Asianet Suvarna News Asianet Suvarna News

ನಾಗಮಂಗಲ ಗಲಭೆ ವೇಳೆ ಮುಸ್ಲಿಮರ ಮೇಲೆ ಕ್ರಮ ಬೇಡ ಎಂಬ ಸೂಚನೆ ಕೊಟ್ಟಿತ್ತಾ ಸರ್ಕಾರ? ಸಿಟಿ ರವಿ ಹೇಳಿದ್ದೇನು?

ಮಂಗಳೂರಿನಲ್ಲಿ ಹಿಂದೂಳಿಗೆ ಸವಾಲು ಹಾಕಲಾಗಿದೆ. ಇದು ಹಿಂದೂಗಳಿಗಷ್ಟೇ ಅಲ್ಲ, ಭಾರತಕ್ಕೆ ಹಾಕಿದ ಸವಾಲು. ಯುದ್ಧವನ್ನು ಯುದ್ಧದ ರೀತಿಯೇ ಸ್ವೀಕರಿಸಿ ಉತ್ತರ ಕೊಡುತ್ತೇವೆ ಎಂದು ಸಿಟಿ ರವಿ ಎಚ್ಚರಿಕೆ ನೀಡಿದರು.

Mangaluru bc raod tense again bjp leader ct ravi outraged rav
Author
First Published Sep 16, 2024, 1:07 PM IST | Last Updated Sep 16, 2024, 1:11 PM IST

ಮಂಗಳೂರು (ಸೆ.16): ಮಂಗಳೂರಿನಲ್ಲಿ ಹಿಂದೂಳಿಗೆ ಸವಾಲು ಹಾಕಲಾಗಿದೆ. ಇದು ಹಿಂದೂಗಳಿಗಷ್ಟೇ ಅಲ್ಲ, ಭಾರತಕ್ಕೆ ಹಾಕಿದ ಸವಾಲು. ಯುದ್ಧವನ್ನು ಯುದ್ಧದ ರೀತಿಯೇ ಸ್ವೀಕರಿಸಿ ಉತ್ತರ ಕೊಡುತ್ತೇವೆ ಎಂದು ಸಿಟಿ ರವಿ ಎಚ್ಚರಿಕೆ ನೀಡಿದರು.

ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಹಿಂದೆ ನಮ್ಮ ಪೂರ್ವಜರು ಕತ್ತಿ ತೋರಿಸಿದಾಗ ಕತ್ತಿಯಿಂದಲೇ ಉತ್ತರ ಕೊಟ್ಟಿದ್ದರು. ಯುದ್ಧಕ್ಕೆ ಸವಾಲು ಹಾಕಿದಾಗ ಯುದ್ಧದ ಮೂಲಕವೇ ಗೆಲ್ಲಬೇಕು. ಸಲಹೆ ಎಲ್ಲಾ ಕೆಲಸ ಮಾಡಲ್ಲ. ನಾವು ಸಹ ಕತ್ತಿಯಿಂದಲೇ ಉತ್ತರ ಕೊಡುತ್ತೇವೆ.  ಇಲ್ಲವಾದರೆ ನಮ್ಮ ದೇಶ ಬಾಂಗ್ಲಾದೇಶ, ಪಾಕಿಸ್ತಾನದಂತೆ ಆಗುತ್ತದೆ. ಅದಕ್ಕೆ ನಾವು ಅವಕಾಶ ಕೊಡಬಾರದು ಎಂದರು.

ಈದ್ ಮೆರವಣಿಗೆ ತಡೆಗೆ ಸವಾಲು: ಬಿ.ಸಿ. ರೋಡ್ ಚಲೋಗೆ ಬಜರಂಗದಳ ಕರೆ!

ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟ, ಗಲಭೆಯ ಹಿಂದೆ ಹೊರಗಿನ ಶಕ್ತಿ ಕೆಲಸ ಮಾಡಿದೆ ಎಂಬ ಅನುಮಾನ ನನಗಿತ್ತು. ಕೇರಳದವರ ಹೆಸರು ಬಹಿರಂಗವಾಗಿರುವುದರಿಂದ ಅದು ಸಾಬೀತಾಗಿದೆ. ನಾಗಮಂಗಲ ಗಲಭೆ ಪ್ರಕರಣದ ಸಂಪೂರ್ಣ ತನಿಖೆ ಎನ್‌ಐಗೆ ವಹಿಸಬೇಕು. ಮಂಡ್ಯದಲ್ಲಿ ಶೇ.90ರಷ್ಟು ಹಿಂದೂಗಳಿದ್ದಾರೆ. ನೀನು ಎಂದರೆ ನಿಮ್ಮಪ್ಪ ಅನ್ನುವ ಜನ ಇದ್ದಾರೆ. ಅಂತಹ ಕಡೆ ಇಂತಹ ಕೃತ್ಯ ಮಾಡಿರುವುದು ಪೂರ್ವ ನಿಯೋಜಿತ. ಇಲ್ಲಿ ಗಲಾಟೆ ಎಬ್ಬಿಸಿ ಭಯದ ವಾತಾವರಣ ನಿರ್ಮಾಣ ಮಾಡಬೇಕು, ಆತಂಕ ಸೃಷ್ಟಿ ಮಾಡಬೇಕು, ಗಲಭೆ ಮಾಡಿ ನಷ್ಟ ಉಂಟು ಮಾಡಬೇಕು ಎಂಬುದು ಅವರ ಉದ್ದೇಶವಾಗಿದೆ ಎಂದರು.

ಅನ್ಯ ಧರ್ಮದವರ ಜತೆ ವ್ಯವಹಾರ ಬೇಡ: ಹಿಂದುಗಳಿಗೆ ನಿತೇಶ್ ರಾಣೆ ಕರೆ

ನಾಗಮಮಂಗಲ ಗಲಭೆ ಪ್ರಕರಣದಲ್ಲಿ ಪೊಲೀಸರು ಅಸಹಾಯಕರ ರೀತಿ ನಿಂತಿದ್ದು ವಿಡಿಯೋ ಸಾಕ್ಷಿ ಲಭ್ಯವಾಗಿದೆ. ಪೊಲೀಸರಿಗೆ ಮುಸ್ಲಿಂ ವಿರುದ್ದ ಕ್ರಮ ಕೈಗೊಳ್ಳಬೇಡಿ ಅಂಥ ಸೂಚನೆ ನೀಡಲಾಗಿದೆ. ಆ‌ ಸೂಚನೆ ನೀಡಿದವರು ಯಾರು ಅನ್ನೊದು ಬಹಿರಂಗವಾಗಬೇಕಿದೆ. ಈ ಎಲ್ಲಾ ಕಾರಣಕ್ಕೆ ನಾಗಮಂಗಲ ಪ್ರಕರಣದ ಸಂಪೂರ್ಣ ತನಿಖೆಯನ್ನ ಎನ್ಐಎಗೆ ವಹಿಸಬೇಕು ಆಗ್ರಹಿಸಿದರು. ಇದೇ ವೇಳೆ ನಾವು ದ್ವೇಷದ ರಾಜಕಾರಣ ಮಾಡಲು ಬಯಸುವುದಿಲ್ಲಎಂಬ ಸಿಎಂ ಸಿದ್ದರಾಮಯ್ಯ ವಿಚಾರ ಪ್ರಸ್ತಾಪಿಸಿದ ಸಿಟಿ ರವಿ, ಸಿದ್ದರಾಮಯ್ಯ ನುಡಿದಂತೆ ಯಾವತ್ತೂ ನಡೆದಿಲ್ಲ. ಅವರು ಹೇಳಿದ್ದನ್ನೆಲ್ಲ ಉಲ್ಟಾ ಮಾಡ್ತಾರೆ. ಅವರ ನಡೆಗೂ ನುಡಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಹಾಗಾಗಿ ಸಿದ್ದರಾಮಯ್ಯ ಮಾತನ್ನ ಯಾರೂ ಕೇಳುವುದಿಲ್ಲ. ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದರು.

Latest Videos
Follow Us:
Download App:
  • android
  • ios