ಮುಸ್ಲಿಂ ಸಮುದಾಯ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಸಮಾಜ ಅಭಿವೃದ್ದಿಯತ್ತ ಸಾಗುತ್ತಿರುವುದರ ಸಂಕೇತ ಎಂದು ಶಾಸಕ ಕೆ.ಎಸ್‌.ಆನಂದ್‌ ಹೇಳಿದರು.

, ಕಡೂರು (ಆ.೮) :  ಮುಸ್ಲಿಂ ಸಮುದಾಯ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಸಮಾಜ ಅಭಿವೃದ್ದಿಯತ್ತ ಸಾಗುತ್ತಿರುವುದರ ಸಂಕೇತ ಎಂದು ಶಾಸಕ ಕೆ.ಎಸ್‌.ಆನಂದ್‌ ಹೇಳಿದರು.

ಪಟ್ಟಣದ ಹಜರತ್‌ ಜರೀನಾ ಬೀಬಿ ದರ್ಗಾ ಸಮಿತಿಯಿಂದ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಮುಸ್ಲಿಂ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಮುಸ್ಲಿಂ ಸಮಾಜದ ಮಕ್ಕಳು ಶಿಕ್ಷಣದತ್ತ ವಾಲುತ್ತಿರುವುದು ಬದಲಾವಣೆ ಪರ್ವ, ಅದರಲ್ಲೂ ಹೆಣ್ಣು ಮಕ್ಕಳು ಸೇರಿದಂತೆ ಮೆಡಿಕಲ್‌ ಮತ್ತು ಇಂಜಿನಿಯರಿಂಗ್‌ ಓದುತ್ತಿರುವುದು ಸಂತೋಷದ ಸಂಗತಿ ಎಂದರು.

ವಿದ್ಯಾರ್ಥಿಗಳಿಗೆ ಸಂಸ್ಕೃತ ಭೋದಿಸುತ್ತಿರುವ ಕೇರಳದ ಇಸ್ಲಾಮಿಕ್ ವಿದ್ಯಾಸಂಸ್ಥೆ

ಕಷ್ಟವಿದ್ದರೂ ಬಿಡದೆ ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸುತ್ತಿರುವ ನಿಮ್ಮ ಜೊತೆ ನಾನಿದ್ದು, ಅಗತ್ಯ ಸಹಕಾರ ನೀಡಲು ಸಿದ್ಧ. ಕಡೂರಿನಲ್ಲಿ ನಿವೇಶನ ನೀಡಿದಲ್ಲಿ ಶೀಘ್ರ ಸರ್ಕಾರದ ಅನುದಾನದಿಂದ ದೊಡ್ಡ ಶಾದಿಮಹಲ್‌ ನಿರ್ಮಿಸುವುದಾಗಿ ಭರವಸೆ ನೀಡಿದರು.

ರಾಜ್ಯದಲ್ಲಿ ಹಿಂದೆ ಆಡಳಿತ ನಡೆಸಿದ ಪಕ್ಷ ಹಿಜಾಬ್‌ವಿಷಯದಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಕುಗ್ಗುವಂತೆ ಮಾಡಿದ್ದು ಸಮುದಾಯಕ್ಕೆ ಬಹಳಷ್ಟುನೋವು ನೀಡಿದೆ. ಈ ಬಗ್ಗೆ ತಲೆಕೆಡಿಸಿ ಕೊಳ್ಳುವುದು ಬೇಡ. ಆದರೆ ವಿರೋಧ ಮಾಡುವ ಪಕ್ಷವೇ ಬುದ್ಧಿವಂತರಾದ ಅಬ್ದುಲ್‌ ಕಲಾಂರವರನ್ನು ರಾಷ್ಟ್ರಪತಿ ಮಾಡಲೇಬೇಕಾಯಿತು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಮಾತನಾಡಿ, ಈ ಸಮಾಜದ ಜೊತೆ ತಮಗೆ ಹಿಂದಿನಿಂದಲೂ ಅವಿನಾಭಾವ ಸಂಭಂಧವಿದೆ. ನನ್ನ ಅಧಿಕಾರದ ಇತಿಮಿತಿಯಲ್ಲಿ ಸಮಾಜದ ಪರ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಜಾಗೃತರಾಗಿ ಮಕ್ಕಳು ಶಿಕ್ಷಣ ಪಡೆಯುತ್ತಿರುವುದು ಸಂತಸದ ಸಂಗತಿ. ಸಮಾಜದ ಅಭಿವೃದ್ಧಿಗೆ ಶಾಸಕರೊಂದಿಗೆ ಕೈ ಜೋಡಿಸುತ್ತೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಜರತ್‌ ಜರೀನಾ ಬೀಬಿ ದರ್ಗಾ ಸಮಿತಿ ಅಧ್ಯಕ್ಷ ಜಿ.ಇಮ್ರಾನ್‌ ಖಾನ್‌ ಮಾತನಾಡಿ, ನಮ್ಮ ನಾಯಕ ಕೆ.ಎಸ್‌.ಆನಂದ್‌ ಸಮಾಜದ ಜೊತೆ ನಿಂತಿದ್ದು, ಸಮಾಜ ನಿಮ್ಮ ಪರವಾಗಿದೆ. ಇದಕ್ಕೆ ಎಂದಿಗೂ ಚ್ಯುತಿ ತರುವುದಿಲ್ಲ ಎಂದರು.

ಕಡೂರು ಕ್ಷೇತ್ರದ ವಿವಿಧೆಡೆಗಳಲ್ಲಿ ಉರ್ದು ಶಾಲೆಗಳು ಮತ್ತು ಸಮುದಾಯ ಭವನಗಳ ಅಭಿವೃದ್ಧಿಗೆ ನೀಡಿರುವ ಅರ್ಜಿಗಳನ್ನು ಪರಿಶೀಲಿಸಿ ರಾಜ್ಯಸರ್ಕಾರದÜ ಅನುದಾನಕ್ಕೆ ಮನವಿ ಮಾಡಿದರು. ಕಡೂರು ಕ್ಷೇತ್ರದಲ್ಲಿ ನಮ್ಮ ಸಮಾಜದ 6 ಹೆಣ್ಣು ಮಕ್ಕಳು ವೈದ್ಯಕೀಯ ಕ್ಷೇತ್ರದಲ್ಲಿ ಕಲಿಯುತ್ತಿದ್ದು, ಎಂಜಿನಿಯರ್‌, ಸ್ನಾತಕೋತ್ತರ ಪದವಿ ಸೇರಿದಂತೆ 10 ಮತ್ತು 12ನೇ ತರಗತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಮಕ್ಕಳು ಸಾಧನೆ ಮಾಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾದ ಪೋಷಕರು ಸಮಿತಿ ಸಂಪರ್ಕಿಸಿದರೆ ಸಹಕಾರ ನೀಡುತ್ತದೆ ಎಂದರು.

ಮುಸ್ಲಿಂ ಸಮಾಜದ ಹಿರಿಯ ಮುಖಂಡರಾದ ಎನ್‌.ಬಶೀರ್‌ ಸಾಬ್‌, ತನ್ವೀರ್‌,ಇಸ್ಮಾಯಿಲ್‌, ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜ ನಾಯ್ಕ, ಮಂಡಿ ಎಕ್ಬಾಲ್‌, ಅತಾವುಲ್ಲಾ ಖಾನ್‌, ಎನ್‌. ಇಮಾಮ್‌, ಅಲ್‌ ಹಾಜ್‌, ಮಹಮ್ಮದ್‌ ಶಾಹಿದ್‌ ಹಾಗೂ ಕಡೂರಿನ 19 ಮಸೀದಿಗಳ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

ಸಮಿತಿ ಉಪಾಧ್ಯಕ್ಷ ಸೈಯದ್‌ ಯಾಸೀನ್‌, ಕಾರ್ಯದರ್ಶಿ ಅನ್ಸರ್‌ ಖಾನ್‌, ಖಜಾಂಚಿ ಅಬ್ದುಲ್‌ ಖಾದರ್‌, ಅಪ್ರೋಜ್‌, ವಸೀಂ, ಫೈರೋಜ್‌ ಖಾನ್‌, ನಯಾಜ್‌, ನವಾಜ್‌ ಖಾನ್‌, ಸಲೀಮ್‌, ಮುನಾವರ್‌ ಭಾಷಾ, ಸೈಯ್ಯದ್‌ ಸಲೀಂ ಮತ್ತಿತರರು ಇದ್ದರು.

ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ: ಅಡಿಕೆ‌ ತೋಟ ನೋಡಲು ತೆರಳಿದ್ದ ‌ವೃದ್ಧೆ ನಾಪತ್ತೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮಾಜ ಅತಿ ಹೆಚ್ಚು ಮತಗಳನ್ನು ನೀಡಿ ನಾನು ಶಾಸಕನಾಗಲು ಕಾರಣವಾಗಿದೆ. ನಿಮ್ಮ ಸಮಾಜದ ಋುಣ ನನ್ನ ಮೇಲಿದೆ. ಸೋತಾಗಲೂ ನನಗೆ ಹೆಚ್ಚಿನ ಧೈರ್ಯ ತುಂಬಿದ್ದು ನಿಮ್ಮ ಸಮಾಜ. ನಿಮ್ಮಗಳ ಜೊತೆ ನನ್ನನ್ನು ಅಣ್ಣನಾಗಿ ತಮ್ಮನಾಗಿ ಕಂಡಿದ್ದು, ಎಲ್ಲರೊಂದಿಗೆ ನಾವು ಸಹೋದರಂತೆ ಜೀವಿಸುತ್ತಿದ್ದೇವೆ.

-ಕೆ.ಎಸ್‌ ಆನಂದ್‌,ಶಾಸಕ.