Asianet Suvarna News Asianet Suvarna News

ಸಿಎಂ ಪತ್ನಿ ಸಾದ್ವಿ ಮಹಿಳೆ, ಮುಡಾ ಆರೋಪದಿಂದ ಅವರ ಮನಸಿಗೆ ನೋವಾಗಿದೆ: ಸಚಿವ ಮಹದೇವಪ್ಪ

ಮುಡಾ ನಿವೇಶನ ವಿಚಾರವಾಗಿ ಲೋಕಾಯುಕ್ತದಲ್ಲಿ ಎಫ್‌ಐಆರ್ ಆಗಿತ್ತು. ಇಡಿಯವರು ಸಹ ಎಫ್‌ಐಆರ್ ಮಾಡಿದ್ದಾರೆ ಕಾನೂನು ಪ್ರಕಾರ ನೋಡೋಣ ಎಂದು ಸಚಿವ ಹೆಚ್‌ಸಿ ಮಹದೇವಪ್ಪ ಹೇಳಿದರು

Muda scam karnataka minister hc mahadevappa reacts about about cm siddaramaiah rav
Author
First Published Oct 1, 2024, 6:48 PM IST | Last Updated Oct 1, 2024, 6:50 PM IST

ಮೈಸೂರು (ಅ.1) ಮುಡಾ ನಿವೇಶನ ವಿಚಾರವಾಗಿ ಲೋಕಾಯುಕ್ತದಲ್ಲಿ ಎಫ್‌ಐಆರ್ ಆಗಿತ್ತು. ಇಡಿಯವರು ಸಹ ಎಫ್‌ಐಆರ್ ಮಾಡಿದ್ದಾರೆ ಕಾನೂನು ಪ್ರಕಾರ ನೋಡೋಣ ಎಂದು ಸಚಿವ ಹೆಚ್‌ಸಿ ಮಹದೇವಪ್ಪ ಹೇಳಿದರು.

ಇಂದು ಮುಡಾ ಹಗರಣ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಿಎಂ ಸಿದ್ದರಾಮಯ್ಯರ ಪತ್ನಿ ಪಾರ್ವತಿಯವರು ಸಾದ್ವಿ ಮಹಿಳೆ. ಅವರು ಸಿಎಂ ಪತ್ನಿಯಾಗಿದ್ದರೂ ಇಲ್ಲಿವರೆಗೂ ಎಲ್ಲೂ ಕಾಣಿಸಿಕೊಂಡವರಲ್ಲ. ಆದರೆ ರಾಜಕೀಯ ದ್ವೇಷದಿಂದ ಅವರನ್ನು ಈ ಪ್ರಕರಣದಲ್ಲಿ ಎಳೆದು ತರಲಾಗಿದೆ. ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕವಾಗಿ ಜನಸೇವೆ ಮಾಡಿದವರು. ಆದರೆ ದ್ವೇಷ ರಾಜಕಾರಣದಿಂದ ಕ್ಷುಲ್ಲಕ ಕಾರಣಕ್ಕೆ ಇಷ್ಟೆಲ್ಲ ಆಗಿದೆ. ಇದೆಲ್ಲವನ್ನೂ ನೋಡಿ ನೋವಿನಿಂದ ಸೈಟ್ ವಾಪಸ್ ಕೊಟ್ಟಿರಬಹುದು ಎಂದರು.ಇದನ್ನೆಲ್ಲ ನೋಡಿದಾಗ ಮನಸಿಗೆ ಘಾಸಿಯಾಗಿರಬಹುದು ಎಂದು ಬೇಸರ ವ್ಯಕ್ತಪಡಿಸಿದರು.

ಮುಡಾ ಹಗರಣ: ಇವತ್ತಿನ ಸ್ಥಳ ಮಹಜರು ಪ್ರಕ್ರಿಯೆ ತೃಪ್ತಿ ನೀಡಿದೆ - ಸ್ನೇಹಮಯಿ ಕೃಷ್ಣ ಹೇಳಿದ್ದೇನು?

ತಪ್ಪು ಮಾಡಿದ್ದೇವೆ ನಿವೇಶನ ತೆಗೆದುಕೊಳ್ಳಿ ಎಂದು  ವಾಪಸ್ ನೀಡಿದ್ದಾರ? ತಮ್ಮ‌ ಪತಿ 40 ವರ್ಷ ರಾಜಕೀಯ‌ ಮಾಡಿದ್ದಾರೆ. ಅವರ ಮೇಲೆ ಎಲ್ಲೂ ಕಪ್ಪು ಚುಕ್ಕೆ ಇಲ್ಲ. ಹಾಗಾಗಿ ನಾನು ಸರೆಂಡರ್ ಮಾಡಿದ್ದೇನೆ ಎಂದು ಸಿಎಂ ಅವರ ಪತ್ನಿ ಹೇಳಿದ್ದಾರೆ. ಹೀಗಿರುವಾಗ  ಕ್ವಶ್ವನ್ ರೈಸ್ ಮಾಡೋದು ಹೇಗೆ? ವಿಜಯನಗರದಲ್ಲಿನ ಮನೆ ದಲಿತರಿಗೆ ಸೇರಿದ್ದಲ್ಲ. ಬ್ಯಾಕ್ ವರ್ಡ್ ಕ್ಲಾಸ್‌ನವರಿಗೆ ಸೇರಿದ್ದು. ಸುಪ್ರೀಂನಲ್ಲೂ ಅದು ಕ್ಲಿಯರ್ ಆಗಿದೆ. ಅದರ ಬಗ್ಗೆ ಯಾಕೆ ಈಗ ಯಾಕೆ ಮಾತನಾಡ್ತೀರ? ಎಂದು ಪ್ರಶ್ನಿಸಿದರು.

ಬಿಜೆಪಿ-ಜೆಡಿಎಸ್‌ ಪ್ರಜ್ಞೆ ಇದ್ಯಾ?

ಜೆಡಿಎಸ್ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅವರು ನಾಲಗೆ ಎತ್ತ ಬೇಕಾದರೂ ತಿರುಗಿಸಬಹುದು. ಪ್ರಜ್ಞೆ ಇದೆಯಾ ಅವರಿಗೆ? ಈ ವಿಚಾರದಲ್ಲಿ ರಾಜಕಾರಣ ದಿಲ್ಲಿಯಿಂದ ಇಲ್ಲಿವರೆಗೆ ನಡೆದಿದೆ. ಆಡಳಿತ ಕುಸಿದಿದೆ ಅಂತಾ ಸರ್ಕಾರವನ್ನು ಕಿತ್ತು ಹಾಕ್ತಾರಾ? ಇದೆಲ್ಲ ರಾಜಕೀಯ ಅಲ್ಲದೇ ಮತ್ತೇನು? ಸಿಎಂ ಸಿದ್ದರಾಮಯ್ಯ ಸರ್ಕಾರದ ಮುಖ್ಯಮಂತ್ರಿ. ಮುಡಾ ವಿಚಾರದಿಂದ ಏನೂ ಬದಲಾವಣೆ ಆಗೊಲ್ಲ. ಮುಂದೆಯೂ ಅವರೇ ನಮ್ಮ ಮುಖ್ಯಮಂತ್ರಿ. ನಾವು ಜನರಿಗೆ ಆಶ್ವಾಸನೆ ಕೊಟ್ಟಿದ್ದೇವೆ. ಜನರಿಗೆ ಮಾಸಿಕ ಆದಾಯವನ್ನ ಕೊಟ್ಟಿದ್ದೇವೆ. ಇಷ್ಟೆಲ್ಲಾ ಸಮಾಜ ಕಲ್ಯಾಣಕ್ಕಾಗಿ ಕಾರ್ಯಕ್ರಮ ಮಾಡಿದ್ರೂ ರಾಜಕೀಯ ದ್ವೇಷದಿಂದ ಇಷ್ಟೆಲ್ಲ ನಡೆದುಹೋಗಿದೆ. ನಾಗಮಂಗಲ ಗಲಾಟೆ ಹರಿಯಾಣದಲ್ಲಿ ಮಾತನಾಡ್ತಾರೆ ಇದೆಲ್ಲ ಎಲ್ಲಿಗೆ ಬಂದಿದೆ ನೋಡಿ ಎಂದು ಪರೋಕ್ಷವಾಗಿ ಮೋದಿ ವಿರುದ್ಧ ಹರಿಹಾಯ್ದರು.

ಬಿಜೆಪಿ ನಾಯಕರ ಮಾತಿಗೆ ನೊಂದು ಸಿಎಂ ಪತ್ನಿ 14 ಸೈಟ್ ಹಿಂದಿರುಗಿಸಿದ್ದಾರೆ: ಸಚಿವ ಮಂಕಾಳು ವೈದ್ಯ

ಕಾನೂನು ಹೋರಾಟ ಮಾಡ್ತೇವೆ:

ನಮ್ಮ ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಪರ ಇದೆ. ಶಾಸಕ, ಸಂಸದರು ಎಲ್ಲರೂ ಸಿಎಂ ಸಿದ್ದರಾಮಯ್ಯರ ಜೊತೆ ಇದ್ದಾರೆ. ಕಾನೂನು ತಜ್ಞರ ಪ್ರಕಾರ ಚರ್ಚೆ ಮಾಡುತ್ತೇವೆ. ಮುಡಾ ವಿಚಾರದಲ್ಲಿ ಕಾನೂನು ಹೋರಾಟ ಇದ್ದೇ ಇದೆ. ಕೇಜ್ರಿವಾಲ್ ಸೂರೇನ್ ರೀತಿ ಕರ್ನಾಟಕದಲ್ಲೂ ಆಗ್ತಿದ್ಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರು ಹೇಗೆ ತನಿಖೆ ಮಾಡ್ತಾರೆ ನೊಡೋಣ. ಬಿಜೆಪಿ ಜೆಡಿಎಸ್ ನವರಿಗೆ ಅರ್ಜೆಂಟ್ ಇದೆ. ಅವರಿಗೆ ಮ್ಯಾಂಡೇಟ್ ಕೊಟ್ಟಿರಲಿಲ್ಲ. ಅಂತದ್ದೇ ಪ್ರಯತ್ನ ಮುಡಾ ವಿಚಾರದಲ್ಲೂ ನಡೆದಿದೆ. ದೇಶದ ನೆಲದ ಕಾನೂನಿನ ಮೇಲೆ ನಮಗೆ ಗೌರವವಿದೆ. ಕಾನೂನು‌ ಸಲಹೆ ಪಡೆದು ಮುಂದುವರೆಯುತ್ತೇವೆ. ಕಾನೂನು ಪ್ರಕಾರ ಏನು ಮಾಡಬೇಕು ಅದನ್ನ ಮಾಡುತ್ತೇವೆ. ಅದನ್ನು ನಿಮಗೆ ತಿಳಿಸಬೇಕು ಅಂತೇನಾದ್ರೂ ಇದ್ಯಾ ಎಂದು ಮಾಧ್ಯಮದವರನ್ನ ಪ್ರಶ್ನಿಸಿದರು.

Latest Videos
Follow Us:
Download App:
  • android
  • ios