ಸಿದ್ಧಗಂಗಾ ಶ್ರೀ ಪುಣ್ಯಸ್ಮರಣೆ: ಸಾಮೂಹಿಕ ಕೇಶ ಮುಂಡನೆಗೆ ಮಾತೆ ಮಹಾದೇವಿ ವಿರೋಧ
ಸಿದ್ಧಗಂಗಾ ಶ್ರೀ ಪುಣ್ಯಸ್ಮರಣೆದಂದು ಹಮ್ಮಿಕೊಳ್ಳಲಾಗಿರುವ ವಿದ್ಯಾಥಿರ್ಥಿಗಳ ಸಾಮೂಹಿಕ ಕೇಶ ಮುಂಡನೆಗೆ ಮಾತೆ ಮಹಾದೇವಿ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ಈ ಬಗ್ಗೆ ಮಾತೆ ಮಹಾದೇವಿ ಹೇಳಿದ್ದೇನು?
ಕೂಡಲಸಂಗಮ, [ಜ.27] : ತುಮಕುರಿನ ಸಿದ್ದಗಂಗಾ ಮಠದಲ್ಲಿ ಅಭ್ಯಾಸ ಮಾಡುತ್ತಿರುವ 8 ಸಾವಿರ ವಿದ್ಯಾರ್ಥಿಗಳಿಗೆ ಸಾಮೂಹಿಕ ಕೇಶ ಮುಂಡನ ಮಾಡುತ್ತಿರುವುದು ಬಹುದೊಡ್ಡ ಮೂರ್ಖತನ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯೆಕ್ಷೆ ಮಾತೆ ಮಹಾದೇವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಿಂಗಾಯತ ಧರ್ಮದ ಪ್ರಕಾರ ಯಾರಾದರೂ ಲಿಂಗೈಕ್ಯರಾದರೆ ಅವರ ಹೆಸರಿನಲ್ಲಿ ತಲೆ ಬೊಳಿಸಿಕೊಳ್ಳುವುದು ಇಲ್ಲವೆ ಇಲ್ಲ. ಆದ್ದರಿಂದ ಇಂತಹ ಮೂಡಾಚರಣೆಯನ್ನು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು ಮಾಡಬಾರದು. ಬಸವ ತತ್ವ ಎಂದು ಹೇಳುತ್ತ ಅದಕ್ಕೆ ವಿರುದ್ಧವಾದ ಕೆಲಸ ಮಾಡುತ್ತ ಹೋದರೆ ಹಿರಿಯರಿಗೆ ಮಾಡಿದ ಅಪಚಾರವಾಗುವುದು ಎಂದರು.
ಸಿದ್ಧಗಂಗಾ ಮಠ ಅನ್ನದಾಸೋಹಕ್ಕೆ ದರ್ಶನ್ ಸಾಥ್
ಮಹಾನ್ ವ್ಯಕ್ತಿಗಳಾದ ಸಿದ್ಧಗಂಗಾ ಶ್ರೀಗಳ ಲಿಂಗೈಕ್ಯ ಸಂಸ್ಮರಣೆ ಸಮಾರಂಭದಲ್ಲಿ ಪ್ರಾರ್ಥನೆ, ಸಾಮೂಹಿಕ ಇಷ್ಟಲಿಂಗ ಪೂಜೆ, ದಾಸೋಹ ಮಾಡಿ. ಆದರೆ ಮೌಡ್ಯಾಚರಣೆ, ಮನುವಾದ ಹಾಗೂ ವೈಧಿಕ ಧರ್ಮಕ್ಕೆ ಸಂಬಂದಿಸಿದ ತಲೆ ಬೆಳಿಸಿಕೊಳ್ಳುವ ಸಂಪ್ರದಾಯ ಸರಿಯಲ್ಲ.
ವಿದ್ಯಾರ್ಥಿಗಳು ಮಠದ ಕೈಯಲ್ಲಿ ಇರುತ್ತಾರೆ. ನಾವು ಹೇಳಿದ ಹಾಗೆ ಕೇಳುತ್ತಾರೆ ಎಂದು ತಿಳಿದು ಸಾಮೂಹಿಕ ಕೇಶ ಮುಂಡಕ್ಕೆ ಒಪ್ಪಿಕೊಂಡಿದ್ದಾರೆ ಎನ್ನುವುದು ಸರಿಯಲ್ಲ. ಶ್ರೀಗಳು ಅನೇಕ ವರ್ಷಗಳಿಂದ ಅನಾರೋಗ್ಯದ ನಿಮಿತ್ಯ ಹಾಸಿಗೆ ಹಿಡಿದಿದ್ದರು. ಕಿರಿಯ ಶ್ರೀಗಳು ಮಠದ ಎಲ್ಲ ಕಾರ್ಯವನ್ನು ನಡೆಸಿಕೊಂಡು ಬಂದಿದ್ದಾರೆ.
ಸಿದ್ಧಗಂಗಾ ಶ್ರೀಗಿಲ್ಲ ಭಾರತ ರತ್ನ: ಕರ್ನಾಟಕದ ಜನತೆಗೆ ನಿರಾಸೆ
ಈಗ ಆತಂಕ ಪಡುವ ಅಗತ್ಯ ಇಲ್ಲ. ಮಕ್ಕಳಿಗೆ ಅನಾಥ ಭಾವ ಬೆಳೆಯಲು ಅವಕಾಶವೇ ಇಲ್ಲ. ಆದ್ದರಿಂದ ಈ ಆಚರಣೆಯನ್ನು ಸಿದ್ಧಗಂಗಾಮಠದ ಕಿರಿಯ ಶ್ರೀಗಳು ಮಾಡಕೂಡದು. ಮೂಡನಂಬಿಕೆಯಿಂದ ಹೊರಬರಬೇಕು.
ಮಠಗಳ ಮೂಲಕ ಮೌಡ್ಯತೆ ಬಿತ್ತುವುದು ಲಿಂಗಾಯತ ಧರ್ಮಕ್ಕೆ ಮಾಡುವ ಅಪಚಾರ. ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿ, ಪ್ರೀತಿಯಿಂದ ನೋಡಿ,ದಾಸೋಹ ಮಾಡಿ ಇಂತಹ ಮೂಡಾಚರಣೆಯನ್ನು ಮಾಡಬಾರದು ಎಂದು ತಿಳಿಸಿದ್ದಾರೆ.
ಶ್ರೀಗಳ ಆಶಯದಂತೆ ಭಕ್ತರಿಗೆ ಅನ್ನದ ಮಹತ್ವ ತಿಳಿಸಿದ ವಿದ್ಯಾರ್ಥಿ
ಸವಿತಾ ಸಮಾಜದಿಂದ ಕೇಶ ಮುಂಡನ:
ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ. ಶಿವಕುಮಾರ ಶ್ರೀಗಳು ಲಿಂಗೈಕ್ಯರಾಗಿ 11ನೇ ದಿನದ ಪುಣ್ಯಸ್ಮರಣೆ ನಡೆಯುವ ಹಿನ್ನೆಲೆ ಸವಿತಾ ಸಮಾಜ ಯುವಕರ ಸಂಘದ ವತಿಯಿಂದ ಇದೇ ತಿಂಗಳು 29ರಂದು ಕೇಶ ಮುಂಡನ ಸೇವೆ ಹಮ್ಮಿಕೊಳ್ಳಲಾಗಿತ್ತು.
‘ಧರ್ಮ ಕಾಯ್ದುಕೊಳ್ಳದ ಬಿಜೆಪಿ ಲಿಂಗಾಯತ ಸಂಸದರೆಲ್ಲಾ ಗುಲಾಮರು’!
ಸಿದ್ದಗಂಗಾ ಮಠಕ್ಕೆ ಬರುವ ಭಕ್ತಾದಿಗಳಿಗೆ ಮತ್ತು ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 10 ಸಾವಿರ ಮಕ್ಕಳಿಗೆ ಸಮಾಜದ ವತಿಯಿಂದ ಉಚಿತ ಕೇಶಮುಂಡನ ಮಾಡಲು ಸಮಾಜದ ರಾಜ್ಯಾಧ್ಯಕ್ಷ ವಿ. ಲಕ್ಷ್ಮಿ ಪ್ರಸನ್ನ ಅವರು ಸಿದ್ದಗಂಗಾ ಮಠದ ಆಡಳಿತ ಮಂಡಳಿಯನ್ನು ಕೋರಿದ್ದಾರೆ.