ನು ಕೊಂಡಾಡಿದ್ದಾರೆ.

ಪುಟ್ಟ ಮಕ್ಕಳೆದುರೇ ಅಪ್ಪನಿಗೆ ಗುಂಡಿಕ್ಕಿ ಕೊಲೆ : ಭಯಾನಕ ಸಿಸಿಟಿವಿ ದೃಶ್ಯ ವೈರಲ್‌

 

Latest Videos
Follow Us:
Download App:
  • android
  • ios