Mohandas Pai Tweet: ದಯವಿಟ್ಟು ಬೆಂಗಳೂರು ಕಾಪಾಡಿ; ಮೋದಿಗೆ ಟ್ವೀಟ್ ಮೂಲಕ ಮನವಿ

ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ಮಳೆ ನೀರು, ಚರಂಡಿ ನೀರು ನುಗ್ಗಿ ಜನರು ಹೊರಬರಲಾಗದೆ ಮನೆಯೊಳಗೆ ಪರದಾಡುವಂತಾಗಿದೆ. ಇನ್ನೊಂದಡೆ ಅವೈಜ್ಙಾನಿಕ ಕಾಮಗಾರಿಗಳಿಂದ ಟ್ರಾಫಿಕ್ ಜಾಮ್ ಹೆಚ್ಚಾಗಿದ್ದು ಇವೆಲ್ಲ ಸಮಸ್ಯೆಗಳಿಂದ ಬೆಂಗಳೂರನ್ನು ಕಾಪಾಡುವಂತೆ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್ ಮೂಲಕ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.

Please save Bangalore Famous businessman Mohandas Pai appealed to Modi through a tweet

ಬೆಂಗಳೂರು (ಆ.31) : ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 2 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಮಂಗಳೂರಿಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ; ಖ್ಯಾತ ಉದ್ಯಮಿ ಮೋಹನದಾಸ್ ಪೈ ಅವರು ನರೇಂದ್ರ ಮೋದಿಯವರಿಗೆ ಬೆಂಗಳೂರನ್ನು ಮಳೆಯಿಂದ, ಅವೈಜ್ಞಾನಿಕ ಕಾಮಗಾರಿಗಳಿಂದಾಗಿರುವ ಟ್ರಾಫಿಕ್ ಜಾಮ್ ಸಮಸ್ಯೆಗಳಿಂದ ಕಾಪಾಡುವಂತೆ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ. 

ಕೊರತೆ ಉದ್ಯೋಗದ್ದಲ್ಲ, ಕಡಿಮೆ ವೇತನದ್ದು: ಮೋಹನ್ ದಾಸ್ ಪೈ!

ಬೆಂಗಳೂರಿ(Bengaluru)ನಲ್ಲಿ ವಿಪರೀತ ಮಳೆ(Heavy Rain) ಸುರಿದು ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿವೆ. ಕೆಲವಡೆ ಮನೆಯೊಳಗೆ ಚರಂಡಿ ನೀರು ನುಗ್ಗಿ ಜನರು ತೀವ್ರ ತೊಂದರೆ ಅನುಭವಿಸಿದ್ದಾರೆ.  ನಗರ ನಿರ್ವಹಣೆಯಲ್ಲಿ ಬಿಬಿಎಂಪಿ(BBMP) ನಿರ್ಲಕ್ಷ್ಯ, ಅವೈಜ್ಞಾನಿಕ ಕಾಮಗಾರಿಗಳಿಂದಲೇ ಬೆಂಗಳೂರಿಗೆ ಇಂಥ ದುಸ್ಥಿತಿ ಬಂದಿದೆ. ಹೀಗಾಗಿ ಪ್ರಧಾನಿಯವರು ಬೆಂಗಳೂರನ್ನು ಕಾಪಾಡುವಂತೆ ಟ್ವೀಟ್(Tweet) ಮಾಡಿ ಮನವಿ ಮಾಡಿಕೊಂಡಿದ್ದಾರೆ. 

Bengaluru Rains; ಹೂಳು ತುಂಬಿ ರಾಜಕಾಲುವೆ ಬ್ಲಾಕ್‌, 30 ಮನೆಗೆ ನೀರು ನುಗ್ಗಿ ಅವಾಂತರ

ಕಳೆದ ಕೆಲವು ವಾರಗಳಿಂದ ಬೆಂಗಳೂರಿನಿಂದ ಭಾರೀ ಮಳೆ ಸುರಿದಿದೆ. ಬೆಳ್ಳಂದೂರು(Belanduru), ಮಾರತ್‌ಹಳ್ಳಿ(Marathalli), ಎಚ್‌ಎಎಲ್ ಬಡಾವಣೆ, ಸೇರಿದಂತೆ ಕೆಲವಡೆ ನೀರು ನುಗ್ಗಿ ಜನರು ಪರದಾಡುತ್ತಿದ್ದಾರೆ. ಮಳೆ ನಿಂತರೂ ಕಾಲುವೆ, ಚರಂಡಿ ನೀರು ಕಡಿಮೆಯಾಗಿಲ್ಲ. ಇಷ್ಟಕ್ಕೆಲ್ಲ ಬಿಬಿಎಂಪಿಯ ನಿರ್ಲಕ್ಷ್ಯವೇ ಕಾರಣ. ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನ ಸಮಸ್ಯೆಯನ್ನು ಗಮನಿಸಬೇಕು ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios