ಬೆಂಗಳೂರಲ್ಲಿ ಪುಂಡರ ಹಾವಳಿ: ಬೇಕರಿಗೆ ನುಗ್ಗಿ ಗಾಜು ಒಡೆದು, ಆಹಾರ ರಸ್ತೆಗೆ ಎಸೆದು ದಾಂಧಲೆ
ಬೇಕರಿಯೊಂದಕ್ಕೆ ನುಗ್ಗಿದ ನಾಲ್ವರು ಪುಂಡರು ಗಾಜು ಒಡೆದು ಹಾಕಿ ಹಾಗೂ ಆಹಾರ ಉತ್ಪನ್ನಗಳನ್ನು ರಸ್ತೆಗೆಸೆದು ದಾಂಧಲೆ ನಡೆಸಿ ಪರಾರಿಯಾಗಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಆ.20): ಬೇಕರಿಯೊಂದಕ್ಕೆ ನುಗ್ಗಿದ ನಾಲ್ವರು ಪುಂಡರು ಗಾಜು ಒಡೆದು ಹಾಕಿ ಹಾಗೂ ಆಹಾರ ಉತ್ಪನ್ನಗಳನ್ನು ರಸ್ತೆಗೆಸೆದು ದಾಂಧಲೆ ನಡೆಸಿ ಪರಾರಿಯಾಗಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂರು ದಿನಗಳ ಹಿಂದೆ ತುಂಗಾನಗರ ಮುಖ್ಯರಸ್ತೆಯಲ್ಲಿ ಚಂದ್ರಶೇಖರ್ ಮಾಲಿಕತ್ವದ ‘ಮಂಜುನಾಥ ಕೇಕ್ ಕಾರ್ನರ್ಸ್ ಸ್ವೀಟ್ಸ್’(Manjunath Cake Corners Sweets') ಬೇಕರಿಯಲ್ಲಿ ಈ ಗಲಾಟೆ ನಡೆದಿದ್ದು, ಕೃತ್ಯ ಎಸಗಿ ಪರಾರಿ ಆಗಿರುವ ಪುಂಡರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Bengaluru crime: ಹವಾ ಸೃಷ್ಟಿಸಲು ಯುವಕನಿಗೆ ಲಾಂಗ್‌ನಿಂದ ಹೊಡೆದು ರೀಲ್ಸ್ ಮಾಡಿದ್ದ ನಾಲ್ವರು ಆರೆಸ್ಟ್
ಹೇರೋಹಳ್ಳಿಯ ಚಂದ್ರಶೇಖರ್ ಅವರು, ಹತ್ತು ವರ್ಷಗಳಿಂದ ತುಂಗಾ ನಗರ(Tunga nagar main raod)ದ ರಸ್ತೆಯಲ್ಲಿ ಬೇಕರಿ ನಡೆಸುತ್ತಿದ್ದಾರೆ. ಆ.16ರಂದು ಸಂಜೆ 5 ಗಂಟೆಯಲ್ಲಿ ಅವರ ಬೇಕರಿಗೆ ಎರಡು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿಗಳು ಏಕಾಏಕಿ ನುಗ್ಗಿ ದಾಂಧಲೆ ನಡೆಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಬೇಕರಿ ಕೆಲಸಗಾರರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ದುಷ್ಕರ್ಮಿಗಳು, ಬೇಕರಿ ಗಾಜನ್ನು ಕಲ್ಲು ಎತ್ತಿ ಹಾಕಿ ಒಡೆದು ಹಾಕಿದ್ದಾರೆ. ಬಳಿಕ ಬೇಕರಿ ತಿನಿಸುಗಳನ್ನು ಚೆಲ್ಲಾಪಿಲ್ಲಾ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Fake news ಸಿಕ್ಕಿಂ ಮೂಲದ ವ್ಯಕ್ತಿಗೆ ಚೈನೀಸ್ ಎಂದು ಹಲ್ಲೆ ಆರೋಪ ಸುಳ್ಳು ಸುದ್ದಿ
ಈ ಕೃತ್ಯದ ಬಗ್ಗೆ ಬ್ಯಾಡರಹಳ್ಳಿ ಠಾಣೆಗೆ ಮಾಲಿಕ ಚಂದ್ರಶೇಖರ್ ದೂರು ನೀಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್‌ನಲ್ಲಿ ಚಿತ್ರೀಕರಿಸಿದ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಹುಡುಕಾಟ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.