Asianet Suvarna News Asianet Suvarna News

Lunar eclipse 2022: ಮಧ್ಯಾಹ್ನದಿಂದ ಸಂಜೆವರೆಗೆ ದೇವಸ್ಥಾನ ಬಂದ್‌

  • ಮೋಕ್ಷದ ಬಳಿಕ ದರ್ಶನಕ್ಕೆ ಅವಕಾಶ
  • ನೆಹರು ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ
  • ನಗರದಲ್ಲಿ ಭಾಗಶಃ ಚಂದ್ರಗ್ರಹಣ
Moon eclipse Hindu temples close from noon to evening today rav
Author
First Published Nov 8, 2022, 8:11 AM IST | Last Updated Nov 8, 2022, 8:12 AM IST

ಬೆಂಗಳೂರು (ನ.8) : 15 ದಿನಗಳ ಅಂತರದಲ್ಲಿ ಎರಡನೇ ಗ್ರಹಣ ಮಂಗಳವಾರ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಬಹುತೇಕ ದೇವಾಲಯಗಳು ಮಧ್ಯಾಹ್ನದ ಬಳಿಕ ಮುಚ್ಚಲಿದ್ದು, ಮೋಕ್ಷದ ಬಳಿಕ ತೆರೆದುಕೊಳ್ಳಲಿವೆ.

Lunar eclipse 2022: ಬದಲಾವಣೆಯ ಲಾಭ ಪಡೆಯಿರಿ

ನಾವು ಪ್ರಕೃತಿಯ ಬದಲಾವಣೆಗಳಿಗೆ ತಕ್ಕನಂತೆ ಸ್ಪಂದಿಸಬೇಕು. ಈ ಚಂದ್ರಗ್ರಹಣದ

ಪ್ರಮುಖವಾಗಿ ಗವಿಗಂಗಾಧರೇಶ್ವರ ದೇವಸ್ಥಾನ, ಕೋಟೆ ವೆಂಕಟೇಶ್ವರ ದೇವಸ್ಥಾನ, ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಸ್ಥಾನ, ಬಸವನಗುಡಿ ದೊಡ್ಡ ಗಣೇಶ, ಬನಶಂಕರಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧವಿದೆ. ಮಧ್ಯಾಹ್ನದ ಬಳಿಕ ಮುಚ್ಚಲಿದ್ದು, ರಾತ್ರಿ ಗ್ರಹಣದ ಬಳಿಕವೆ ತೆರೆದುಕೊಳ್ಳಲಿವೆ. ನಂತರ ದೇವಸ್ಥಾನದ ಶುದ್ಧಿಕಾರ್ಯ ನಡೆಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಿವೆ.

ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಸೋಮಸುಂದರ ದೀಕ್ಷಿತ್‌ ಮಾತನಾಡಿ, ಗ್ರಹಣದಿಂದ ಸಾಕಷ್ಟುತೊಂದರೆ ಆಗಬಹುದು. ಭರಣಿ ನಕ್ಷತ್ರದ ಮೇಷ ರಾಶಿಯವರಿಗೆ ಗ್ರಹಣ ತೊಂದರೆ ಸಾಧ್ಯತೆಯಿದೆ. ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ವಿಶೇಷ ಪೂಜೆ ಪುನಸ್ಕಾರ ನಡೆಯಲಿದೆ. ಮಧ್ಯಾಹ್ನ 12ಗಂಟೆ ಬಳಿಕ ದೇವಸ್ಥಾನ ಬಂದ್‌ ಮಾಡಲಾಗುವುದು. ಸಂಜೆ 7 ಗಂಟೆ ಬಳಿಕ ಬಾಗಿಲು ತೆರೆದು ಶುದ್ಧೀಕರಣ ಮಾಡಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

ನಗರದ ಬನಶಂಕರಿ ದೇವಾಲಯದಲ್ಲಿ ಬೆಳಗ್ಗೆ 5ರಿಂದ 10ಗಂಟೆವರೆಗೆ ಪೂಜೆಗಳು ನಡೆಯಲಿದೆ. ಬಳಿಕ ದೇವಾಲಯದ ಬಾಗಿಲು ಮುಚ್ಚಲಾಗುವುದು. ಮಧ್ಯಾಹ್ನ 2.39 ರಿಂದ ಸಂಜೆ 6.19ರವರೆಗೆ ಗ್ರಹಣದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ®ದೇವಾಲಯ ಶುಚಿಗೊಳಿಸಿ ಸಂಜೆ 7.30ರ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಬಂಡಿ ಮಹಾಕಾಳಿ ದೇವಾಲಯದಲ್ಲಿ ಗ್ರಹಣ ಆರಂಭದಿಂದ ಮೋಕ್ಷಕಾಲದವರೆಗೆ ಗಣ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಶಾಂತಿ ಪೂಜೆಗಳು ನಡೆಯಲಿವೆ. ಬಳಿಕ ಪೂರ್ಣಾಹುತಿ ಮಾಡಿ, ದೇವಿಗೆ ಅಭಿಷೇಕ, ಅಲಂಕಾರ ಹಾಗೂ ಪೂಜೆ ನಡೆಯಲಿದೆ.

ತಾರಾಲಯದಿಂದ ಯುಟ್ಯೂಬ್‌ ಲೈವ್‌

ವರ್ಷದ ಕೊನೆಯ ಕೊನೆಯ ಚಂದ್ರ ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದಾದ ಹಿನ್ನೆಲೆಯಲ್ಲಿ ಗ್ರಹಣ ವೀಕ್ಷಣೆಗೆ ನಗರದ ನೆಹರು ತಾರಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಿಲ್ಲ. ಚಂದ್ರೋದಯಕ್ಕೂ ಮೊದಲೆ ಗ್ರಹಣ ಆಗಲಿದ್ದು, ಸುಮಾರು 20 ನಿಮಿಷಗಳ ಕಾಲ ಗೋಚರಿಸಲಿದೆ. ಈ ಬಾರಿ ನೆಹರು ತಾರಾಲಯ ಚಂದ್ರ ಗ್ರಹಣದ ಯೂಟ್ಯೂಬ್‌ ಲೈವ್‌ ವ್ಯವಸ್ಥೆ ಮಾಡಿದ್ದು, ಈ ವೇಳೆ ನೇರ ಪ್ರಶ್ನೆಗಳನ್ನು ಕೇಳಬಹುದು ಎಂದು ತಾರಾಲಯ ತಿಳಿಸಿದೆ.

Lunar eclipse 2022: ಆಚರಣೆಗಳೇನು? ಬರಿಕಣ್ಣಿನಲ್ಲಿ ನೋಡಬಹುದೇ?

ಬರಿಗಣ್ಣಿನಿಂದ ವೀಕ್ಷಿಸಬಹುದು

ಬೆಂಗಳೂರಲ್ಲಿ ಸಂಜೆ 5.53ರಿಂದ 6.18ರವರೆಗೆ ಭಾಗಶಃ ಚಂದ್ರ ಗ್ರಹಣ ಗೋಚರಿಸಬಹುದು. ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

Latest Videos
Follow Us:
Download App:
  • android
  • ios