Asianet Suvarna News Asianet Suvarna News

ಕೊರತೆ ಉದ್ಯೋಗದ್ದಲ್ಲ, ಕಡಿಮೆ ವೇತನದ್ದು: ಮೋಹನ್ ದಾಸ್ ಪೈ!

ಉದ್ಯೋಗಾವಕಾಶಗಳ ಸೃಷ್ಠಿ ಗೆ ಶ್ರಮಿಸುತ್ತಿದೆ ಕೇಂದ್ರ ಸರ್ಕಾರ| ನವ ಭಾರತಕ್ಕೆ ಉದ್ಯೋಗಾವಕಾಶಗಳ ಸೃಷ್ಠಿ ದೊಡ್ಡ ಸವಾಲು| ಭಾರತದಲ್ಲಿ ಉದ್ಯೋಗಕ್ಕೆ ಕೊರತೆಯಿಲ್ಲ ಎಂದ ಮೋಹನ್ ದಾಸ್ ಪೈ| ‘ಕಡಿಮೆ ವೇತನದ ಸಮಸ್ಯೆ ನಿರುದ್ಯೋಗಕ್ಕೆ ಮೂಲ ಕಾರಣ’| ಭಾರತ ಉತ್ತಮ ವೇತನ ನೀಡಬಲ್ಲ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ ಎಂದ ಪೈ| ಸಂಶೋಧನಾ ಮತ್ತು ಅಭಿವೃದ್ಧಿ ವಲಯದಲ್ಲಿ ಹೆಚ್ಚಿನ ಹೂಡಿಕೆಗೆ ಆಗ್ರಹ| 

Mohandas Pai Says India Has Wage Problem
Author
Bengaluru, First Published Jun 17, 2019, 6:01 PM IST

ಬೆಂಗಳೂರು(ಜೂ.17): ಉದ್ಯೋಗಾವಕಾಶಗಳ ಸೃಷ್ಠಿ ಮೂಲಕ ನಿರುದ್ಯೋಗ ಶಮನಕ್ಕೆ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ನವ ಭಾರತಕ್ಕೆ ಉದ್ಯೋಗಾವಕಾಶಗಳ ಸೃಷ್ಠಿ ನಿಜಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಧಾನಿ ಮೋದಿ ಕೂಡ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಶ್ರಮಿಸುತ್ತಿದ್ದಾರೆ.

ಈ ಮಧ್ಯೆ ಭಾರತದಲ್ಲಿ ಉದ್ಯೋಗಕ್ಕೆ ಕೊರತೆಯಿಲ್ಲವಾಗಿದ್ದು, ವೇತನದ ಸಮಸ್ಯೆ ಕಾಡುತ್ತಿದೆ ಎಂದು ಇನ್ಫೋಸಿಸ್ ಸಂಸ್ಥೆ ಮಾಜಿ ಸಿಫ್‌ಒ, ಟಿ.ವಿ. ಮೋಹನ್ ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ. ಪಿಟಿಐ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪೈ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಹಲವು ಸಲಹೆಗಳನ್ನು ನೀಡಿದ್ದಾರೆ.
 
ಭಾರತ ಉತ್ತಮ ವೇತನ ನೀಡಬಲ್ಲ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ, ಬದಲಿಗೆ ಕಡಿಮೆ  ವೇತನ ಸಿಗುವ ಉದ್ಯೋಗಗಳನ್ನು ಸೃಷ್ಠಿಸುತ್ತಿದೆ. ಇದು ಪದವೀಧರರನ್ನು ಆಕರ್ಷಿಸದಿರುವುದೇ ನಿರುದ್ಯೋಗ ಸಮಸ್ಯೆ ಉಲ್ಬಣಕ್ಕೆ ಸಾಕ್ಷಿ ಎಂದು ಪೈ ಹೇಳಿದ್ದಾರೆ.

ಭಾರತ ಉದ್ಯೋಗ ಆಕಾಂಕ್ಷಿಗಳನ್ನು ಆಕರ್ಷಿಸಲು ಸಂಶೋಧನಾ ಮತ್ತು ಅಭಿವೃದ್ಧಿ ವಲಯದಲ್ಲಿ ಹೆಚ್ಚಿನ ಹೂಡಿಕೆ, ಕರಾವಳಿ ತೀರ ಪ್ರದೇಶದಲ್ಲಿ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪೈ ಸಲಹೆ ನೀಡಿದ್ದಾರೆ.

ವಿವಿಧ ವಲಯಗಳಲ್ಲಿ ಹೆಚ್ಚಿನ ಹೂಡಿಕೆ ವಲಯವಾರು ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡುವ ಮೂಲಕ ನಿರುದ್ಯೋಗ ಸಮಸ್ಯೆಗೆ ಇತಿಶ್ರೀ ಹಾಡಬಹದು ಎಂದು  ಮೋಹನ್ ದಾಸ್ ಪೈ ನುಡಿದಿದ್ದಾರೆ.

Follow Us:
Download App:
  • android
  • ios