Shivamogga Riots: ಗಲಭೆಗೆ ಕಾಂಗ್ರೆಸ್‌ ನೇತೃತ್ವ: ಸಚಿವ ಈಶ್ವರಪ್ಪ

*   ಮೆರವಣಿಗೆ ವೇಳೆ ಅನಾಹುತ ಆಗುವುದನ್ನು ತಪ್ಪಿಸಲು ನಾವಿಬ್ಬರೂ ಅಲ್ಲಿಗೆ ಹೋಗಿದ್ದೆವು
*   ಗಲಭೆ ಮಾಡಿಸಬೇಕು ಎಂಬ ಮನಃಸ್ಥಿತಿ ನಮಗಿಲ್ಲ
*   ನಾನೇನು ಕಾಂಗ್ರೆಸ್‌ನಲ್ಲಿರುವ ಮುಸ್ಲಿಮರು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದೇನಾ? 
 

Minister KS Eshwarappa Slams on Congress Leaders grg

ಶಿವಮೊಗ್ಗ(ಫೆ.24): ಗೂಂಡಾಗಿರಿ ನಡೆಸಲು, ಕಲ್ಲು ಹೊಡೆಯಲು ಕಾಂಗ್ರೆಸ್‌ನವರೇ(Congress) ನೇತೃತ್ವ ವಹಿಸಿದಂತಿದೆ. ಹೀಗಾಗಿ ಕಾಂಗ್ರೆಸ್‌ನವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ಒತ್ತಾಯಿಸಿದ್ದಾರೆ.

ಗಲಭೆ ಸಂದರ್ಭದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಹತ್ಯೆಯಾದ ಹರ್ಷನ ಮೃತದೇಹದ ಮೆರವಣಿಗೆ ನೇತೃತ್ವವನ್ನು ಸಚಿವ ಕೆ.ಎಸ್‌.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ವಹಿಸಿದ್ದರು ಎಂದು ಕಾಂಗ್ರೆಸ್ಸಿಗರು ಹೇಳಿದ್ದಾರೆ. ಈ ಆರೋಪ ಸರಿಯಲ್ಲ. ಮೆರವಣಿಗೆ ವೇಳೆ ಅನಾಹುತ ಆಗುವುದನ್ನು ತಪ್ಪಿಸಲು ನಾವಿಬ್ಬರೂ ಅಲ್ಲಿಗೆ ಹೋಗಿದ್ದೆವು. ಗಲಭೆ ಮಾಡಿಸಬೇಕು ಎಂಬ ಮನಃಸ್ಥಿತಿ ನಮಗಿಲ್ಲ ಎಂದರು.

Saffron Flag Remark ಈಶ್ವರಪ್ಪಗೆ ಜೆಪಿ ನಡ್ಡಾ ಎಚ್ಚರಿಕೆ ನೀಡಿದ್ದಾರೆ, ಆದರೂ ಬಿಜೆಪಿ ಭಂಡತನ ಎಂದ ಡಿಕೆ ಶಿವಕುಮಾರ್!

ನಾನೇನು ಕಾಂಗ್ರೆಸ್‌ನಲ್ಲಿರುವ ಮುಸ್ಲಿಮರು(Muslims) ಕೊಲೆ(Murder) ಮಾಡಿದ್ದಾರೆ ಎಂದು ಹೇಳಿದ್ದೇನಾ? ಇಲ್ಲ. ಹರ್ಷನನ್ನು ಕೊಲೆ(Harsha Murder) ಮಾಡಿದವರು ಮುಸ್ಲಿಂ ರೌಡಿಗಳು, ಗೂಂಡಾಗಳು ಎಂದಿದ್ದೇನೆ. ಹತ್ಯೆ ಮಾಡಿದವರನ್ನು ಗೂಂಡಾ ಎಂದು ಕರೆದರೆ ಕಾಂಗ್ರೆಸ್‌ ನವರಿಗ್ಯಾಕೆ ಸಿಟ್ಟು ಬರಬೇಕು. ಕಾಂಗ್ರೆಸ್‌ನವರಿಗೆ ನನ್ನ ಮೇಲೆ ಆರೋಪ ಮಾಡದಿದ್ದರೆ ತಿಂದ ಅನ್ನ ಕರಗುವುದಿಲ್ಲ. ಹೀಗಾಗಿ ಅವರಿಗೆ ಬೇರೆ ದಾರಿಯೇ ಇಲ್ಲದೆ ಪದೇ ಪದೇ ನನ್ನ ಮೇಲೆ ಆರೋಪ ಮಾಡುತ್ತಾರೆ. ನಾನೆಂತಾ ಪ್ರಚೋದನಕಾರಿ ಹೇಳಿಕೆ ನೀಡಿದ್ದೇನೆ? ನಿಜಕ್ಕೂ ಪ್ರಚೋದನಕಾರಿ ಹೇಳಿಕೆ ನೀಡಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಎಂದು ಆರೋಪಿಸಿದರು.

ಕಾಡು ಪ್ರಾಣಿಗಳಿಗೆ ಸಿಂಹ ಕಂಡ್ರೆ ಭಯ, ಕೈ ನಾಯಕರಿಗೆ ಟಾಂಗ್ ಕೊಟ್ಟ ಈಶ್ವರಪ್ಪ

ಬೆಂಗಳೂರು:  ಕಾಡು ಪ್ರಾಣಿಗಳಿಗೆ ಸಿಂಹ ಕಂಡ್ರೆ ಭಯ. ಹಾಗಾಗಿ, ಕಾಡು ಪ್ರಾಣಿಗಳು ಸಿಂಹ ಕಂಡು ಹೆದರಿವೆ ಎಂದು ಡಿಕೆಶಿ, ಸಿದ್ದರಾಮಯ್ಯ ಪದೇ ಪದೇ ತನ್ನ ಹೆಸರು ಉಲ್ಲೇಖಿಸಿ ವಾಗ್ದಾಳಿ ನಡೆಸುವ ವಿಚಾರವಾಗಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್​ ಪಕ್ಷಕ್ಕೆ ಟಾಂಗ್ ಕೊಟ್ಟಿದ್ದರು. 

ಈಶ್ವರಪ್ಪ ಮುಸ್ಲಿಂ ಗೂಂಡಾ ಹೇಳಿಕೆ: ಇರ್ವರ್ಯಾರ್ರೀ ಇಂತ ಹೇಳಿಕೆ ಕೊಡೋಕೆ.? ಬಿಕೆ ಹರಿಪ್ರಸಾದ್

ಈ ಹೇಳಿಕೆ ಮೂಲಕ ತನ್ನನ್ನು ತಾನು ಸಿಂಹ ಎಂದು ಸಮರ್ಥಿಸಿಕೊಂಡಿರುವ ಈಶ್ವರಪ್ಪ, ಯಾರಿಗೂ ಹೆದರಲ್ಲ ಎಂಬ ಸಂದೇಶ ನೀಡಿದಂತಾಗಿದೆ. ರಾಷ್ಟ್ರಧ್ವಜದ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ವಿರೋಧಿಸಿ  ಕಾಂಗ್ರೆಸ್ (Congress) ಅಹೋರಾತ್ರಿ ಧರಣಿ ನಡೆಸಿತ್ತು. ವಿಧಾನಸೌಧದಲ್ಲಿ ಮಾತನಾಡಿದ ಈಶ್ವರಪ್ಪ ಕಾಂಗ್ರೆಸ್ ನವರು ಪದೇ ಪದೇ ನನ್ನ ಹೆಸರು ಹೇಳಿ ಜಪ ಮಾಡ್ತಿದ್ದಾರೆ ಎಂದಿದ್ದರು. 

ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರು ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸಿದ ವಿಚಾರಕ್ಕೆ ಸಂಬಂಧಿಸಿದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಸಚಿವ ಮಾಧುಸ್ವಾಮಿ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ. ರಾಷ್ಟ್ರ ಧ್ವಜದ ಬಗ್ಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಡಿಕೆಶಿ ಶಿವಮೊಗ್ಗದಲ್ಲಿ ರಾಷ್ಟ್ರ ಧ್ವಜ ಇಳಿಸಿ, ಭಗವಾಧ್ವಜ ಏರಿಸಿದ್ದರೆಂದು ಹೇಳಿದ್ರು, ಹಾರಿಸ್ತೇನೆ ಅಂತ ಹೇಳಿದ್ದೀನಾ? ಮುಂದೆ ಹಾರಿಸಬಹುದು ಅಂತ ಹೇಳಿದ್ದೇನೆ. ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ತಕ್ಷಣ ರಾಷ್ಟ್ರ ದ್ರೋಹಿ ಅಂತ ಅಂದೂ ಹೇಳಿದ್ದೆ, ಇಂದೂ ಹೇಳಿದ್ದೇನೆ ಎಂದು  ತಮ್ಮ ಹೇಳಿಕೆಯನ್ನು ಈಶ್ವರಪ್ಪ ಸಮರ್ಥಿಸಿಕೊಂಡಿದ್ದರು.

ಬುಲಾವ್ ನೀಡಿಲ್ಲ: 

ಇನ್ನು ಇದೇ ವೇಳೆ ಕುವೆಂಪು ವಿವಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲು ರಾಜಭವನಕ್ಕೆ ಹೋಗ್ತಿದ್ದೇನೆ ಅಷ್ಟೇ ಬಿಟ್ಟು ಬುಲಾವ್ ನೀಡಿಲ್ಲ ಎಂದು ಇದೇ ವೇಳೆ ಹೇಳಿದ್ದರು.  
 

Latest Videos
Follow Us:
Download App:
  • android
  • ios