ಭದ್ರಾವತಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು!

ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಯನ್ನ ದುಷ್ಕರ್ಮಿಗಳು ಧ್ವಂಸ ಮಾಡಿರುವ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣದಲ್ಲಿ ನಡೆದಿದೆ.

Miscreants vandalized Mahatma Gandhi statue in bhadravati at shivamogga rav

ಶಿವಮೊಗ್ಗ (ಆ.21): ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಯನ್ನ ದುಷ್ಕರ್ಮಿಗಳು ಧ್ವಂಸ ಮಾಡಿರುವ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣದಲ್ಲಿ ನಡೆದಿದೆ.

ಹೊಳೆಹೊನ್ನೂರು ಗಾಂಧಿ ಸರ್ಕಲ್‌ನಲ್ಲಿರುವ ಗಾಂಧಿ ಪ್ರತಿಮೆ. ಕಳೆದ ರಾತ್ರಿ ಕಿಡಿಗೇಡಿಗಳು ದುಷ್ಕೃತ್ಯ ನಡೆಸಿರುವ ಶಂಕೆ.ದುಷ್ಕೃತ್ಯದ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು ಹೊಳೆಹೊನ್ನೂರು ಪೊಲೀಸರು. ಅಷ್ಟೊತ್ತಿಗಾಗಲೇ  ಧ್ವಂಸಗೊಂಡ ಪ್ರತಿಮೆ ಸುತ್ತ ಜಮಾಯಿಸಿದ ಸಾರ್ವಜನಿಕರು. ಘಟನಾ ಸ್ಥಳದಲ್ಲಿ ಸಾರ್ವಜನಿಕರ ಜಮಾವಣೆಗೊಂಡು ದುಷ್ಕರ್ಮಿಗಳನ್ನು ಬಂಧಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು ಈ ವೇಳೆ ಸಂಚಾರ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತಗೊಂಡಿತು.ಸದ್ಯ ಘಟನೆ ಸಂಬಂಧ ಪೊಲೀಸರು ಸುತ್ತಮುತ್ತಲಿರುವ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.

ಮುಸ್ಲಿಂ ಮಹಿಳೆಗೆ ಪಾಕಿಸ್ತಾನಕ್ಕೆ ಹೋಗು ಎಂದ ಬಸ್ ಕಂಡಕ್ಟರ್ ಮುಂದೇನಾಯಿತು ನೋಡಿ!

ಪಫ್ಸ್‌ ವಿಚಾರಕ್ಕೆ ಬೇಕರಿಗೆ ನುಗ್ಗಿ ದಾಂಧಲೆ ಮಾಡಿದ್ದ ಇಬ್ಬರ ಸೆರೆ

ಬೆಂಗಳೂರು: ಇತ್ತೀಚೆಗೆ ತುಂಗಾನಗರ ಮುಖ್ಯರಸ್ತೆಯ ಬೇಕರಿಯಲ್ಲಿ ದಾಂಧಲೆ ನಡೆಸಿದ್ದ ಆಟೋ ಚಾಲಕ ಸೇರಿದಂತೆ ಇಬ್ಬರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಟೋ ಚಾಲಕ ಬಸವರಾಜ್‌ ಹಾಗೂ ಆತನ ಸ್ನೇಹಿತ ಭರತ್‌ ಬಂಧಿತರಾಗಿದ್ದು, ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆಗೆ ತನಿಖೆ ನಡೆದಿದೆ. ಆ.16ರಂದು ಕ್ಷುಲ್ಲಕ ಕಾರಣಕ್ಕೆ ತುಂಗಾನಗರ ಮುಖ್ಯರಸ್ತೆಯಲ್ಲಿ ಚಂದ್ರಶೇಖರ್‌ ಎಂಬುವರಿಗೆ ಸೇರಿದ ‘ಮಂಜುನಾಥ ಕೇಕ್‌ ಕಾರ್ನ​ರ್‍ಸ್ ಸ್ವೀಟ್ಸ್‌’ ಬೇಕರಿಗೆ ನುಗ್ಗಿ ದಾಂಧಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ವಿಡಿಯೋ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಫ್ಸ್‌ ವಿಚಾರಕ್ಕೆ ದಾಂಧಲೆ:

ಗಲಾಟೆಗೆ ನಡೆಯುವ ಹಿಂದಿನ ದಿನ ಆ.15ರಂದು ಸಂಜೆ ಪಫ್ಸ್‌ ಖರೀದಿ ವಿಚಾರವಾಗಿ ಆಟೋ ಚಾಲಕ ಬಸವರಾಜ್‌ ಹಾಗೂ ಬೇಕರಿ ಕೆಲಸಗಾರರನ ಮಧ್ಯೆ ಜಗಳವಾಗಿತ್ತು. ಈ ಜಿದ್ದಿಗೆ ಆತ, ಮರು ದಿನ ಬೇಕರಿಗೆ ತನ್ನಿಬ್ಬರು ಸ್ನೇಹಿತರ ಜತೆ ನುಗ್ಗಿ ಗಲಾಟೆ ಮಾಡಿದ್ದ. ಬೇಕರಿ ಕೆಲಸಗಾರರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ ಬೇಕರಿ ಗಾಜನ್ನು ಕಲ್ಲು ಎತ್ತಿ ಹಾಕಿ ಒಡೆದು ಹಾಕಿದ್ದರು. ಬಳಿಕ ಬೇಕರಿ ತಿನಿಸುಗಳನ್ನು ಬೀದಿಗೆ ಎಸೆದು ಬಸವರಾಜ್‌ ಹಾಗೂ ಆತನ ಸಹಚರರು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 

ಬೆಂಗಳೂರಲ್ಲಿ ಪುಂಡರ ಹಾವಳಿ: ಬೇಕರಿಗೆ ನುಗ್ಗಿ ಗಾಜು ಒಡೆದು, ಆಹಾರ ರಸ್ತೆಗೆ ಎಸೆದು ದಾಂಧಲೆ

ಈ ಕೃತ್ಯದ ಬಗ್ಗೆ ಬ್ಯಾಡರಹಳ್ಳಿ ಠಾಣೆಗೆ ಮಾಲಿಕ ಚಂದ್ರಶೇಖರ್‌ ದೂರು ನೀಡಿದ್ದರು. ಅದರನ್ವಯ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್‌ನಲ್ಲಿ ಚಿತ್ರೀಕರಿಸಿದ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Latest Videos
Follow Us:
Download App:
  • android
  • ios