Asianet Suvarna News Asianet Suvarna News

ಅಡವಿಗೊಲ್ಲರಹಳ್ಳಿ ರೈತರ ಮೇಲೆ ಪೊಲೀಸ್ ದೌರ್ಜನ್ಯ; ಹಲ್ಲೆಗೊಳಗಾದ ರೈತ ಜಿಲ್ಲಾಸ್ಪತ್ರೆಗೆ ದಾಖಲು

ವಿದ್ಯುತ್ ಉತ್ಪಾದನಾ ಕಂಪನಿಯ ಕಾಮಗಾರಿಗೆ ವಿರೋಧಿಸಿದರೆಂದು ಪೊಲೀಸರು ರೈತರ ಮೇಲೆ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಅಡವಿಗೊಲ್ಲರಹಳ್ಳಿ ಗ್ರಾಮದ ಬಳಿ ನಡೆದಿದೆ. ರೈತ ರೆಹಮತ್ ವುಲ್ಲಾ, ಸಹೋದರ ಬಾಬು,ವೃದ್ಧೆ ಮೆಹಬೂಬಿ ಪೊಲೀಸರಿಂದ ಹಲ್ಲೆಗೊಳಗಾದವರು.

Police brutality on farmers in adavigollarahalli at chitradurga viral video rav
Author
First Published Oct 17, 2023, 11:54 AM IST

ಚಿತ್ರದುರ್ಗ (ಅ.17): ವಿದ್ಯುತ್ ಉತ್ಪಾದನಾ ಕಂಪನಿಯ ಕಾಮಗಾರಿಗೆ ವಿರೋಧಿಸಿದರೆಂದು ಪೊಲೀಸರು ರೈತರ ಮೇಲೆ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಅಡವಿಗೊಲ್ಲರಹಳ್ಳಿ ಗ್ರಾಮದ ಬಳಿ ನಡೆದಿದೆ.

ರೈತ ರೆಹಮತ್ ವುಲ್ಲಾ, ಸಹೋದರ ಬಾಬು,ವೃದ್ಧೆ ಮೆಹಬೂಬಿ ಪೊಲೀಸರಿಂದ ಹಲ್ಲೆಗೊಳಗಾದವರು. ಭರಮಸಾಗರ ಠಾಣೆ ಪಿಎಸ್ ಐ ರವಿ ನಾಯ್ಕ್ , ಸಿಬ್ಬಂದಿಯಿಂದ ರೈತರ ಮೇಲೆ ದೌರ್ಜನ್ಯವೆಸಗಿದ ಆರೋಪ. ಸದ್ಯ ಹಲ್ಲೆಯಿಂದ ಗಾಯಗೊಂಡು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ರೈತ ರೆಹಮತ್ ವುಲ್ಲಾ.

ಪೋಕ್ಸೋ: ಸಂತ್ರಸ್ತರಿಗೆ ಆರೋಪಿ ಜಾಮೀನು ಮಾಹಿತಿ ನೀಡೋದು ಕಡ್ಡಾಯ -ಹೈಕೋರ್ಟ್

ವಿದ್ಯುತ್ ಉತ್ಪಾದನಾ ಕಂಪನಿ ರೈತರ ಜಮೀನಿನಲ್ಲಿ ಪ್ಯಾನ್ ಲೈನ್ ಕಾಮಗಾರಿ ನಡೆಸುತ್ತಿದೆ. ಕಾಮಗಾರಿ ವಿರೋಧಿಸಿದ್ದ ರೈತರು. ವಿದ್ಯುತ್ ಉತ್ಪಾದನಾ ಕಂಪನಿ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರಿಂದ ನಡೆದಿರುವ ದೌರ್ಜನ್ಯ. ಪಿಎಸ್‌ಐ ರವಿ ನಾಯ್ಕ್, ಸಿಬ್ಬಂದಿ ರೈತ ಕುಟುಂಬದ ಮೇಲೆ ಹಲ್ಲೆ. ರೈತನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

ಡೀನ್ ಕೈಯಲ್ಲಿ ಆಸ್ಪತ್ರೆ ಶೌಚಾಲಯ ಕ್ಲೀನ್ ಮಾಡಿಸಿದ್ದ ಮಹಾ ಸಂಸದನ ವಿರುದ್ಧ SCST ಕಾಯ್ದೆಯಡಿ ಕೇಸ್

Follow Us:
Download App:
  • android
  • ios