Asianet Suvarna News Asianet Suvarna News

ಡೀನ್ ಕೈಯಲ್ಲಿ ಆಸ್ಪತ್ರೆ ಶೌಚಾಲಯ ಕ್ಲೀನ್ ಮಾಡಿಸಿದ್ದ ಮಹಾ ಸಂಸದನ ವಿರುದ್ಧ SCST ಕಾಯ್ದೆಯಡಿ ಕೇಸ್

ಕೇವಲ 2 ದಿನದಲ್ಲಿ 31 ರೋಗಿಗಳ ಸಾವಿಗೆ ಕಾರಣವಾದ ನಾಂದೇಡ್ ಆಸ್ಪತ್ರೆಯಲ್ಲಿ ಅಲ್ಲಿನ ಡೀನ್‌ನಿಂದಲೇ ಶೌಚಾಲಯವನ್ನು ತೊಳೆಸಿದ ಮಹಾರಾಷ್ಟ್ರ ಸಂಸದನ ವಿರುದ್ಧ ಈಗ ಎಸ್‌ಸಿ ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಕೇಸ್ ದಾಖಲಾಗಿದೆ.

A case under the SCST Act against the Maha Shivasena MP Hemant Patil who made clean Up the hospital toilet in the hands of the Medical college dean akb
Author
First Published Oct 5, 2023, 4:18 PM IST

ಮುಂಬೈ: ಕೇವಲ 2 ದಿನದಲ್ಲಿ 31 ರೋಗಿಗಳ ಸಾವಿಗೆ ಕಾರಣವಾದ ನಾಂದೇಡ್ ಆಸ್ಪತ್ರೆಯಲ್ಲಿ ಅಲ್ಲಿನ ಡೀನ್‌ನಿಂದಲೇ ಶೌಚಾಲಯವನ್ನು ತೊಳೆಸಿದ ಮಹಾರಾಷ್ಟ್ರ ಸಂಸದನ ವಿರುದ್ಧ ಈಗ ಎಸ್‌ಸಿ ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಶಿವಸೇನಾ ಎಂಪಿ ಹೇಮಂತ್ ಪಟೇಲ್ ನಾಂದೇಡ್‌ನ ಮೆಡಿಕಲ್ ಕಾಲೇಜು ಆಸ್ಪತ್ರೆಯ ಡೀನ್ ಶಾಮ್‌ ರಾವ್ ವಕೋಡೆ  ಅವರ ಕೈಯಲ್ಲೇ ಒತ್ತಾಯಪೂರ್ವಕವಾಗಿ ಡಾಕ್ಟರ್ ಶಂಕರ್ ರಾವ್ ಚೌಹಾಣ್‌ ಮೆಡಿಕಲ್ ಕಾಲೇಜು ಆಸ್ಪತ್ರೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದರು. 

ಎಸ್‌ಸಿಎಸ್ಟಿ ದೌರ್ಜನ್ಯ ತಡೆ ಕಾಯ್ದೆ, ಹಾಗೂ ಮಹಾರಾಷ್ಟ್ರ ಮೆಡಿಕೇರ್‌ ಸರ್ವಿಸ್ ಪರ್ಸನ್ಸ್ ಕಾಯ್ದೆಯಡಿ ಕೇಸು ದಾಖಲಾಗಿದ್ದು, ಸಂಸದನ ಜೊತೆಗೆ ಇದ್ದ ಇತರ 15 ಜನರ ವಿರುದ್ಧವೂ ಇದೇ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಂದೇಡ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353, 506 ಹಾಗೂ 500 ಅಡಿ ಪ್ರಕರಣ ದಾಖಲಾಗಿದೆ. 

2 ದಿನದಲ್ಲಿ 31 ಸಾವು, ನಾಂದೇಡ್‌ ಆಸ್ಪತ್ರೆಯ ಡೀನ್‌ನಿಂದ ಟಾಯ್ಲೆಟ್‌ ಕ್ಲೀನ್‌ ಮಾಡಿಸಿದ ಶಿವಸೇನಾ ಸಂಸದ!

ಕೇವಲ ಎರಡೇ ದಿನದಲ್ಲಿ ಈ ಆಸ್ಪತ್ರೆಯಲ್ಲಿ 31 ರೋಗಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಲ್ಲಿನ ಸಂಸದ ಶಿವಸೇನೆಯ  ಹೇಮಂತ್ ಪಟೇಲ್ ನಾಂದೇಡ್‌ನ ಶಂಕರ್ ರಾವ್ ಚೌಹಾಣ್‌ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದ್ದರು, ಈ ವೇಳೆ ಆಸ್ಪತ್ರೆಯ ಶೌಚಾಲಯಗಳು ನಿರ್ವಹಣೆ ಇಲ್ಲದೇ ಕೆಟ್ಟ ಸ್ಥಿತಿಯಲ್ಲಿದ್ದು, ಇದರಿಂದ ಗರಂ ಆದ ಹೇಮಂತ್ ಪಟೇಲ್ ಅವರು ಆಸ್ಪತ್ರೆಯ ಡೀನ್‌ ಕೈನಿಂದಲೇ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದರು. ಇದರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಇಂದು ಸಂಸದ ಹೇಮಂತ್ ಎಸ್‌ಸಿಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 

ಉಚಿತ ಕೊಡುಗೆಗಳಿಂದ ದಿವಾಳಿಯತ್ತ ಖಜಾನೆ: 3.27 ಲಕ್ಷ ಕೋಟಿ ರು. ಸಾಲದ ಸುಳಿಯಲ್ಲಿ ಪಂಜಾಬ್‌

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಹೇಮಂತ್ ಪಟೇಲ್ ಅವರನ್ನು ಮಾತನಾಡಿಸಿದ್ದು, ಪ್ರತಿಕ್ರಿಯಿಸಿದ ಅವರು, ಎಸ್‌ಸಿಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದು ಸರಿಯಲ್ಲ, ಏಕೆಂದರೆ ನಾನು ಡೀನ್ ಅವರ ಜಾತಿಯ ಬಗ್ಗೆ ಎಲ್ಲೂ ಕೇಳಿಲ್ಲ, ಹಾಗೂ ಜಾತಿಯನ್ನು ಹಿಡಿದು ನಿಂದನೆ ಮಾಡಿಲ್ಲ, 35 ಜನರ ಸಾವಿನ ಹಿನ್ನೆಲೆಯಲ್ಲಿ ಆಸ್ಪತ್ರೆಯ ಪರಿಶೀಲನೆಗಾಗಿ ನಾವು ಆಸ್ಪತ್ರೆಗೆ ಹೋಗಿದ್ದೆವು. ಈ ವೇಳೆ ಆಸ್ಪತ್ರೆಯ ಶೌಚಾಲಯಗಳು ಕೊಳಕಾಗಿದ್ದು, ನೋಡುವ ಸ್ಥಿತಿಯಲ್ಲಿಯೂ ಇರಲಿಲ್ಲ, ಹೀಗಾಗಿ ಡೀನ್‌ ಅವರಿಂದಲೇ ಆಸ್ಪತ್ರೆಯ ಶೌಚಾಲಯ ಸ್ವಚ್ಛಗೊಳಿಸಿಸಿದೆವು. ಆಕ್ಟೋಬರ್ 2 ರ ಗಾಂಧಿ ಜಯಂತಿಯಂದು ದೇಶದೆಲ್ಲೆಡೆ ಸ್ವಚ್ಛತ್ತಾ ಕಾರ್ಯಗಳು ನಡೆದಿವೆ. ಈ ಡೀನ್ ಎರಡು ದಿನ ಬಿಟ್ಟು ಸ್ವಚ್ಛ ಮಾಡಿದ್ದಾರೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು. ಇದೇ ವೇಳೆ ಎಫ್ಐಆರ್ ಬಗ್ಗೆ ಪ್ರಶ್ನಿಸಿದಾಗ ಪೊಲೀಸರು ಅಥವಾ ದೂರುದಾರರು, ಎಲ್ಲಾ ಜನಪ್ರತಿನಿಧಿಗಳು ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳನ್ನು ಪ್ರಶ್ನಿಸುವಾಗ ಅವರ ಜಾತಿಯನ್ನು ಪರಿಶೀಲಿಸಿ ನಂತರ ಪ್ರಶ್ನಿಸಬೇಕೆಂದು ಬಯಸುತ್ತಾರೆಯೇ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ ಅವರು ಈ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ ಎಂದು ಹೇಳಿದರು. 

ಹೆಂಡತಿ ಇಬ್ಬರು ಹೆಣ್ಣು ಮಕ್ಕಳಿಗೆ ಗುಂಡಿಕ್ಕಿ ಪೊಲೀಸ್ ಪೇದೆ ಸಾವಿಗೆ ಶರಣು

ಜಿಎಂಸಿಹೆಚ್‌ ಡೀನ್ ವಾಕೋಡೆ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಂದೇಡ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಶ್ರೀಕೃಷ್ಣ ಕೊಟಕ್ ಪ್ರತಿಕ್ರಿಯಿಸಿದ್ದಾರೆ. 

ತಾನೇ ಹೆಣೆದ ಬಲೆಗೆ ಬಿದ್ದ ಚೀನಾ ಸಬ್‌ಮರೀನ್‌: ಚೀನಾ ನೌಕಾಪಡೆಯ ಸಿಬ್ಬಂದಿ ಸೇರಿ 55 ಜನ ಬಲಿ

Follow Us:
Download App:
  • android
  • ios