Asianet Suvarna News Asianet Suvarna News

ದಕ್ಷಿಣ ಭಾರತದ ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡಲು ಬಂದ ಜರ್ಮನಿಯ ಫ್ಲಿಕ್ಸ್ ಬಸ್!

ಜರ್ಮನಿ ಮೂಲದ ಅಂತಾರಾಷ್ಟ್ರೀಯ ಬಸ್ ಸೇವಾ ಸಂಸ್ಥೆ ಫ್ಲಿಕ್ಸ್‌ಬಸ್ ದಕ್ಷಿಣ ಭಾರತಕ್ಕೆ ಕಾಲಿಟ್ಟಿದೆ. ಈ ಸೇವೆಯು ಸ್ಥಳೀಯ ಖಾಸಗಿ ಬಸ್ ಸಂಸ್ಥೆಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.

German Flix Bus came to compete with private buses in South India sat
Author
First Published Sep 3, 2024, 4:23 PM IST | Last Updated Sep 3, 2024, 4:23 PM IST

ಬೆಂಗಳೂರು (ಸೆ.03): ಅಂತಾರಾಷ್ಟ್ರೀಯ ಮಟ್ಟದಲ್ಲಿ ಬರೋಬ್ಬರಿ 43 ದೇಶಗಳಲ್ಲಿ ಸ್ಥಳೀಯವಾಗಿ ಪ್ರಮುಖ ನಗರಗಳ ನಡುವೆ ಬಸ್ ಸಂಚಾರ ಒದಗಿಸುವ ಜರ್ಮನಿ ಮೂಲದ ಚ ಈಗ ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ. ಫ್ಲಿಕ್ಸ್ ಬಸ್ ಸೇವೆಯು ದಕ್ಷಿಣ ಭಾರತಕ್ಕೆ ಪದಾರ್ಪಣೆ ಪ್ರಯಾಣ ಸೇವೆ ನೀಡುವುದನ್ನು ಸ್ವಾಗತಿಸಿದ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು, ಬಸ್‌ಗಳಿಗೆ ಚಾಲನೆ ನೀಡಿದರು. 

ಮಂಗಳವಾರ ಫ್ಲಿಕ್ಸ್ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, ಭಾರತವೂ ಸೇರಿದಂತೆ 43 ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಫ್ಲಿಕ್ಸ್‌ಬಸ್ ಸೇವೆಯು ದಕ್ಷಿಣ ಭಾರತದಲ್ಲಿ ಜನರ ಪ್ರಯಾಣದ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಖಾಸಗಿ ಬಸ್ ನಿರ್ವಾಹಕರ ಸಹಯೋಗದಲ್ಲಿ ಸಂಚಾರ ಜಾಲ ವಿಸ್ತರಿಸಿಕೊಳ್ಳುವ ಯೋಜನೆಯನ್ನು ಫ್ಲಿಕ್ಸ್‌ಬಸ್ ಹೊಂದಿದೆ. ಹೆಚ್ಚಿನ ಅನುಕೂಲ, ಸುರಕ್ಷತೆ ಹಾಗೂ ಹೊರೆ ಎನ್ನಿಸದ ದರಗಳ ಮೂಲಕ ಬಸ್ ಪ್ರಯಾಣಿಕರ ವಿಶ್ವಾಸ ಗಳಿಸುವ ಗುರಿ ಹೊಂದಿದೆ ಎಂದರು.

ಚಾಮುಂಡಿ ಬೆಟ್ಟದಲ್ಲಿ ವಸ್ತ್ರಸಂಹಿತೆ, ಮೊಬೈಲ್ ಬಳಕೆ ನಿಷೇಧ ಕುರಿತು ಬಿಗ್ ಅಪ್ಡೇಟ್ ಕೊಟ್ಟ ಸಿಎಂ!

ಬಸ್ ಸಂಚಾರದಲ್ಲಿ ಭಾರತವು ಜಗತ್ತಿನ ಎರಡನೇ ದೊಡ್ಡ ಮಾರುಕಟ್ಟೆಯಾಗಿದೆ. ಪರಿಸರ ಸ್ನೇಹಿ ಇಂಧನಗಳ ಬಳಕೆಗೆ ಒತ್ತು ನೀಡಿ ದೇಶದಲ್ಲಿ ಸುಸ್ಥಿರ  ಸಂಚಾರಕ್ಕೆ ಕೊಡುಗೆ ನೀಡಲು ಸಂಸ್ಥೆಯು ಆದ್ಯತೆ ನೀಡಬೇಕು. ಜರ್ಮನಿಯ ಡೆಪ್ಯುಟಿ ಕಾನ್ಸುಲ್ ಜನರಲ್ ಅನೆಟ್ ಬೆಸಿಯರ್, ಫ್ಲಿಕ್ಸ್ ಬಸ್ ಸಹ-ಸ್ಥಾಪ ಡೇನಿಯಲ್ ಕ್ರೌಸ್, ಫ್ಲಿಕ್ಸ್ ಬಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೂರ್ಯ ಖುರಾನ ಇದ್ದರು.

ಸ್ಥಳೀಯ ಖಾಸಗಿ ಬಸ್ ಮಾಲೀಕರಿಗೆ ಪೈಪೋಟಿ:  ಇನ್ನು ಕರ್ನಾಟಕದಲ್ಲಿ ಖಾಸಗಿ ಬಸ್ ಏಜೆನ್ಸಿಗಳು ಹಾಗೂ ಮಾಲೀಕರು ಹಲವು ವರ್ಷಗಳಿಂದ ಜೀವನ ಕಟ್ಟಿಕೊಂಡಿದ್ದಾರೆ. ಕೆಲವರು ರಾಜ್ಯದ ಖಾಸಗಿ ಬಸ್ ಸಂಚಾರದಲ್ಲಿ ದೊಡ್ಡ ಪಾಲನ್ನು ಹೊಂದಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಾರ ಸೇವೆ ಒದಗಿಸುವ ಪ್ರಸಿದ್ಧ ಫ್ಲಿಕ್ಸ್‌ಬಸ್ ಕಂಪನಿಯು ಈಗ ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ. ಇದೀಗ ಫ್ಲಿಕ್ಸ್‌ಬಸ್ ಕಂಪನಿ ದಕ್ಷಿಣ ಭಾರತಕ್ಕೆ ಕಾಲಿಟ್ಟ ಬೆನ್ನಲ್ಲಿಯೇ ಸ್ಥಳೀಯ ಹಲವು ಖಾಸಗಿ ಬಸ್ ಸಂಸ್ಥೆಗಳಿಗೆ ಹಾಗೂ ಏಜೆನ್ಸಿಗಳಿಗೆ ಭಾರಿ ಹೊಡೆತ ಬೀಳುವ ನಿರೀಕ್ಷೆಯಿದೆ.

Latest Videos
Follow Us:
Download App:
  • android
  • ios