Asianet Suvarna News Asianet Suvarna News

'ಇಡೀ ಜಗತ್ತೇ ಒಂದು ಕುಟುಂಬ..' ಭಾರತದ ಈ ಮಾತನ್ನು ಸಾಕ್ಷೀಕರಿಸಿದ್ದು ಬೆಂಗಳೂರಿನ ಈ ಟ್ಯಾಕ್ಸಿ ಚಾಲಕಿ!

ನಡು ರಾತ್ರಿಯಲ್ಲಿ ಸುಲಿಗೆ, ಅಪರಾಧ ಕೃತ್ಯಗಳು ಎಂದಾಗ ಅದು ಹೇಗೋ ಟ್ರ್ಯಾಕ್ಸಿ ಚಾಲಕರ ಹತ್ತಿರ ಹೋಗಿ ನಿಲ್ಲುತ್ತದೆ. ಅದಕ್ಕೆ ಕಾರಣವಾಗಿದ್ದು, ಬಹಶಃ ಕೆಲವೊಂದು ಹಿಂದಿನ ಪ್ರಕರಣಗಳು. ಇಂದಿಗೂ ಕೂಡ ನಡು ರಾತ್ರಿಯಲ್ಲಿ ಟ್ಯಾಕ್ಸಿಯಲ್ಲಿ ಒಬ್ಬರೇ ಹೋಗುವುದಕ್ಕೆ ಬಹುತೇಕರು ಇಲ್ಲ ಎಂದೇ ಹೇಳುತ್ತಾರೆ. ಆದರೆ, ಈ ಸುದ್ದಿ ಹಾಗಲ್ಲ. ಬೆಂಗಳೂರಿನ ಟ್ಯಾಕ್ಸಿ ಡ್ರೈವರ್‌ ಬಗ್ಗೆ ಪಿಯು ದತ್ತಾ ಎನ್ನುವ ಟ್ರಾವೆಲರ್‌ ಬರೆದ ಮೆಚ್ಚುಗೆಯ ಪೋಸ್ಟ್‌ ಇದು.

Piyu Dutta Shares her experience with bangalore Women taxi Driver KSTDC san
Author
First Published Dec 18, 2022, 8:24 PM IST

ಬೆಂಗಳೂರು (ಡಿ.18): ನಡು ರಾತ್ರಿಯಲ್ಲಿ ಮಹಿಳೆಯರು ಒಬ್ಬರೇ ಮೆಟ್ರೋ ನಗರಿಯಲ್ಲಿ ಹೋಗಲು ಹೆದರುತ್ತಾರೆ. ಅದಕ್ಕೆ ಕಾರಣ ಹಿಂದೆ ಆಗಿರುವಂಥ ಕೆಲವು ಘಟನೆಗಳು. ಆದರೆ, ಇದು ಹಾಗಲ್ಲ. ಬೆಂಗಳೂರಿನ ಟ್ಯಾಕ್ಸ್‌ ಸಮುದಾಯಕ್ಕೆ ಪ್ರವಾಸಿಗರೊಬ್ಬರು ಬರೆದ ಮೆಚ್ಚುಗೆಯ ಪತ್ರ. ನಡು ರಾತ್ರಿಯಲ್ಲಿ ಮಹಿಳೆಯೊಬ್ಬರೇ ಪ್ರಯಾಣ ಮಾಡಲು ಏರ್ಪೋರ್ಟ್‌ನಲ್ಲಿ ಇರುವ ವ್ಯವಸ್ಥೆಗಳಿಂದ ಹಿಡಿದು, ಟ್ಯಾಕ್ಸಿ ಚಾಲಕಿಯಾದ 'ಶ್ವೇತಾ' ಎನ್ನುವ ಮಹಿಳೆಯ ಸಹಾಯದ ಬಗ್ಗೆ ಪಿಯು ದತ್ತಾ ರನ್ನುವ ಮಹಿಳೆ ಲಿಂಕ್ಡಿನ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ.

ಇದು ನಿನ್ನೆ ರಾತ್ರಿ ನಡೆದ ಘಟನೆ. ಹಾಗೆನ್ನುವುದಕ್ಕಿಂತ ಇಂದಿನ ಮುಂಜಾನೆ ಎನ್ನಬಹುದು.

ನಾನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಗಷ್ಟೇ ಇಳಿದೆ. ಮಧ್ಯರಾತ್ರಿ ದಾಟಿ ಹೋಗಿತ್ತು. ಎಂದಿನಂತೆ ನಾನು ಏರ್‌ಪೋರ್ಟ್‌ ಟ್ಯಾಕ್ಸಿ ಬಳಿ ನಾನು ನಡೆದುಕೊಂಡೇ ಹೋಗಿದ್ದೆ. ಅಚ್ಚರಿ ಎನ್ನುವಂತೆ ಅಲ್ಲಿ ಯಾವುದೇ ಕ್ಯೂಗಳಿರಲಿಲ್ಲ. ಅಲ್ಲಿದ್ದ ಡ್ರೈವರ್‌ಗಳು ಕೊನೆಯಲ್ಲಿದ್ದ ಡ್ರೈವರ್‌ನತ್ತ ನನಗೆ ಕೈತೋರಿಸಿದರು. ನಾನು ಸ್ವಲ್ಪ ಬೇಸರಗೊಳ್ಳುತ್ತಲೇ ಆ ಕಡೆಗೆ ಹೆಜ್ಜೆ ಹಾಕಿದೆ. ಬೇಸರಕ್ಕಿಂತ ಹೆಚ್ಚಾಗಿ, ನನ್ನ ದೇಹ ಇಲ್ಲಿನ ಸಮಯ ವಲಯಕ್ಕೆ ಒಗ್ಗಿಕೊಳ್ಳಲು ಕಷ್ಟಪಡುತ್ತಿತ್ತು. ಯಾಕೆಂದರೆ ಅದಿನ್ನೂ ಭಿನ್ನ ಸಮಯ ವಲಯದಲ್ಲಿತ್ತು.

ಅದರಲ್ಲೂ ಏರ್‌ಪೋರ್ಟ್‌ ಟ್ಯಾಕ್ಸಿಯಲ್ಲಿದ್ದ ಒಬ್ಬ ಡ್ರೈವರ್‌, ಕಿರಿಕಿರಿಯಾಗಿದ್ದ ನನ್ನ ಮುಖವನ್ನು ದಿಟ್ಟಿಸಿ ನೋಡಿದ. ಬಳಿಕ ನನ್ನ ಬಳಿ ಬಂದು, 'ಮೇಡಮ್‌ ಸಿಂಗಲ್‌ ಲೇಡಿ ಪ್ಯಾಸೆಂಜರ್‌? ಹಾಗಿದ್ದರೆ ನಿಮಗಾಗಿ ಅಲ್ಲಿ ಪಿಂಕ್‌ ಟ್ಯಾಕ್ಸಿ ಇದೆ'  ಎಂದು ಮಾಹಿತಿ ನೀಡಿದ.

ಒಬ್ಬ ಮಹಿಳಾ ಚಾಲಕನನ್ನು ಕಂಡು ನನಗೆ ಬಹಳ ಸಂತೋಷವಾಯಿತು. ಒಬ್ಬ ಮಹಿಳಾ ಪ್ರಯಾಣಿಕನಾಗಿ, ನನ್ನ ಸುರಕ್ಷತೆಯ ಭರವಸೆಯನ್ನು ನಾನು ಇಷ್ಟಪಟ್ಟೆ. ಮಹಿಳಾ ಡ್ರೈವರ್‌ ಆಗಿರುವ ಕಾರಣ, ಬಹುಶಃ ಕಾರ್‌ನಲ್ಲಿ ನೆಮ್ಮದಿಯಾಗಿ ನಾನು ನಿದ್ರೆ ಮಾಡಬಹುದು ಎಂದುಕೊಂಡು ಸ್ವಲ್ಪ ಮುಗುಳ್ನಕ್ಕೆ.

ಆದರೆ, ನನ್ನ ಕಥೆ ಇಲ್ಲಿಗೆ ನಿಲ್ಲೋದಿಲ್ಲ. ಬ್ರಿಗೇಡ್‌ ರೋಡ್‌ ಬಳಿ ಆರ್‌ ಬಂದಾಗ, ಆಕೆ ಶುಕ್ರವಾರದ ರಾತ್ರಿಯ ಪಾರ್ಟಿ ಮುಗಿಸಿ ಬರುತ್ತಿದ್ದ ವ್ಯಕ್ತಿಗಳಿಗಾಗಿ ಕಾರು ನಿಧಾನವಾಯಿತು. ಆದರೆ, ಆ ಹೊತ್ತಿನಲ್ಲಿ ನನಗೆ ಟ್ರಾಲಿಯಲ್ಲಿ ನೇತುಹಾಕಿದ ನನ್ನ ಡ್ಯೂಟಿ ಫ್ರೀ ಶಾಪಿಂಗ್ ಬ್ಯಾಗ್ ಇದ್ದಕ್ಕಿದ್ದಂತೆ ನೆನಪಾಯಿತು. ನಾನು ಸಾಮಾನ್ಯವಾಗಿ ಏರ್‌ಪೋರ್ಟ್‌ನಿಂದ ಬರುವಾಗ ನನ್ನ ಲಗೇಜ್‌ಗಳನ್ನು ಎಣಿಸುತ್ತೇನೆ. ಈ ಬಾರಿ ಮಿಸ್‌ ಆಗಿದ್ದು ನನ್ನದೇ ತಪ್ಪು ಎನ್ನುವುದು ಕೂಡ ಅರಿವಾಯಿತು. ಇನ್ನೇನು ಬೆಂಗಳೂರು ಏರ್‌ಪೋರ್ಟ್‌ನಿಂದ ಹೊರಬರುವ ವೇಳೆಗೆ ಡ್ಯುಟಿ ಫ್ರೀ ಶಾಪ್‌ನಿಂದ ನಾನು ಖರೀದಿಸಿದ ಲಗೇಜ್‌ ಅದಾಗಿತ್ತು. ಹಾಗಾಗಿ ಅದು ನನ್ನ ತಲೆಯಲ್ಲಿ ರಿಜಿಸ್ಟರ್‌ ಆಗಿರಲಿಲ್ಲ. ಟ್ರಾಫಿಕ್‌ ಲೈಟ್‌ನಲ್ಲಿ ಕಾರ್‌ ನಿಂತಿದ್ದಾಗ ನಾನು ಈ ವಿಚಾರವನ್ನು ಆಕೆಗೆ ಹೇಳಿದೆ. ಆಕೆ ಅಷ್ಟೇ ಕ್ವಿಕ್‌ ಆಗಿ ಪ್ರತಿಕ್ರಿಯೆ ನೀಡುತ್ತಾ, 'ಹಾಗಿದ್ದರೆ ನಾವು ಏರ್‌ಪೋರ್ಟ್‌ಗೆ ಮರಳೋಣವೇ?' ಎಂದು ಕೇಳಿದ್ದಳು. 

ಬಿಡುವಿಲ್ಲದ ವಿಮಾನ ನಿಲ್ದಾಣದ ಟ್ರಾಲಿಯಲ್ಲಿ ಅದೂ ಮಧ್ಯರಾತ್ರಿಯಲ್ಲಿ ಬಿಟ್ಟು ಬಂದಿರುವ ಬ್ಯಾಗ್‌ ಹಾಗೂ ಅದರಲ್ಲಿರುವ ಸಿಂಗಲ್‌ ಮಾಲ್ಟ್‌ ಮದ್ಯ ಸಿಗುವ ಯಾವ ಸಾಧ್ಯತೆಗಳೂ ನನಗೆ ಇದ್ದಿರಲಿಲ್ಲ. ಈ ನಡುವೆ ವಿಮಾನ ನಿಲ್ದಾಣದಲ್ಲಿ ತನ್ನ ಸಹ ಚಾಲಕರಿಗೆ ಫೋನ್ ಮಾಡಿ ನನ್ನ ವಿಚಾರವನ್ನು ಚರ್ಚಿಸಿ ಟೀಮ್ ಲೀಡರ್ ಜೊತೆ ಮಹಿಳಾ ಡ್ರೈವರ್‌ ಸಂಪರ್ಕ ಸಾಧಿಸಿದ್ದಳು. ಅವಳು ನನ್ನನ್ನು ಟೀಮ್‌ ಲೀಡ್‌ ಜೊತೆ ಮಾತನಾಡುವಂತೆ ಮಾಡಿದಳು. ನನ್ನ ಅರ್ಧ ನಿದ್ರೆಯ ಸ್ಥಿತಿಯಲ್ಲಿ, ನಾನು ಕೆಟ್ಟ ಸುದ್ದಿಯನ್ನು ಕೇಳಲು ಸಂಪೂರ್ಣವಾಗಿ ನಿರೀಕ್ಷಿಸುತ್ತಿದ್ದೆ. ಆದರೆ, ಆಕೆಯ ಟೀಮ್‌ ಲೀಡ್‌,  ಬ್ಯಾಗ್ ಬೆಂಗಳೂರಿನಿಂದ ಡ್ಯೂಟಿ ಫ್ರೀ ಆಗಿದೆಯೇ ಎಂದು ನನ್ನನ್ನು ಪ್ರಶ್ನಿಸಿದರು. ಹೌದು ಎಂದು ನಾನು ಹೇಳಿದಾಗ, ಅವರು ತಮ್ಮ ಕಸ್ಟಡಿಯಲ್ಲಿ ಆ ಬ್ಯಾಗ್‌ ಇರುವುದಾಗಿ ಹೇಳಿದ್ದರು.

6 ತಿಂಗಳಿಂದ ಬಂದ್‌ ಆಗಿದ್ದ KSTDC ಟೂರ್‌ ಮತ್ತೆ ಶುರು

ಒಂದು ಕ್ಷಣ ಕೂಡ ಆಕೆ ಮಿಸ್‌ ಮಾಡದೇ, ಕ್ಯಾಬ್‌ಅನ್ನು ಏರ್‌ಪೋರ್ಟ್‌ನ ಕಡೆಗೆ ತಿರುಗಿಸಿದರು. ನಾವು ಏರ್ಪೋರ್ಟ್‌ ಬಳಿ ಬಂದಾಗ, ಟೀಮ್‌ ಲೀಡರ್‌ ಕಾರಿನ ಬಳಿ ಓಡಿ ಬಂದಿದ್ದ. ನಾನು ತಕ್ಷಣವೇ ನನ್ನ ಬ್ಯಾಗ್‌ ಅನ್ನು ಪಡೆದುಕೊಂಡೆ.ಈ ಸಮಯದಲ್ಲಿ, ಇಡೀ ವ್ಯವಸ್ಥೆಯ ದಕ್ಷತೆಯ ಬಗ್ಗೆ ನಾನು ಬಹಳ ಅಚ್ಚರಿಪಟ್ಟಿದೆ. ನಾನು ಇರುವ ಸ್ಥಳದ ಬಗ್ಗೆ ಟೀಮ್‌ ಲೀಡರ್‌ಗೆ ಕ್ಷಣ ಕ್ಷಣಕ್ಕೂ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದ ಡ್ರೈವರ್‌, ಅದರ ನಡುವೆ ಕಳೆದುಹೋದ ಬ್ಯಾಗ್‌ಗಾಗಿ ಮತ್ತೆ ಏರ್‌ಪೋರ್ಟ್‌ಗೆ ಬಂದಿದ್ದರು.

ವಿದೇಶ ಪ್ರಯಾಣ ಮಾಡೋ ಮುನ್ನ ಅಲ್ಲಿನ ರೂಲ್ಸ್ ತಿಳಿದಿರಲಿ: ಇಲ್ಲಾಂದ್ರೆ ಜೈಲೇ ಗತಿ 

ಕ್ಯಾಬ್‌ ಸಂಸ್ಥೆಯ ನೀತಿಗಳು ಹಾಗೂ ಕಾರ್ಯವಿಧಾನಕ್ಕಿಂತ ಹೆಚ್ಚಿನದು ಅಲ್ಲಿ ನಡೆದಿತ್ತು.  ಅದನ್ನೇ ಸಂಸ್ಕತಿ ಎನ್ನುತ್ತಾರೆ. ಯಾಣಿಕರ ಸುರಕ್ಷತೆಯನ್ನು ನೋಡಿಕೊಳ್ಳುವ ಈ ಜವಾಬ್ದಾರಿಯ ಪ್ರಜ್ಞೆಯು ವ್ಯವಸ್ಥೆಯು ಕಾರ್ಯನಿರ್ವಹಿಸುತ್ತದೆ.

ಕಳೆದ ರಾತ್ರಿ, ಏರ್‌ಪೋರ್ಟ್‌ನಲ್ಲಿ ಒಂದು ಬ್ಯಾನರ್‌ ಹಾಕಲಾಗಿತ್ತು. ಅದರಲ್ಲಿ'ವಸುದೈವ ಕುಟುಂಬಕಂ' ಎಂದು ಬರೆಯಲಾಗಿತ್ತು. ನನ್ನ ಘಟನೆ ಅದನ್ನೇ ಪುನರುಚ್ಚರಿಸುತ್ತದೆ. ನಿಜವಾಗಿ, ಇಲ್ಲಿ ಹೊರತುಪಡಿಸಿ ಎಲ್ಲಿಯೂ ಇಲ್ಲ, ಭಾರತದಲ್ಲಿ ನೀವು "ಜಗತ್ತೇ ಒಂದು ಕುಟುಂಬ" ಎಂಬ ಕಲ್ಪನೆಯೊಂದಿಗೆ ಜೀವಿಸುತ್ತೀರಿ.

ಶ್ವೇತಾ ನಿನಗೆ ದೊಡ್ಡ ಚಪ್ಪಾಳೆ. ನೀನು ಕಳೆದ ರಾತ್ರಿಯ ನನ್ನ ಸೂಪರ್‌ ಹೀರೋ.. ನೀನು ನನ್ನ ಲೇಡಿಹರ್ಸ್‌.

ಟೀಮ್‌ ಕೆಎಸ್‌ಟಿಡಿಎಸ್‌, ಬೆಂಗಳೂರು ವಿಮಾನ ನಿಲ್ದಾಣ ಮತ್ತು ಪಿಂಕ್‌ ಕ್ಯಾಬ್‌ನ ಲೇಡಿ ಡ್ರೈವರ್‌ಗಳು. ನಿಮ್ಮ ಸಪೋರ್ಟ್‌ಗೆ ದೊಡ್ಡ ಥ್ಯಾಂಕ್ಸ್‌!

Follow Us:
Download App:
  • android
  • ios