ಬೆಂಗಳೂರು, (ಜ.25): 71ನೇ ಗಣರಾಜ್ಯೋತ್ಸವ ಹಿನ್ನೆಲೆ 2020ನೇ ಸಾಲಿನ  ಪದ್ಮವಿಭೂಷಣ,  ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.

118 ಪದ್ಮಶ್ರೀ,  7 ಪದ್ಮವಿಭೂಷಣ ಹಾಗೂ 16 ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಲಾಗಿದು, ಒಟ್ಟು 141 ಸಾಧಕರಿಗೆ ಪ್ರಶಸ್ತಿ ಲಭಿಸಿವೆ. ಈ ಪೈಕಿ ಕರ್ನಾಟಕದ 8 ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.

2020ರ ಪದ್ಮ ಪ್ರಶಸ್ತಿ ಪ್ರಕಟ: ಇಲ್ಲಿದೆ ಸಾಧಕರ ಪಟ್ಟಿ!

ಪೇಜಾವರ ಶ್ರೀಗಳಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನು, ಅಕ್ಷರ ಸಂತ ಮಂಗಳೂರಿನ ಹರೇಕಳ ಹಾಜಬ್ಬಗೆ ಪದ್ಮಶ್ರೀ ಪ್ರಶಸ್ತಿಯ ಗೌರವ ಸಿಕ್ಕಿದ್ರೆ. ಉತ್ತರ ಕನ್ನಡದ ಹಾಲಕ್ಕಿ ಸಮುದಾಯದ ಪರಿಸರ ರಕ್ಷಕಿ ತುಳಸೀಗೌಡಗೆ ಪದ್ಮಶ್ರೀ ಗೌರವ ಸಿಕ್ಕಿದೆ. 

ಕ್ರೀಡಾ ಕ್ಷೇತ್ರದಲ್ಲಿ ಎಂ.ಪಿ. ಗಣೇಶ್ , ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಬೆಂಗಳೂರು ಗಂಗಾಧರ್, ಉದ್ಯಮಿ ವಿಜಯ ಸಂಕೇಶ್ವರ್ , ಸಾಹಿತ್ಯ ಕ್ಷೇತ್ರದಲ್ಲಿ ಕೆ.ವಿ. ಸಂಪತ್ ಕುಮಾರ್ , ವಿದುಷಿ ಜಯಲಕ್ಷ್ಮೀಗೆ ಪದ್ಮಶ್ರೀ ಗೌರವ ನೀಡಿ ಗೌರವಿಸಲಾಗಿದೆ.  

ಕನ್ನಡಪ್ರಭ-ಸುವರ್ಣ ನ್ಯೂಸ್ ವರ್ಷದ ವ್ಯಕ್ತಿಗೆ ಪದ್ಮಶ್ರೀ ಪ್ರಶಸ್ತಿ

ಕರ್ನಾಟಕದ 8 ಸಾಧಕರಿಗೆ ಪ್ರಶಸ್ತಿ
1. ಹರೇಕಳ ಹಾಜಬ್ಬ- ಪದ್ಮಶ್ರೀ (ಶಿಕ್ಷಣ)
2.ತುಳಸೀಗೌಡ-ಪದ್ಮಶ್ರೀ  (ಪರಿಸರ)
3. ಎಂ.ಪಿ. ಗಣೇಶ್-ಪದ್ಮಶ್ರೀ  (ಕ್ರೀಡಾ ಕ್ಷೇತ್ರ)
4. ಡಾ. ಬೆಂಗಳೂರು ಗಂಗಾಧರ್-ಪದ್ಮಶ್ರೀ  (ವೈದ್ಯಕೀಯ)
5. ಕೆ.ವಿ. ಸಂಪತ್ ಕುಮಾರ್ -ಪದ್ಮಶ್ರೀ (ಶಿಕ್ಷಣ ಕ್ಷೇತ್ರ)
6.ವಿಜಯ ಸಂಕೇಶ್ವರ್ -ಪದ್ಮಶ್ರೀ (ಉದ್ಯಮ)
7.ವಿದುಷಿ ಜಯಲಕ್ಷ್ಮೀ ಕೆ.ಎಸ್.-ಪದ್ಮಶ್ರೀ (Education-Journalism)