Asianet Suvarna News Asianet Suvarna News

ಈ ಸಾರಿ ಮೈಸೂರು ದಸರಾಗೆ ಬರ್ತಾರಾ ಪ್ರಧಾನಿ? ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಾ ಕರುನಾಡು?

ಈ ಬಾರಿ ಮೈಸೂರು ದಸರಾ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.ಯಾಕಂದ್ರೆ ಮೈಸೂರು ದಸರಾ ಕಣ್ತುಂಬಿಕೊಳ್ಳಲು ರಾಷ್ಟ್ರಪತಿ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವುದು ದಸರಾ ವೈಭೋಗ ಇನ್ನಷ್ಟು ಹೆಚ್ಚಾಗಲಿದೆ.

pm 'Narendra modi likely to participate mysuru dasara 2022 rbj
Author
First Published Sep 15, 2022, 5:28 PM IST

ಮೈಸೂರು, (ಸೆಪ್ಟೆಂಬರ್.15): ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಅದ್ಧೂರಿಯಾಗಿ ಮಾಡಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಭರ್ಜರಿ ಸಿದ್ಧತೆಗಳು ನಡೆದಿವೆ. ಇದರ ಮಧ್ಯೆ ಈ ಬಾರಿ ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿರುವುದು ಇನ್ನಷ್ಟು ಕಳೆಗಟ್ಟಲಿದೆ.

ರಾಷ್ಟ್ರಪತಿಗಳು ದಸರಾ ಉದ್ಘಾಟನೆಗೆ ಬಂದ್ರೆ, ಪ್ರಧಾನಿ ನರೇಂದ್ರ ಮೋದಿ ಅವರು ಜಂಬೂಸವಾರಿ ಮೆರವಣಿಗೆಗೆ ಸಾಕ್ಷಿಯಾಗಲಿದ್ದಾರೆ ಅನ್ನೋ ಮಾಿಹಿತಿಗಳು ಹೊರಬಿದ್ದಿದೆ. ಈ ಕುರಿತು ಯಾವುದೇ ಖಚಿತತೆ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮೈಸೂರು ದಸರಾ ವೈಭೋಗ ಇನ್ನಷ್ಟು ಹೆಚ್ಚಾಗಲಿದೆ.ಯಾಕಂದ್ರೆ, ದಸರಾ ಉದ್ಘಾಟನೆ ರಾಷ್ಟ್ರಪತಿ ಬರ್ತಿದ್ರೆ, ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಪ್ರಧಾನಿಗಳು ಬರುತ್ತಿರುವುದರಿಂದ ಈ ಬಾರಿಯ ದಸರಾ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.

Draupadi Murmu: ದಸರಾ ಮಹೋತ್ಸವ ಉದ್ಘಾಟನೆಗೆ ರಾಷ್ಟ್ರಪತಿ ಇದೇ ಮೊದಲು ಆಗಮನ

ಆನೆಯ ಮೇಲಿನ ಚಿನ್ನದ ಅಂಬಾರಿಯಲ್ಲಿ ಕುಳಿತ ಚಾಮುಂಡಿ ತಾಯಿಗೆ ಮೋದಿ ಪುಷ್ಪಾರಾರ್ಚನೆ ನೆರವೇರಿಸಲಿದ್ದಾರೆ. ಪ್ರಧಾನ ಮಂತ್ರಿಯೊಬ್ಬರು ಚಿನ್ನದ ಅಂಬಾರಿಗೆ ಪುಷ್ಪಾರಾರ್ಚನೆ ಮಾಡ್ತಿರೋದು ಇದೇ ಮೊದಲು ಈ ಕಾರಣಕ್ಕೆ ಈ ಬಾರಿಯ ದಸರಾ ಐತಿಹಾಸಿಕ ದಾಖಲೆ ಆಗಲಿದೆ.ಅಲ್ಲದೇ ದಸರಾ ರಂಗು ಹೆಚ್ಚಾಗಲಿದೆ.

ನಾಡಹಬ್ಬ ದಸರಾ ಸೆಪ್ಟೆಂಬರ್ 26 ರಿಂದ ಆರಂಭವಾಗಲಿದೆ‌.ಇಷ್ಟು ವರ್ಷ ನಾಡಿನ ಹಿರಿಯ ಸಾಹಿತಿಗಳು, ಸ್ವಾಮೀಜಿಗಳು, ವಿಚಾರವಾದಿಗಳು, ನಾಡು ನುಡಿಗೆ ಅಸಾಮಾನ್ಯ ಸೇವೆ ಸಲ್ಲಿಸಿದವರು ದಸರಾ ಉದ್ಘಾಟಿಸುತ್ತಿದ್ದರು. ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳು (Draupadi Murmu) ದಸರಾ ಉದ್ಘಾಟಿಸಲಿದ್ದಾರೆ. 

Mysuru Dasara 2022: ಸೆ.19ರಿಂದ ರಂಗ ಸಂಗೀತ, ದಸರಾ ರಂಗೋತ್ಸವ

ಪ್ರಧಾನಿ ಕಚೇರಿಯಿಂದ ಬರಬೇಕಿದೆ ಅಧಿಕೃತ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೈಸೂರು ದಸರಾಗೆ ಆಹ್ವಾನಿಸಲಾಗಿದೆ. ಬರ್ತಾರೆ ಅಂತಾನೂ ಹೇಳಲಾಗುತ್ತಿದೆ. ಆದರೆ, ರಾಷ್ಟ್ರಪತಿ ಕಾರ್ಯಕ್ರಮ ನಿಗದಿಯಾಗಿರೋದ್ರಿಂದ ಸೆಕ್ಯುರಿಟಿಗೆ ಕುಂದುಂಟಾಗಬಹುದು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಮೋದಿ ಮೈಸೂರಿಗೆ ಬರುವ ದಿನಾಂಕದಲ್ಲಿ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿದೆ.  ಅಕ್ಟೋಬರ್ 4ರ ಬದಲು 5ರಂದು ಬರುವ ಸಾಧ್ಯತೆ ಇದೆ ಇದೆ ಎನ್ನಲಾಗಿದೆ.ಆದ್ರೆ, ಈ ಬಗ್ಗೆ ಪ್ರಧಾನಿ ಕಚೇರಿ ಅಧಿಕೃತವಾಗಿ ಯಾವುದನ್ನು ಹೇಳಿಲ್ಲ.

ಸಿಎಂ ಬೊಮ್ಮಾಯಿ ಸ್ಪಷ್ಟನೆ

ಪ್ರಧಾನಿ ನರೇಂದ್ರ ಮೈಸೂರು ದಸರಾಗೆ ಆಗಮಿಸುವಿಕೆ ಇನ್ನೂ ಖಚಿತವಾಗಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಮೈಸೂರು ದಸರಾಗೆ ಕುರಿತು ಪ್ರಧಾನಿ ಮೋದಿಗೆ ಆಹ್ವಾನ ನೀಡಿಲ್ಲ. ಆದರೆ ಅವರು ಕೆಲ ಕಾರ್ಯಕ್ರಮಗಳ ಪಟ್ಟಿ ನೀಡಿದ್ದಾರೆ.  ಕೆಲ ದಿನಾಂಕಗಳು ಇವೆ. ಆದರೆ ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸುವಿಕೆ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಪ್ರಧಾನಿ ಕಾರ್ಯಾಲಯ ಖಚಿತ ಪಡಿಸಿದ ಬಳಿಕ ಈ ಕುರಿತು ಮಾಹಿತಿ ನೀಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. 

 

Follow Us:
Download App:
  • android
  • ios