ರಾಮ ಲಲ್ಲಾ ವಿಗ್ರಹಕ್ಕೆ ಬಳಸಿದ್ದು 30 ಲಕ್ಷ ವರ್ಷಗಳಷ್ಟು ಹಳೆಯ ಶಿಲೆ!
ಅಯೋಧ್ಯಾ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮ ಲಲ್ಲಾನ ವಿಗ್ರಹಕ್ಕೆ ಬಳಸಿರುವ ಕಲ್ಲು ಸುಮಾರು ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಭೂ ವಿಜ್ಞಾನಿ ಡಾ.ಸಿ.ಶ್ರೀಕಂಠಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು (ಜ.19): ಅಯೋಧ್ಯಾ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮ ಲಲ್ಲಾನ ವಿಗ್ರಹಕ್ಕೆ ಬಳಸಿರುವ ಕಲ್ಲು ಸುಮಾರು ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಭೂ ವಿಜ್ಞಾನಿ ಡಾ.ಸಿ.ಶ್ರೀಕಂಠಪ್ಪ ಅಭಿಪ್ರಾಯಪಟ್ಟಿದ್ದಾರೆ.
ಭೂಮಿ ಸೃಷ್ಟಿಯಾದಾಗಲೇ ಉದ್ಬವಿಸಿದ ಕಲ್ಲುಗಳು ಸರಗೂರು, ಜಯಪುರ, ಹೆಚ್‌ಡಿ ಕೋಟೆ, ಹಾಸನ ಮುಂತಾದ ಭಾಗಗಳಲ್ಲಿ ಕಂಡು ಬರುತ್ತವೆ. ಬಿಳಿಬಣ್ಣದ ಈ ಕಲ್ಲುಗಳನ್ನು ಮೂಲ ಶಿಲೆಗಳೆಂದು ಗುರುತಿಸಲಾಗುತ್ತದೆ. ಆದರೆ ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಕಪ್ಪು ಬಣ್ಣದ ಶಿಲೆ ಬೆರೆತು ಸುಮಾರು 2.5 ಮಿಲಿಯನ್ ವರ್ಷಗಳ ಹಿಂದೆಕ ಇವು ಕೃಷ್ಣಶಿಲೆಯಾಗಿ ಮಾರ್ಪಾಡಾಗಿವೆ ಎಂದು ತಿಳಿಸಿದ್ದಾರೆ.
ಕ್ಲೋರೈಡ್ ಮಿನರಲ್ ಅಂಶಗಳಿಂದಾಗಿ ಈ ಶಿಲೆ ಕೃಷ್ಣಶಿಲೆಯಾಗಿ ಪರಿವರ್ತನೆಗೊಂಡಿದೆ. ಜತೆಗೆ ಈ ಅಂಶ ಇರುವುದರಿಂದಲೇ ಈ ಶಿಲೆಯಲ್ಲಿ ಕೆತ್ತನೆ ಸುಲಭವಾಗಿದೆ. ಇಂಥ ಕಲ್ಲುಗಳು ಎಲ್ಲೆಡೆ ಸಿಗೋದಿಲ್ಲ. ಯುರೋಪ್ ರಾಷ್ಟ್ರಗಳಿಗೆ ಇಲ್ಲಿಂದ ಶಿಲೆಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಶ್ರೀರಾಮ ಜನ್ಮಸ್ಥಳ ಅಯೋಧ್ಯೆ ಬೆನ್ನಲ್ಲೇ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯೂ ವಿಸ್ಮಯ ತಾಣವಾಗುತ್ತಿದೆ!
ಶ್ರೀರಾಮನ ವಿಗ್ರಹ ಕೆತ್ತಿದ ಶಿಲೆಯಲ್ಲೇ ಕೊಪ್ಪಳದಲ್ಲಿ ಆಂಜನೇಯನ ಮೂರ್ತಿ
ಕೊಪ್ಪಳ (ಜ.19): ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಸ್ಥಾಪನೆಯಾಗಲಿರುವ ಬಾಲರಾಮನನ್ನು ಕೆತ್ತಿದ ಶಿಲೆಯ ಉಳಿದ ಭಾಗದ ಶಿಲೆಯಲ್ಲಿ ಆಂಜನೇಯನ ಮೂರ್ತಿ ಸಿದ್ಧವಾಗಲಿದೆ. ಎಚ್.ಡಿ. ಕೋಟೆಯಲ್ಲಿ ಉಳಿದಿದ್ದ ಶಿಲೆಯನ್ನು ಶಿಲ್ಪಿ ಪ್ರಕಾಶ ಕೊಪ್ಪಳಕ್ಕೆ ತರಲು ಎಚ್.ಡಿ. ಕೋಟೆ ತಾಲೂಕಿನ ಹಾರೋಹಳ್ಳಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಪ್ರಕಾಶ ಶಿಲ್ಪಿ ಬೇರೊಂದು ಮೂರ್ತಿಯನ್ನು ನಿರ್ಮಾಣ ಮಾಡಲು ಗುರುತಿಸಿದ್ದ ಶಿಲೆಯನ್ನು ನಂತರ ಶ್ರೀರಾಮನ ಬಾಲಮೂರ್ತಿ ಮಾಡಲು ತೆಗೆದುಕೊಂಡು ಹೋಗಲಾಯಿತು. ಖ್ಯಾತ ಶಿಲ್ಪಿ ಮೈಸೂರಿನ ಅರುಣ ಯೋಗಿರಾಜ್ ಇದೇ ಶಿಲೆಯಲ್ಲಿ ಕೆತ್ತಿದ ಮೂರ್ತಿ ಈಗ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ.
ಶ್ರೀರಾಮ ಜನ್ಮಸ್ಥಳ ಅಯೋಧ್ಯೆ ಬೆನ್ನಲ್ಲೇ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯೂ ವಿಸ್ಮಯ ತಾಣವಾಗುತ್ತಿದೆ!
ಹೀಗಾಗಿ, ಈ ಶಿಲೆಯಲ್ಲಿ ಉಳಿದಿರುವ ಭಾಗದಲ್ಲಿ ಆಂಜನೇಯನ ಮೂರ್ತಿಯನ್ನು ಮಾಡಲು ಕೊಪ್ಪಳದ ಪ್ರಕಾಶ ಶಿಲ್ಪಿ ತೀರ್ಮಾನ ಮಾಡಿ, ಶಿಲೆಯನ್ನು ಕೊಪ್ಪಳಕ್ಕೆ ತರುತ್ತಿದ್ದಾರೆ. ಬಾಲರಾಮನಷ್ಟೇ ಎತ್ತರ ಆಂಜನೇಯನ ಮೂರ್ತಿಯನ್ನು ಮಾಡುವುದಾಗಿ ಶಿಲ್ಪಿ ತಿಳಿಸಿದ್ದಾರೆ.