ಮುಂದುವರಿದ ಶಕ್ತಿ ಯೋಜನೆ ಅವಾಂತರ: ಸೀಟು ಹಿಡಿಯಲು ಹೋದ ವೃದ್ಧ ಬಸ್ಸಿನ ಚಕ್ರಕ್ಕೆ ಸಿಲುಕಿ ತೀವ್ರ ಗಾಯ!

ಬಸ್ಸಿನಲ್ಲಿ ಸೀಟು ಹಿಡಿಯಲು ಹೋಗಿ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬ ಬಸ್ ಚಕ್ರಕ್ಕೆ ಸಿಲುಕಿದ ಘಟನೆ ವಿಜಯನಗರದ ಕೊಟ್ಟೂರು ಪಟ್ಟಣದ ಬಸ್‌ನಿಲ್ದಾಣದಲ್ಲಿ ನಡೆದಿದೆ. ವೃದ್ಧ  ಬಸವರಾಜಪ್ಪ , ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ.

Old man seriously injured after being stuck under the bus wheel at kottur rav

ವಿಜಯನಗರ (ನ.28): ಬಸ್ಸಿನಲ್ಲಿ ಸೀಟು ಹಿಡಿಯಲು ಹೋಗಿ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬ ಬಸ್ ಚಕ್ರಕ್ಕೆ ಸಿಲುಕಿದ ಘಟನೆ ವಿಜಯನಗರದ ಕೊಟ್ಟೂರು ಪಟ್ಟಣದ ಬಸ್‌ನಿಲ್ದಾಣದಲ್ಲಿ ನಡೆದಿದೆ.

ವೃದ್ಧ  ಬಸವರಾಜಪ್ಪ , ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ. ನಡುಮಾವಿನಹಳ್ಳಿ ಗ್ರಾಮದ  ಬಸವರಾಜಪ್ಪಕೆಲಸದ ನಿಮಿತ್ತ ಕೊಟ್ಟೂರು ಪಟ್ಟಣಕ್ಕೆ ಬಂದಿದ್ದಾನೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್ ಗಳು ತುಂಬಿತುಳುಕುವುದರಿಂದ ಸೀಟು ಸಿಗದೆ ಪರದಾಟ. ಈ ಪರದಾಟ ತಪ್ಪಿಸಲು ಬಸ್ ಬರುತ್ತಿದ್ದಂತೆ ಸೀಟು ಹಿಡಿಯಲು ಮುಂದಾಗಿದ್ದ ವೃದ್ಧ  ಬಸವರಾಜಪ್ಪ ಆಯಾತಪ್ಪಿ ಕೆಳಗೆ ಬಿದ್ದಿದ್ದಾನೆ. ಸಂಡೂರು ಘಟಕಕ್ಕೆ ಸೇರಿದ KA 35 F 353 ಸಂಖ್ಯೆಯ ಬಳ್ಳಾರಿ - ಸಂಡೂರು ಹರಪನಹಳ್ಳಿ ಮಾರ್ಗ ಸಂಚರಿಸುವ ಬಸ್. ಚಲಿಸುವ ವೇಳೆ ಬಸ್ಸಿನ ಚಕ್ರ ಬಸವರಾಜಪ್ಪರ ಕಾಲು ಮೇಲೆ ಹತ್ತಿದೆ.

ಮನೆ ಕರೆಂಟ್ ಬಿಲ್ ಹೆಚ್ಚಿಗೆ ಬಂದಿದ್ದಕ್ಕೆ ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ ವ್ಯಕ್ತಿ!

ಕರೆ ಮಾಡಿದ್ರೂ ಸ್ಥಳಕ್ಕೆ ಬಾರದ ಆಂಬುಲೆನ್ಸ್:

ಬಸ್ಸಿನ ಚಕ್ರಕ್ಕೆ ಸಿಲುಕಿ ತೀವ್ರ ಗಾಯಗೊಂಡಿದ್ದ ವೃದ್ಧನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಬಳಿಕ ಆಂಬುಲೆನ್ಸ್ ಗೆ ಕರೆ ಮಾಡಿದ್ರೂ ಸ್ಥಳಕ್ಕೆ ಬಾರದ ಆಂಬುಲೆನ್ಸ್. ಅಂಬುಲೆನ್ಸ್ ಕಾದರೂ ಬಾರದ ಹಿನ್ನೆಲೆ ಬಳಿಕ ಬಸ್‌ನಲ್ಲಿಯೇ ವೃದ್ಧನನ್ನು ಸಮುದಾಯ ಆರೋಗ್ಯ ಕೇಂದ್ರ ರವಾನಿಸಿದ ಸ್ಥಳೀಯರು. ಗಂಭೀರವಾಗ ಗಾಯಗೊಂಡಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಶಕ್ತಿ ಯೋಜನೆ ಎಫೆಕ್ಟ್: ಸಾರಿಗೆ ಸಿಬ್ಬಂದಿಗಿಲ್ಲ ವೇತನ ಗ್ಯಾರಂಟಿ, ಪಗಾರ ಸಿಗದೆ ಪರದಾಟ..!

ಕೊಟ್ಟೂರು ಬಸ್ ನಿಲ್ದಾಣದ ಸುತ್ತ ಜನಸಂದಣಿ. ಅದರಲ್ಲೂ ಶಕ್ತಿಯೋಜನೆ ಜಾರಿಯಾದ ಬಳಿಕ ಬಸ್ ಗಳು ಫುಲ್ ರಶ್. ಸೀಟಿಗಾಗಿ ಇಲ್ಲಿ ಆಗಾಗ ಜಗಳಗಳು ನಡೆಯುತ್ತವೆ.  ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ರೂ ಅಧಿಕಾರಿಗಳ ನಿರ್ಲಕ್ಷ್ಯ. ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಇದೀಗ ಮತ್ತೊಂದು ಆಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಟ್ಟೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

Latest Videos
Follow Us:
Download App:
  • android
  • ios