ಕರ್ನಾಟಕದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್: ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆ

ಕರ್ನಾಟಕಲ್ಲಿ ಮಾಹಾಮಾರಿ ಕೊರೋನಾ ವೈರಸ್ ಸೊಂಕಿತ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ರಾಜ್ಯದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಇದನ್ನ ಸ್ವತಃ ಸಚಿವ ಸುಧಾಕರ್ ತಿಳಿಸಿದ್ದಾರೆ.

one more coronavirus positive in Karnataka Cases Rise to 14

ಬೆಂಗಳೂರು, (ಮಾ.18): ರಾಜ್ಯದಲ್ಲಿ ಮತ್ತೋರ್ವರಿಗೆ ಕೊರೋನಾ ವೈರಸ್ ತಗುಲಿರುವುದು ದೃಢವಾಗಿದೆ. ಇದರಿಂದ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮತ್ತೊಬ್ಬರಿಗೆ ಕೊರೋನಾ ವೈರಸ್ ದೃಢಪಟ್ಟಿರುವುದರ ಬಗ್ಗೆ ಕಲಾಪದಲ್ಲಿ ಸ್ಪಷ್ಟಪಡಿಸಿದರು.  

ಕೊರೋನಾ ವೈರಸ್ ಅಟ್ಟಹಾಸ: ಮತ್ತೆ 1 ವಾರ ಕರ್ನಾಟಕ ಬಂದ್ ಮುಂದುವರಿಕೆ..!

ಆದ್ರೆ, ಆ ವ್ಯಕ್ತಿ ಯಾರು..? ಅವರು ಎಲ್ಲಿಂದ ಬಂದವರು..? ಎನ್ನುವುದನ್ನ ಮಾತ್ರ ಮಾಹಿತಿ ನೀಡಿಲ್ಲ. ವಿದೇಶದಿಂದ ಬಂದವರಲ್ಲಿ 11 ಜನರಿಗೆ ಕೊರೋನಾ ವೈರಸ್ ಬಂದಿದೆ. ಇನ್ನು ಅವರಿಂದಲೇ ಸ್ಥಳೀಯ ಮೂವರಿಗೆ ಸೋಂಕು ತಗುಲಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.

4ನೇ ಸ್ಥಾನದಲ್ಲಿ ಕರುನಾಡು
ಹೌದು.. ದೇಶದ ವಿವಿಧ ರಾಜ್ಯಗಳ ಪೈಕಿ ಕೊರೋನಾ ವೈರಸ್ ಸೊಂಕಿತ ಸಂಖ್ಯೆಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿ. ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ (40), 2ನೇ ಸ್ಥಾನದಲ್ಲಿ ಉತ್ತರ ಪ್ರದೇಶ ಇದ್ದರೆ, 3ನೇ ಸ್ಥಾನದಲ್ಲಿ ದೆಹಲಿ ಇದೆ.

ಕೊರೋನಾ ಎದುರಿಸಲು ಭಾರತಕ್ಕಿರುವ ಸಮಸ್ಯೆಗಳೇನು?

ಮಾರ್ಚ್ 31ರವರೆಗೆ ರಾಜ್ಯ ಸ್ತಬ್ಧ
ಹೌದು...ಮತ್ತೆ ಒಂದು ವಾರ ಕರ್ನಾಟಕ ಸ್ತಬ್ಧವಾಗಲಿದೆ. ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ರಾಜ್ಯ ಸರ್ಕಾರ ಮತ್ತೆ ಒಂದು ವಾರ ಕರ್ನಾಟಕ ಬಂದ್‌ ಮಾಡುವಂತೆ ತೀರ್ಮಾನಿಸಿದೆ. ಈ ಬಗ್ಗೆ ಸ್ವತಃ ಬಿಎಸ್ ಯಡಿಯೂರಪ್ಪ ಅವೇ ಕಲಾಪದಲ್ಲಿ ತಿಳಿಸಿದರು.

ಈ ಹಿಂದೆ ಇದ್ದ ಮಾರ್ಗಸೂಚಿಗಳೇ ಮುಂದುವರೆಯಲಿವೆ. ಸಭೆ, ಸಮಾರಂಭಗಳನ್ನ ರದ್ದು ಮಾಡಲಾಗಿದ್ದು, 200ಕ್ಕೂ ಹೆಚ್ಚು ಜನರು ಸೇರುವಂತಿಲ್ಲ ಎಂದು ಯಡಿಯೂರಪ್ಪ ಸೂಚಿಸಿದ್ದಾರೆ.

Latest Videos
Follow Us:
Download App:
  • android
  • ios