ಮೋದಿ ಮೆಚ್ಚಿದ ರಾಜ್ಯದ ಕವಿಗೆ ದಿಲ್ಲಿ ಗಣತಂತ್ರ ದಿನಕ್ಕೆ ಆಹ್ವಾನ!

ಪ್ರಧಾನಿ ಮೋದಿ ಮೆಚ್ಚಿದ ಜೋಗುಳ ಪದ ರಚಿಸಿದ್ದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಕವಿ ಮಂಜುನಾಥ ಅವರಿಗೆ ಜ.26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ.

Modis favorite state poet Kollegal Manjunath invited to Delhi Republic Day at Chamarajanagar rav

ಕೊಳ್ಳೆಗಾಲ (ಜ.19) : ಪ್ರಧಾನಿ ಮೋದಿ ಮೆಚ್ಚಿದ ಜೋಗುಳ ಪದ ರಚಿಸಿದ್ದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಕವಿ ಮಂಜುನಾಥ ಅವರಿಗೆ ಜ.26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ.

ಮಂಜುನಾಥ ಅವರು ವೃತ್ತಿಯಲ್ಲಿ ಎಲ್‌ಐಸಿ ವಿಮಾ ಏಜೆಂಟ್ ಆಗಿದ್ದಾರೆ. ಆದರೆ ಪ್ರವೃತ್ತಿಯಲ್ಲಿ ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಕೊವಿಡ್ ವೇಳೆ ಮಲಗು ಕಂದ, ಮಲಗು ಕೂಸೆ, ಮಲಗು ನನ್ನ ಜಾಣಮರಿಯೇ.. ಎಂಬ ಸಾಲಿನಿಂದ ಕೂಡಿದ ಲಾಲಿ ಹಾಡು ರಚಿಸಿದ್ದರು. 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ, *ಆಜಾದಿ ಕಾ ಅಮೃತ್‌ ಮಹೋತ್ಸವ್‌ ಎಂಬ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಅಖಿಲ ಭಾರತದ ಹಂತದ ಸ್ಪರ್ಧೆ  ಲಾಲಿ ಹಾಡು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಮಂಜುನಾಥ ಅವರು ತಮ್ಮ ಪುತ್ರನ ಒತ್ತಾಸೆಗೆ ಮಣಿದು ಜೋಗುಳದ ಹಾಡು ಕಳಿಸಿಕೊಟ್ಟಿದ್ದರು. ಆದರೆ ಈ ಹಾಡು ರಾಷ್ಟ್ರಪಟ್ಟದಲ್ಲಿ ಸದ್ದು ಮಾಡಿತ್ತು. ಅಲ್ಲದೇ ಪ್ರಧಾನಿ ಮೋದಿಯವರ ಮೆಚ್ಚುಗೆಗೆ ಪಾತ್ರವಾಗಿತ್ತು. 'ಮಲಗು ಕಂದ' ಲಾಲಿ ಹಾಡು ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾಗಿ 6ಲಕ್ಷ ನಗದು ಪುರಸ್ಕಾರಕ್ಕೆ ಪಡೆದಿತ್ತು. 

ರಾಮ ಲಲ್ಲಾ ವಿಗ್ರಹಕ್ಕೆ ಬಳಸಿದ್ದು 30 ಲಕ್ಷ ವರ್ಷಗಳಷ್ಟು ಹಳೆಯ ಶಿಲೆ!

Latest Videos
Follow Us:
Download App:
  • android
  • ios