Asianet Suvarna News Asianet Suvarna News

ಮುಸ್ಲಿಂ ಮಹಿಳೆಗೆ ಪಾಕಿಸ್ತಾನಕ್ಕೆ ಹೋಗು ಎಂದ ಬಸ್ ಕಂಡಕ್ಟರ್ ಮುಂದೇನಾಯಿತು ನೋಡಿ!

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆ ಜಾರಿಯಾದ ಬಳಿಕ ಉಚಿತ ಪ್ರಯಾಣದ ವೇಳೆ ರಾಜ್ಯದಲ್ಲಿ ಏನಲ್ಲ ಅವಂತಾರಗಳಾಗಿವೆ. ಈಗ ಆ ಸಾಲಿಗೆ ಹೊಸದೊಂದು ಅವಾಂತರ ಸೇರ್ಪಡೆಯಾಗಿದೆ. ಇದು  ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಎಫೆಕ್ಟಾ? ಸ್ತ್ರೀಶಕ್ತಿ ಯೋಜನೆಯ ಎಫೆಕ್ಟ್ ಹೀಗೂ ಇರುತ್ತಾ? ಪಾಕಿಸ್ತಾನಕ್ಕೆ ಇಳ್ಕೊಳ್ತೀರಾ ಎಂದ ಕಂಡಕ್ಟರ್, ನೀವೇನು ಪಾಕಿಸ್ತಾನದಲ್ಲಿ ಬಸ್ ಓಡಿಸ್ತಿದ್ದೀರಾ ಎಂದ ಬುರ್ಖಾಧಾರಿ ಮಹಿಳೆ!

Fight between conductor-women passengers in Shimoga at shivamogga viral news rav
Author
First Published Aug 19, 2023, 8:57 AM IST

ಶಿವಮೊಗ್ಗ (ಆ.19) ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆ ಜಾರಿಯಾದ ಬಳಿಕ ಉಚಿತ ಪ್ರಯಾಣದ ವೇಳೆ ರಾಜ್ಯದಲ್ಲಿ ಏನಲ್ಲ ಅವಂತಾರಗಳಾದವು ಎಂಬುದನ್ನು ನೋಡಿದ್ದೀರಿ. ಇದೀಗ ಹೊಸದೊಂದು ಅವಾಂತರ ನಡೆದುಹೋಗಿದೆ. ಇದು ಇದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಎಫೆಕ್ಟಾ? ಸ್ತ್ರೀಶಕ್ತಿ ಯೋಜನೆಯ ಎಫೆಕ್ಟ್ ಹೀಗೂ ಇರುತ್ತಾ? 

ಇದು ಕೆಎಸ್ಆರ್ಟಿಸಿ ಬಸ್ಸು ವರ್ಸಸ್ ಪಾಕಿಸ್ತಾನ ಗಲಾಟೆ! ಅರೇ ಪಾಕಿಸ್ತಾನಕ್ಕೂ ಕೆಎಸ್‌ಆರ್ಟಿಸಿ ಬಸ್‌ಗೂ ಎತ್ತಣ ಸಂಬಂಧ ಅಂತೀರಾ? ಹೌದು ಸರ್ಕಾರಿ ಬಸ್‌ಗೂ ಪಾಕಿಸ್ತಾನಕ್ಕೂ ಸಂಬಂಧ ಇದೆ. ಅಷ್ಟಕ್ಕೂ ಜಗಳಕ್ಕೆ ಕಾರಣವಾದ ಆ ಕಂಡಕ್ಟರ್ ಮಾತಾದರೂ ಏನು? ಕಂಡಕ್ಟರ್ ಆಡಿದ ಮಾತಿಗೆ ಬುರ್ಖಾಧಾರಿ ಮಹಿಳೆ ಕೆಂಡಾಮಂಡಲ. ಒಬ್ಬ ಸರ್ಕಾರಿ ನೌಕರನಾಗಿ ಬಸ್ ಕಂಡಕ್ಟರ್ ಇಂಥ ಮಾತು ಆಡಬೇಕಿತ್ತಾ?

ನೀವೇನು ಪಾಕಿಸ್ತಾನದಲ್ಲಿ ಇಳಿತೀರಾ? ಹೀಗೆಂದಿದ್ದ ಕಂಡಕ್ಟರ್ ಇದಕ್ಕೆ ಸಿಟ್ಟಿಗೆದ್ದ ಮಹಿಳೆ  ನೀವೇನು ಬಸ್ಸನ್ನು ಪಾಕಿಸ್ತಾನದಲ್ಲಿ ಓಡಿಸುತ್ತಿದ್ದೀರಾ? ಎಂದು ತಿರುಗೇಟು ನೀಡಿದ್ದಳು. ಹೀಗೆ ಶುರುವಾದ ವಾಗ್ವಾದ ಕೊನೆಗೆ ಮುಟ್ಟಿದ್ದಾದರೂ ಎಲ್ಲಿ ಅಂತೀರ?

ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಇಲ್ಲ ; ಮುಂದಿನ ತಿಂಗಳೂ ಉಚಿತ 5 ಕೇಜಿ ಅಕ್ಕಿ ಬದಲು ಹಣ : ಮುನಿಯಪ್ಪ

ಇದು ಶಿವಮೊಗ್ಗದಿಂದ ಭದ್ರಾವತಿಗೆ ಸಂಚರಿಸುವ ಕೆಎಸ್ಆರ್‌ಟಿಸಿ ಬಸ್ ಒಂದರಲ್ಲಿ ನಡೆದಿರೋ ಘಟನೆ. ಬಸ್‌ನಲ್ಲಿ ನಡೆದಿರೋ ಘಟನೆಗೆ ಸಿಕ್ಕಿದೆ ವಿಡಿಯೋ ಸಾಕ್ಷಿ. ಶಿವಮೊಗ್ಗದಿಂದ ಭದ್ರಾವತಿಗೆ ಬುರ್ಖಾಧಾರಿ ಮುಸ್ಲಿಂ ಮಹಿಳೆಯೊಬ್ಬಳು ಬಸ್ ಹತ್ತಿದ್ದಳು. ಅದೇ ಸಂದರ್ಭಕ್ಕೆ ಆಕೆ ಜತೆಗೆ ಇನ್ನೊಬ್ಬ ಮಹಿಳೆ ಸೇರಿ ಇಬ್ಬರೂ ಒಂದೇ ಸೀಟಿಗೆ ಕುಳಿತು ಪ್ರಯಾಣ ಬೆಳೆಸಿದ್ದರು. ಈ ವೇಳೆ ಬಸ್ ನ ಕಂಡಕ್ಟರ್ ಇಬ್ಬರೂ ಮಹಿಳೆಯರಿಗೂ ಸೇರಿಸಿ ಒಂದೇ ಟಿಕೆಟ್ ಕೊಟ್ಟಿದ್ದಾನೆ. ಇದೇ ನೋಡಿ ಜಗಳಕ್ಕೆ ಕಾರಣವಾಗಿದ್ದು.

ಆಗ ಓರ್ವ ಮುಸ್ಲಿಂ ಮಹಿಳೆ ಇಬ್ಬರಿಗೂ ಒಂದೇ ಟಿಕೆಟ್ ಯಾಕೆ ಕೊಟ್ಟಿದ್ದೀರಾ? ಒಬ್ಬೊಬ್ಬರು ಒಂದೊಂದು ಕಡೆ ಇಳಿಯುವುದರಿಂದ ಚೆಕಿಂಗ್ ಬಂದರೆ ತೊಂದರೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದಳು. ಇಷ್ಟಕ್ಕೆ ರೊಚ್ಚಿಗೆದ್ದ ಕಂಡಕ್ಟರ್ ನೀವೇನು ಪಾಕಿಸ್ತಾನದಲ್ಲಿ ಇಳಿತೀರಾ? ಎಂದು ಪ್ರಶ್ನಿಸಿ ಅವಾಂತರ ಸೃಷ್ಟಿಸಿದ್ದ. ಇದರಿಂದ ಮತ್ತಷ್ಟು ಕುಪಿತಗೊಂಡ ಮಹಿಳೆ, ಬಸ್ ಏನು ಪಾಕಿಸ್ತಾನದಲ್ಲಿ ಓಡುಸ್ತಾ ಇದ್ದೀರಾ? ಎಂದು ತಿರುಗಿಸಿ ಕೊಟ್ಟಿದ್ದಳು.

ಇಷ್ಟಕ್ಕೆ ಸುಮ್ಮನಾಗದ ಕಂಡಕ್ಟರ್ ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಮತ್ತಷ್ಟು ರೊಚ್ಚಿಗೆಬ್ಬಿಸಿ ಬಿಟ್ಟಿದ್ದ. ಅದಕ್ಕೆ ಮಹಿಳೆ, ಫ್ರೀ ಟಿಕೆಟ್ ಬೇಕಾದ್ರೆ ಪಾಕಿಸ್ತಾನಕ್ಕೆ ಹೋಗಬೇಕಾ? ಕರ್ನಾಟಕ ಸರ್ಕಾರ ಕೊಟ್ಟಿದ್ದಲ್ವಾ? ನೀವೇನಾದರೂ ಕೊಟ್ಟಿದ್ರಾ ? ಸಿಟ್ಟಿಗೆದ್ದ ಮಹಿಳೆ. ಹೀಗೆ ಶುರುವಾದ ಜಟಾಪಟಿ ಬಸ್ ಭದ್ರಾವತಿಯ ಬಸ್ ನಿಲ್ದಾಣ ತಲುಪುವವರೆಗೂ ಮುಂದುವರೆದಿತ್ತು. ಈ ವೇಳೆಗೆ ವಿಷಯ ತಿಳಿದ ಮುಸ್ಲಿಂ ಮಹಿಳೆಯ ಪತಿ ಹಾಗೂ ಸಮುದಾಯದ ದೊಡ್ಡ ಗುಂಪೊಂದು ಕಂಡಕ್ಟರ್ ನನ್ನು ಆಟಕಾಯಿಸಿತ್ತು ನೋಡಿ.

ಇತ್ತ ಮುಂದಾಗುವ ಗಲಾಟೆ ಊಹಿಸಿಕೊಂಡು ಕಂಡಕ್ಟರ್ ಕೂಡ ತನ್ನ ಸಹ ಕಂಡಕ್ಟರ್‌ಗಳ ಗುಂಪು ಸೇರಿಸಿಕೊಂಡಿದ್ದ. ಪಾಕಿಸ್ತಾನದ ಹೆಸರನ್ನು ಸೇರಿಸಿ ಅವಹೇಳನಕಾರಿಯಾಗಿ ಮಾತನಾಡಿದ ಕಂಡಕ್ಟರ್ ಬಗ್ಗೆ ಅಲ್ಲಿದ್ದವರೇ ರೊಚ್ಚಿಗೆದ್ದಿದ್ದರು.  ಈ ಮೊದಲು ಕೆಎಸ್ಆರ್ಟಿಸಿ ಬಸ್ ಖಾಲಿ ಹೋಗ್ತಾ ಇತ್ತು. ಸರ್ಕಾರದ ಗ್ಯಾರೆಂಟಿ ಯೋಜನೆಯಿಂದ ಫುಲ್ ರಶ್ ಆಗುತ್ತಿದೆ.  ಹೀಗಿದ್ದಾಗ ಪ್ರಯಾಣಿಕರ ಬಗ್ಗೆ ಲಘುವಾಗಿ ಮಾತನಾಡಬಾರದು ಎಂದು ಕಂಡಕ್ಟರ್ ನನ್ನು ಸಹ ಕಂಡಕ್ಟರ್ಗಳ ಗುಂಪು ಬೈದಿತ್ತು. ಇನ್ನೂ ಮುಸ್ಲಿಂ ಮಹಿಳೆಯ ಪತಿಯಂತೂ ರೊಚ್ಚಿಗೆದ್ದು ಕಂಡಕ್ಟರ್ ಮೇಲೆ ಹಲ್ಲೆ ಮಾಡುವುದೊಂದೇ ಬಾಕಿ ಉಳಿದಿತ್ತು. ಏಕೆಂದರೆ ಆತನಿಗೂ ಕೂಡ ಕಂಡಕ್ಟರ್ ನೀನ್ಯಾರು ಆಕೆಯ ಪರ ಮಾತಾಡೋಕೆ ಎಂದು ರೊಚ್ಚಿಗೆಬ್ಬಿಸಿ ಬಿಟ್ಟಿದ್ದ ಕಂಡಕ್ಟರ್ ಅಸಾಮಿ.

Shakti scheme: 41 ಕೋಟಿ ಸ್ತ್ರೀಯರಿಂದ ಉಚಿತ ಬಸ್ ಪ್ರಯಾಣ: ಸಿದ್ದರಾಮಯ್ಯ

ಕೊನೆಗೆ ಕಂಡಕ್ಟರ್ ತನ್ನಿಂದಾದ ತಪ್ಪಿಗೆ ಕ್ಷಮೆಯಾಚನೆ ಮಾಡುವುದರೊಂದಿಗೆ ಪ್ರಕರಣಕ್ಕೆ ಅಂತ್ಯ ಹಾಡಲಾಯಿತು. ಮಾತು ಬಲ್ಲವನಿಗೆ ಜಗಳವಿಲ್ಲ ಆದರೆ ಯಾವಾಗ ಏನು ಮಾತಾಡಬೇಕು, ಎಷ್ಟು ಮಾತಾಡಬೇಕು ಅಂತ ತಿಳಿಯದಿದ್ರೆ ಸಣ್ಣಪುಟ್ಟ ವಿಚಾರಕ್ಕೆಲ್ಲ ರಾದ್ಧಾಂತ ಆಗುತ್ತದೆ ಎಂಬುದಕ್ಕೆ ಈ ಘಟನೆ ನಿದರ್ಶನ ಅಲ್ವಾ?

Follow Us:
Download App:
  • android
  • ios