2020ರ ಪದ್ಮ ಪ್ರಶಸ್ತಿ ಪ್ರಕಟಿಸಿದ ಕೇಂದ್ರ ಸರ್ಕಾರ| ಒಟ್ಟು 141 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಕಟ| 118 ಸಾಧಕರಿಗೆ ಪದ್ಮಶ್ರೀ ಗೌರವ| 7 ಸಾಧಕರಿಗೆ ಪದ್ಮವಿಭೂಷಣ ಗೌರವ| 16 ಸಾಧಕರಿಗೆ ಪದ್ಮಭೂಷಣ ಪ್ರಶಸ್ತಿ| 

ನವದೆಹಲಿ(ಜ.25): ಕೇಂದ್ರ ಸರ್ಕಾರ 2020ರ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ದೇಶದ ಸಾಧಕರಿಗೆ ಗೌರವಿಸಿ ಸರ್ಕಾರ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಟ್ಟು 141 ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಇದರಲ್ಲಿ 118 ಸಾಧಕರಿಗೆ ಪದ್ಮಶ್ರೀ, 7 ಸಾಧಕರಿಗೆ ಪದ್ಮವಿಭೂಷಣ ಹಾಗೂ 16 ಸಾಧಕರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ.

ಕನ್ನಡಪ್ರಭ-ಸುವರ್ಣ ನ್ಯೂಸ್ ವರ್ಷದ ವ್ಯಕ್ತಿಗೆ ಪದ್ಮಶ್ರೀ ಪ್ರಶಸ್ತಿ

ಸಾಧಕರ ಪಟ್ಟಿ ಇಂತಿದೆ:(ಪ್ರಮುಖರ ಪಟ್ಟಿ ಮಾತ್ರ)

Scroll to load tweet…

ಪದ್ಮಶ್ರಿ ಪ್ರಶಸ್ತಿ:

1. ಮುನ್ನಾ ಮಾಸ್ಟರ್- ಕೃಷ್ಣಭಜನೆಗಾರ, ರಾಜಸ್ಥಾನ
2. ಮೊಹ್ಮದ್ ಷರೀಫ್ - ಸಾಮಾಜಿಕ ಕಾರ್ಯಕರ್ತ
3. ಡಾ. ರವಿಕಣ್ಣನ್- ಕ್ಯಾನ್ಸರ್ ತಜ್ಞ, ಅಸ್ಸಾಂ
4. ಜಗದೀಶ್ ಲಾಲ್ ಅಹುಜಾ- ಸಾಮಾಜಿಕ ಕಾರ್ಯಕರ್ತ, ಪಂಜಾಬ್
5. ಸತ್ಯನಾರಾಯಣ್ - ಸಾಮಾಜಿಕ ಕಾರ್ಯಕರ್ತ, ಕೇರಳ
6. ಅಬ್ದುಲ್ ಜಬ್ಬಾರ್- ಸಾಮಾಜಿಕ ಹೋರಾಟಗಾರ, ಮಧ್ಯಪ್ರದೇಶ
7. ಉಷಾ ಚೌಮಾರ್ -ಸಾಮಾಜಿಕ ಹೋರಾಟಗಾರ್ತಿ, ರಾಜಸ್ಥಾನ್
8. ರಾಧಾಮೋಹನ್- ಸಾವಯವ ಕೃಷಿಕ, ಒಡಿಸ್ಸಾ
9. ಕುಶಾಲ್ ಕೋನುವಾರ್- ಪಶುವೈದ್ಯ, ಅಸ್ಸಾಂ
10. ಖ್ಯಾತ ಬಾಲಿವುಡ್ ಗಾಯಕಿ ಕವಿತಾ ಕೃಷ್ಣಮೂರ್ತಿ

11. ಕಂಗನಾ ರಣಾವತ್- ಬಾಲಿವುಡ್ ನಟಿ

12. ಕರಣ್ ಜೋಹರ್- ಚಿತ್ರ ನಿರ್ಮಾಪಕ, ನಿರ್ದೇಶಕ(ಮತ್ತು ಇತರರು)

Scroll to load tweet…

ಪದ್ಮಭೂಷಣ ಪ್ರಶಸ್ತಿ:
1. ಆನಂದ ಮಹೀಂದ್ರ-ಉದ್ಯಮಿ 

2. ಪಿ.ವಿ. ಸಿಂಧು- ಬಾಡ್ಮಿಂಟನ್ ತಾರೆ 

3. ಮುಮ್ತಾಜ್ ಅಲಿ- ಕೇರಳ

4. ಶ್ರೀ ಸೈಯ್ಯದ್ ಮುಜೆಮ್ ಅಲಿ-ಬಾಂಗ್ಲಾದೇಶ

5. ಅಜಯ್ ಚಕ್ರವತಿ-ಪ.ಬಂಗಾಳ

6. ಮನೋಜ್ ದಾಸ್- ಪುದುಚೇರಿ

7. ಅನಿಲ್ ಪ್ರಕಾಶ್ ಜೋಷಿ-ಉತ್ತರಾಖಂಡ್ (ಮತ್ತು ಇತರರು)

Scroll to load tweet…

ಪದ್ಮವಿಭೂಷಣ ಪ್ರಶಸ್ತಿ
1. ಅರುಣ್ ಜೇಟ್ಲಿ- ಮರಣೋತ್ತರ 
2. ಜಾರ್ಜ್ ಫನಾಂಡೀಸ್- ಮರಣೋತ್ತರ 
3. ಸುಷ್ಮಾ ಸ್ವರಾಜ್- ಮರಣೋತ್ತರ 
4. ಪೇಜಾವರ ಶ್ರೀ-ಮರಣೋತ್ತರ
5. ಮೇರಿ ಕೋಮ್- ಬಾಕ್ಸಿಂಗ್ ಪಟು

6.ಅನಿರುದ್ಧ ಜುಗ್ನಾತ್-ಮಾರಿಷಸ್

7. ಚಾನುಲಾಲ್ ಮಿಶ್ರಾ-ಉತ್ತರಪ್ರದೇಶ

Scroll to load tweet…

ಇನ್ನು ಪದ್ಮ ಪ್ರಶಸ್ತಿಗೆ ಭಾಜನರಾದ ಎಲ್ಲ ಸಾಧಕರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಎಲ್ಲ ಸಾಧಕರಿಗೂ ಅಭಿನಂದನೆ ಎಂದು ಹೇಳಿದ್ದಾರೆ.

ಸಾಧಕರ ಸಂಪೂರ್ಣ ಪಟ್ಟಿಯನ್ನು ನೋಡಲು ಕೇಂದ್ರ ಸರ್ಕಾರದ ಗೃಹ ಇಲಾಖೆಯ ಪದ್ಮ ಪ್ರಶಸ್ತಿ ವೆಬ್‌ಸೈಟ್‌ಗೆ ಭೇಟಿ ನೀಡಿ.