Asianet Suvarna News Asianet Suvarna News

ಉತ್ತರ ಕರ್ನಾಟಕ ವಿಷಯವಾಗಿ ಇಂದೂ ಗಟ್ಟಿ ಇದ್ದೇನೆ ಎಂದಿದ್ದ ಕನಸುಗಾರ ಉಮೇಶ್ ಕತ್ತಿ

ಉಮೇಶ್ ಕತ್ತಿ ಅವರ ಮಾಧ್ಯಮ ಗೋಷ್ಠಿ ಅಂದ್ರೆ ಅಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಯ ವಿಚಾರವಾಗಿ ಪ್ರಶ್ನೆಗಳು ಇದ್ದೇ ಇರುತ್ವೆ. ಆಗಸ್ಟ್ 26ನೇ ತಾರೀಖು ಗದಗ ಜಿಲ್ಲೆಗೆ ಆಗಮಿಸಿದ್ದ ಸಚಿವ ಉಮೇಶ್ ಕತ್ತಿಯವರಿಗೂ ನಿರೀಕ್ಷೆಯಂತೆ ಉತ್ತರ ಕರ್ನಾಟಕ ವಿಷಯವಾಗಿ ಸೈಲೆಂಟ್ ಆಗಿದ್ದೀರಿ ಅನ್ನೋ ಪ್ರಶ್ನೆ ಎದುರಾಗಿತ್ತು.

minister umesh katti who dreamed of becoming a separate state of north karnataka and become a cm gvd
Author
First Published Sep 7, 2022, 12:55 PM IST

ಗದಗ (ಸೆ.07): ಉಮೇಶ್ ಕತ್ತಿ ಅವರ ಮಾಧ್ಯಮ ಗೋಷ್ಠಿ ಅಂದ್ರೆ ಅಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಯ ವಿಚಾರವಾಗಿ ಪ್ರಶ್ನೆಗಳು ಇದ್ದೇ ಇರುತ್ವೆ. ಆಗಸ್ಟ್ 26ನೇ ತಾರೀಖು ಗದಗ ಜಿಲ್ಲೆಗೆ ಆಗಮಿಸಿದ್ದ ಸಚಿವ ಉಮೇಶ್ ಕತ್ತಿಯವರಿಗೂ ನಿರೀಕ್ಷೆಯಂತೆ ಉತ್ತರ ಕರ್ನಾಟಕ ವಿಷಯವಾಗಿ ಸೈಲೆಂಟ್ ಆಗಿದ್ದೀರಿ ಅನ್ನೋ ಪ್ರಶ್ನೆ ಎದುರಾಗಿತ್ತು. ಪ್ರತಿನಿಧಿ ಪ್ರಶ್ನೆಗೆ ತನ್ನದೇ ಸ್ಟೈಲ್ ನಲ್ಲಿ ಉಮೇಶ್ ಕತ್ತಿ ಉತ್ತರಿಸಿದರು.

ಉತ್ತರ ಕರ್ನಾಟಕ್ಕೆ ಅನ್ಯಾಯ ಆಗೋದಕ್ಕೆ ಬಿಡಲ್ಲ ಅನ್ನೋ ಮೂಲಕ ಉತ್ತರ ಕರ್ನಾಟಕ ಅಭಿವೃದ್ಧಿಗೆ ಇರುವ ಬದ್ಧತೆಯನ್ನ ತೋರಿಸಿದರು. ಉತ್ತರ ಕರ್ನಾಟಕ ವಿಷಯವಾಗಿ ಉಮೇಶ್ ಕತ್ತಿ ಅವರು ಆಡಿದ ಕೊನೆಯ ಮಾತು ಅದಾಗಿತ್ತು. ನಮಗೆ ಬೇಕಾದ ಮಹದಾಯಿ, ಕೃಷ್ಣ, ಆಲಮಟ್ಟಿ ಅಭಿವೃದ್ಧಿಗೆ ದ್ರೋಹ ಮಾಡಿದ್ರೆ ರಾಜೀನಾಮೆಗೆ ರೆಡಿ. ಸಚಿವನಾಗಿದ್ರೆ ಏನಂತೆ, ಈಗ್ಲೇ ರಾಜೀನಾಮೆ ಕೊಡೊದಕ್ಕೂ ಸಿದ್ಧ ಅಂತಾ ಖಡಕ್ ಉತ್ತರ ನೀಡಿದ್ದರು.

ಉಮೇಶ್ ಕತ್ತಿ ನಿಧನ: ಬೆಳಗಾವಿ ಜಿಲ್ಲೆಯಾದ್ಯಂತ ಒಂದು ದಿನದ ಶೋಕಾಚರಣೆ!

ಪ್ರತ್ಯೇಕ ಉತ್ತರ ಕರ್ನಾಟಕ ಧ್ವನಿ ಎತ್ತಬೇಕು.. ನೀವೂ ಸ್ಪಂದಿಸ್ಬೇಕು: ಇತ್ತೀಚೆಗೆ ಸಾಫ್ಟ್ ಆಗಿದ್ದೀರಿ ಅನ್ನೋ ಪ್ರಶ್ನೆಗೆ ಉತ್ತರಿಸಿದ್ದ ಉಮೇಶ್ ಕತ್ತಿ ಅವರು, ಉತ್ತರ ಕರ್ನಾಟಕ ವಿಷಯವಾಗಿ ಇಂದೂ ಗಟ್ಟಿ ಇದ್ದೇನೆ. ಎಂದೆಂದಿಗೂ ಗಟ್ಟಿ ಇರುತ್ತೇನೆ. ಅಭಿವೃದ್ಧಿ ನಿಂತರೆ ಹೋರಾಟ ಇದ್ದೇ ಇರುತ್ತೆ. ಅಭಿವೃದ್ಧಿ ನಡೆದರೆ ತೊಂದರೆ ಇಲ್ಲ. ಉತ್ತರ ಕರ್ನಾಟಕದ ಸಿಎಂ ಅನ್ನೋದನ್ನ ಬಿಡಿ. ನಾನು ಕರ್ನಾಟಕದ ರಾಜಕಾರಣಿ, ಹಿರಿಯ ರಾಜಕಾರಣಿ. ನಮ್ಮವರೇ ಸಿಎಂ ಇದ್ದಾಗ ಸಿಎಂ ಆಸೆ ಪಡೋದಿಲ್ಲ. ಸಿಎಂ ಅವಕಾಶ ಬಂದರೆ ನಸೀಬು. ಬೆನ್ನು ಹತ್ತಿ ಹೊತ್ತಿ ಹೋಗಲ್ಲ ಅಂತಾ ಅಖಂಡ ಕರ್ನಾಟಕ ಮುಖ್ಯಮಂತ್ರಿ ಆಗುವ ಆಸೆಯನ್ನ ವ್ಯಕ್ತಪಡಿಸಿದ್ದರು.  ಉತ್ತರ ಕರ್ನಾಟಕ ಮುಖ್ಯಮಂತ್ರಿ ಆಗಲ್ಲ. ಅಖಂಡ ಕರ್ನಾಟಕ ಸಿಎಂ ಆಗುವ ಯೋಗ್ಯತೆ ನನಗಿದೆ ಅಂತಾ ಗಟ್ಟಿ ಧ್ವನಿಯಲ್ಲಿ ಹೇಳಿದ್ದರು.

RIP Umesh Katti ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನ, ಸಿಎಂ ಬೊಮ್ಮಾಯಿ ಸಂತಾಪ!

ಇನ್ನೂ 15 ವರ್ಷ ನನ್ನ ರಾಜಕೀಯ ಜೀವನ ಇದೆ.. ನೋಡೋಣ: ಇತ್ತೀಚೆಗಷ್ಟೇ 60ನೇ ಹರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಉಮೇಶ್ ಕತ್ತಿ ಇನ್ನೂ 15 ವರ್ಷ ರಾಜಕಾರಣ ಮಾಡೋ ಉಮೇದಿನಲ್ಲಿದರು. ಈ ವಿಷಯವಾಗಿ ಮಾತನಾಡಿದ್ದ ಉಮೇಶ್ ಕತ್ತಿ, ಬಿಜೆಪಿಯಲ್ಲಿ 75 ವರ್ಷ ವಯಸ್ಸಿನ ನಿರ್ಬಂಧ ಇದೆ. ಕಾಂಗ್ರೆಸ್‌ನಲ್ಲಾದ್ರೆ 90 ವರ್ಷದವರೆಗೂ ರಾಜಕಾರಣ ಮಾಡಬಹುದು. ಇನ್ನೂ 15 ವರ್ಷ ಇಲ್ಲಿ ಸಕ್ರೀಯ ರಾಜಕಾರಣದಲ್ಲಿರ್ತೇನೆ. ಸಿಎಂ ಆಗುವ ಅವಕಾಶ ಸಿಗಬಹುದು. ಹಣೆಬರಹದಲ್ಲಿ ಇದ್ದರೆ ಆಗ್ತೇನೆ ಅಂತಾ ಮನದಾಳದ ಆಸೆ ಹೇಳಿಕೊಂಡಿದ್ದರು.

Follow Us:
Download App:
  • android
  • ios