ಅಕ್ರಮ ಮರಳುಗಾರಿಕೆಗೆ ಪಿಸಿ ಬಲಿ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
ಕಲಬುರಗಿ ಜಿಲ್ಲೆಯ ಜೇವರ್ಗಿ ಠಾಣಾ ವ್ಯಾಪ್ತಿಯ ನಾರಾಯಣಪೂರ ಬಳಿ ಕರ್ತವ್ಯನಿರತನಾಗಿದ್ದ ಮುಖ್ಯಪೇದೆ ಮಯೂರ ಚವ್ಹಾಣ (51) ಮರಳು ತುಂಬಿದ ಟ್ರ್ಯಾಕ್ಟರ್ ಹರಿದು ಸಾವನ್ನಪ್ಪಿರುವ ಹಿನ್ನೆಲೆ ಪೆದೆಯ ಸ್ವಗ್ರಾಮವಾದ ಚವಡಾಪುರ ತಾಂಡಾದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೇರವೇರಿಸಲಾಯಿತು. ಪೆದೆಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಚವಡಾಪುರ (ಜೂ.17) ಕಲಬುರಗಿ ಜಿಲ್ಲೆಯ ಜೇವರ್ಗಿ ಠಾಣಾ ವ್ಯಾಪ್ತಿಯ ನಾರಾಯಣಪೂರ ಬಳಿ ಕರ್ತವ್ಯನಿರತನಾಗಿದ್ದ ಮುಖ್ಯಪೇದೆ ಮಯೂರ ಚವ್ಹಾಣ (51) ಮರಳು ತುಂಬಿದ ಟ್ರ್ಯಾಕ್ಟರ್ ಹರಿದು ಸಾವನ್ನಪ್ಪಿರುವ ಹಿನ್ನೆಲೆ ಪೆದೆಯ ಸ್ವಗ್ರಾಮವಾದ ಚವಡಾಪುರ ತಾಂಡಾದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರೀಯೆ ನೇರವೇರಿಸಲಾಯಿತು. ಪೆದೆಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಚವಡಾಪುರ ತಾಂಡಾಕ್ಕೆ ಆಗಮಿಸಿದ ಎಸ್‌ಪಿ ಇಶಾ ಪಂತ್ ಪೆದೆಯ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಯಿಂದ ಅಗತ್ಯ ನೆರವು ನೀಡಲಾಗುತ್ತದೆ. ಅಲ್ಲದೆ ಪೆದೆಯ ಸಾವಿಗೆ ಕಾರಣವಾದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತೇವೆ ಎಂದು ಭರವಸೆ ನೀಡಿದರು. ಘಟನೆ ಸಂಬಂಧ ಜೇವರ್ಗಿ ತಾಲೂಕಿನ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಟ್ರ್ಯಾಕ್ಟರ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಮೃತ ಪೆದೆ ಮಯೂರ ಅವರು ಈ ಹಿಂದೆ ಅಫಜಲ್ಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 10 ತಿಂಗಳ ಹಿಂದಷ್ಟೇ ಜೇವರ್ಗಿ ತಾಲೂಕಿನ ನೆಲೋಗಿ ಠಾಣೆಗೆ ವರ್ಗಾವಣೆಗೊಂಡಿದ್ದರು.
‘ಮರಳು ಕಳ್ಳ’ರಿಗೆ ಕಲಬುರಗಿಯಲ್ಲಿ ಯಾರ ಭಯವೂ ಇಲ್ರಿ!
ಅಂತ್ಯಕ್ರೀಯೆಯಲ್ಲಿ ಕಲಬುರಗಿ ಎಸ್‌ಪಿ ಇಶಾ ಪಂತ್, ಆಳಂದ ಉಪ ವಿಭಾಗದ ಡಿವೈಎಸ್‌ಪಿ ಗೋಪಿ ಬಿ.ಆರ್., ಗ್ರಾಮೀಣ ಉಪ ವಿಭಾಗದ ಡಿವೈಎಸ್‌ಪಿ ಉಮೇಶ ಚಿಕ್ಕಮಠ, ಶಹಬಾದ ಉಪ ವಿಭಾಗದ ಡಿವೈಎಸ್‌ಪಿ ಶೀಲವಂತ ಹೊಸಮನಿ, ಅಫಜಲ್ಪುರ ಸಿಪಿಐ ರಾಜಶೇಖರ ಬಡದೇಸಾರ, ಆಳಂದ ಸಿಪಿಐ ಬಾಸು ಚವ್ಹಾಣ, ಜೇವರ್ಗಿ ಸಿಪಿಐ ಭೀಮನಗೌಡ ಬಿರಾದಾರ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿ, ಚವಡಾಪುರ ಗ್ರಾಮಸ್ಥರು, ತಾಂಡಾ ನಿವಾಸಿಗಳು ಕುಟುಂಬಸ್ಥರು ಇದ್ದರು.
ಮೃತ ಪೇದೆ ಕುಟುಂಬಕ್ಕೆ ವಿಮಾ ಪರಿಹಾರ ವಿತರಣೆ
ಹೊಸಪೇಟೆ : ಕಳೆದ ಫೆ. 4ರಂದು ದಾವಣಗೆರೆ ಜಿಲ್ಲೆಯ ಜಗಳೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಪೊಲೀಸ್ ಪೇದೆ ಶಬ್ಬೀರ ಹುಸೇನ್ ಅವರ ಕುಟುಂಬಕ್ಕೆ ಭಾರತೀಯ ಸ್ಟೇಟ್ ಬ್ಯಾಂಕಿನ ಪೊಲೀಸ್ ವೇತನ ಪ್ಯಾಕೇಜ್ ವಿಮಾ ಪರಿಹಾರ ಯೋಜನೆಯಡಿ .30 ಲಕ್ಷ ಪರಿಹಾರ ಚೆಕ್ ವಿತರಿಸಲಾಯಿತು.
ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್. ಶ್ರೀಹರಿಬಾಬು ಅವರು ಮೃತ ಶಬ್ಬೀರಹುಸೇನ್ ಅವರ ಪತ್ನಿ ರಜಿಯಾಬೇಗಂ ಅವರಿಗೆ ಚೆಕ್ ಹಸ್ತಾಂತರಿಸಿದರು.
ಎಸ್‌ಬಿಐ ಸ್ಯಾಲರಿ ಪ್ಯಾಕೇಜ್ ಖಾತೆ ಹೊಂದಿದವರಿಗೆ ನೀಡುವ ವಿಮಾ ಮೊತ್ತದ ಪರಿಹಾರ ಇದಾಗಿದೆ. ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಅಮಿತ್ ಗೋಯೆಲ್, ಶಾಖಾ ವ್ಯವಸ್ಥಾಪಕ ಸೈಯದ್ ಎಸ್.ಕೆ. ಸೇರಿದಂತೆ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.