ಅತ್ಯಾ*ರ ಪ್ರಕರಣದಲ್ಲಿ ಜೈಲು ಸೇರಿರುವ ಜೆಡಿಎಸ್‌ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದೀಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಗ್ರಂಥಾಲಯದ ಸಹಾಯಕ.

ಬೆಂಗಳೂರು (ಸೆ.07): ಅತ್ಯಾ*ರ ಪ್ರಕರಣದಲ್ಲಿ ಜೈಲು ಸೇರಿರುವ ಜೆಡಿಎಸ್‌ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದೀಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಗ್ರಂಥಾಲಯದ ಸಹಾಯಕ. ಈತನಿಗೆ ತಿಂಗಳಿಗೆ ಸುಮಾರು 5 ಸಾವಿರ ರು. ಕೂಲಿ ! ಮನೆಕೆಲಸದಾಳಿನ ಮೇಲಿನ ಅತ್ಯಾ*ರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಪ್ರಜ್ವಲ್ ತುತ್ತಾಗಿದ್ದಾರೆ. ಜೈಲಿನಲ್ಲಿ ಸಜಾ ಕೈದಿಗಳು ಶ್ರಮದಾನ ಮಾಡಬೇಕಾಗಿರುತ್ತದೆ.

ಇದಕ್ಕಾಗಿ ಕೈದಿಗಳು ಬಯಸುವ ಕೆಲಸಗಳನ್ನು ಕಾರಾಗೃಹದ ಅಧಿಕಾರಿಗಳು ಹಂಚಿಕೆ ಮಾಡುತ್ತಾರೆ. ಅಂತೆಯೇ ಗ್ರಂಥಾಲಯದ ಸಹಾಯಕನನ್ನಾಗಿ ಪ್ರಜ್ವಲ್‌ರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಿನಗೂಲಿ ಲೆಕ್ಕದಲ್ಲಿ ಕೆಲಸ ಮಾಡಿದ ದಿನ ಪ್ರಜ್ವಲ್ ಅವರಿಗೆ 525 ರು. ಕೂಲಿ ಸಿಗಲಿದೆ. ಅಂತೆಯೇ ಸಾಮಾನ್ಯವಾಗಿ ವಾರಕ್ಕೆ ಮೂರು ದಿನದಂತೆ ತಿಂಗಳಲ್ಲಿ ಸುಮಾರು 10-12 ದಿನ ಶ್ರಮದಾನವಿರಲಿದೆ.

ಈ ಲೆಕ್ಕದಲ್ಲಿ ಪ್ರಜ್ವಲ್ ಪ್ರಜ್ವಲ್ ರೇವಣ್ಣ ಅವರಿಗೆ ಆ.2 ರಂದು ಜನಪ್ರತಿನಿಧಿಗಳ ಅವರಿಗೆ ಮಾಸಿಕ 5,250 ಸಾವಿರ ರು. ಕೂಲಿ ಸಿಗಬಹುದು ಎಂದು ಅಂದಾಜಿಸಲಾಗಿದೆ. ಈ ಹಣ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಲಿದೆ. ತಮ್ಮ ದುಡಿಮೆ ಹಣ ಬಳಸಿಕೊಂಡು ಜೈಲಿನಲ್ಲಿ ಅಗತ್ಯ ವಸ್ತುಗಳ ಖರೀದಿ ಮಾಡಬಹುದು ಅಥವಾ ತಮ್ಮ ಕುಟುಂಬದವರಿಗೆ ಆ ಹಣ ಕಳುಹಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆಕೆಲಸದಾಳಿನ ಮೇಲೆ ಅತ್ಯಾ*ರ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಬಳಿಕ ಕೈದಿಗಳ ಸಮವಸ್ತ್ರಕೊಟ್ಟ ಅಧಿಕಾರಿಗಳು, ಲೈಬ್ರರಿ, ಬೇಕರಿ, ಕಚೇರಿ ಸಹಾಯಕ, ಸಿದ್ದಉಡುಪು ತಯಾರಿಕೆ ಘಟಕ, ಕೃಷಿ ಹಾಗೂ ಹೂದೋಟ ಸೇರಿ ಇತರೆ ಕೆಲಸಗ ಳನ್ನು ಆಯ್ಕೆ ಮಾಡಿಕೊಳ್ಳುವಂತೆ ಪ್ರಜ್ವಲ್‌ಗೆ ಸೂಚಿಸಿದ್ದರು. ಈ ಪಟ್ಟಿಯಲ್ಲಿ ಗ್ರಂಥಾಲಯದ ಸಹಾಯಕನ ಕೆಲಸವನ್ನು ಅವರು ಆರಿಸಿಕೊಂಡಿದ್ದಾರೆ. ಅಂತೆಯೇ ತಿಂಗಳ ಬಳಿಕ ಪ್ರಜ್ವಲ್ ಅವರಿಗೆ ಕೆಲಸವನ್ನು ಅಧಿಕಾರಿಗಳು ಹಂಚಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.