Asianet Suvarna News Asianet Suvarna News

ರೈತರಿಗೆ ಸಿಹಿ ಸುದ್ದಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

* ರೈತರಿಗೆ ಸಿಹಿ ಸುದ್ದಿ  ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
* ಹುಬ್ಬಳ್ಳಿಯಲ್ಲಿ ಮಹತ್ವದ ಘೋಷಣೆ
* ದೀಪಾವಳಿ ಆಚರಿಸಲು ತವರಿಗೆ ಬಂದ ಬಸವರಾಜ ಬೊಮ್ಮಾಯಿ

paddy-buying-process-begin after deepavali Says Basavaraj Bommai rbj
Author
Bengaluru, First Published Nov 3, 2021, 5:51 PM IST
  • Facebook
  • Twitter
  • Whatsapp

ಹುಬ್ಬಳ್ಳಿ, (ನ.03): ರಾಜ್ಯದ ವಿವಿದೆಡೆ ಕಡೆಗಳಲ್ಲಿ ಭತ್ತ(Paddy) ಕೊಯ್ಲು ಪ್ರಾರಂಭವಾಗಿದ್ದು, ಭತ್ತ ಖರೀದ ಕೇಂದ್ರ ಪ್ರಾರಂಭಿಸುವಂತೆ ರೈತ(Farmers) ಸಂಘಟನೆಗಳು ಆಗ್ರಹಿಸಿವೆ.

ಇದಕ್ಕೆ  ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಸ್ಪಂದಿಸಿದ್ದು,  ಎಂಎಸ್.ಪಿ ದರಲ್ಲಿ ಭಕ್ತ ಖರೀದಿಸಲು ಸರ್ಕಾರದ ತೀರ್ಮಾನಿಸಿದ್ದಾರೆ. ಇದರಿಂದ ತ್ತ ಹೆಚ್ಚಾಗಿ ಬೆಳೆಯುವ ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಭಾಗದ ಜನರಿಗೆ ದೀಪಾವಳಿ (Deepavali) ಸಿಹಿ ಸಿಕ್ಕಂತಾಗಿದೆ.

ರೈತರಿಗೆ ಗುಡ್‌ನ್ಯೂಸ್: ಭತ್ತ ಸೇರಿ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ!

ಇನ್ನು ಈ ಬಗ್ಗೆ ಇಂದು (ಬುಧವಾರ) ಹುಬ್ಬಳ್ಳಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಭತ್ತ ಖರೀದಿ ಕೇಂದ್ರ ಆರಂಭಿಸಿ ಎಂಬ ಬೇಡಿಕೆ ಇತ್ತು. ಅದರಲ್ಲೂ ಭತ್ತ ಹೆಚ್ಚಾಗಿ ಬೆಳೆಯುವ ರಾಯಚೂರು, ಕೊಪ್ಪಳ ಭಾಗ ಸೇರಿದಂತೆ ರಾಜ್ಯದ ರೈತರು ಈ ಬಗ್ಗೆ ಪದೇ ಪದೇ ಮನವಿ ಮಾಡಿದ್ದರು. ಹೀಗಾಗಿ ಎಂಎಸ್.ಪಿ ದರಲ್ಲಿ ಭಕ್ತ ಖರೀದಿಸಲು ಸರ್ಕಾರದ ತೀರ್ಮಾನಿಸಿದೆ. ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಲು ತಿಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ದೀಪಾವಳಿ ಮುಗಿದ ತಕ್ಷಣ ಭತ್ತ ಖರೀದಿ ಆರಂಭವಾಗುತ್ತದೆ. ಭತ್ತ ಖರೀದಿ ನೇರವಾಗಿ ಸರ್ಕಾರವೆ ಮಾಡಲಿದೆ. ಜತೆಗೆ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಸಂಪುಟ ಉಪ ಸಮಿತಿಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಪ್ರತಿ ವರ್ಷ ಹುಬ್ಬಳ್ಳಿಯಲ್ಲೇ ದೀಪಾವಳಿ ಆಚರಿಸುತ್ತೇವೆ. ಹೀಗಾಗಿ ಈ ಬಾರಿಯೂ ಹುಬ್ಬಳ್ಳಿಗೆ ಬಂದಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇನ್ನು ಇದೇ ವೇಳೆ ಈ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ನಿರ್ಧಾರ ಮಾಡಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ದಿನಾಂಕ ನಿಗದಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೈ ಸಹ ಹುಬ್ಬಳ್ಳಿಯಲ್ಲೇ ದೀಪಾವಳಿ ಆಚರಿಸಲು ಸಿಎಂ ಬಸವರಾಜ ಬೊಮ್ಮಾಯಿ ತೀರ್ಮಾನಿಸಿದ್ದು, ಬುಧವಾರ ಬೆಳಗ್ಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ಬಂದಿಳಿದರು. ಈ ಮೂರು ದಿನಗಳ ಕಾಲ ಹುಬ್ಬಳ್ಳಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios