ರಾಜ್ಯದ ಜನರೇ ಗುರುತಿಸಿದ ಕರ್ನಾಟಕ 7 ಅದ್ಭುತಗಳ ಪಟ್ಟಿಯನ್ನು ಇತ್ತೀಚೆಗಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಈ ಪಟ್ಟಿಯಲ್ಲಿ ಕೊಪ್ಪಳ ಹಿರೇಬಣಕಲ್ ಶಿಲಾಸಮಾಧಿ ಆಯ್ಕೆಯಾಗಿದೆ. ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಬೆನ್ನಲ್ಲೇ ಹಿರೇಬಣಕಲ್ ಗ್ರಾಮಸ್ಥರು ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭಕ್ಕೆ ಧನ್ಯವಾದ ಹೇಳಿದ್ದಾರೆ. ಇಷ್ಟೇ ಅಲ್ಲ ಇಡೀ ಗ್ರಾಮದಲ್ಲಿ ಸಂಭ್ರಮಾಚರಣೆ ಆರಂಭಿಸಿದ್ದಾರೆ.
ಕೊಪ್ಪಳ(ಫೆ.27): ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಅದ್ಭುತಗಳ ಪಟ್ಟಿಗೆ ಸೇರಲು ಅರ್ಹವಾದ ತಾಣಗಳಿವೆ. ಕೆಲವು ಈಗಾಗಲೇ ಜನಪ್ರಿಯಗೊಂಡಿದ್ದರೆ, ಇನ್ನೂ ಕೆಲವು ಹೊರಗಜತ್ತಿನ ಮಾರುಕಟ್ಟೆ ಪ್ರವೇಶಿಸಿಲ್ಲ. ವಿಶ್ವದ 7 ಅದ್ಭುತಗಳಿರುವಂತೆ ಕರ್ನಾಟಕದ 7 ಅಧಿಕೃತ ಅದ್ಭುತಗಳನ್ನು ಗುರುತಿಸುವ ಮಹತ್ತರ ಆಂದೋಲವನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡ ಪ್ರಭ ಜಂಟಿಯಾಗಿ ನಡೆಸಿತ್ತು. ಈ ಆಂದೋಲನದಲ್ಲಿ ರಾಜ್ಯದ ಜನರೇ ಗುರುತಿಸಿದ 7 ಅದ್ಭುತಗಳನ್ನು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದರು. ಈ ಪಟ್ಟಿಯಲ್ಲಿ ಕೊಪ್ಪಳದ ಹಿರೇಬಣಕಲ್ ಶಿಲಾಸಮಾಧಿ ಸ್ಥಾನ ಪಡೆದಿದೆ. ಇದೀಗ ತಮ್ಮ ಗ್ರಾಮದ ಅದ್ಭುತ ಇದೀಗ ಅಧಿಕೃತ ಪಟ್ಟಿಗೆ ಸೇರ್ಪಡೆಗೊಂಡಿರುವುದು ಗ್ರಾಮಸ್ಥರ ಸಂಭ್ರಮ ಇಮ್ಮಡಿಗೊಳಿಸಿದೆ. ಇದೀಗ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ.
ಹಿರೇಬಣಕಲ್ ಗ್ರಾಮಸ್ಥರು, ನಾಯಕರು, ಅಧಿಕಾರಿಗಳು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಕರ್ನಾಟಕದ 7 ಅದ್ಭುತಗಳ ಅದಿಕೃತ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಇದೀಗ ಕೊಪ್ಪಳದ ಖ್ಯಾತಿ ಮತ್ತಷ್ಟು ಹೆಚ್ಚಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ.ಉದ್ಯೋಗ ಸೃಷ್ಟಿಯಾಗಲಿದೆ. ಯುವಕರು ಹಳ್ಳಿಯಿಂದ ವಲಸೆ ಹೋಗುವುದು ತಪ್ಪಲಿದೆ. ಇಷ್ಟೇ ಅಲ್ಲ ಜಿಲ್ಲೆಯ ಆದಾಯವೂ ಹೆಚ್ಚಾಗಲಿದೆ. ಹೀಗಾಗಿ ಗ್ರಾಮಸ್ಥರು ಬೀದಿ ಬೀದಿಯಲ್ಲಿ ಸಂಭ್ರಮ ಆಚರಿಸುತ್ತಿದ್ದಾರೆ.
ಕನ್ನಡಿಗರಾಗಿ ಜೀವನದಲ್ಲಿ ನೀವು ನೋಡಲೇಬೇಕಾದ ಏಳು ಅದ್ಭುತಗಳಿವು, ಹೇಳಿದ್ದು ನಾವಲ್ಲ ನೀವು!
ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡ ಪ್ರಭದ ಆಂದೋಲನಕ್ಕೆ ಹಿರೇಬಣಕಲ್ ಗ್ರಾಮಸ್ಥರು ಧನ್ಯವಾದ ಹೇಳಿದ್ದಾರೆ. ಶಾಸಕ ಪರಣ್ಣ ಮುನವಳ್ಳಿ ,ತಹಶಿಲ್ದಾರು ಮಂಜುನಾಥ,ಮಾಜಿ ಎಂಎಲ್‌ಸಿ ಶ್ರೀನಾಥ್, ಬಿಜೆಪಿ ನಾಯಕರಾದ ಸೂರಿಬಾಬು ,ಡಾ.ಶರಣ ಬಸಪ್ಪ ಕೋಲ್ಕಾರ, ಮಂಜುನಾಥ ಗುಡ್ಲಾನೂರ್ ,ಡಾ.ಶಿವಕುಮಾರ್ ಮಾಲಿಪಾಟೀಲ ,ವೀರೇಶ ಅಂಗಡಿ,ಬಿಜೆಪಿ ನಾಯಕ ಸಂತೋಷ ಕೆಲೋಜಿ,ಚನ್ನಬಸವಸ್ವಾಮಿ, ಮಂಜುನಾಥ ಎಚ್ಎಂ,ರಾಟೊಚಯ್ಯ,ನಾಗರಾಜ ಗುತ್ತೆದಾರ,ವೀರಭದ್ರಪ್ಪ ನಾಯಕ್,ಆನಂದ ಅಕ್ಕಿ,ರಾಜೇಶ್ ನಾಯಕ,ರಮೇಶ್ ಗಬ್ಬೂರ್,ಮೈಲಾರಪ್ಪ ಬೂದಿಹಾಳ ,ನೀಲಕಂಠಪ್ಪ ನಾಗಶೆಟ್ಟಿ,ಪವನಕುಮಾರ್ ಗುಂಡೂರ್,ಸದಾನಂದ ಸೇಠ್, ರಮೇಶ್ ಬನ್ನಿಕೊಪ್ಪ, ಅಶೋಕ ರಾಯ್ಕರ್ ,ಆಂಜನೇಯ ,ವಿಜಯ್ ಬಳ್ಳಾರಿ ಸೇರಿದಂತೆ ಹಿರೇ ಬೆಣಕಲ್ ನಾಗರೀಕರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕದ 7 ಅದ್ಭುತಗಳ ಅಧಿಕೃತ ಪಟ್ಟಿ ಬಿಡುಗಡೆ, ಇಲ್ಲಿದೆ ಸಪ್ತ ತಾಣಗಳ ಸುಂದರ ಲೋಕ!
ಹಿರೇಬಣಕಲ್ ಬೃಹತ್ ಶಿಲಾಯುಗದ ಅದ್ಭುತವಾಗಿದೆ. ಹುತೇಕ ಕನ್ನಡಿಗರಿಗೆ ಅಪರಿಚಿತವಾದ ಕರ್ನಾಟಕದ ಅದ್ಭುತ ಇದು.ಸುಮಾರು 3000-4000 ವರ್ಷಗಳಷ್ಟುಹಳೆಯ ಇತಿಹಾಸ ಇರುವ ತಾಣ.ಕೊಪ್ಪಳ ಜಿಲ್ಲೆ ಗಂಗಾವತಿಯಿಂದ ಸುಮಾರು 10 ಕಿಮೀ ದೂರದ ಹಿರೇಬೆಣಕಲ್ ಗ್ರಾಮದ ಮೋರ್ಯಾರ ಗುಡ್ಡದಲ್ಲಿ ಆದಿಮಾನವ ನಿರ್ಮಿತ ಬೃಹತ್ ಶಿಲಾಯುಗದ ನೂರಾರು ಶಿಲಾಸಮಾಧಿಗಳು ಹಾಗೂ ಆದಿಮಾನವ ರಚಿತ ಗುಹಾಚಿತ್ರಗಳು ಇವೆ. ಲಂಡನ್ನಿನ ಸ್ಟೋನ್ ಹೆಂಜಸ್, ಈಜಿಪ್ಟಿನ ಪಿರಮಿಡ್ಡುಗಳು, ಬಹರೈನಿನ ದಿಲ್ಮನ್ ಸಮಾಧಿ ದಿಬ್ಬಗಳಂತೆ-ಸಾವಿನ ಗೌರವ ಸೂಚಕಗಳು-ಈ ಶಿಲಾಸಮಾಧಿ ಡೋಲ್ಮನ್ಗಳು. ವಿಶ್ವದ ಹಲವೆಡೆ ಇಂಥ ಡೋಲ್ಮನ್‌ಗಳು ಇದ್ದು, ಕೋರಿಯಾ ಒಂದರಲ್ಲೇ ವಿಶ್ವದ ಶೇ. 40ರಷ್ಟುಡೋಲ್ಮನ್‌ಗಳು ಪತ್ತೆಯಾಗಿವೆ. ಭಾರತದಲ್ಲಿ ಹಲವೆಡೆ ಈ ಶಿಲಾ ಸಮಾಧಿಗಳು ಪತ್ತೆಯಾಗಿವೆಯಾದರೂ, ಹಿರೇಬೆಣಕಲ್ ಮೋರ್ಯಾರ ಗುಡ್ಡ ಇಡೀ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಮೆಗಾಲಿಥಿಕ್ ತಾಣವಾಗಿದೆ. ಒಂದು ಅಡಿಯ ಶಿಲಾಸಮಾಧಿಯಿಂದ ಹಿಡಿದು 10ಅಡಿ ಶಿಲಾಚಪ್ಪಡಿಯ ಸಮಾಧಿಗಳು ಮೂರು-ನಾಲ್ಕು ಸಾವಿರ ವರ್ಷಗಳ ಪ್ರಾಕೃತಿಕ ಹೊಡೆತಗಳನ್ನು ತಾಳಿಯೂ ಇನ್ನೂ ಗಟ್ಟಿಯಾಗಿ ನಿಂತಿರುವುದು ನಿಜಕ್ಕೂ ಅದ್ಭುತ. ಕರ್ನಾಟಕದಲ್ಲಿ ಇರುವ ಇಂಥ ಅನೇಕ ಪ್ರಾಗೈತಿಹಾಸಿಕ ತಾಣಗಳ ಪ್ರಾತಿನಿಧಿಕ ಅದ್ಭುತವೇ ಹಿರೇಬೆಣಕಲ್ ಮೋರ್ಯಾರ ಗುಡ್ಡದ ಶಿಲಾ ಸಮಾಧಿಗಳು.
