ಅನಾರೋಗ್ಯದಿಂದ ವಿಧಿವಶರಾದ ಸಚಿವ ಡಿ ಸುಧಾಕರ್ ಅಂತ್ಯಕ್ರಿಯೆ ಇಂದು ನಡೆಯಲಿದೆ. ಆದೆರೆ ಸಚಿವ ಭಾಗವಹಿಸಿದ್ದ ಕೊನೆಯ ಕಾರ್ಯಕ್ರಮದಲ್ಲಿ ಸಾವಿನ ಕುರಿತು ಮಾರ್ಮಿಕವಾಗಿ ಮಾತನಾಡಿದ್ದರು. ಈ ವಿಡಿಯೋ ವೈರಲ್ ಆಗಿದೆ. 

ಚಿತ್ರದುರ್ಗ (ಮೇ.11) ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿ ನಿಧನರಾದ ಯೋಜನೆ ಮತ್ತು ಸಾಂಖಿಕ ಸಚಿವ ಡಿ ಸುಧಾಕರ್ ಅಂತ್ಯಕ್ರಿಯ ಇಂದು ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಚಳ್ಳಕೆರೆಯ ಡಿ ಸುಧಾಕರ್ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳಿಕ ಸುಧಾಕರ್ ಅವರ ಸೆಟಲ್ ಕಾಕ್ ಕೋಟ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಚಿವ ಡಿ ಸುಧಾಕರ್ ಭಾಗವಹಿಸಿದ್ದ ಕೊನೆಯ ಕಾರ್ಯಕ್ರಮದ ವಿಡಿಯೋ ಇದೀಗ ಹರಿದಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ಸಚಿವ ಸುಧಾಕರ್ ತಮ್ಮ ಸಾವು ಯಾವಗ ಗೊತ್ತಿಲ್ಲ, ನಾವು ನಾಳೆ ಇರುತ್ತೀವೋ ಇಲ್ಲವೋ ಅನ್ನೋದು ಗೊತ್ತಿಲ್ಲ ಎಂದು ಮಾರ್ವಿಕವಾಗಿ ಸಾವಿನ ಕುರಿತು ಮಾತನಾಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಚಿವ ಡಿ ಸುಧಾಕರ್ ಭಾಗವಹಿಸಿದ ಹಾಗೂ ಭಾಷಣ ಮಾಡಿದ ಕೊನೆಯ ಕಾರ್ಯಕ್ರಮ ಹಿರಿಯೂರು ಪಟ್ಟಣದಲ್ಲಿನ ಶಾರದಾ ಆಶ್ರಮದ ಭೂಮಿಪೂಜೆ ಕಾರ್ಯಕ್ರಮ. ಭೂಮಿಪೂಜೆ ನೆರವೇರಿಸಿದ್ದ ಡಿ ಸುಧಾಕರ್, ಬಳಿಕ ಸಾರ್ವಜನಿಕರ ಉದ್ದೇಶಿ ಮಾತನಾಡಿದ್ದರು. ಈ ಕಾರ್ಯಕ್ರಮದಲ್ಲಿ ಸುಧಾಕರ್ ಮಾಡಿದ್ದ ಭಾಷಣ ಕೊನೆಯದ್ದಾಗುತ್ತೆ ಎಂದು ಯಾರು ಊಹಿಸಿರಲಿಲ್ಲ. ಈ ಭಾಷಣದಲ್ಲಿ ಸುಧಾಕರ್ ಮೃತ್ಯು ಕುರಿತು ಮಾತನಾಡಿದ್ದಾರೆ.

ಇರುವಷ್ಟು ದಿನ ಭಗವಂತನ ಸ್ಮರಣೆ ಮಾಡಿ

ಭಗವಂತನ ಸ್ಮರಣೆ,ಸ ಧಾರ್ಮಿಕತೆ ಕುರಿತು ಮಾತನಾಡಿದ ಡಿ ಸುಧಾಕರ್, ನಾವು ಇವತ್ತು ಇರುತ್ತಿವೋ ಇಲ್ಲವೋ ಗೊತ್ತಿಲ್ಲ, ನಮ್ಮ ಸಾವು ಯಾವಾಗ ಅನ್ನೋದು ಗೊತ್ತಿಲ್ಲ. ಹೀಗಾಗಿ ನಾವು ಒಂದು ರೀತಿ ಉರಿಯುವ ಬಲ್ಬ್ ಇದ್ದಂತೆ ಯಾವಾಗ ಆಫ್ ಆಗುತ್ತೋ ಗೊತ್ತಿಲ್ಲ. ಇರುವಷ್ಟು ದಿನ ಧಾರ್ಮಿಕವಾಗಿ ಭಗವಂತನ ಸ್ಮರಣೆಯಲ್ಲಿ ಇರಬೇಕು. ಒಬ್ಬೊಬ್ಬರದ್ದು ಒಂದೊಂದು ನಂಬಿಕೆ, ಭಗವಂತ ಇದ್ದಾನೆ. ಕಾಯಕವೇ ಕೈಲಾಸ ಅಂತಾರೆ. ಕೆಲವರು ಪರೋಪಕಾರವೇ ಭಗವಂತನ ಸ್ಮರಣೆ ಎನ್ನುತ್ತಾರೆ ಎಂದು ಸುಧಾಕರ್ ಮಾತನಾಡಿದ್ದಾರೆ.

ಸಚಿವ ಮೊಣಕಾಲು ಆಪರೇಶನ್‌ಗೆ ತೆರಳುವ ಮುಂದಿನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಮೊಣಕಾಲು ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮೊಣಕಾಲು ಶಸ್ತ್ರಚಿಕಿತ್ಸೆ ಬೆನ್ನಲ್ಲೇ ಡಿ ಸುಧಾಕರ್‌ಗೆ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಳೆದ ಕೆಲ ತಿಂಗಳಿನಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿದಿತ್ತು. ಮಣಿಪಾಲ ಆಸ್ಪತ್ರೆಯಿಂದ ಕಿಮ್ಸ್ ಆಸ್ಪತ್ರೆಗೆ ಡಿ ಸುಧಾಕರ್ ಸ್ಥಳಾಂತರ ಮಾಡಲಾಗಿತ್ತು. ಆದರೆ ಸುಧಾಕರ್ ಆರೋಗ್ಯದಲ್ಲಿ ಚೇತರಿಕೆ ಕಾಣದ ವಿಧಿವಶರಾಗಿದ್ದಾರೆ.